ನಿರ್ಮಲ ತುಂಗಭದಾ ಅಭಿಯಾನ ಪಾದಯಾತ್ರೆ ಸಂದರ್ಭದಲ್ಲಿ ಗಮನಿಸಿದ ನದಿ ನೀರು ಕಲುಷಿತಕ್ಕೆ ಕಾರಣಗಳು ಮತ್ತು ಪರಿಹಾರ ಸಾದ್ಯತೆಯ ಪ್ರತ್ಯಕ್ಷ ವರದಿ.
ನಿರ್ಮಲ ತುಂಗಭದಾ ಅಭಿಯಾನ ಪಾದಯಾತ್ರೆ ಸಂದರ್ಭದಲ್ಲಿ ಗಮನಿಸಿದ ನದಿ ನೀರು ಕಲುಷಿತಕ್ಕೆ ಕಾರಣಗಳು ಮತ್ತು ಪರಿಹಾರ ಸಾದ್ಯತೆಯ ಪ್ರತ್ಯಕ್ಷ ವರದಿ.
ಶ್ರೀ ಕ್ಷೇತ್ರ ಶೃಂಗೇರಿ ಬಳಿ ವರಾಹ ಪರ್ವತದಲ್ಲಿ ಹುಟ್ಟುವ ತುಂಗಾ ಮತ್ತು ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡಲಿ ಬಳಿ ಸಂಗಮವಾಗಿ ಮುಂದೆ ಸಾಗುತ್ತಾ ತುಂಗಭದ್ರಾ ಡ್ಯಾಂ ಸೇರಿ ಅಲ್ಲಿಂದ ಅಂದದ ಕೃಷ್ಣಾ ನದಿ ಸೇರುತ್ತದೆ. ಕರ್ನಾಟಕದ ಅತ್ಯಂತ ಉದ್ದವಾದ ನದಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಈ ನದಿ ತನ್ನ ಅಕ್ಕಪಕ್ಕದ ಊರುಗಳಿಗೆ ಕುಡಿಯುವ ನೀರಿನ ಮೂಲವಾಗಿ ಮತ್ತು ಲಕ್ಷಾಂತರ ರೈತರಿಗೆ ಜೀವ ನದಿಯಾಗಿಯೂ ಹೆಸರು ಗಳಿಸಿದೆ.
ಆದರೆ ಜನಸಂಖ್ಯೆ ಹೆಚ್ಚಳ.ನಗರೀಕರಣದ ಜೊತೆಗೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದ ನದಿ ನೀರು ಕಲುಷಿತವಾಗುತ್ತಾ ಬಂದಿತು. ಇತ್ತೀಚಿನ ವರ್ಷಗಳಲ್ಲಿ ಇದು ಅತಿಹೆಚ್ಚು ಕಲುಷಿತವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಇದನ್ನು ಮನಗಂಡ ಶಿವಮೊಗ್ಗ ನಗರದ ಪರಿಸರ ಕಾಳಜಿಯ ಪರ್ಯಾವರ ಟ್ರಸ್ಟ್ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ದ ಸಹನಂಗರೊಂದಿಗೆ ಕರ್ನಾಟಕದಲ್ಲಿ ಪ್ರಥಮಬಾರಿಗೆ ನದಿಯೊಂದರ ಪಾವಿತ್ರತೆ ಕಾಪಾಡುವ ಕರೆಯೊಂದಿಗೆ ಕಳೆದ ನವೆಂಬರ್, ಡಿಸೆಂಬರ್ ನಲ್ಲಿ ಶೃಂಗೇರಿಯಿಂದ ಗಂಗಾವತಿ ಬಳಿ ಕಿಷ್ಕಂಧ ತನಕ ಬೃಹತ್ ಜಲಜಾಗೃತಿ -ಜನಜಾಗೃತಿ ಪಾದಯಾತ್ರೆ ಆಯೋಜಿಸಿತ್ತು.
