ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟ.:ಶ್ರೀ ಕೆ.ಹೆಚ್. ಮುನಿಯಪ್ಪ ರವರಿಗೆ ರಾಜ್ಯದಲ್ಲಿ ಅತ್ಯುನ್ನತ ಸ್ಥಾನಮಾನ (ಮುಖ್ಯಮಂತ್ರಿ/ಉಪಮುಖ್ಯಮಂತ್ರಿ) ಹಾಗೂ ಉತ್ತಮ ಖಾತೆ ನೀಡುವ ಕುರಿತು – ಸಮುದಾಯದ ಒಗ್ಗಟ್ಟಿನ ಹಕ್ಕೊತ್ತಾಯ.


ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟ.:ಶ್ರೀ ಕೆ.ಹೆಚ್. ಮುನಿಯಪ್ಪ ರವರಿಗೆ ರಾಜ್ಯದಲ್ಲಿ ಅತ್ಯುನ್ನತ ಸ್ಥಾನಮಾನ (ಮುಖ್ಯಮಂತ್ರಿ/ಉಪಮುಖ್ಯಮಂತ್ರಿ) ಹಾಗೂ ಉತ್ತಮ ಖಾತೆ ನೀಡುವ ಕುರಿತು – ಸಮುದಾಯದ ಒಗ್ಗಟ್ಟಿನ ಹಕ್ಕೊತ್ತಾಯ.

ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ನಮ್ಮ ಸಮುದಾಯದ ಹಿರಿಯ ಮುತ್ಸದ್ದಿ ಮತ್ತು ರಾಷ್ಟ್ರ ನಾಯಕ ಶ್ರೀ ಕೆ.ಹೆಚ್. ಮುನಿಯಪ್ಪ ರವರನ್ನು ಸಚಿವ ಸಂಪುಟದಿಂದ ಕೈಬಿಡಲಾಗುತ್ತದೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಮಾದಿಗ ಸಮುದಾಯದಲ್ಲಿ  ಆತಂಕವನ್ನು ಉಂಟುಮಾಡಿದೆ.

ಮಾದಿಗ ಸಮುದಾಯದ ಅದ್ವಿತೀಯ ಹಾಗೂ ಸರ್ವೋಚ್ಚ ನಾಯಕರಾದ ಶ್ರೀ ಕೆ. ಹೆಚ್.ಮುನಿಯಪ್ಪ ರವರು ಕೋಲಾರ ಜಿಲ್ಲೆಯಲ್ಲಿ ಸತತವಾಗಿ ಏಳು ಬಾರಿ ಸಂಸದರಾಗಿಯೂ, ಮೂರು ಬಾರಿ ಕೇಂದ್ರ ಸಚಿವರಾಗಿಯೂ ಅತ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸಿದ್ದಾರೆ. AICCಯ ಪರ್ಮೋಚ್ಚ ಸಮಿತಿಯಾದ CWC ಕಮಿಟಿಯಲ್ಲಿ ಕಾರ್ಯನಿರ್ವಹಿಸಿ, ಡಾ. ಬಾಬು ಜಗಜೀವನ್ ರಾಮ್ ರವರ ನಂತರ ಸಮುದಾಯದ ಸಮಸ್ಯೆಗಳನ್ನು ರಾಷ್ಟ್ರ/ರಾಜ್ಯ ಮಟ್ಟದಲ್ಲಿ ಬಲವಾಗಿ ಪ್ರಸ್ತಾಪಿಸಿದ ಕ್ರಿಯಾಶೀಲ ನಾಯಕರು. ಹಾಗೂ ದಕ್ಷಿಣ ಭಾರತದ ಮೇರು ನಾಯಕರಾಗಿದ್ದಾರೆ. ಶಾಸಕರು, ಸಂಸದರು, ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸಮುದಾಯದವರನ್ನು ಉತ್ತೇಜಿಸಿ ರಾಜಕೀಯ ಪ್ರಾತಿನಿದ್ಯ ಒದಗಿಸುವಲ್ಲಿ ಅವರು ವಹಿಸಿದ ಪಾತ್ರ ಅಪಾರ. ಅವರು ಕಾಂಗ್ರೆಸ್ ಪಕ್ಷದ ದೀರ್ಘಕಾಲದ ನಿಷ್ಠಾವಂತ ನಾಯಕರಾಗಿ.  ಇಂದಿರಾ ಗಾಂಧಿ, ರಾಜೀವ್ ಗಾಂಧಿರವರಿಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿರವರ ಕಾಲದವರೆಗೂ ಪಕ್ಷವನ್ನು ಬಲಪಡಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

