ಕರ್ನಾಟಕ ರತ್ನ ಡಾ||ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ: ಜಿಬಿಎ ಪಾಲಿಕೆಗಳ ನೌಕರರ ಕನ್ನಡ ಸಂಘ*


 *ಕರ್ನಾಟಕ ರತ್ನ ಡಾ||ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ: ಜಿಬಿಎ ಪಾಲಿಕೆಗಳ ನೌಕರರ ಕನ್ನಡ ಸಂಘ* 

ಬೆಂಗಳೂರು:  ಜಿಬಿಎ ಕೇಂದ್ರ ಕಛೇರಿ ಅವರಣದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ನೌಕರರ ಕನ್ನಡ ಸಂಘದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಅಚರಣೆ ಮತ್ತು 

 ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ/ಸಾಧಕಿಯರಿಗೆ ಡಾ||ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ ಹಾಗೂ ಪಾಲಿಕೆಗಳ ಅಧಿಕಾರಿ ಮತ್ತು ನೌಕರರಿಗೆ ಗೌರವ ಸನ್ಮಾನ ಕಾರ್ಯಕ್ರಮ.


ಮುಖ್ಯ ಆಯುಕ್ತರಾದ ಮಹೇಶ್ವರರಾವ್, ಅಪರ ಪೊಲೀಸ್ ಮಹಾ ನಿರ್ದೇಶಕರಾದ ಶ್ರೀಮತಿ ರೂಪಾ ಡಿ. ಮೌದ್ಗಿಲ್ ,ನಿವೃತ್ತ ಐಎಎಸ್ ಸಿ.ಸೋಮಶೇಖರ್ ರವರು,  ಪಶ್ಚಿಮ  ನಗರ ಪಾಲಿಕೆ ಆಯುಕ್ತರಾದ ಡಾ.ರಾಜೇಂದ್ರ ಕೆ.ವಿ, ಉಪ ಆಯುಕ್ತರಾದ ರವೀಂದ್ರ ಕರಲಿಂಗಣ್ಣವಾರ್ ,ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಿ.ಕೃಷ್ಣಪ್ಪ, ಜಿಬಿಎ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು, ಜಿಬಿಎ ಪಾಲಿಕೆಗಳ ನೌಕರರ ಕನ್ನಡ ಸಂಘದ ಅಧ್ಯಕ್ಷರಾದ ಸಾಯಿಶಂಕರ್  ನಗರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪ್ರಕಾಶ್ ಮೂರ್ತಿರವರು ಪಾರಿವಾಳ ಹಾರಿ ಬಿಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.


*ಮುಖ್ಯ ಆಯುಕ್ತರು ಮಹೇಶ್ವರರಾವ್ ರವರು* ಮಾತನಾಡಿ ಜಿಬಿಎ ಆಡಳಿತದಲ್ಲಿ ಉತ್ತಮ ಕೆಲಸವಾಗುತ್ತಿದೆ. ಕನ್ನಡ ಉಳಿಸಿ, ಬೆಳಸಬೇಕು. ಕನ್ನಡ ಭಾಷೆ ಉಳಿಸಿ, ಬೆಳಸಲು ನೌಕರರ ಕನ್ನಡ ಸಂಘ ಕನ್ನಡ ರಾಜ್ಯೋತ್ಸವವನ್ನು ಅಂತರಾಷ್ಟ್ರ ಮತ್ತು ರಾಷ್ಟ್ರಿಯ ಮಟ್ಟದಲ್ಲಿ ಅಚರಿಸುತ್ತಿದ್ದಾರೆ.


ಜನರು ಸಹಕಾರ ನೀಡಬೇಕು ಆಗ ಬೆಂಗಳೂರು ನಗರ ಅಭಿವೃದ್ದಿ ವೇಗವಾಗಿ ಅಭಿವೃದ್ದಿಯಾಗುತ್ತದೆ ಎಂದು ಹೇಳಿದರು.


*ಶ್ರೀಮತಿ ರೂಪ ಮೌದ್ಗಿಲ್ ರವರು* ಬೆಂಗಳೂರು ನಗರದಲ್ಲಿ ಎಲ್ಲ ಭಾಷೆಯ ಜನರು ಇದ್ದಾರೆ ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕೆಲಸವಾಗಬೇಕು. ಕನ್ನಡ ಭಾಷೆ ಉಳಿಯದೇ ಹೋದರೆ ನಮ್ಮ ಆಸ್ಮಿತೆ ಉಳಿಯುವುದಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬದಲು ವಿರಾಟ ಬೆಂಗಳೂರು ಎಂದು ಹೆಸರಿಡುವುದು ಉತ್ತಮ. 


