ಧರ್ಮಸ್ಥಳದ ನಿಗೂಢ ಕೊಲೆಗಳ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿದ್ದು ಸ್ವಾಗತಾರ್ಹ ವಿಚಾರ
ಧರ್ಮಸ್ಥಳದ ನಿಗೂಢ ಕೊಲೆಗಳ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿದ್ದು ಸ್ವಾಗತಾರ್ಹ ವಿಚಾರ
ಸದ್ಯದ ರಾಜಕೀಯ ಪರಿಸ್ಥಿತಿಗಳಲ್ಲಿ ಸಿದ್ದರಾಮಯ್ಯನವರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ಎನ್ನಬಹುದು. ಬಹುಶಃ ಅವರೊಬ್ಬರೇ ಇಂತಹ ನಿರ್ಧಾರ ತೆಗೆದುಕೊಳ್ಳಲು ಸಮರ್ಥ ಅನ್ನುವ ರೀತಿಯಲ್ಲಿ ಕೂಡ ದಕ್ಷ ಪಾರದರ್ಶಕ ಕೈಗಳಲ್ಲಿ ನೀಡಿದ್ದಾರೆ . ಅದಕ್ಕಾಗಿ ಅವರು ಶ್ಲಾಘನಾರ್ಹರು.
ತನಿಖೆಗೆ ಆದೇಶ ನೀಡುವುದು, ತನಿಖೆ ನಡೆಸುವುದು ಒಂದು ಕೆಲಸವಾದರೆ, ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಲು ಫ್ರೀ ಹ್ಯಾಂಡ್ ಕೊಡೋದು ಬಹು ಮುಖ್ಯ. ಈಗಿನ ಪರಿಸ್ಥಿತಿಗಳಲ್ಲಿ ಈ ಪ್ರಕರಣದಲ್ಲಿ ಭಾರೀ ಭಾರೀ ಪ್ರಭಾವಿಗಳು ಇರುವ ಸಾಧ್ಯತೆ ಇದೆ. ಈ ಅತಿರೇಕದ ಪ್ರಭಾವಿಗೆ ಆಡಳಿತ ಪಕ್ಷ. ವಿರೋಧ ಪಕ್ಷ ಮತ್ತು ಸ್ಥಳೀಯ ರಾಜಕಾರಣಿಗಳ ಮೇಲೆ ಗಾಢವಾದ ಕಂಟ್ರೋಲ್ ಇರುವ ಬಗ್ಗೆ ಸುದ್ದಿ ಬರುತ್ತಾ ಇದೆ. ಹಾಗಾಗಿ ನಿಜವಾಗಿ ಸತ್ತವರಿಗೆ ಮತ್ತು ಸಂತ್ರಸ್ಥರಿಗೆ ನ್ಯಾಯ ದೊರಕಿಸಲು ಸಿದ್ಧರಾಮಯ್ಯನವರು ಖುದ್ದಾಗಿ ಮುತುವರ್ಜಿ ವಹಿಸಿ ತನಿಖೆಯ ಮೇಲುಸ್ತುವಾರಿ ವಹಿಸಬೇಕು
*ಇವತ್ತು ಸರ್ಕಾರ SIT ತನಿಖೆ ನಡೆಸಲು ಮುಂದಾಗಿದೆ ಎಂದರೆ ಅದಕ್ಕೆ ಕಾರಣ ಹೊಸ ತಲೆಮಾರಿನ ಮಾಧ್ಯಮ. ಅಂದ್ರೆ ಸೋಷಿಯಲ್ ಮೀಡಿಯಾಗಳು, ಸೌಜನ್ಯ ಪ್ರಕರಣದ ಮರು ತನಿಖೆ ಮತ್ತು ತಲೆಬುರುಡೆ ರಹಸ್ಯ ಬೆನ್ನತ್ತಿ ಹೋದದ್ದು ರಾಜ್ಯದ ಸಣ್ಣ ಪುಟ್ಟ ಯು ಟ್ಯೂಬ್ ಗಳು ಮತ್ತು ವೆಬ್ ಪತ್ರಿಕೆಗಳು. ಉಳಿದಂತೆ ಬಹು ದೊಡ್ಡ ಹೆಸರಿನ ಸ್ಯಾಟಲೈಟ್ ಟಿವಿಗಳು ಮತ್ತು ಪ್ರಿಂಟ್ ಪತ್ರಿಕೆಗಳು ನೂರಾರು ಸಾವಿನ ಕೇಸಿಗೆ ನ್ಯಾಯ ಕೇಳಲು ಬಂದಿಲ್ಲ ಅನ್ನೋದು ನೋವಿನ ವಿಚಾರ. ಪತ್ರಿಕಾ ಧರ್ಮ ಮಾರಾಟ ಆಗಿದೆ ಅನ್ನುವ ಗುರುತರ ಆಪಾದನೆ ಪತ್ರಿಕೆಗಳ ಮೇಲೆ
ಬಿದ್ದಿದೆ ಜನರು ಮಾಧ್ಯಮವನ್ನು ನಂಬದಂತೆ ಮಾಧ್ಯಮಗಳೇ ಮಾಡಿಕೊಂಡದ್ದು ವಿಪರ್ಯಾಸ.
ಈ ಮೂಲಕ ಈ ಸರ್ಕಾರದ ಮುಖ್ಯಮಂತ್ರಿಗಳು, ಸರ್ಕಾರದ ಇತರ ಮಂತ್ರಿಗಳು ಸಚಿವರು. ಶಾಸಕರು, ಹಾಗೂ ವಿರೋಧ ಪಕ್ಷದ ಎಲ್ಲಾ ಮುಖಂಡರು. ಶಾಸಕರ ಸಹಿತ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ತಮಗೆ ಶ್ರೀ ಕ್ಷೇತ್ರದ ದೈವ. ದೇವರ ಶಾಪ ದೋಷ ತೊಂದರೆಗಳು ತಟ್ಟಿದಂತೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕೆಂದು (ಕೆಪಿಜೆಪಿ) ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಆಗ್ರಹಿಸುತ್ತದೆ. ಒಂದು ವೇಳೆ ಇದು ಹೀಗೆಯೇ ಮುಂದುವರಿದಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ರಾಜ್ಯದ ಇತರ ಪ್ರಗತಿ ಪರ ಹೋರಾಟಗಾರರು, ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಈ ಬಗ್ಗೆ ಮುಂದೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಬೇಕಾಗಿತೆಂದು ಈ ಮೂಲಕ ವಿನಮ್ರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.
*ಕೊನೆಯಲ್ಲಿ ಹೇಳಬೇಕೆಂದರೆ: ಈ ಪ್ರಕರಣದ ವಿಷಯದಲ್ಲಿ ರಾಜಕೀಯ ಸೋತಿದೆ ಪ್ರಜಾಪ್ರಭುತ್ವ
ಗೆದ್ದಿದೆ ಅನ್ನಬಹುದು. ತಮ್ಮಿಂದಲೇ ಓಟು ಪಡೆದು ಗೆದ್ದು ಹೋದ ರಾಜಕಾರಣಿಗಳು ಜನರ ಭಾವನೆಗೆ, ಬೇಡಿಕೆಗೆ ಸ್ಪಂದಿಸದೆ ಹೋದದ್ದು ಬಹು ದೊಡ್ಡ ಕಳಂಕ.
*ಜನರು ಇಂತಹಾ ರಾಜಕೀಯ ನೇತಾರರನ್ನು ರಾಜಕೀಯ ಪಕ್ಷಗಳನ್ನು ತಿರಸ್ಕರಿಸಬೇಕು. ನಮ್ಮ ಕೆಪಿಜಿಪಿ ಸತ್ಯದ ಪರ ಮತ್ತು ನ್ಯಾಯದ ಪರ - ನಿಲ್ಲಬೇಕೆಂದು ನಮ್ಮ ವಿನಂತಿ
CHA JANATHA PARTY
F ಮತ್ತೂರಿನ ಮುತ್ತು ಡಿ.ಮಹೇಶ್ ಗೌಡ್ರು

Comments
Post a Comment