ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಮಾದಿಗ ಸಮುದಾಯದ ಜನಾಂಗದವರೊಂದಿಗೆ ಶ್ರೀ ಮಾದರ ಚೆನ್ನಯ್ಯ ರವರ 956 ನೇ ಜಯಂತೋತ್ಸವ ಮಹೋತ್ಸವ:- ಆಹಾರ ಸಚಿವ ಕೆಹೆಚ್. ಮುನಿಯಪ್ಪ*
*ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಮಾದಿಗ ಸಮುದಾಯದ ಜನಾಂಗದವರೊಂದಿಗೆ ಶ್ರೀ ಮಾದರ ಚೆನ್ನಯ್ಯ ರವರ 956 ನೇ ಜಯಂತೋತ್ಸವ ಮಹೋತ್ಸವ:- ಆಹಾರ ಸಚಿವ ಕೆಹೆಚ್. ಮುನಿಯಪ್ಪ*
*ಇದೇ ಡಿಸಂಬರ್ ತಿಂಗಳಲ್ಲಿ 6.ಮತ್ತು 7 ಎರಡು ದಿನಗಳ ಮಹೋತ್ಸವ ಕಾರ್ಯಕ್ರಮ*
*ಭಾರತದಲ್ಲಿಯೇ ಶೇಕಡಾ 10% ರಷ್ಟು ಜನಸಂಖ್ಯೆಯನ್ನು ಮಾದಿಗ ಸಮುದಾಯ ಹೊಂದಿದೆ*
*ಸಮುದಾಯದ ಒಗ್ಗಟ್ಟಿನಿಂದ ಎಲ್ಲವೂ ಸಾದ್ಯ ನಾವು ಒಂದಾಗಬೇಕು ಸಚಿವ ಮುನಿಯಪ್ಪ*
ಬೆಂಗಳೂರು. ಅರಮನೆ ಮೈದಾನ 9
ಶ್ರೀ ಶಿವಶರಣ ಮಾದರ ಚೆನ್ನಯ್ಯ ರವರ 956ನೇ ಜಯಂತ್ಯೋತ್ಸವ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯನ್ನು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಮಾದರ ಮಹಾಸಭಾದ ಅಧ್ಯಕ್ಷರಾದ ಕೆಹೆಚ್. ಮುನಿಯಪ್ಪ ರವರು ಉದ್ಘಾಟಿಸಿದರು.
ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಮಾತನಾಡಿದ ಸಚಿವರು
ಕರ್ನಾಟಕ ಮಾದರ ಮಹಾಸಭಾ ಮತ್ತು ಕರ್ನಾಟಕ ಮಾತಂಗ ಫೌಂಡೇಶನ್ ಅವರ ಸಹಭಾಗಿತ್ವದಲ್ಲಿ *ಬರುವ ಡಿಸೆಂಬರ್ 6,ಮತ್ತು 7, 2025 ರಂದು ಅರಮನೆ ಮೈದಾನ,* ಬೆಂಗಳೂರಿನಲ್ಲಿ
ಶ್ರೀ ಶಿವಶರಣ ಮಾದರ ಚೆನ್ನಯ್ಯ ರವರ 956ನೇ ಜಯಂತ್ಯೋತ್ಸವ ಮಹೋತ್ಸವವನ್ನು ವಿಜೃಂಭಣೆಯಿಂದ ಆಯೋಜಿಸಲಾಗುತ್ತಿದೆ ಎಂದರು.
ದಕ್ಷಣ ಭಾರತದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮ್ಮ ಮಾದರ ಮಾದಿಗ ಸಮುದಾಯ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಎಂದರು. ಭಾರತದ ಜನಸಂಖ್ಯೆಯ ಲ್ಲಿ ಶೇಕಡಾ 10 ರಷ್ಟು ಜನಸಂಖ್ಯೆಯನ್ನು ನಮ್ಮ ಸಮುದಾಯ ಹೋದಿದೆ ಆಂದ್ರ ಪ್ರದೇಶದಿಂದ ಜಮ್ಮು ಕಾಶ್ಮೀರದ ವರೆಗೂ ನಮ್ಮ ಸಮಯದಾಯ ಶೇಕಡಾ 60ರಿಂದ 70 %ರಷ್ಟು ಜನಸಂಖ್ಯೆಯನ್ನು ಹೋದಿದೆ ನಾವೆಲ್ಲಾರೂ ಒಂದಾಗಬೇಕು ಆಂದ್ರಪ್ರದೇಶ,ತೆಲಂಗಾಣ, ಕೇರಳ,ತಮಿಳುನಾಡು ಎಲ್ಲಾ ರಾಜ್ಯಗಳ ಸಮುದಾಯದವರು ಒಂದಾದಾಗ ಮಾತ್ರ ನಾವು ಏನು ಬೇಕಾದರು ಸಾದಿಸಬಹುದು ನಾವೆಲ್ಲಾರು ಒಂದಾಗಿ ಒಟ್ಟಾಗಿಬೇಕು ಎಂದರು.
ಈ ಸಮುದಾಯ ಭಾರತದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಏಕೈಕ ಮೊದಲನೆ ಸಮುದಾಯವಾಗಿದ್ದು ಆದರೆ ನಾವು ಅತಿ ಹೆಚ್ಚು ಹಿಂದಿಳಿದಿರುವ ಸಮುದಾಯವಾಗಿದ್ದೇವೆ
ಆದಿಜಾಂಭವ,ಮಾದರ ಚೆನ್ಯಯ್ಯ,ಮಾತಾಂಗ ಮಾತ,ಮಾತಾಂಗ ಮುನಿ,ಈ ಎಲ್ಲಾ ಸಂಘಟನೆಗಳ ಸಹಯೋಗದೊಂದಿಗೆ ನಾವು ಕಾರ್ಯಕ್ರಮ ಆಯೋಜಿಸಿವ ಮೂಲಕ ನಾವು ಒಂದಾಗಬೇಕಿದೆ ಎಂದರು
ನಮ್ಮ ಸಮುದಾಯ ಮಾದರ ,ಮಾದಿಗ,ಮಾತಾಂಗ, ಅರುಂದತಿಯಾರ್,ಭಂಗಿ,ಜಾಂಬ ,ಬಾಂಬಿ,ಹರಳಯ್ಯ,ಮೆಹತಾರ್,ಚಮ್ಮಾರ್,ಚಂಬಾರ್,ಚಮಗಾರ್,ಮಾಚಾಲ,ಚಮಗಾರ್,ರೋಹಿದಸ್,ಸಮಗಾರ್ ಇನ್ನೂ ಮುಂತಾದ 29 ಉಪಜಾತಿಗಳ ಎಲ್ಲಾ ಮಾದಿಗ ಸಮುದಾಯಾದ ಜನಸಂಖ್ಯೆಯು ಎಲ್ಲಾ ಜಾತಿಗಳಾದ ಒಕ್ಕಲಿಗ,ಲಿಂಗಾಯತ,ವೀರಶೈವ, ಬ್ರಾಹ್ಮಣ, ಕುರುಬ ಹಾಗೂ ಎಲ್ಲಾ ಜಾತಿ ಗಳಿಗಿಂತಲೂ ಹೆಚ್ಚಾಗಿದೆ ಆದರೆ ನಮ್ಮ ಸಮುದಾಯ ಆರ್ಥಿಕ ವಾಗಿ,ಸಾಮಾಜಿಕವಾಗಿ, ಶೈಕ್ಷಣಿಕವಾಗಿ,ರಾಜಕೀಯವಾಗಿ ಹಿಂದುಳಿದಿದೆ ನಮಗೆ ಸಲ್ಲಬೇಕಾದ ಸಾಮಜಿಕ ನ್ಯಾಯ ಇನ್ನೂ ಒದಗಿ ಬಂದಿಲ್ಲಾ ಎಂದರು.
ಈ ಮಹೋತ್ಸವವನ್ನು *ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ಕೇರಳ* ರಾಜ್ಯಗಳ ರಾಜಕೀಯ ನಾಯಕರು, ಹಿರಿಯ ಸಾಹಿತಿಗಳು, ಚಿಂತಕರು ಹಾಗೂ ಸಾಂಸ್ಕೃತಿಕ ನಾಯಕರ ಸಹಭಾಗಿತ್ವದಲ್ಲಿ ಭವ್ಯವಾಗಿ ಆಯೋಜಿಸುವ ಉದ್ದೇಶ ಹೊಂದಲಾಗಿದ್ದು ಇದರ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ನುರಿತ ಚಿಂತಕರು ಸಾಹಿತಿಗಳು ರಾಜಕೀಯ ನಾಯಕರ ಸಮ್ಮುಖದಲ್ಲಿ ಈ ಎಲ್ಲಾ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಬರುವ ಮುಂದಿನ ತಿಂಗಳಲ್ಲಿ ಶಿವಶರಣ ಮಾದರ ಚೆನ್ನಯ್ಯ ರವರ 965 ನೇ ಜಯಂತ್ಯೋತ್ಸವ ಮಹೋತ್ಸವವನ್ನು ಆಯೋಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಮುದಾಯದ ಪೀಠಾಧೀಶರಾದ
ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಮಾದರ ಚೆನ್ನಯ್ಯ ಮಠ, ಚಿತ್ರದುರ್ಗ,
ಶ್ರೀ ಸಿದ್ದರಾಜು ಸ್ವಾಮೀಜಿ ಪಾಲನಹಳ್ಳಿ ಮಠ,
ಷಡಕ್ಷರ ಮುನಿ ಸ್ವಾಮೀಜಿ,
ಆದಿ ಜಾಂಬವ ಮಠ, ಭಾರತಿ ಪೂರ್ಣಾನಂದ ಸ್ವಾಮೀಜಿ, ಮಾತಂಗ ಮಠ ಹಂಪಿ
ಶಿವಶರಣ ಹರಳಯ್ಯ ಸ್ವಾಮೀಜಿ ಐಮಂಗಳ ಹರಳಯ್ಯ ಗುರುಪೀಠ
ಆನಂದ ಮುನಿ ಸ್ವಾಮೀಜಿ, ಆದಿ ಜಾಂಬವ ಮಠ ಹಾಗೂ ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ,ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮತಾಂಗ ಫೌಂಡೇಷನ್ ನ ಅಧ್ಯಕ್ಷರಾದ ಆರ್ .ಲೋಕೇಶ್,ಹಾಗೂ ನಿವೃತ್ತ ಅಧಿಕಾರಿಗಳು,ಚಿಂತಕರು ಹಾಗೂ ಸಾಹಿತಿಗಳು ಉಪಸ್ಥಿತರಿದ್ದರು.

Comments
Post a Comment