ಧಾರವಾಡ ಕಿಟೆಲ್ ವಿಜ್ಞಾನ ಕಾಲೇಜಿನಿಂದ ಗುತ್ತಿಗೆದಾರನಿಗೆ ಮೋಸ;ದಲಿತ ಸೇನೆಯಿಂದ ಇದೇ 21ರಂದು ಬೃಹತ್ ಪ್ರತಿಭಟನೆ.
ಧಾರವಾಡ ಕಿಟೆಲ್ ವಿಜ್ಞಾನ ಕಾಲೇಜಿನಿಂದ ಗುತ್ತಿಗೆದಾರನಿಗೆ ಮೋಸ;ದಲಿತ ಸೇನೆಯಿಂದ ಇದೇ 21ರಂದು ಬೃಹತ್ ಪ್ರತಿಭಟನೆ.
ಬೆಂಗಳೂರು ಜುಲೈ 14 ; ಧಾರವಾಡ ಕಿಟೆಲ್ ವಿಜ್ಞಾನ ಕಾಲೇಜಿನ 76ಲಕ್ಷಕ್ಕೂ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ ಬಡ ಗುತ್ತಿಗೆದಾರರೊಬ್ಬರಿಗೆ ಆಡಳಿತ ಮಂಡಳಿ ಇದುವರೆಗೆ ಬಿಲ್ ಪಾವತಿಸದೇ ಸತಾಯಿಸುತ್ತಿದ್ದು,ಕಾಲೇಜಿನ ಪ್ರಾಚಾರ್ಯರು,ಅಧ್ಯಕ್ಷರ ವಿರುದ್ಧ ಇದೇ 21ರಂದು ಬೆಂಗಳೂರಿನ ಸ್ವಾಮ್ಯದ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ದಲಿತ ಸೇನೆ,ದಲಿತ ಸಂಘರ್ಷ ಸಮಿತಿ ಎಚ್ಚರಿಕೆ ನೀಡಿದೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ದಲಿತ ಸೇನೆಯ ಯುವ ಘಟಕ ಅಧ್ಯಕ್ಷ ಖಾಲಿದ್ ಖಾನ್,ಡಿಎಸ್ ಎಸ್ ರಾಜ್ಯಾಧ್ಯಕ್ಷ ಆಶ್ವಥ್ ,ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್ ಮಾತನಾಡಿ, 2019ರಿಂದ 2020ರವರೆಗೆ ಗುತ್ತಿಗೆದಾರ ಎಮ್.ಎ.ಬಡಬಡೆಯವರು ಕಾಲೇಜಿ ನೂತನ ಕಟ್ಟಡ, ಎಲ್ಲ ಕೊಠಡಿ, ಗೇಟ್ ಗಳನ್ನು ಸುಸಜ್ಜಿತ ವಾಗಿ ನಿರ್ಮಾಣ ಮಾಡಿ ಕೊಟ್ಟಿದ್ದಾರೆ,ಅಂದು ಅಧ್ಯಕ್ಷರಾಗಿದ್ದ ರವಿಕುಮಾರ್ ,ಪ್ರಾಚಾರ್ಯರನ್ನು ಅನೇಕ ಬಾರೀ ಬೇಟಿ ಮಾಡಿ ಬಿಲ್ ಪಾವತಿಸುವಂತೆ ಕೇಳಿಕೊಂಡರೂ ಮಾಡಿಲ್ಲ,ಬಳಿಕ ಬಂದ ಹಾಲಿ ಅಧ್ಯಕ್ಷ ಮಾರ್ಟಿನ್ ಬೋರಗಾವಿ ಅವರನ್ನು ಕೇಳಿಕೊಂಡರೆ ಬರಬೇಕಾದ ಬಿಲ್ ನೀಡದೇ ಸತಾಯಿಸುವ ಜತೆಗೆ ಮಾನಸಿಕ ಹಿಂಸೆ,ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಹಾಲಿ ಪ್ರಾಂಶುಪಾಲರಾದ ಸ್ಟ್ಯಾನ್ಲಿ ಪೀಟರ್ ಬಡಬಡೆಯವರಿಗೆ ಪಾವತಿಸಬೇಕಾಗಿರುವ 65ಲಕ್ಷ ರೂಪಾಯಿ ಬಿಲ್ ಪಾವತಿಸಲು ಕ್ರಮ ಕೈಗೊಳ್ಳದೇ ಹೊಸ ವರಸೆ ಆರಂಭಿಸಿದ್ದಾರೆ ಬಡ ಗುತ್ತಿಗೆದಾರರಾದ ಬಡೆಬಡೆಯವರನ್ನು ಸಭೆಗೆಂದು ಕರೆದು ವಿನಾಕಾರಣ ಪೋಲಿಸರನ್ನು ಕರೆದು ಬೆದರಿಕೆ ಹಾಕಿದ್ದಾರೆ,
ಗುತ್ತಿಗೆದಾರ ಎಮ್.ಎ. ಬಡಬಡೆಯವರು ಮಕ್ಕಳ ಶಿಕ್ಷಣ ಖರ್ಚು ಭರಿಸಲಾಗದೇ ಅಸಹಾಯಕರಾಗಿದ್ದಾರೆ, ತಮ್ಮ ಜೀವನವನ್ನೆ ಕೊನೆಗಾಣಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಲಿತ ಸೇನೆ ಸಂಘಟನೆ ಕಾಲೇಜಿನ ಪ್ರಾಚಾರ್ಯರು,ಅಧ್ಯಕ್ಷರ ವಿರುದ್ಧ ಅಹೋರಾತ್ರಿ ಧರಣಿ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

Comments
Post a Comment