2023ರಲ್ಲಿ ಕೇಂದ್ರದಿಂದ ರಾಜ್ಯ ರಾಜಕಾರಣಕ್ಕೆ ಬಂದು ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿ ಆಯ್ಕೆ ಆಗಿ , ಪ್ರಸ್ತುತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾಗಿ ಶ್ಲಾಘನೀಯ ಸೇವೆ ಸಲ್ಲಿಸುತ್ತಿದ್ದಾರೆ. ಬಡವರ ಪರವಾದ ಕಾರ್ಯಕ್ರಮವಾದ ಅನ್ನ ಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿದ ಮಹಾನಾಯಕರು, ಹಾಗೂ ಬೆಂಗಳೂರು  ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. 

ಚಿತ್ರದುರ್ಗದಲ್ಲಿ ನಡೆದ ದಲಿತ ಸಮಾವೇಶದಲ್ಲಿ ಸಮುದಾಯ ಸಂಘಟನೆಗೆ ನೀಡಿದ ನಾಯಕತ್ವ ಪ್ರಶಂಸನೀಯ. ಸಮುದಾಯಕ್ಕೆ ಶ್ರೀ ಕೆ. ಹೆಚ್ ಮುನಿಯಪ್ಪ ರವರ ನಾಯಕತ್ವ ಅತ್ಯಗತ್ಯವಾಗಿದೆ ಮಾದಿಗ ಸಮುದಾಯದ ಮೂಲ ಪ್ರಶ್ನೆಗಳು ಬಗೆಹರಿಯಲು, ಸಮುದಾಯದ ಸ್ವಾಭಿಮಾನವನ್ನು ಬಲಪಡಿಸಲು ಮತ್ತು ರಾಜಕೀಯವಾಗಿ ಸಬಲಗೊಳ್ಳಲು ಶ್ರೀ ಕೆ. ಹೆಚ್.ಮುನಿಯಪ್ಪ ರವರ ನಾಯಕತ್ವ ಅತ್ಯಾವಶ್ಯಕವೆಂದು ಸಮುದಾಯ ನಂಬಿದೆ.ಒಳ ಮೀಸಲಾತಿ ಜಾರಿಯ ಕುರಿತು ಅವರ ಪಾತ್ರ ವಿಶೇಷವಾಗಿ ಗಮನಾರ್ಹ. ಇಂದಿಗೂ ಒಳ ಮೀಸಲಾತಿ ಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಶ್ರೀ ಕೆ. ಹೆಚ್.ಮುನಿಯಪ್ಪ ರವರು ಸರ್ಕಾರದ ಉನ್ನತ ಸ್ಥಾನಮಾನದಲ್ಲಿ ಇರಲೇಬೇಕಾಗುತ್ತದೆ ಎಂಬುದು ಸಮುದಾಯದ ಏಕಮತ ಅಭಿಪ್ರಾಯ.

ಸಮುದಾಯದ ಒಗ್ಗಟ್ಟಿನ ಬೇಡಿಕೆಗಳು

1. ಶ್ರೀ ಕೆ.ಹೆಚ್.ಮುನಿಯಪ್ಪ ರವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಅಥವಾ ಉಪಮುಖ್ಯಮಂತ್ರಿಯಾಗಿ ನೇಮಿಸಬೇಕು.

2. ಅವರ ಅನುಭವ, ನಿಷ್ಠೆ ಮತ್ತು ಸಂಘಟನಾ ಸಾಮರ್ಥ್ಯ ಪರಿಗಣಿಸಿ ‘ಕಂದಾಯ’, ‘ಪಿಡಬ್ಲ್ಯೂಡಿ’ ಸಮಾಜ ಕಲ್ಯಾಣ, 'ನಗರಾಭಿವೃದ್ದಿ' ಅಥವಾ ಪ್ರಭಾವಿ ಖಾತೆಗಳನ್ನು ನೀಡಬೇಕು.

3. ಕರ್ನಾಟಕ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಗಳ ಪೈಕಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯಕ್ಕೆ ಕನಿಷ್ಠ 4 ಸಚಿವ ಸ್ಥಾನಗಳನ್ನಾದರೂ ನೀಡಬೇಕು.

