ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ಕೊಡಿ ಎಂದು ಆಯುಕ್ತರಾದ ಅಶೋಕ್ ರೆಡ್ಡಿರವರಿಗೆ ಕರ್ನಾಟಕ ಸಾಮರಸ್ಯ ಸಮಿತಿ ರಾಜ್ಯಾಧ್ಯಕ್ಷರಾದ ಕನ್ನಳ್ಳಿ ಕೃಷ್ಣಪ್ಪ ಮನವಿ*
*ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ಕೊಡಿ ಎಂದು ಆಯುಕ್ತರಾದ ಅಶೋಕ್ ರೆಡ್ಡಿರವರಿಗೆ ಕರ್ನಾಟಕ ಸಾಮರಸ್ಯ ಸಮಿತಿ ರಾಜ್ಯಾಧ್ಯಕ್ಷರಾದ ಕನ್ನಳ್ಳಿ ಕೃಷ್ಣಪ್ಪ ಮನವಿ*
ಬೆಂಗಳೂರು:ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಆಯುಕ್ತರಾದ ಅಶೋಕ್ ರೆಡ್ಡಿ ರವರಿಗೆ ಕರ್ನಾಟಕ ಸಾಮರಸ್ಯ ಸಮಿತಿ ರಾಜ್ಯಾಧ್ಯಕ್ಷರಾದ ಕನ್ನಳ್ಳಿ ಕೃಷ್ಣಪ್ಪರವರು ಅಂಬೇಡ್ಕರ್ ನಗರ, ಖಾದ್ರಿಪುರ ನಿವಾಸಿಗಳಿಗೆ ಹಕ್ಕುಪತ್ರ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಸಲ್ಲಿಸಿದರು.
ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ *ಕನ್ನಳ್ಳಿ ಕೃಷ್ಣಪ್ಪರವರು* ಮಾತನಾಡಿ ಕೋಲಾರ ಜಿಲ್ಲೆ ಖಾದ್ರಿ ಗ್ರಾಮ ಸವಾರಮ್ಮ ಬಡಾವಣೆ ಮತ್ತು ನಿಸಾರ್ ನಗರ ನಿವಾಸಿಗಳಿಗೆ ಹಾಗೂ ಬೆಂಗಳೂರಿನ ಅಂಬೇಡ್ಕರ್ ನಿವಾಸಿಗಳಿಗೆ ಕಳೆದ 40ಗಳಿಂದ ವಾಸವಿದ್ದಾರೆ ಅವರಿಗೆ ಕೊಳಗೇರಿ ಮಂಡಳಿಯಿಂದ ಹಕ್ಕುಪತ್ರ ನೀಡಿಲ್ಲ.
ಕುಡಿಯುವ ನೀರು, ವಿದ್ಯುತ್ ರಸ್ತೆ ಮೂಲಭೂತ ಸೌಕಾರ್ಯಗಳನ್ನು ಕೆಲವು ಕಡೆಗಳಲ್ಲಿ ಒದಗಿಸಿದ್ದಾರೆ ಮತ್ತು ಕೆಲವು ಮೂಲಭೂತ ಸೌಕಾರ್ಯ ನೀಡಿಲ್ಲ.
ದಲಿತ ಸಮುದಾಯ ಮತ್ತು ಅಲ್ಪಸಂಖ್ಯಾತ ವರ್ಗದವರು ಕಡು ಬಡವರು ವಾಸ ಮಾಡುವ ಪ್ರದೇಶಗಳು ಇವು ಇವರಿಗೆ ಹಕ್ಕುಪತ್ರ ಮೂಲಭೂತ ಸೌಕರ್ಯಗಳನ್ನು ನೀಡಬೇಕು ಎಂದು ಸಚಿವರಾದ ಜಮೀರ್ ಅಹಮದ್ ಖಾನ್ ರವರಿಗೆ ಮತ್ತು ಸಚಿವರಾದ ಪ್ರಿಯಾಂಕ್ ಖರ್ಗೆರವರಿಗೆ, ಆಯುಕ್ತರಾದ ಅಶೋಕ್ ರೆಡ್ಡಿರವರಿಗೆ ಮನವಿ ಸಲ್ಲಿಸಲಾಗಿದೆ.
ಸಚಿವರುಗಳಾದ ಜಮೀರ್ ಅಹಮದ್ ಖಾನ್ ರವರು, ಆಯುಕ್ತರಾದ ಅಶೋಕ್ ರೆಡ್ಡಿರವರು ನಮ್ಮ ಮನವಿ ಉತ್ತಮ ಸ್ಪಂದನೆ ನೀಡಿದ್ದಾರೆ ಹಕ್ಕು ಪತ್ರಗಳನ್ನು ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

Comments
Post a Comment