ಜೀ಼ ಕನ್ನಡದಲ್ಲಿ ಹೊಚ್ಚಹೊಸ ಶೋ ನ ದರ್ಬಾರು; ನಿಮ್ಮನ್ನು ಮನರಂಜಿಸಲು ಬರ್ತಿದೆ ಸಂಬಂಧಗಳ ನಡುವಿನ ಪ್ರೀತಿ ಸಾರುವ 'ನಾವು ನಮ್ಮವರು'!

 ಜೀ಼ ಕನ್ನಡದಲ್ಲಿ ಹೊಚ್ಚಹೊಸ ಶೋ ನ ದರ್ಬಾರು; ನಿಮ್ಮನ್ನು ಮನರಂಜಿಸಲು ಬರ್ತಿದೆ ಸಂಬಂಧಗಳ ನಡುವಿನ ಪ್ರೀತಿ ಸಾರುವ 'ನಾವು ನಮ್ಮವರು'!


ಬೆಂಗಳೂರು, 30 ಜುಲೈ 2025: ಧಾರಾವಾಹಿಗಳು, ರಿಯಾಲಿಟಿ ಶೋ ಗಳು, ಗೆಮ್ ಶೋ ಗಳಿಂದ ವೀಕ್ಷಕರ ಮನಗೆದ್ದು ನಂಬರ್ 1 ಸ್ಥಾನದಲ್ಲಿ ಇರುವ ಮನರಂಜನೆಯ ಮಹಾತಾಣ ಜೀ಼ ಕನ್ನಡ. ಡ್ರಾಮಾ ಜೂನಿಯರ್ಸ್, ಸರಿಗಮಪ, ವೀಕೆಂಡ್ ವಿತ್ ರಮೇಶ್, ಕಾಮಿಡಿ ಖಿಲಾಡಿಗಳು, ಡಾನ್ಸ್ ಕರ್ನಾಟಕ ಡಾನ್ಸ್, ಜೋಡಿ ನಂಬರ್ 1, ಮತ್ತು ಸೂಪರ್ ಕ್ವೀನ್ ನಂತಹ ಅನೇಕ ಜನಮೆಚ್ಚಿದ ರಿಯಾಲಿಟಿ ಶೋಗಳನ್ನು ಜನರ ಮುಂದಿಟ್ಟು ಅದರಲ್ಲಿ ಯಶಸ್ವೀ ಆಗಿರುವ ಜೀ಼ ಕನ್ನಡ ಈಗ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ. ಹೊಚ್ಚ ಹೊಸ ರಿಯಾಲಿಟಿ ಶೋ ಫ್ಯಾಮಿಲಿ ನಂಬರ್ ಇದೇ ಆಗಸ್ಟ್ 2 ರಿಂದ ರಾತ್ರಿ 9 ಗಂಟೆಗೆ ನಿಮ್ಮನ್ನು ಮನರಂಜಿಸಲಿದೆ. 

ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಇದು ವಿಭಿನ್ನ ಪ್ರಯತ್ನವಾಗಿದ್ದು ನಿಮ್ಮ ನೆಚ್ಚಿನ ತಾರೆಯರು ಅವರ ಕುಟುಂಬದವರ ಜೊತೆಗೆ ಹೇಗೆ ಇರುತ್ತಾರೆ ಎಂಬುದನ್ನು ನಿಮ್ಮ ತನಕ ತಲುಪಿಸುವುದೇ ಈ ರಿಯಾಲಿಟಿ ಶೋ ದ ಮುಖ್ಯ ಉದ್ದೇಶ. ಈ ರಿಯಾಲಿಟಿ ಶೋನಲ್ಲಿ ಸಕ್ಕತ್ ಟ್ವಿಸ್ಟ್ ಜೊತೆಗೆ ಫನ್ ಇರಲಿದ್ದು ನಿಮಗೆ 100% ಮನರಂಜನೆ ಸಿಗೋದಂತೂ ಗ್ಯಾರಂಟಿ. ಅಷ್ಟೇ ಅಲ್ಲದೇ ಪ್ರತಿ ವಾರ ವಿಭಿನ್ನ ಬಗೆಯ ರೌಂಡ್ಸ್ ಇರಲಿದ್ದು ಯಾರು ಹೇಗೆ ಪರ್ಫಾರ್ಮ್ ಮಾಡ್ತಾರೆ ಎನ್ನುವುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. 

ತರ್ಲೆ ಮಾತು, ವಿಭಿನ್ನ ನಿರೂಪಣಾ ಶೈಲಿಯಿಂದ ಕನ್ನಡಿಗರ ಮನಗೆದ್ದ ನಿರಂಜನ್ ದೇಶಪಾಂಡೆ ಅವರು ಫ್ಯಾಮಿಲಿ ನಂ.1 ನ ನಿರೂಪಣಾ ಜವಾಬ್ದಾರಿಯನ್ನು ಹೊತ್ತುಕೊಂಡರೆ ಗೋಲ್ಡನ್ ಕ್ವೀನ್ ಅಮೂಲ್ಯ, ಎವರ್ಗ್ರೀನ್ ಚೆಲುವೆ ಮತ್ತು ಪೊಲಿಟಿಷಿಯನ್ ತಾರಾ ಅನುರಾಧ, ಎಲ್ಲರ ನೆಚ್ಚಿನ ನಟ ಶರಣ್ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಕರುನಾಡು ಮೆಚ್ಚಿದ ಸೆಲೆಬ್ರಿಟಿಗಳಾದ ರಜತ್-ಅಕ್ಷತಾ, ಸುಜಯ್-ಸಿಂಚನ,  ಪ್ರಿಯ ಕೇಸರಿ-ಶಿವರಾಂ,ಅಲ್ಲು ರಘು-ಸುಶ್ಮಿತಾ, ಮಲ್ಲಯ್ಯ-ನೀಲಮ್ಮ, ಮೋಹನ್ ಕುಮಾರ್-ಪಲ್ಲವಿ, ವಿಶಾಲ್ ಹೆಗ್ಡೆ-ಪ್ರಿಯ, ಶಿಲ್ಪಿ-ಶೈಲೇಶ್, ಸಮೀರ್ ಆಚಾರ್ಯ-ಶ್ರಾವಣಿ ತಮ್ಮ ಕುಟುಂಬದವರೊಡನೆ ಸೇರಿ ಈ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಸಲಿದ್ದಾರೆ.. 

ಸಂಬಂಧ, ಒಗ್ಗಟ್ಟಿಗೆ ಬೆಲೆಕೊಡುವ ಕೊಡುವ ವಿಭಿನ್ನ ಕಾನ್ಸೆಪ್ಟ್ ಇರುವ ಹೊಚ್ಚಹೊಸ ರಿಯಾಲಿಟಿ ಶೋ 'ನಾವು ನಮ್ಮವರು'! ಇಲ್ಲಿ ಸ್ಪರ್ಧಿಗಳು ಅನೇಕ ಟ್ವಿಸ್ಟ್ಸ್ ಇರುವ ಬೇರೆ ಬೇರೆ ಟಾಸ್ಕ್ಸ್ ಗಳಲ್ಲಿ ತಮ್ಮ ಕುಟುಂಬದವರ ಜೊತೆ ಸೇರಿ ಭಾಗವಹಿಸಲಿದ್ದಾರೆ. ಸಂಬಂಧಗಳನ್ನು ಸಂಭ್ರಮಿಸೋ 'ನಾವು ನಮ್ಮವರು' ರಿಯಾಲಿಟಿ ಶೋ ಕುಟುಂಬದ ಹಳೆಯ ನೆನಪುಗಳನ್ನು ಸೆಲೆಬ್ರಿಟಿ ಸ್ಪರ್ಧಿಗಳ ಮೂಲಕ ವೀಕ್ಷಕರ ಮುಂದಿಡುವ ಕನ್ನಡಿ!

ಸಂಬಂಧಗಳ ಬೇರನ್ನು ಗಟ್ಟಿ ಮಾಡುವ ಹೊಸ ರಿಯಾಲಿಟಿ ಶೋ 'ನಾವು ನಮ್ಮವರು' ಇದೇ ಆಗಸ್ಟ್ 2 ರಿಂದ ರಾತ್ರಿ 9 ಗಂಟೆಗೆ ನಿಮ್ಮ ಜೀ಼ ಕನ್ನಡದಲ್ಲಿ!

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims