ಬೆಂಗಳೂರು, ಸೆಪ್ಟೆಂಬರ್ 20, 2025: ಭಾರತೀಯ ಮಹಾರಾಷ್ಟ್ರ ಕ್ರೀಡೆಯ ಮಹತ್ವದ ಹೆಜ್ಜೆ ಇಡುತ್ತಿದೆ. ಮಾನ್ಯ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್, ಅವರ ಸಮ್ಮುಖದಲ್ಲಿ

 

ಬೆಂಗಳೂರು, ಸೆಪ್ಟೆಂಬರ್ 20, 2025: ಭಾರತೀಯ ಮಹಾರಾಷ್ಟ್ರ ಕ್ರೀಡೆಯ ಮಹತ್ವದ ಹೆಜ್ಜೆ ಇಡುತ್ತಿದೆ. ಮಾನ್ಯ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್, ಅವರ ಸಮ್ಮುಖದಲ್ಲಿ 

ಬೆಂಗಳೂರು, ಸೆಪ್ಟೆಂಬರ್ 20, 2025: ಭಾರತೀಯ ಮಹಾರಾಷ್ಟ್ರ ಕ್ರೀಡೆಯ ಮಹತ್ವದ ಹೆಜ್ಜೆ ಇಡುತ್ತಿದೆ. ಮಾನ್ಯ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್, ಅವರ ಸಮ್ಮುಖದಲ್ಲಿ RPPL ಮತ್ತು NMMC ನಡುವೆ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಡಿಸೆಂಬರ್ 2025ರಲ್ಲಿ ನಡೆಯಲಿರುವ ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) ಗ್ರಾಂಡ್ ಫೈನಲ್ ಮೂಲಕ ಮುಂಬೈ ತನ್ನ ಮೊದಲ FIA-ಗ್ರೇಡ್ ಸ್ಟ್ರೀಟ್ ಸರ್ಕ್ಯೂಟ್‌ಗೆ ಆತಿಥ್ಯ ನೀಡಲಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಮುಂಬೈನ ರಸ್ತೆಗಳು ದೀಪ ದೀಪಗಳಿಂದ ಮಿಂಚುವ ರೇಸಿಂಗ್ ಯುದ್ಧಭೂಮಿಯಾಗಿ ಪರಿವರ್ತನೆಯಾಗಲಿವೆ. ನವಿ ಮುಂಬೈ ಈಗ ಜಾಗತಿಕ ಮೋಟಾರ್‌ಸ್ಪೋರ್ಟ್ ನಕ್ಷೆಯಲ್ಲಿ ಸ್ಥಾನ ಪಡೆದಿದ್ದು, 3.753 ಕಿಮೀ ಉದ್ದ 14 ತಿರುವುಗಳನ್ನು ಹೊಂದಿರುವ FIA ಗ್ರೇಡ್ ಸ್ಟ್ರೀಟ್ ಸರ್ಕ್ಯೂಟ್ ಮೂಲಕ ನಗರವು ಪ್ರತಿಷ್ಠಿತ ಸ್ಟ್ರೀಟ್ ರೇಸ್ ನಗರಗಳ ಪಟ್ಟಿಗೆ ಸೇರಲಿದೆ.

ಅತ್ಯುತ್ತಮ ಅಂತರರಾಷ್ಟ್ರೀಯ ಹಾಗೂ ಭಾರತೀಯ ರೇಸರ್‌ಗಳು ಇಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲಿದ್ದಾರೆ.

ಈ ರೇಸ್ ಐಕಾನಿಕ್ ಪಾಮ್ ಬೀಚ್ ರಸ್ತೆಯಿಂದ ಆರಂಭವಾಗಿ, ವಿಶಾಲ ರಸ್ತೆಗಳ ಮೂಲಕ, ನೆರುಲ್ ಸರೋವರದ ನೋಟವನ್ನು ಒಳಗೊಂಡಿದೆ. ಸುಮಾರು 3.753 ಕಿಮೀ ಉದ್ದ ಮತ್ತು 14 ಸವಾಲಿನ ತಿರುವುಗಳನ್ನು ಹೊಂದಿರುವ ಈ FIA-ಗ್ರೇಡ್ ರೇಸ್ ಚಾಲಕರ ನಿಖರತೆ, ತಂತ್ರ ಹಾಗೂ ಕೌಶಲ್ಯವನ್ನು ಪರೀಕ್ಷಿಸುವುದರ ಜೊತೆಗೆ ಪ್ರೇಕ್ಷಕರಿಗೆ ರೋಮಾಂಚಕ ಅನುಭವ ನೀಡಲಿದೆ.

ಈ ಬಗ್ಗೆ ಮಾತನಾಡಿದ ದೇವೇಂದ್ರ ಫಡ್ನವಿಸ್ 'ನಾವು ಭಾರತೀಯ ರೇಸಿಂಗ್ ಫೆಸ್ಟಿವಲ್ ಅನ್ನು ನವೀ ಮುಂಬಯಿಗೆ ತರಲು ಹೆಮ್ಮೆ ಪಡುತ್ತೇವೆ. ಮುಂಬೈ ಸ್ಟ್ರೀಟ್ ರೇಸ್ ಮಹಾರಾಷ್ಟ್ರದ ಮೋಟಾರ್ಸ್‌ ಪೋರ್ಟ್ ಪಯಣದಲ್ಲಿ ಐತಿಹಾಸಿಕ ಮೈಲಿಗಲ್ಲಾಗಿದ್ದು, ಇದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ. ಈ ರೇಸ್ ಯುವ ರೇಸರ್‌ಗಳಿಗೆ ಮಾತ್ರವಲ್ಲ, ಇಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕ್ಷೇತ್ರದ ಪ್ರತಿಭೆಗಳಿಗೆ ಸಹ ಪ್ರೇರಣೆ ನೀಡುತ್ತದೆ ಎಂದರು.

RPPL ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಖಿಲೇಶ್ ರೆಡ್ಡಿ ಮಾತನಾಡಿ, ಮಾನ್ಯ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್ ಹಾಗೂ NMMC ಅವರ ಬೆಂಬಲದಿಂದ, ಮುಂಬೈ ಒಂದು ಅದ್ಭುತ ಮೋಟಾರ್ಸ್‌ ಪೋರ್ಟ್ ಕಾರ್ಯಕ್ರಮಕ್ಕೆ ಆತಿಥ್ಯ ನೀಡಲಿದೆ. 'ನಿದ್ದೆ ಮಾಡದ ನಗರ' ಎಂದೇ ಪ್ರಸಿದ್ದಿ ಪಡೆದಿರುವ ಮುಂಬೈ, ರಾತ್ರಿ ವೇಳೆ ನಡೆಯುವ ಈ ಸ್ಪರ್ಧೆಗೆ ಸೂಕ್ತ ವೇದಿಕೆ. 3.753 ಕಿಮೀ FIA-ಗ್ರೇಡ್ ಸ್ಟ್ರೀಟ್ ಸರ್ಕ್ಯೂಟ್ ಭಾರತದಲ್ಲಿ ಮೋಟಾರ್ಸ್‌ ಪೋರ್ಟ್‌ಗೆ ಹೊಸ ಮಾನದಂಡವನ್ನು ನೀಡಲಿದೆ. ಹೈದರಾಬಾದ್ ಮತ್ತು ಚೆನ್ನೈನಲ್ಲಿ ಯಶಸ್ವಿ

ಸ್ಟ್ರೀಟ್ ರೇಸ್‌ಗಳನ್ನು ಆಯೋಜಿಸಿರುವ RPPL, ಈಗ ದಕ್ಷಿಣ ಏಷ್ಯಾದ ಹೃದಯದಲ್ಲಿ ವಿಶ್ವಮಟ್ಟದ ಸ್ಪರ್ಧೆಯನ್ನು ತರುತ್ತಿರುವುದು ಹೆಮ್ಮೆ ಎಂದರು.

ಈ ರೇಸಿಂಗ್ ಉತ್ಸವದಲ್ಲಿ ಸಿನೆಮಾ ಹಾಗೂ ಕ್ರೀಡಾ ತಾರೆಯರು ಮಾಲೀಕರಾಗಿರುವ ತಂಡಗಳು ಪಾಲ್ಗೊಳ್ಳಲಿವೆ:

ಜಾನ್ ಅಬ್ರಹಾಂ (ಗೋವಾ ಏಸಸ್ JA ರೇಸಿಂಗ್)

ಅರ್ಜುನ್ ಕಪೂರ್ (ಸ್ಪೀಡ್ ಡೀಮನ್ಸ್ ದೆಹಲಿ)

ಸೌರವ್ ಗಾಂಗೂಲಿ (ಕೊಲ್ಕತಾ ರಾಯಲ್ ಟೈಗರ್ಸ್)

ಕಿಚ್ಚ ಸುದೀಪ್ (ಕಿಚ್ಚಾ'ಸ್ ಕಿಂಗ್ಸ್ ಬೆಂಗಳೂರು)

ನಾಗ ಚೈತನ್ಯ (ಹೈದರಾಬಾದ್ ಬ್ಲಾಕ್‌ಬರ್ಡ್ಸ್)

ಡಾ. ಶ್ವೇತಾ ಸುಂದೀಪ್ ಆನಂದ್ (ಚೆನ್ನೈ ಟರ್ಬೋ ರೈಡರ್ಸ್) ತಂಡಗಳು ಈ ರೇಸಿಂಗ್ ನಲ್ಲಿ ಪಾಲ್ಗೊಳ್ಳಲಿವೆ.


Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims