ಬಂಕಾಪುರ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಎ ಮಾನ್ಯತೆ;ಮಾದರಿ ಕಾಲೇಜು ಯೋಜನಾ ವ್ಯಾಪ್ತಿಗೆ ತರಲು ಒತ್ತಾಯ.
ಬಂಕಾಪುರ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಎ ಮಾನ್ಯತೆ;ಮಾದರಿ ಕಾಲೇಜು ಯೋಜನಾ ವ್ಯಾಪ್ತಿಗೆ ತರಲು ಒತ್ತಾಯ.
ಬೆಂಗಳೂರು ಸೆಪ್ಟೆಂಬರ್ 5; ಈ ವರ್ಷದಲ್ಲಿ ರಾಷ್ಟ್ರೀಯ ಮೌಲ್ಯಮಾಪನ ಮಾನ್ಯತಾ ಮಂಡಳಿಯಿಂದ ನ್ಯಾಕ್ ಸ್ಥಾನಮಾನ ಪಡೆದ ಮೂವತ್ತೆರಡು ಕಾಲೇಜುಗಳನ್ನು ರಾಜ್ಯ ಸರ್ಕಾರ ಮಾದರಿ ಕಾಲೇಜುಗಳ ನಿರ್ಮಾಣ ಯೋಜನೆಗೆ ಒಳಪಡಿಸಬೇಕೆಂದು ಹಾವೇರಿ ಜಿಲ್ಲೆಯ ಬಂಕಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ರಮೇಶ್ ಎನ್.ತಿವಾರಿ ಹೇಳಿದರು.
ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಬಂಕಾಪುರ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಎ ಮಾನ್ಯತಾ ಪತ್ರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯ ಸರ್ಕಾರ ರಾಜ್ಯದಲ್ಲಿ 40 ಪದವಿ ಕಾಲೇಜುಗಳನ್ನು ಮಾದರಿ ಕಾಲೇಜುಗಳಾಗಿ ನಿರ್ಮಾಣ ಮಾಡುವುದಾಗಿ ಉದ್ದೇಶಿಸಿದೆ.ಈ ಯೋಜನೆಯಡಿ ನ್ಯಾಕ್ ಎ ಮಾನ್ಯತೆ ಪಡೆದ ಕಾಲೇಜುಗಳನ್ನು ಇದರ ವ್ಯಾಪ್ತಿಗೆ ಒಳಪಡಿಸಬೇಕೆಂದು ಸಲಹೆ ನೀಡಿದರು.
ಹಾವೇರಿ ಜಿಲ್ಲೆಯ ಬಂಕಾಪುರದ ಗ್ರಾಮೀಣ ಪ್ರದೇಶದ ಕಾಲೇಜಿಗೆ ನ್ಯಾಕ್ ಎ ಸ್ಥಾನಮಾನ ದೊರೆತಿರುವುದು ಖುಷಿ ತಂದಿದೆ,ಶೈಕ್ಷಣಿಕ, ಕ್ರೀಡೆ,ಸಾಂಸ್ಕೃತಿಕವಾಗಿ ಕಾಲೇಜು ಮುಂದಿದೆ ಎಂದು ಹೇಳಿದರು.

Comments
Post a Comment