ಬೆಂಗಳೂರಿನಲ್ಲಿ ಸೆಪ್ಟೆಂಬರ್ 7 ರಂದು ನಡೆಯಲಿದೆ ಜೀ಼ ರೈಟರ್ಸ್ ರೂಮ್, ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್
ಬೆಂಗಳೂರಿನಲ್ಲಿ ಸೆಪ್ಟೆಂಬರ್ 7 ರಂದು ನಡೆಯಲಿದೆ ಜೀ಼ ರೈಟರ್ಸ್ ರೂಮ್, ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್
ಬೆಂಗಳೂರು, 04 ಸೆಪ್ಟೆಂಬರ್ 2025: ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವುದರಲ್ಲಿ ಜೀ಼ ಕನ್ನಡ ಸದಾ ಮುಂದು. ಈಗ ಕಿರುತೆರೆಗೆ ಪ್ರಭಾವಶಾಲಿ ಮತ್ತು ಅರ್ಥಪೂರ್ಣವಾದ ಕಥೆಗಳನ್ನು ಒದಗಿಸುವ ಜೀ಼ ಕನ್ನಡ ಈಗ ಯುವಕಥೆಗಾರರಿಗೆ ಒಂದು ಅದ್ಭುತ ಅವಕಾಶವನ್ನು ಕಲ್ಪಿಸಿ ಕೊಡುತ್ತಿದೆ. ಅದರ ಜೊತೆಗೆ ಡ್ಯಾನ್ಸರ್ ಗಳು ಹಾಗು ಕಾಮಿಡಿಯನ್ ಗಳಿಗೂ ಇಲ್ಲಿದೆ ಸುವವಕಾಶ. ಜೀ಼ ರೈಟರ್ಸ್ ರೂಮ್, ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್ಸ್ ಸೆಪ್ಟೆಂಬರ್ 7 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಜೀ಼ ರೈಟರ್ಸ್ ರೂಮ್ ನಲ್ಲಿ ಭಾಗವಹಿಸುವವರು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಮತ್ತು ಆಯ್ಕೆ ಆದ ಯುವಪ್ರತಿಭೆಗಳು ಮುಂದಿನ ಸುತ್ತಿಗೆ ಹೋಗುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳು ಜೀ಼ ರೈಟರ್ಸ್ ರೂಮ್ ಗೆ ಸೇರಲು ಅವಕಾಶವನ್ನು ಹೊಂದಿರುತ್ತಾರೆ, ಅಲ್ಲಿ ಅವರು ಇಂಡಸ್ಟ್ರಿಯ ವೃತ್ತಿಪರರಿಂದ ಮಾರ್ಗದರ್ಶನ ಪಡೆಯುತ್ತಾರೆ ಹಾಗೂ ಜೀ಼ ನ ಮುಂಬರುವ ಯೋಜನೆಗಳಿಗೆ ಕೆಲಸ ಮಾಡುವ ಸುವವಕಾಶ ಪಡೆಯುತ್ತಾರೆ. ಅಷ್ಟೇ ಅಲ್ಲದೇ ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್ ನಲ್ಲಿ ಉತ್ತೀರ್ಣರಾದವರು ಮುಂದಿನ ಸುತ್ತಿದೆ ಆಯ್ಕೆ ಆಗುತ್ತಾರೆ.
ಇಲ್ಲಿದೆ ಆಡಿಷನ್ಸ್ ನ ವಿವರಗಳು:
ಜೀ಼ ರೈಟರ್ಸ್ ರೂಮ್ ಆಡಿಷನ್ಸ್:
ಸ್ಥಳ: ಸಂತ ಸೋಫಿಯಾ ಕಾನ್ವೆಂಟ್ ಸ್ಕೂಲ್, #6, 10th ಬ್ಲಾಕ್, 2ನೆ ಹಂತ, ನಾಗರಬಾವಿ, ಬೆಂಗಳೂರು
ದಿನಾಂಕ: 7th ಸೆಪ್ಟೆಂಬರ್ 2025
ಸಮಯ: 9:00 AM-2:00 PM
ದೂರವಾಣಿ ಸಂಖ್ಯೆ: 9900207711
ಡಾನ್ಸ್ ಕರ್ನಾಟಕ ಡಾನ್ಸ್ & ಕಾಮಿಡಿ ಖಿಲಾಡಿಗಳು ಆಡಿಷನ್ಸ್:
ಸ್ಥಳ: ಹೈಯರ್ ಸೆಕೆಂಡರಿ ಸ್ಕೂಲ್, ಆರ್ ವಿ ರೋಡ್, ಬಸವನಗುಡಿ, ಬೆಂಗಳೂರು
ದಿನಾಂಕ: 7th ಸೆಪ್ಟೆಂಬರ್ 2025
ಸಮಯ: 9:00 AM-6:00 PM
ದೂರವಾಣಿ ಸಂಖ್ಯೆ: 9513134434
ಮತ್ಯಾಕೆ ತಡ, ಈಗಲೇ ಭಾಗವಹಿಸಿ ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ.

Comments
Post a Comment