ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 15ನೇ ಪದವಿ ಪ್ರಧಾನ ಕಾರ್ಯಕ್ರಮ
ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 15ನೇ ಪದವಿ ಪ್ರಧಾನ ಕಾರ್ಯಕ್ರಮ
ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 14 ರಂದು 15ನೇ ಪದವಿ ಪ್ರಧಾನ ಕಾರ್ಯಕ್ರಮವನ್ನು ಎಸಿಎಸ್ ಕನ್ವೆನ್ನನ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಶ್ರೀಯುತ ವಿ.ಸೋಮಣ್ಣವರು ಮಾನ್ಯ ಕೇಂದ್ರ ರಾಜ್ಯ ಸಚಿವರು ರೈಲ್ವೆ ಸಚಿವಾಲಯ ಮತ್ತು ಜಲಶಕ್ತಿ ಸಚಿವಾಲಯದ, ಗೌರವಾನ್ವಿತ ಅತಿಥಿಯಾಗಿ ಶ್ರೀಯುತ ನೈನಾರ್ ನಾಗೇಂದ್ರ, ತಮಿಳುನಾಡು ವಿಧಾನಸಭೆಯ ಸದಸ್ಯರು, ತಮಿಳುನಾಡು ರಾಜ್ಯ ಅಧ್ಯಕ್ಷರು, ಭಾರತೀಯ ಜನತಾ ಪಕ್ಷ, ಮಾಜಿ ಸಚಿವರು, ತಮಿಳುನಾಡು ಸರ್ಕಾರ ಇವರು ಉಪಸ್ಥಿತರಿದರು.
ಕಾರ್ಯಕ್ರಮವನ್ನು ಡಾ.ಬಿ.ಸತ್ಯಮೂರ್ತಿಯವರು ಸ್ವಾಗತ ಭಾಷಣದೊಂದಿಗೆ ಪ್ರಾರಂಭಿಸಿದರು. ಪದವಿ ಪಡೆದ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದರು ಮತ್ತು ಅವರ ಸಮರ್ಥ ವೈದ್ಯರಾಗಲು ಮಾತ್ರವಲ್ಲದೆ ಸಹಾನುಭೂತಿಯ ಆರೈಕೆದಾರರಾಗಲು ಶ್ರಮಿಸಬೇಕೆಂದು ತಿಳಿಸಿದರು. ನಿರಂತರ ಕಲಿಕೆ ಮತ್ತು ಶ್ರೇಷ್ಠತೆ ಅತ್ಯಗತ್ಯವಾದರೂ, ವೈದ್ಯಕೀಯದಲ್ಲಿ ನಿಜವಾದ ಯಶಸ್ಸು ಅಗತ್ಯವಿರುವವರಿಗೆ ಸಹಾನುಭುತು ಮತ್ತು ಸೇವೆಯಲ್ಲಿದೆ ಎಂದು ಡಾ.ಎ.ಸಿ.ಷಣ್ಣುಗಂ ಅವರು ಒತ್ತಿ ಹೇಳಿದರು.
ಶ್ರೀ ವಿ.ಸೋಮಣ್ಣ ಅವರು ತಮ್ಮ ಸ್ಫೂರ್ತಿದಾಯಕ ಭಾಷಣದಲ್ಲಿ ಭಾರತದ ಗ್ರಾಮೀಣ ವಲಯಗಳಲ್ಲಿ ನುರಿತ ವೈದ್ಯರ ಅಗತ್ಯವನ್ನು ನೆನಪಿಸುತ್ತಾ, ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಉನ್ನತ ಗುರಿಯನ್ನು ಹೊಂದಲು ಪ್ರೋತ್ಸಾಹಿಸಿದರು. ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಆರೋಗ್ಯದ ಪಾತ್ರವನ್ನು ಅವರು ಎತ್ತಿ ತೋರಿಸಿದರು ಮತ್ತು ಡಾ.ಷಣ್ಣುಗಂ ಅವರ ಲೋಕೋಪಕಾರ ಮತ್ತು ಸಾರ್ವಜನಿಕ ಸೇವೆಯ ಪರಂಪರೆಯಿಂದ ಸ್ಫೂರ್ತಿ ಪಡೆಯುವಂತೆ ಪದವೀಧರರಿಗೆ ಕರೆ ನೀಡಿದರು.

Comments
Post a Comment