ಮಾದಿಗ – ಮೈತ್ರಿ” ಸಮುದಾಯದ ವಿವಾದಕ್ಕೆ ಸರ್ಕಾರ ಬದ್ಧ: ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ*
“ *ಮಾದಿಗ – ಮೈತ್ರಿ” ಸಮುದಾಯದ ವಿವಾದಕ್ಕೆ ಸರ್ಕಾರ ಬದ್ಧ: ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ*
*ನೈಜ್ಯ ಮಾದಿಗ ಸಮುದಾಯವಾದ ಮೈತ್ರಿ ಸಮುದಾಯದ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ದೊರೆಯಲಿದೆ*
ವಿಧಾನ ಸೌಧ.2
ಮೂಲತಃ ಮಾದಿಗ ಸಮುದಾಯದವರಾಗಿದ್ದರೂ, ದಾಖಲೆಗಳಲ್ಲಿ ತಪ್ಪಾಗಿ ಮೈತ್ರಿ ಎಂದು ಸೇರಿಸಿದ ಅನ್ಯಾಯವನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ” ಎಂದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಭರವಸೆ ನೀಡಿದರು.
ವಿಧಾನ ಸೌಧದಲ್ಲಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಚಿವರು
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಿಂದ ನೂರಾರು ಜನರು ಬೆಂಗಳೂರಿಗೆ ಬಂದು ತಮ್ಮ ತಮ್ಮ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ್ದು
1980ರ ನಂತರ ತಪ್ಪಾಗಿ ‘ಮೈತ್ರಿ’ ಹೆಸರಿನಲ್ಲಿ ಪ್ರಮಾಣ ಪತ್ರ ನೀಡುತ್ತಿರುವುದರಿಂದ ಸಾವಿರಾರು ಜನರು ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ವಂಚಿತರಾಗಿದ್ದಾರೆ.
ನಾಗಮೋಹನದಾಸ್ ಸಮೀಕ್ಷೆಯಲ್ಲಿಯೇ ಸ್ಪಷ್ಟವಾಗಿ “ಮಾದಿಗ” ಎಂಬ ವರ್ಗಕ್ಕೆ ಸೇರಿದವರೇ ಎಂದು ದಾಖಲಿಸಲಾಗಿದೆ.
ಆದರೂ ಸ್ಥಳೀಯ ಅಧಿಕಾರಿಗಳು ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಇದು ಸರ್ಕಾರ ತಕ್ಷಣವೇ ಸರಿಪಡಿಸಬೇಕಾದ ವಿಷಯವಾಗಿದ್ದು
“ಸರ್ಕಾರ ಈಗಾಗಲೇ 59ನೇ ವರ್ಗದಲ್ಲಿ ‘ಮೋಸ್ಟ್ ಬ್ಯಾಕ್ವರ್ಡ್’ ಪಟ್ಟಿಯಲ್ಲಿ ಸೇರಿಸಿದೆ. ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣವೇ ಪ್ರಮಾಣ ಪತ್ರ ನೀಡುವಂತೆ ಕ್ರಮ ಕೈಗೊಳ್ಳುತ್ತೇವೆ.
ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಸಚಿವರಿಗ ಗಮನಕ್ಕೂ ತರುತ್ತೇನೆ” ಎಂದರು
ಪರಿಶಿಷ್ಠ ಜಾತಿಯ 101 ಜಾತಿಗಳಲ್ಲಿ ಯಾರಿಗಾದರೂ ಅನ್ಯಾಯವಾಗಿದ್ರೆ ಸರ್ಕಾರ ಪರಿಶೀಲನೆ ನಡೆಸಿ ನ್ಯಾಯ ನೀಡುತ್ತದೆ. ಅಲೆಮಾರಿ ಸಮಾಜಕ್ಕೂ ಪ್ರತ್ಯೇಕ ಮೀಸಲಾತಿ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ ಸರ್ಕಾರ ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತದೆ” ಎಂದು ಹೇಳಿದರು.
ಸಭೆಯಲ್ಲಿ ಹಳಿಯಾಳದ ಗುರುನಾಥ ದಾನಪ್ಪ ಸೇರಿದಂತೆ ಸಮಾಜದ ಮುಖಂಡರು ತಮ್ಮ ಹೋರಾಟದ ಹಿನ್ನೆಲೆಯನ್ನು ವಿವರಿಸಿದರು. 20 ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಇಂದಿನ ಸಭೆಯು ಹೊಸ ಆಶಾಕಿರಣವಾಗಿದೆ ಎಂದು ಅವರು ತಿಳಿಸಿದರು.
ಸಮಾಜದ ಬೇಡಿಕೆಗಳನ್ನು ಆಲಿಸಿದ ಸಚಿವರು, “ಮುಂಬರುವ ಕ್ಯಾಬಿನೆಟ್‌ನಲ್ಲಿ ಈ ವಿಷಯವನ್ನು ಚರ್ಚೆ ಮಾಡಿ ಅಂತಿಮ ತೀರ್ಮಾನಕ್ಕೆ ಬರುತ್ತೇವೆ” ಎಂದು ಭರವಸೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರಿಗೆ ಸಂಬಂಧಿಸಿದ ಸರ್ಕ್ಯೂಲರ್/ಆದೇಶಗಳನ್ನು ಸರ್ಕಾರ ಹೊರಡಿಸಬೇಕಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ನಾಗಮೋಹನ್ ದಾಸ್ ಆಯೋಗದ ವರದಿ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಜಾರಿಗೆ ತರಬೇಕಾದ ಅಗತ್ಯವಿದೆ.
ಮೊಗೇರ ಸಮುದಾಯದ ಜನಸಂಖ್ಯೆಯ ಕುರಿತಂತೆ ಗೊಂದಲವಿದ್ದು, ನಿಜವಾದ ಮೊಗೇರರು ತುಂಬಾ ಕಡಿಮೆ ಇದ್ದರೂ 80–87 ಸಾವಿರ ಜನರು ಈ ಹೆಸರಿನಲ್ಲಿ ಲಾಭ ಪಡೆಯುತ್ತಿರುವ ಬಗ್ಗೆ ಸಚಿವರು ಆತಂಕ ವ್ಯಕ್ತಪಡಿಸಿದರು.
“ಮೂಲ ಮಾದಿಗರು” ಎಂದು ಬರೆದಿದ್ದಲ್ಲಿ ಯಾವುದೇ ಸಮಸ್ಯೆ ಇಲ್ಲ, ಆದರೆ ಮೈತ್ರಿ-ಮಾದಿಗರ ವಿಷಯದಲ್ಲಿ ಭಾವನಾತ್ಮಕ ಹಾಗೂ ಸಾಮಾಜಿಕ ತಳಹದಿ ಇರುವುದರಿಂದ ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಭರವಸೆ ನೀಡಿದರು.
“ನಾವು ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಸರ್ಕಾರ ಬದ್ಧವಾಗಿದೆ ಕ್ಯಾಬಿನೆಟ್ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ಸಚಿವರು ಹೇಳಿದರು.
ಸಮುದಾಯದ ಬೇಡಿಕೆ ಪ್ರಕಾರ, ಮಾದಿಗರ ಮೂಲ ಹೆಸರನ್ನು ಪುನಃ ದೃಢಪಡಿಸುವಂತೆ ಹಾಗೂ ತಪ್ಪಾದ ದಾಖಲೆಗಳನ್ನು ತಿದ್ದುಪಡಿ ಮಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ.
ತಹಶೀಲ್ದಾರರಿಗೆ ಅರ್ಜಿ ಸಲ್ಲಿಸುವಾಗ ಪೂರ್ವಜರ ದಾಖಲೆ ಆಧಾರವಾಗಿ ಸರಿಯಾದ ಜಾತಿ ಪ್ರಮಾಣ ಪತ್ರ ನೀಡುವಂತೆ ಸೂಚನೆ ನೀಡಲಾಗುವುದು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನೇಕರು ತಪ್ಪು ಪ್ರಮಾಣಪತ್ರಗಳನ್ನು ಪಡೆದಿರುವ ಬಗ್ಗೆ ಸಚಿವರು ಗಂಭೀರವಾಗಿ ಗಮನ ಸೆಳೆದರು.
ಮುಂದಿನ ವಾರದಲ್ಲೇ ಸಮಾಜ ಕಲ್ಯಾಣ ಸಚಿವರು, ಉಪಮುಖ್ಯಮಂತ್ರಿಗಳು, ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ, ಪರಿಹಾರ ಕಂಡುಹಿಡಿಯುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ನಾಗೇಶ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಕಾಂಗ್ರೆಸ್ ಪಕ್ಷದ ಮುಖಂಡ ಗುರುನಾಥ ದಾನಪ್ಪ, ಶಿವಪ್ಪ ,ಪುರುಷೋತ್ತಮ್ ಉಪಸ್ಥಿತರಿದ್ದರು.

Comments
Post a Comment