ಮಾತೃ ಭಾಷೆಯಲ್ಲಿಯೆ ಯೋಚನೆ ಮಾಡುತ್ತೇವೆ , ಮಾತೃ ಭಾಷೆಯಿಂದ  ಬಹಳ ಉಪಯೋಗವಿದೆ. ನಮ್ಮ ಸೊಗಡಿನ ಭಾಷೆ ಉಳಿಯಬೇಕು.

ನಮ್ಮ ಭಾಷೆ ಹೆಮ್ಮೆ ಎಂಬ ಅಭಿಮಾನದಿಂದ ಮಾತಾಡಿ ಎಂದು ಹೇಳಿದರು.


*ಸಿ.ಸೋಮಶೇಖರ್ ರವರು* ಮಾತನಾಡಿ ಸಂಸ್ಕೃತಿ, ಸಂಸ್ಕಾರ ಜೀವನಮೌಲ್ಯವಿರುವುದು ಕನ್ನಡ ಭಾಷೆಯಲ್ಲಿ. ಲಿಪಿಗಳ ರಾಣಿ ಎಂಬ ಕನ್ನಡ ಭಾಷೆಗೆ ಕೀರ್ತಿ ಇದೆ.


ಕನ್ನಡಗರು ಧೀಮಂತ ಸಾಹಿತಿಗಳು. ಜಾನಪದ ಸಾಹಿತ್ಯದಲ್ಲಿ ವಿದ್ಯಾವಂತರಲ್ಲದಿದ್ದರು ಅಂತರಂಗದ ಭಾವದಿಂದ ಮಾತನಾಡುತ್ತಾರೆ.


ಕನ್ನಡನಾಡಿಗೆ 2000ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಮಾನವಮೌಲ್ಯಗಳು ಇರುವವರು ಕನ್ನಡಿಗರು.ನನ್ನನು ಕೊಂದರು  ಕನ್ನಡ ನಾಡಿನಲ್ಲಿ  ಹುಟ್ಟುತ್ತೇನೆ ಎಂದು ಅದಿಕವಿ ಪಂಪ ಹೇಳಿದರು. 8 ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆ ಬಹಳಷ್ಟು ಶ್ರೀಮಂತವಾಗಿದೆ.


ಆಡಳಿತದಲ್ಲಿ ಸಂಪೂರ್ಣ ಕನ್ನಡದಲ್ಲಿ  ಆಗಬೇಕು. ಮನೆ, ಮನೆಯಾಂಗಳದ ಭಾಷೆಯಾದಗ ಮಾತ್ರ ಸಾರ್ವಭೌಮ ಭಾಷೆಯಾಗುತ್ತದೆ. ತಾಯಿ, ನಾಡಿನ ಭಾಷೆಯ ಋಣ ತೀರಿಸಬೇಕು ಎಂದು ಹೇಳಿದರು.


 

 ವಿವಿಧಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ/ಸಾಧಕಿಯರಿಗಡಾ॥ ಪುನೀತ್ ರಾಜ್ ಕುಮಾರ್ ಪ್ರಶಸ್ತಿ" ಪ್ರದಾನವನ್ನು 

ಶ್ರೀಮತಿ ಎಸ್.ಪಿ ಶಶಿಕಲಾ, ಸಹಾಯಕ ಪೋಲಿಸ್ ಆಯುಕ್ತರು ಸಂಚಾರ ಕೇಂದ್ರ ಉಪವಿಭಾಗ

ಡಾ|| ಕಾಂತರಾಜು ಪುರ ಸುರೇಶ್, ಲೇಖಕರು ಮತ್ತು ಕವಿಗಳು ರೂಪೇಶ್ ರಾಜಣ್ಣ, ಕನ್ನಡ ಹೋರಾಟಗಾರರು

 ಬಿ. ರಾಮಮೂರ್ತಿ, ಪ್ರಖ್ಯಾತ ಚಲನಚಿತ್ರ ನಿರ್ದೇಶಕರು

ರಂಜನ್, ಚಲನಚಿತ್ರ, ನಾಯಕ ನಟ

ರಾಣವಿ ಶೇಖರ್,

ಶ್ರೀಮತಿ ಕಾಂಚನ ಎಸ್. ರೆಡ್ಡಿ,

ನಾಗರಾಜ್,ಮೋಹನ್ ರೆಡ್ಡಿ,ವಿನೋದ್ ಕುಮಾರ್ ಎಸ್.ಜಿ., ರಾಜು, ಮಧು ಜಿ.,ಮಹಾಂತೇಶ್, ನಾಗೇಶ್ ರಾಮಕೃಷ್ಣ,ಶ್ರೀಕಾಂತ್ ಗುರುಮೂರ್ತಿ,

 ರಮೇಶ್,ವಸಂತ್‌ಕುಮಾರ್, ಶಂಕರ್‌ರಾವ್, ಶ್ರೀನಿವಾಸ್‌ಗೌಡ, ಆರ್. ಕಿಶೋರ್ ಮತ್ತು ಅಧಿಕಾರಿ, ನೌಕರರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims