ಜುಲೈ 09 ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ರಾಜ್ಯದಲ್ಲಿಯೂ ಬೆಂಗಳೂರನ್ನು ಒಳಗೊಂಡು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮತ್ತು ಕೈಗಾರಿಕೆ ಮುಷ್ಕರ ನಡೆಯಲಿದೆ.

  

ಜುಲೈ 09 ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ರಾಜ್ಯದಲ್ಲಿಯೂ ಬೆಂಗಳೂರನ್ನು ಒಳಗೊಂಡು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮತ್ತು ಕೈಗಾರಿಕೆ ಮುಷ್ಕರ ನಡೆಯಲಿದೆ.

ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕರ ವಿರೋಧಿ ನೀತಿಗಳ ವಿರುದ್ಧ ಜುಲೈ 09 ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ರಾಜ್ಯದಲ್ಲಿಯೂ ಬೆಂಗಳೂರನ್ನು ಒಳಗೊಂಡು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮತ್ತು ಕೈಗಾರಿಕೆ ಮುಷ್ಕರ ನಡೆಯಲಿದೆ.

ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತ್ರತ್ವದ ಎನ್‌ಡಿಎ ಸರ್ಕಾರ ದುಡಿಯುವ ಜನರ ಹಕ್ಕುಗಳನ್ನು ಕಸಿಯುತ್ತಿದೆ. ಶ್ರಮ ಜೀವಿಗಳ ಜೀವನ-ಜೀವನೋಪಾಯಗಳ ಮೇಲೆ ಕೂರ ದಾಳಿಗಳನ್ನು ಮಾಡುತ್ತಿದೆ. ಈ ಪರಿಸ್ಥಿತಿಗಳನ್ನು ಸುಧಾರಿಸಬೇಕಾದಂತಹ ಸರ್ಕಾರ ತಜ್ಞರುದ್ಧವಾಗಿ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಮೂಲಕ ಇವುಗಳನ್ನು ದುಡಿಯುವ ಜನರ ಮೇಲೆ ಒತ್ತಾಯ ಪೂರ್ವವಕಾಗಿ ಹೇರುತ್ತದೆ. ಆ ಮೂಲಕ ಹಾಲಿ ಇರುವ ದುಡಿಯುವ ಜನರ ಹಕ್ಕುಗಳು ಮತ್ತು ಸವಲತ್ತುಗಳನ್ನು ಕಸಿಯಲು ಹೊರಟಿದೆ. ಕೆಲಸದ ಪರಿಸ್ಥಿತಿ, ಕಾರ್ಮಿಕರ ದುಡಿಯುವ ಅವಧಿ, ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಸಂಘಟನೆಯ ಹಕ್ಕು, ಸಾಮೂಹಿಕ ಚೌಕಾಸಿಯ ಹಕ್ಕು, ಹೋರಾಟದ ಹಕ್ಕು ಮತ್ತು ಮುಷ್ಕರಗಳ ಹಕ್ಕುಗಳನ್ನು ದಮನಗೊಳಿಸುವ ನೀತಿಗಳು ಕಾಯ್ದೆಯಲ್ಲಿ ಒಳಗೊಂಡಿದೆ.

ಕಾರ್ಮಿಕರು ತಮ್ಮ ನ್ಯಾಯೋಚಿತ ಹಕ್ಕುಗಳಿಗಾಗಿ ಹೋರಾಟ ಮಾಡುವುದನ್ನು ಕ್ರಿಮಿನಲ್ ಅಪರಾಧದ ಅಡಿತಂದಿರುವ ಕೇಂದ್ರ ಸರ್ಕಾರ ಕಾರ್ಪೋರೇಟ್ ದೊಡ್ಡ ವ್ಯವಹಾರ ನಡೆಸುವವರು ಕಾಯ್ದೆಗಳನ್ನು ಉಲ್ಲಂಘನೆ ಮಾಡಲು ಮುಕ್ತ ಅವಕಾಶ ಕಲ್ಪಿಸುತ್ತಿದೆ. ಬಾಯರ್ ಕಾಯ್ದೆ, ಅರಣ್ಯ ಕಾಯ್ದೆ, ಚಹಾ ಕಾಯ್ದೆ

 ಒಳಗೊಂಡಿರುವ 41 ಕಾನೂನುಗಳಲ್ಲಿ ಕಾರ್ಪೋರೇಟ್ ವರ್ಗ 180 ಅಪರಾಧಗಳನ್ನು ಮಾಡಿದಾಗ ಜೈಲು ಶಿಕ್ಷೆ ದಂಡ ಈ ಎಲ್ಲಾ ನಿಬಂಧನೆಗಳನ್ನು ಬದಲಿಸಿದೆ.  ಅಪರಾಧ ಮುಕ್ತಗೊಳಿಸುವುದಾಗಿ ಘೋಷಿಸಿದೆ ಇದೆಲ್ಲವನ್ನು "ವ್ಯಾಪಾರ ಸುಲಭಗೊಳಿಸುವುದಾಬ್ದಾರಿ" ಎಂದು ಸರ್ಕಾರವು ನಾಚಿಕೆಯಿಲ್ಲದೆ ಹೇಳುತ್ತಿದೆ.

 ಉದ್ಯೋಗ ಖಾತ್ರಿ ಯೋಜನೆ, ಶಿಕ್ಷಣ, ಆರೋಗ್ಯ ಇತರೆ ಕಲ್ಯಾಣ ಯೋಜನೆಗಳಿಗೆ ಬಜೆಟ್ ಅನುದಾನವನ್ನು ಕಡಿತಗೊಳಿಸಲಾಗಿದೆ.  ರೈತರಿಗೆ ಸಿ2 ಪ್ಲಸ್ 50 ಅಧಾಲತ ಕನಿಷ್ಠ ಬೆಂಬಲ ಬೆಲೆಯ ಚಾಲಗೆ ಯಾವುದೇ ಸೂಚನೆಗಳನ್ನು ನೀಡದೇ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿ  ಕೇಂದ್ರ ಸರ್ಕಾರ ಮುಂದಾಗಿದೆ.  ಖಾಸಗೀಕರಣ ನೀತಿ ಮುಂದುವರಿಸಿರುವ ಕೇಂದ್ರ ಸರ್ಕಾರ ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಯೋಜನೆ ಮುಂದುವರಿಸಿದೆ.  ಬಾಹ್ಯಾಕಾಶ, ರಕ್ಷಣಾ ವಲಯ, ವಿದ್ಯುತ್ ವಲಯ ಸಂಪರ್ಕ ಬ್ಯಾಂಕ್ ಮತ್ತು ವಿಮೆ ಕ್ಷೇತ್ರದಲ್ಲಿ ಖಾಸಗೀಕರಣದ ಸುನಾಮಿಯನ್ನೇ ಸೃಷ್ಟಿಸಿದೆ.

 ರಾಜ್ಯದಲ್ಲಿಯೂ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರದ ದುಡಿತದ ಅವಧಿಯ ಅವಧಿ ಮತ್ತು ಹಿಂದಿನ ಸರ್ಕಾರ ಕೃಷಿ ಕಾಯ್ದೆಗಳನ್ನು ತಂದಿದೆ  ಮುಂದುವರಿಸುತ್ತಿದೆ.  ಅಭಿವೃದ್ಧಿಯ ಹೆಸರಿನಲ್ಲಿ ಅವ್ಯಾಹತ ಭೂಸ್ವಾಧೀನ ಮಾಡುತ್ತಿದೆ.  ಕಾನೂನು ಕಾಯ್ದೆಗೆ ತಿದ್ದುಪಡಿ ತರಲು, ಮಹಿಳೆಯರಿಗೆ ರಾತ್ರಿ ಪಾಳಿ, ಅಪಾಯಕಾಲ ಕಾರ್ಖಾನೆಗಳ ಸ್ಥಳಗಳಲ್ಲಿ ಮಹಿಳೆಯರ ನಿರ್ಭಂಧವನ್ನು ತೆಗೆಯುವುದು.  ಕಾರ್ಮಿಕರನ್ನು ಕಾರ್ಖಾನೆ ಕಾಯ್ದೆಯಿಂದ ಹೊರಗಿಡಲು ಹೊರಟಿದೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬೆಲೆ ಏರಿಕೆಗೆ ಯಾವುದೇ ಕಡಿವಾಣವಿಲ್ಲ.

 ಈ ಎಲ್ಲಾ ಬೇಡಿಕೆಗಳ ಒತ್ತಾಯಕ್ಕಾಗಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ರಾಜ್ಯದಲ್ಲಿಯೂ ಮುಷ್ಕರವನ್ನು ಯಶಸ್ವಿಗೊಳಿಸಲು ರಾಜ್ಯವನ್ನು ಮುಂದೂಡಲಾಗಿದೆ  ಸಮಾವೇಶ ಜಿಲ್ಲಾ ಸಮಾವೇಶಗಳನ್ನು ಮಾಡಲಾಯಿತು.  ಮುಷ್ಕರದ ನೋಟೀಸನ್ನು ನೀಡಿದೆ.  ರಾಜ್ಯದಾದ್ಯಂತ ಕೈಗಾರಿಕಾ ಕಾರ್ಮಿಕರಲ್ಲಿ, ಸ್ತ್ರೀಂ ಮತ್ತು ಗಾರ್ಮೆಂಟ್ಸ್ ಕಾರ್ಮಿಕರಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.  ಮುಷ್ಕರದ ವಿಷಯ ಮತ್ತು ಅದರ ಸಫಲತೆಗಾಗಿ ಸುದ್ದಿ ಪ್ರಕಟಿಸಿ ಸಹಕರಿಸಬೇಕಾಗಿ ಕೇಳಿಕೊಳ್ಳಬಹುದಾಗಿದೆ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims