ಸುಬೋಟೋಕಪ್‌ನಲ್ಲಿ ಯುವತಾರೆಗಳ ಮೆರುಗು: ಹರಿಯಾಣ-ಬಂಗಾಳ ಭರ್ಜರಿ ಗೆಲುವು

 ಸುಬೋಟೋಕಪ್‌ನಲ್ಲಿ ಯುವತಾರೆಗಳ ಮೆರುಗು: ಹರಿಯಾಣ-ಬಂಗಾಳ ಭರ್ಜರಿ ಗೆಲುವು

ಬೆಂಗಳೂರು, ಸೆಪ್ಟೆಂಬರ್ 6, 2025: 64ನೇ ಸುಬೋಟೋ ಕಪ್ ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಸಬ್ ಜೂನಿಯರ್ ಬಾಯ್ಸ್ (U-15) ವಿಭಾಗದ ಮೂರನೇ ದಿನವು ರೋಚಕ ಪಂದ್ಯಗಳ ಸಾಕ್ಷಿಯಾಯಿತು. ಹರಿಯಾಣ ಮತ್ತು ಪಶ್ಚಿಮ ಬಂಗಾಳ ದೊಡ್ಡ ಅಂತರದಗೆಲುವುಗಳೊಂದಿಗೆ ಗಮನಸೆಳೆದರೆ ಗುಜರಾತ್ ಕೂಡ ವಿಶ್ವಾಸಾರ್ಹ ಜಯ ದಾಖಲಿಸಿತು.

ದಿನದ ಆರಂಭಿಕ ಪಂದ್ಯದಲ್ಲಿ ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) ಹಾಗೂ ಶ್ರೀ ಲೀಲಾನಂದ ಸೆಕೆಂಡರಿ ಸ್ಕೂಲ್ (ಝಾರ್ಖಂಡ್) ನಡುವೆ 2-2 ಡ್ತಾ ಆಯಿತು. CISCE ಪರ ಮಮೇಶ್ (30' ) ಮತ್ತು ಬಿಕ್ಷನ್ (33' ) ಗೋಲು ಗಳಿಸಿದರೆ, ಝಾರ್ಖಂಡ್ ಪದ ಸಂದೀಪ್ (22' ) ಮತ್ತು ಅಶೀಷ್ (35' )ಗೋಲು ದಾಖಲಿಸಿದರು.

ಹರಿಯಾಣದ ಇಂದಿರಾ ಮಾಡರ್ನ್ ಹೈ ಸ್ಕೂಲ್ ಅದ್ಭುತ ಪ್ರದರ್ಶನ ನೀಡಿ ತಾಶಿ ನಮ್ಯಾಲ್ ಅಕಾಡೆಮಿ (IPSC) ವಿರುದ್ಧ 8-0 ಅಂತರದ ಭರ್ಜರಿ ಜಯ ದಾಖಲಿಸಿತು. ಸುದ್ದಿಂದರ್ ನಾಲ್ಕು ಗೋಲುಗಳನ್ನು (2' 17, 20, 43') ಗಳಿಸಿ ಮೆರೆದರೆ, ರೋಹಿತ್ (11' ), ಅರಣ್ (22', 24' ) ಮತ್ತು ಅದಿತ್ಯ (50+2' ) ತಲಾಗೋಲು ಹೊಡೆದರು.

ಚಂಡೀಗಢದ ಗವರ್ಮೆಂಟ್ ಮಾದರಿ ಸೀನಿಯರ್ ಸೆಕೆಂಡರಿ ಸ್ಕೂಲ್ ಮತ್ತು ಹಿಮಾಚಲ ಪ್ರದೇಶದ ಮದರ್ಸ್ ಪ್ರೈಡ್ ಪಬ್ಲಿಕ್ ಸ್ಕೂಲ್ ನಡುವಿನ ಪಂದ್ಯ 1-1 ಡ್ರಾದಲ್ಲಿ ಅಂತ್ಯಗೊಂಡಿತು. ಕೃಷ್ಣ (9' ) ಚಂಡೀಗಢ ಪರಗೋಲುಸಾಧಿಸಿತು.

ಮಧ್ಯಾಹ್ನದ ಪಂದ್ಯದಲ್ಲಿ ಪಶ್ಚಿಮ ಬಂಗಾಳದ ಮಾನಿಕ್ ಪಾರ ವಿವೇಕಾನಂದ ವಿದ್ಯಾಪೀಠ, ನಾಗಲ್ಯಾಂಡ್ ನ SFS ಹೈಯರ್ ಸೆಕೆಂಡರಿ ಸ್ಕೂಲ್ ವಿರುದ್ಧ 8-1 ಅಂತರದ ಭರ್ಜರಿಗೆಲುವು ಸಾಧಿಸಿತು. ಕೌಶಿಕ್ (2', 25 ), ಮುರ್ಮು (27', 29'), ಸೌಮನ್ (9' ), ನಾಗುನ್ (11' ), ಅಭಿಜಿತ್ (42' ) ಮತ್ತು ನೆಹಾಲ್ (50+1' ) ಪಶ್ಚಿಮ ಬಂಗಾಳ ಪರ ಗೋಲು ಗಳಿಸಿದರು. ನಾಗಲ್ಯಾಂಡ್ ರಎನ್ ಗ್ನಮಿಲೈನ್ (46' ) ಏಕೈಕಗೋಲುದಾಖಲಿಸಿದರು.

ಕೊನೆಯ ಪಂದ್ಯದಲ್ಲಿ, ಗುಜರಾತ್ ನ ಆನಂದ್ ನಿಕೇತನ ಸ್ಕೂಲ್ ಜಯಶ್ರೀ ಪೆರಿವಾಲ್ ಇಂಟರ್ ನ್ಯಾಷನಲ್ ಸ್ಕೂಲ್ (ISSO) ವಿರುದ್ಧ 2-0 ಅಂತರದ ಜಯ ಸಾಧಿಸಿತು. ಮೇಫ್ (23' ) ಮೊದಲ ಗೋಲು ಗಳಿಸಿದರೆ, ಶುಭಮ್ (50+1' ) ಇಂಜುರಿ ಟೈಮ್ ನಲ್ಲಿ ಜಯವನ್ನು ಸಾಧಿಸಿದರು.

ಮೂರನೇದಿನ ಸುಬೋಟೋ ಕಪ್ ಯುವ ಆಟಗಾರರ ಕೌಶಲ್ಯ ತಂಡದ ಆಟ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು.


Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims