ಚಿಕ್ಕಮಗಳೂರು ವಾರ್ತಾ, ಆರೋಗ್ಯ ಇಲಾಖೆಗೆ ಬಸ್ ಕೊಡುಗೆ ನೀಡಿದ ಇಂಧನ ಸಚಿವ ಜಾರ್ಜ್*
*ಚಿಕ್ಕಮಗಳೂರು ವಾರ್ತಾ, ಆರೋಗ್ಯ ಇಲಾಖೆಗೆ ಬಸ್ ಕೊಡುಗೆ ನೀಡಿದ ಇಂಧನ ಸಚಿವ ಜಾರ್ಜ್*
*ಚಿಕ್ಕಮಗಳೂರು, ಜುಲೈ 5,2025*: ವಾರ್ತಾ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಬಳಕೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಬಸ್‌ಅನ್ನು ಕೊಡುಗೆಯಾಗಿ ನೀಡಿದ್ದಾರೆ. .
ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಸಚಿವ ಜಾರ್ಜ್ ಅವರು ನೂತನ ಬಸ್‌ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಾರ್ಜ್, "ಕೆಪಿಟಿಸಿಎಲ್‌ನಿಂದ 25 ಲಕ್ಷ ರೂ. ಸಿ.ಎಸ್.ಆರ್. ನಿಧಿಯಡಿ ಬಸ್‌ಅನ್ನು ವಾರ್ತಾ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಬಳಕೆಗಾಗಿ ನೀಡಲಾಗಿದೆ. ಜಿಲ್ಲೆಯ ಜನರಿಗೆ ಇದರ ಪ್ರಯೋಜನ ಆಗಬೇಕು. ಜನಪರ ಕೆಲಸಗಳಿಗೆ ನಮ್ಮ ಸರ್ಕಾರದ ಬೆಂಬಲ ಸದಾ ಇರುತ್ತದೆ,"ಎಂದು ಹೇಳಿದರು.
ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ. ಸಿಇಒ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ.ಮಂಜೇಗೌಡ ಹಾಜರಿದ್ದರು.

Comments
Post a Comment