ನದಿ ಪಾತ್ರದ 7 ಜಿಲ್ಲೆಗಳು, 13 ತಾಲ್ಲೂಕುಗಳು ಹಾಗೂ ಸುಮಾರು 120ಕ್ಕೂ ಹೆಚ್ಚು ಗ್ರಾಮಗಳ ಮೂಲಕ ಎರಡು ಹಂತಗಳಲ್ಲಿ ಸಾಗಿದ ಪಾದಯಾತ್ರೆ ಒಟ್ಟು 22 ದಿನಗಳಲ್ಲಿ ಸುಮಾರು 430 ಕಿ.ಮೀ ದೂರ ತಲುಪಿ ಜಲ ಸಂರಕ್ಷಣೆ ಕಾರ್ಯದಲ್ಲಿ ದಾಖಲೆಯನ್ನು ಬರೆದಿದೆ. ಪಾದಯಾತ್ರೆಯಲ್ಲಿ ಸುಮಾರು 35 ಸಣ್ಣ ಹಾಗೂ 15 ದೊಡ್ಡ ಒಟ್ಟು 50ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳನ್ನು ಆಯೋಜಿಸಿ ಜನರಲ್ಲಿ ಜಲ ಜಾಗೃತಿ ಉಂಟು ಮಾಡುವ ಕಾರ್ಯದ ಜೊತೆಗೆ ನದಿ ಸಂರಕ್ಷಣೆ ಕಾರ್ಯದ ಬಗ್ಗೆ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪಾದಯಾತ್ರೆಯಲ್ಲಿ ಸುಮಾರು 40 ಸಾವಿರ ವಿದ್ಯಾರ್ಥಿಗಳು ಸೇರಿದಂತೆ ಅರ್ಧ ಲಕ್ಷ ಜನರು ಭಾಗವಹಿಸಿರುವುದು ತುಂಗಭದ್ರಾ ನದಿಯನ್ನು ನಿರ್ಮಲಗೊಳಿಸುವ ತುರ್ತು ಅಗತ್ಯ ಎನ್ನುವ ಕೂಗಿಗೆ ಬಲ ತಂದುಕೊಟ್ಟಿದೆ. ಸುಮಾರು 150ಕ್ಕೂ ಹೆಚ್ಚು ಶಾಲಾ ಕಾಲೇಜುಗಳು, 250 ಪರಿಸರ ಕಾಳಜಿಯ ಸಂಘ ಸಂಸ್ಥೆಗಳು, 30 ಧಾರ್ಮಿಕ ಮಠ ಮಂದಿರಗಳು, ರೈತರು, ಸಾಧು ಸಂತರು, ಜನಪ್ರತಿನಿಧಿಗಳು ಪಕ್ಷಾತೀತವಾಗಿ ಬೆಂಬಲ ನೀಡಿ ಪಾದಯಾತ್ರೆಯಲ್ಲಿ ಭಾಗವಹಿಸಿ ಆಭಿಯಾನದ ಉದ್ದೇಶವನ್ನು ಯಶಸ್ವಿಗೊಳಿಸಲು ಕಾರಣಕರ್ತರಾಗಿದ್ದಾರೆ.
ಈ ಪಾದಯಾತ್ರೆಯ ಸಂದರ್ಭದಲ್ಲಿ ತಂಡದ ತಾಂತ್ರಿಕ ವಿಭಾಗ ಸದಸ್ಯರು ಪರಿಸರ ತಜ್ಞರ ಮಾರ್ಗದರ್ಶನದಲ್ಲಿ ನದಿ ಕಲುಷಿತವಾಗಲು ಕಾರಣಗಳು ಹಾಗೂ ಅವುಗಳನ್ನು ತಡೆಗಟ್ಟಲು ಸಾಧ್ಯವಾಗುವ ಪರಿಹಾರಗಳನ್ನು ಸ್ಥಳೀಯರೊಂದಿಗೆ ಚರ್ಚಿಸಿ ಪಟ್ಟಿ ಮಾಡಿದೆ. ಈ ವರದಿಯನ್ನು ಈಗ ಪುಸ್ತಕ ರೂಪದಲ್ಲಿ ಪರ್ಯಾವರಣ ಟ್ರಸ್ಟ್ ಬಿಡುಗಡೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಜೊತೆಗೆ ಚರ್ಚಿಸಿ ಲಕ್ಷಾಂತರ ಜನರ ಹಾಗೂ ಜೀವಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸ ಹೊಂದಿರುತ್ತದೆ.
ಪಾದಯಾತೆಯ ನಂತರ ರಾಜ್ಯ ವಿಧಾನಸಭೆ ಹಾಗೂ ಪರಿಷತ್ ಸಭೆಯಲ್ಲೂ ತುಂಗಭದಾ ನದಿ ಕಲುಷಿತವಾಗಿ ಕುಡಿಯಲು ಯೋಗ್ಯವಾಗಿಲ್ಲದ ಸ್ಥಿತಿ ಬಂದಿರುವ ಬಗ್ಗೆ ಚರ್ಚೆ ನಡೆದಿರುವುದು ಉತ್ತಮ ಬೆಳವಣಿಗೆಯಾಗಿದೆ.
ತೀರ್ಥಹಳ್ಳಿ ಪಟ್ಟಣದ ಸಂಪೂರ್ಣ ತ್ಯಾಜ್ಯ ತುಂಗಾ ನದಿಗೆ ಸೇರುತ್ತಿದ್ದು ಅಲ್ಲಿ 30ಕೋಟಿ ವೆಚ್ಚದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಶೃಂಗೇರಿ ಪಟ್ಟಣದಲ್ಲಿ ಪ್ರತಿವರ್ಷ ಬರುವ ಲಕ್ಷಾಂತರ ಯಾತ್ರಾರ್ಥಿಗಳ ತ್ಯಾಜ್ಯ ಸೇರಿದಂತೆ ಪಟ್ಟಣದ ತ್ಯಾಜ್ಯ ನೀರು ನದಿಗೆ ಸೇರುತ್ತಿದ್ದು ಅಲ್ಲಿಯೂ ಯಾವುದೇ ಎಸ್.ಟಿ.ಪಿ. ಘಟಕ ಇರುವುದಿಲ್ಲ. ಈ ಬಗ್ಗೆ ಶೃಂಗೇರಿ ಮಠದ ವತಿಯಿಂದ ಎನ್ನಲಾಗಿದ್ದು ಇದರ ಅನುಷ್ಠಾನಕ್ಕೆ ಸರ್ಕಾರ ಪ್ರೋತ್ಸಾಹ ನೀಡಬೇಕಾಗಿದೆ. ಇಡೀ ಪಟ್ಟಣಕ್ಕೆ ಯೋಜನೆ ರೂಪಿಸಿದ್ದಾರೆ
ಶಿವಮೊಗ್ಗ ನಗರದಲ್ಲಿ ಇರುವ ತ್ಯಾಜ್ಯ ನೀರು ಶುದ್ದೀಕರಣ ಘಟಕಗಳ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿದ್ದು ಜಿಲ್ಲಾಡಳಿತ, ಪಾಲಿಕೆ ಹಾಗೂ ಜನಪ್ರತಿನಿಧಿಗಳ ಜೊತೆಗೆ ನಿರಂತರ ಗಮನ ಸೆಳೆದ ಪ್ರಯುಕ್ತ ಈಗ ಕಾರ್ಯಾರಂಭಮಾಡುವ ಹಂತ ತಲುಪಿರುವುದು ಒಂದಿಷ್ಟು ಸಮಾಧಾನ ತಂದಿದೆ. ತುಂಗ, ಭದ್ರಾ ಹಾಗೂ ಸಂಗಮಿತ ತುಂಗಭದ್ರಾ ನದಿಯ ಉದ್ದಕ್ಕೂ ನೇರವಾಗಿ ನದಿಗೆ ಸೇರುತ್ತಿರುವ ಗ್ರಾಮ, ಪಟ್ಟಣ, ನಗರ ತ್ಯಾಜ್ಯ, ಕೃಷಿ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯವನ್ನು ಸೂಕ್ತ ತಂತ್ರಜ್ಞಾನದ ಮೂಲಕ ಸಂಸ್ಕರಿಸಿ ಶುದ್ಧ ನೀರನ್ನು ನದಿಗೆ ಬಿಡುವ ಕಾರ್ಯ ಆಗಬೇಕು ಎಂಬುದು ತಂಡದ ಬಹುಮುಖ್ಯ ಬೇಡಿಕೆಯಾಗಿದೆ.
ತಂಡವು ತುಂಗಾ ಮತ್ತು ತುಂಗಭದ್ರಾ ನದಿಯ ನೀರನ್ನು ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿ ಅದರ ವರದಿಯನ್ನೂ ಪಡೆದಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹ ನದಿ ನೀರನ್ನು ಪರೀಕ್ಷೆಗೆ ಒಳಪಡಿಸಿದ ವರದಿಯೂ ಬಂದಿದೆ. ತಜ್ಞರ ಅಭಿಪ್ರಾಯದಂತೆ ವರದಿಯಲ್ಲಿನ ಅನೇಕ ಅಂಶಗಳು ಜೀವರಾಶಿಗಳ ಹಾಗೂ ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ಶೀಘ್ರ ಗಮನಹರಿಸಬೇಕಾಗಿದೆ. ರ್ಹಾರ ಈ ಬಗ್ಗೆ ಕೂಡಲೇ ಗಮನಹರಿಸಬೇಕು ಹಾಗೂ
ಮುಂದಿನ ಪೀಳಿಗೆಗೆ ಶುದ್ದ ಕುಡಿಯುವ ನೀರು ಸಿಗುವಂತೆ ಮಾಡಬೇಕು ಎಂದು ಪರ್ಯಾವರಣ ಟ್ರಸ್ಟ್. ಹಾಗೂ ಆಷ್ಟ್ರೀಯ ಸ್ವಾಭಿಮಾನ ಆಂದೋಲನ ಒತ್ತಾಯಿಸುತ್ತದೆ.

Comments
Post a Comment