4. ಸಮುದಾಯದ ಸಾಮಾಜಿಕ–ರಾಜಕೀಯ–ಆರ್ಥಿಕ ಪ್ರಗತಿಗೆ ಅವರು ಮುಂದುವರೆದು ಕೆಲಸ ಮಾಡುವಂತೆಯಾಗಿ ಸೂಕ್ತ ಜವಾಬ್ದಾರಿ ನೀಡಬೇಕು. ಶ್ರೀ ಕೆ.ಹೆಚ್. ಮುನಿಯಪ್ಪ ರವರನ್ನು ಮುಖ್ಯಮಂತ್ರಿಯಾಗಿ ಅಥವಾ ಉಪಮುಖ್ಯಮಂತ್ರಿಯಾಗಿ ನೇಮಿಸಿ, ಅವರಿಗೆ ಬಲಿಷ್ಠ ಸಚಿವ ಖಾತೆಗಳನ್ನು ನೀಡಿ, ಹಲವು ದಶಕಗಳಿಂದಲೂ ಪರಿಶಿಷ್ಟ ಜಾತಿಗಳಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ಅತಿ ಹಿಂದುಳಿದಿರುವ  ಮಾದಿಗ ಸಮುದಾಯದ ಭಾವನೆ, ಹಕ್ಕು ಮತ್ತು ರಾಜಕೀಯ ಆಶಾವಾದಕ್ಕೆ ಗೌರವ ನೀಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟ, – ಬೆಂಗಳೂರು

ಈ ಮೂಲಕ ಬಲವಾಗಿ ಒತ್ತಾಯಿಸುತ್ತದೆ.

ಮಾನ್ಯರ ಮಾಹಿತಿಗಾಗಿ

 ಶ್ರೀಮತಿ ಸೋನಿಯಾ ಗಾಂಧಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರು, AICC ಅಧಿನಾಯಕಿ ಹಾಗೂ ರಾಜ್ಯಸಭಾ ಸದಸ್ಯರು,

ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ರವರು, ಲೋಕ ಸಭೆ ವಿರೋಧ ಪಕ್ಷದ ನಾಯಕರು 

ಶ್ರೀಮತಿ ಪ್ರಿಯಾಂಕಾ ಗಾಂಧಿ ರವರು,ಮಾನ್ಯ ಮಾನ್ಯ ಲೋಕಸಭಾ ಸದಸ್ಯರು.

ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರು,ಮಾನ್ಯ ಅಧ್ಯಕ್ಷರು AICC ಹಾಗೂ ರಾಜ್ಯ ಸಭೆಯ ವಿರೋದ ಪಕ್ಷದ ನಾಯಕರು . 

ಸನ್ಮಾನ್ಯ ಶ್ರೀ ಕೆ. ಸಿ.ವೇಣುಗೋಪಾಲ್ ರವರು, ಮಾನ್ಯ ಲೋಕಸಭಾ ಸದಸ್ಯರು ಹಾಗೂ AICC ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ರಾಜ್ಯ ಉಸ್ತುವಾರಿಗಳು.

 ಸನ್ಮಾನ್ಯ ಶ್ರೀ ರಣದೀಪ್  ಸಿಂಗ್ ಸುರ್ಜೆವಾಲರವರು, ಮಾನ್ಯ . ಕರ್ನಾಟಕ ರಾಜ್ಯ ಉಸ್ತುವಾರಿಗಳು.

ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರು, ಮಾನ್ಯ ಮುಖ್ಯಮಂತ್ರಿ ಗಳು ಕರ್ನಾಟಕ ಸರ್ಕಾರ.

ಸನ್ಮಾನ್ಯ ಶ್ರೀ ಡಿ. ಕೆ. ಶಿವಕುಮಾರ್ ರವರು, ಮಾನ್ಯ ಅಧ್ಯಕ್ಷರು ಕೆ.ಪಿ.ಸಿ.ಸಿ, ಉಪಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ.

ಸನ್ಮಾನ್ಯ ಶ್ರೀ ಜಿ. ಸಿ. ಚಂದ್ರಶೇಖರ್ ರವರು,ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರು.                                         

ಅಧ್ಯಕ್ಷರು /ಪದಾಧಿಕಾರಿಗಳು  ಗ್ರೇಟರ್ ಬೆಂಗಳೂರು 

                                                 

                                      

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims