ನಡೆಯುತ್ತಿರುವ ಅವ್ಯವಹಾರಗಳು ಮತ್ತು ಅಕ್ರಮಗಳು. ಅಲ್ಪಸಂಖ್ಯಾತರ ಇಲಾಖೆಯಲ್ಲಿ ಅಧಿಕಾರಿಗಳ ನಿಯೋಜನೆಯಲ್ಲಿ
: ನಡೆಯುತ್ತಿರುವ ಅವ್ಯವಹಾರಗಳು ಮತ್ತು ಅಕ್ರಮಗಳು. ಅಲ್ಪಸಂಖ್ಯಾತರ ಇಲಾಖೆಯಲ್ಲಿ ಅಧಿಕಾರಿಗಳ ನಿಯೋಜನೆಯಲ್ಲಿ
ಕರ್ನಾಟಕ ರಾಜ್ಯದ ಘನತೆವೆತ್ತ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ತನ್ನದೇ ಆದ ಒಂದು ವರ್ಚಸ್ಸನ್ನು ಹೊಂದಿಕೊಂಡು ಅತ್ಯುನ್ನತವಾಗಿ 0 ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿತ * ಇಲಾಖೆಯಾಗಿರುತ್ತದೆ. ಬಡ, ದೀನ, ದಲಿತ ಮತ್ತು ಅಲ್ಪಸಂಖ್ಯಾತರ ಪಾಲಿನ ಧೀಮಂತ
ನಾಯಕ ರಾಜ್ಯದ ಮುಖ್ಯ ಮಂತ್ರಿಗಳಾಗಿರುವ ಸನ್ಮಾನ್ಯ ಶ್ರೀ. ಸಿದ್ದರಾಮಯ್ಯ ರವರು ಅಲ್ಪಸಂಖ್ಯಾತರ ಸಮುದಾಯದ ಏಳಿಗೆಗೆ ಈ ವರ್ಷ ಸುಮಾರು 5000 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.
ಆದರೆ ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಇಲಾಖೆಯಲ್ಲಿ ಯಾವುದೇ ಹುಮ್ಮಸ್ಸು ಕಾಣುತ್ತಿಲ್ಲ. ಅನುದಾನ ದುರ್ಬಳಕೆ ಮಾಡಲೆಂದೇ ಅನರ್ಹರಿಗೆ J ಅಧಿಕಾರದ ಚುಕ್ಕಾಣಿಯನ್ನು ನೀಡಿರುವುದು ಸರಾ ಸಾಗಾಟವಾಗಿ ಎದ್ದು ಕಾಣುತ್ತಿದೆ.
ಕಳೆದ ಎರಡು ವರ್ಷಗಳಿಂದ ಅಲ್ಪಸಂಖ್ಯಾತರ ನಿರ್ದೇಶನಾಯಲದಲ್ಲಿ ಆಗುತ್ತಿರುವ ಅಕ್ರಮಗಳನ್ನು ಕಂಡರೆ ತೀರಾ ವಿಷಾದವಾಗುತ್ತಿದ್ದು ನನ್ನ ಗಮನಕ್ಕೆ ಬಂದಿರುವ ಈ ಕೆಳಕಂಡ ವಿಷಯಗಳ ಕುರಿತು ತಮ್ಮ ಗಮನಕ್ಕೆ ಸಲ್ಲಿಸುತ್ತಾ ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ಅತೀ ಜರೂರಾಗಿ ಕ್ರಮ ವಹಿಸುವಂತೆ ಈ ಮೂಲಕ ಕೋರುತ್ತೇನೆ.
ಅಲ್ಪಸಂಖ್ಯಾತರ ನಿರ್ದೇಶನಾಲಯದ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ನಿಯೋಜನೆಯ ಮೇರೆಗೆ ಅಧಿಕಾರಿಗಳನ್ನು ನಿಯೋಜಿಸಲು ಕನಿಷ್ಟ ಮಾನದಂಡಗಳನ್ನು ಕೂಡ ಸರ್ಕಾರದ ಕಾರ್ಯದರ್ಶಿಯ ಜವಾಬ್ದಾರಿಯುತ ಹುದ್ದೆಯಲ್ಲಿರುವ ತಾವು ಗಮನ ಕೊಡದೆ ತಮ್ಮ ಅಧೀನದಲ್ಲಿ ಅಕ್ರಮ ಅವ್ಯವಹಾರಗಳು ತಮ್ಮ ಗಮನಕ್ಕೆ ಬಂದಿರುವುದೇ?
ಜಂಟಿ ನಿರ್ದೇಶಕರ ಹುದ್ದೆಯನ್ನು ತಮ್ಮ ಇಲಾಖೆಯ ವತಿಯಿಂದ ಇನ್ನೂ ಉಪ ನಿರ್ದೇಶಕರು ಅಲ್ಲದೇ ಕೇವಲ ಜಿಲ್ಲಾ ಅಧಿಕಾರಿ (ಗ್ರೇಡ್-1) ಶ್ರೇಣಿಯ ಶ್ರೀ ಮಹಿಮೂದ್ ಎಂಬುವವರನ್ನು ಈಗಾಗಲೇ ಉಪ ನಿರ್ದೇಶಕರ ಹುದ್ದೆಯಲ್ಲಿ ಕರ್ತವ್ಯ ನಿರತವಾಗಿದ್ದ ಶ್ರೀ. ಸೈಯದ್ ಮನ್ಸೂರ್ ಬಾಷ ಅವರ ಜಾಗವನ್ನು ತೆರವುಗೊಳಿಸಿ ಜಂಟಿ ನಿರ್ದೇಶಕರ ಹುದ್ದೆಯಲ್ಲಿ ಸ್ವಂತ ವೇತನ ಶ್ರೇಣಿಯಲ್ಲಿ ನಿಯೋಜಿಸಿರುವುದಶ್ರೀಮತಿ ತಸ್ಮಿಯಾ ತರನ್ನುಮ್, ಎಲೆಕ್ಟಿಕಲ್ ಇಂಜಿನಿಯರ್ ಆದ ಇವರನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯದ ಸಿವಿಲ್ ಇಂಜಿನಿಯರ್ ಹುದ್ದೆಯಲ್ಲಿ ಕಳೆದ ಎರಡು ವರ್ಷಗಳಿಂದ ಮುಂದುವರೆಸಿದರುವುದು ಮತ್ತು ಈಗಾಗಲೇ ಸರ್ಕಾರದ ಆದೇಶ ಸಂಖ್ಯೆ:-ಲೋಇ 18 ಸೇಸಎ 2023 ದಿನಾಂಕ:- 18-08-2023 ರನ್ವಯ ಕ್ರ.ಸಂ. 70 ರಲ್ಲಿ ಮಂಜುನಾಥ ಕ ದೈವಜ್ಞ ಇವರನ್ನು ಅಲ್ಪಸಂಖ್ಯಾತರ ಇಲಾಖೆಗೆ ಸ್ಥಳ ನಿಯುಕ್ತಿಗೊಳಿಸಲು ಆದೇಶಿಸಿದ್ದರೂ ಸಹ ಅನುಪಾಲನೆ ಮಾಡದೇ ಸರ್ಕಾರಕ್ಕೆ ವರದಿ ಮಾಡದೇ ಸುಮಾರು 1000.00 ಕೋಟಿಗಳ ಅನುದಾನದ ಸಿವಿಲ್ ಕಾಮಗಾರಿಗಳ ಉಸ್ತುವಾರಿಗೆ ಎಲೆಕ್ಟಿಕಲ್ ಇಂಜಿನಿಯರ್ ಓರ್ವರನ್ನು ನಿಯೋಜಿಸಿರುವುದು
1. ಕಾರ್ಯನಿರ್ವಾಹಕ ಅಭಿಯಂತರರು (ಸಿವಿಲ್)
ಇಲಾಖೆಯ ವತಿಯಿಂದ ನಿರ್ವಹಿಸಲಾಗುವ ಎಲ್ಲಾ ಸಿವಿಲ್ ಕಾಮಗಾರಿಗಳನ್ನು ಮೇಲುಸ್ತುವಾರಿ ಮಾಡಲು ಮತ್ತು ಇಂಜಿನಿಯರಿಂಗ್ ಕಾಮಗಾರಿಗಳ ಪರಿವೀಕ್ಷಣೆಗೆಂದು ಇಲಾಖೆಯಲ್ಲಿ ಕಾರ್ಯನಿರ್ವಾಹಕ ಅಭಿಯಂತರರು ಹುದ್ದೆ ಒಂದಿದೆ.
ಒಂದು ಸಿವಿಲ್ ಕಾಮಗಾರಿಗೆ ಸಿವಿಲ್ ಇಂಜಿನಿಯರ್ ಇರಬೇಕೆ ಅಥವಾ ಎಲೆಕ್ಟಿಕಲ್ ಇಂಜಿನಿಯರ್ ಸಿವಿಲ್ ಕಾಮಗಾರಿಯನ್ನು ನೋಡಿಕೊಳ್ಳುತ್ತಾನೆಯೇ?
"ಇಲ್ಲಿನ ವಿಚತ್ರ ನೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ನಂತರ ಹೊಲಿಗೆ ಹಾಕಲು ಡಾಕ್ಟರ್ ಬೇಡ್ ಒಬ್ಬ ಟೈಲರ್ ಇದ್ದರೆ ಸಾಕು ಹೊಲಿಗೆ ಹಾಕುತ್ತಾನೆ ಎನ್ನುವಂತೆ" ಮೂಲತ: ಸರ್ಕಾರದ ಸ್ವಾಯತ್ತ ಕಂಪನಿಯಾದ ಕೆ.ಪಿ.ಟಿ.ಸಿ.ಎಲ್ ನ ಅಧಿಕಾರಿಯಾಗಿರುವ ಎಲೆಕ್ಟಿಕಲ್ ಇಂಜಿನಿಯರ್ ಶ್ರೀಮತಿ. ಸೈಯಿದಾ ತಸ್ಮಿಯಾ ತರನ್ನುಮ್ ಎಂಬುವವರನ್ನು ಪ್ರಭಾರಿ ಅಧಿಕಾರಿಯಾಗಿ ಸ್ಥಳನಿಯುಕ್ತಿಗೊಳಿಸಲಾಗಿದ್ದು ಕಳೆದ ಎರಡರಿಂದ ಮೂರು ವರ್ಷಗಳಿಂದ ಇದೇ ಸ್ಥಳದಲ್ಲಿರುತ್ತಾರೆ.
ಇದೇ ವಿಷಯಕ್ಕೆ ಸಂಬಂಧಿಸಿ ಒಂದು ಕೋರ್ಟ್ ಕೇಸು ಸಹ ಇದೆ ಅದೇನಪ್ಪ ಅಂದರೆ, ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ಸಲ್ಲಿಸಿರುವ ಮೂಲ ಅರ್ಜಿ :- 4916/2021 0 2 12 d "The fourth respondent i.e.Smt. Saida Tasmia Tarannum being from a company is not from a department of the government at all and the contention of the fourth respondent that she is from a department of the government is untenable. The fourth respondent in the cadre of Executive Engineer in KPTCL cannot be considered to be in a government department norನಲ್ಲಿ ಸಮಾನ ಹುದ್ದೆಯಾಗಿದೆ, ಕೆಪಿಟಿಸಿಎಲ್ ಸರ್ಕಾರವಲ್ಲ.
ದಿನಾಂಳ: 18-08-2023 ರಂ ಮಂಜುನಾಥ ದ್ವವಜ್ಞ ಇವರಸ್ಸು ಇದಕ್ಕೂ ಮುಂಚೆ ಸರ್ಕಾರದ ಆದೇಶ ಸಂಖ್ಯೆ: ಲೋಯಿ 18 ಸೆಸಎ 202
ಅಲ್ಪಸಂಖ್ಯಾತರ ಇಲಾಖೆಗೆ ಆದೇಶಿಸಿದ್ದರೂ ಸಹ ಇವರನ್ನು ಸದರಿ ಜಾಗಕ್ಕೆ ಬಾರದೇ ತಡೆಯಲು ಎಲ್ಲೋ ವರ್ಗಾವಣೆ ದಂಧೆಯಲ್ಲಿ ಸುಮಾರು 5.00,000,೦೦ (ಐದು ಕೋಟಿ ರೂಪಾಯಿಗಳ) ಅಕ್ರಮ ನಡೆದಿದೆ ಎಂದು ಸುದ್ದಿ ಪದೇ ಪದೇ ಕೇಳಿ ಬರುತ್ತಿದೆ.
2. ಜಂಬಿ ನಿದ್ರೆಕರು ಅಲನಂಖ್ಯಾತರ ನಿದಳನಾಳ
ಜಂಟಿ ನಿರ್ದೇಶಕರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹುದ್ದೆಗೆ ಒಂದಿಷ್ಟು ಕನಿಷ್ಠ ಜಂಟಿ ನಿರ್ದೇಶಕರ ಶ್ರೇಣಿಯ ಅಧಿಕಾರಿಯನ್ನು ನೇಮಿಸುವುದು ಕಡ್ಡಾಯವಾಗಿರುತ್ತದೆ
ಆದರೆ ಈ ಶ್ರೇಣಿಗಿಂತ ಎರಡು ಶ್ರೇಣಿ ಚಿಕ್ಕ ಅಧಿಕಾರಿಯಾದ ಇದೇ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ಅಧಿಕಾರಿ ಶ್ರೀ ಮಹಿಮೂದ್ ಎಸ್ ಎಂಬುವವರನ್ನು ಜಂಟಿ ನಿರ್ದೇಶಕರು ಹುದ್ದೆಗೆ ವರ್ಗಾವಣೆ ಮಾಡಿರುತ್ತಾರೆ.
ಇದಕ್ಕೂ ಮುಂಚೆ ಈ ಜಾಗದಲ್ಲಿ ಶ್ರೀ. ಮನ್ಸೂರ್ ಬಾಷ. ಇವರು ಉಪ ನಿರ್ದೇಶಕರು ಶ್ರೇಣಿಯವರು ತಮ್ಮ ಸ್ವಂತ ವೇತನ ಶ್ರೇಣಿಯ ಮೇಲೆ ಜಂಟಿ ನಿರ್ದೇಶಕರಾಗಿದ್ದರು.
ಈಗಿರುವ ಶ್ರೀ ಮಹಿಮೂದ್ ಇವರು ತಮ್ಮ ಅನುಭವದಲ್ಲಿಯೂ ಚಿಕ್ಕವರು ಮತ್ತು ಹುದ್ದೆಯ ಶ್ರೇಣಿಯಲ್ಲಿ ಚಿಕ್ಕವರು ಆದರೂ ಸಹ ಇವರನ್ನು ತಮ್ಮ ಶ್ರೇಣಿಗಿಂತ ಎರಡು ಶ್ರೇಣಿ ಹುದ್ದೆಯನ್ನು ನೀಡಲು ಸರಿ ಸುಮಾರು 3,00,000.00 (ಮೂರು ಕೋಟಿ ರೂಪಾಯಿಗಳ) ಅಕ್ರಮ ನಡೆದಿದೆ ಎಂಬ ಸುದ್ದಿ ಪದೇ ಪದೇ ಕೇಳಿ ಬರುತ್ತಿದೆ. ಈ ಮೇಲಿನ ಎಲ್ಲಾ ಅಧಿಕಾರಿಗಳ ವಿರುದ್ಧ ಈಗಾಗಲೇ ಜನವರಿ 2024 ರಂದು ಇಲಾಖೆಯ ಕಾರ್ಯದರ್ಶಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತು ಮಾನ್ಯ ಮುಖ್ಯಮಂತ್ರಿಗಳ ಜನಸ್ಪಂದನಾ ಕಾರ್ಯಕ್ರಮದಲ್ಲಿಯೂ ಸಹ ಅನರ್ಹ ಅಧಿಕಾರಿ ಗಳನ್ನು ಅವರವರ ಮಾತೃ ಇಲಾಖೆಗೆ ಹಿಂದಿರುಗಿಸಲು ಕೋರಿರುತ್ತೇನೆ.
ಇಲಾಖೆಯ ಕಾರ್ಯದರ್ಶಿಯಾದ ಮನೋಜ್ ಜೈನ್ ಇವರು ಸದರಿ ದೂರರ್ಜಿಯನ್ನು ನೋಡಿ ಉಡಾಫೆಯಾಗಿ ಉತ್ತರಿಸಿರುತ್ತಾರೆ.
ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಶ್ರೀಮತಿ. ತಸ್ಮಿಯಾ ಇವರ ಪತಿ ಶ್ರೀ. ಮೊಹಮ್ಮದ್ ಸಾ ಮುಲ್ಲಾ ಇವರು ವೃತ್ತಿಯಿಂದ ವಕೀಲರಾಗಿರುತ್ತಾರೆ ಪ್ರಭಾವಿ ಸಚಿವರೊಂದಿಗೆ ಮಿತ್ರಲಿದ್ದು, ಪ್ರಭಾವಿ ರಾಜಕಾರಣಿಗಳು ಮತ್ತು ಶಾಸಕರೊಂದಿಗೆ ಒಡನಾಟವಿಟ್ಟುಕೊಂಡಿರುತ್ತಾರೆ.
ನೀವು ದೂರು ಹಿಂಪಡೆಯದಿದ್ದರೆ ನಿಮ್ಮ ವಿರುದ್ಧ ಪೊಲೀಸ್ ಇಲಾಖೆಯಲ್ಲಿ ಇಲ್ಲ ಸಲ್ಲದ ಪ್ರಕರಣದಲ್ಲಿ ಸಿಲುಕಿಸಲಾಗುವುದು ಮತ್ತು ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ಕರೆಗಳು ಸಹ ಬಂದಿರುತ್ತವೆ.
ಕೊನೆಯದಾಗಿ ಈ ಮೂಲಕ ಮಾಧ್ಯಮ ಮಿತ್ರರಿಗೆ ಕೋರಿಕೊಳ್ಳುವುದೇನೆಂದರೆ ಒಂದೇ ಇಲಾಖೆಯಲ್ಲಿ ಇಷ್ಟು ಅಕ್ರಮಗಳು ಎದ್ದು ಕಾಣುತ್ತಿದ್ದರೂ ಸಹ ವಿರೋಧ ಪಕ್ಷದಿಂದ ಸರ್ಕಾರದ ಮೇಲೆ ಹೊರಿಸಲಾದಂತಹ ಆರೋಪಗಳಲ್ಲಿ ಒಂದಾದ ವರ್ಗಾವಣೆ ದಂಧೆ ಎಂಬ ಕಪ್ಪು ಚುಕ್ಕೆಯನ್ನು ಈಗಲಾದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ಅರ್ಹ ಅಧಿಕಾರಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುತ್ತಾ ಕಾದು ನೋಡಬೇಕಿದೆ.
ಸರ್ಕಾರದ ಆಶಯಗಳಿಗನುಗುಣವಾಗಿ ಭ್ರಷ್ಟಾಚಾರ ರಹಿತ ಅಧಿಕಾರವನ್ನು ಹೇಗೆ ತಾನೇ ಊಹಿಸುವುದು ಸಾಧ್ಯ ಎಂಬುವುದು ಯಕ್ಷ ಪ್ರಶ್ನೆ.
ಮಾನ್ಯ ಮುಖ್ಯಮಂತ್ರಿಗಳ, ಜನಸ್ಪಂದನಾ ಕಾರ್ಯಕ್ರಮದಲ್ಲಿ ನೀಡಲಾಗಿರುವ ದೂರನ್ನು ಯಾವ ಇಲಾಖೆಯ ಅಧಿಕಾರಿಯ ಮೇಲೆ ಆರೋಪಿಸಲಾಗಿದೆಯೋ ಅದೇ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾ ಅರ್ಜಿ ಕಳುಹಿಸಿರುವುದು ಇನ್ನೂ ಹಾಸ್ಯಾಸ್ಪದ.
ಅಂದರೆ ಸದರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಹಿಡಿತ ಎಷ್ಟು ಗಟ್ಟುಮುಟ್ಟಾಗಿದೆ ಅಂತ ಕ್ರಿಸ್ಟಲ್ ಕ್ಲಿಯರ್ ಆಗಿ ಎದ್ದು ಕಾಣುತ್ತಿದೆ.
ಅಲ್ಪಸಂಖ್ಯಾತರ ಇಲಾಖೆ ಅಂದರೆ ಅರ್ಹತೆ ಅಲ್ಲ ದುಡ್ಡು ಮುಖ್ಯ ಹಾಗಾಗಿ ಆಯಕಟ್ಟಿನ ಹುದ್ದೆಗಳಿಗೆ ನಿಯೋಜನೆಗೆ ಹೋಗಲು ಸರ್ಕಾರದೊಂದಿಗೆ ವರ್ಗಾವಣೆ ದಂಧೆ ಮಾಡಬೇಕೆಂಬುದು ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳಿಗೊಂದು ನೀತಿಪಾಠ ದೊರಕಿದಂತಿದೆ ಅಲ್ಪಸಂಖ್ಯಾತರ ನಿರ್ದೇಶನಾಲಯ

Comments
Post a Comment