ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರದ ವತಿಯಿಂದ RCB ಗೆಲುವಿನ ಸಂಭ್ರಮಾಚರಣೆ ವೇಳೆ 11 ಜನರು ಸಾವನ್ನಪ್ಪಿದ ದುರ್ಘಟನೆಗೆ, ಕಾರಣವಾದ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗೂ ಅವ್ಯವಸ್ಥಿತ ಆಯೋಜನೆ ವಿರುದ್ಧ ಬೆಂಗಳೂರಿನ ಸ್ವತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಲಾಯಿತು.

 ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರದ ವತಿಯಿಂದ RCB ಗೆಲುವಿನ ಸಂಭ್ರಮಾಚರಣೆ ವೇಳೆ 11 ಜನರು ಸಾವನ್ನಪ್ಪಿದ ದುರ್ಘಟನೆಗೆ, ಕಾರಣವಾದ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗೂ ಅವ್ಯವಸ್ಥಿತ ಆಯೋಜನೆ ವಿರುದ್ಧ ಬೆಂಗಳೂರಿನ ಸ್ವತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಲಾಯಿತು.


ಪ್ರತಿಭಟನೆಯಲ್ಲಿ ಬೆಂಗಳೂರು ಮಹಾನಗರ   ಸಹಕಾರ್ಯದರ್ಶಿ ಯಶ್ವಂತ್ ಮಾತನಾಡಿ ಪ್ರಚಾರದ ತೆವಲಿಗೆ ಬಿದ್ದ ರಾಜ್ಯ ಸರ್ಕಾರ ತನ್ನ ಪ್ರಚಾಕ್ಕೋಸ್ಕರ ವಿಧಾನಸೌಧದ ಭದ್ರಾತ ಡಿಸಿಪಿ ಕರಿಬಸವ ಗೌಡರು ಎಚ್ಚರಿಕೆ ನೀಡಿದರು ಸಹ ಜೂನ್ 4 ರಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವಿಧಾನಸೌಧ ಮೆಟ್ಟಿಲ ಮೇಲೆ ಕಾರ್ಯಕ್ರಮ ನೆರೆವೆರಿಸಿದರು,  ಇವರ ಭದ್ರತಾ ಲೋಪದಿಂದ ಯಾವುದೇ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದ ಕಾರಣ,  11ಜನ ಅಮಾಯಕ RCB ಅಭಿಮಾನಿಗಳ ಸಾವಿಗೆ ಕಾರಣವಾಗಿದೆ, ಇದರ ನೈತಿಕ ಹೊಣೆ ಹೊತ್ತು ಈ ಕೂಡಲೇ ರಾಜ್ಯದ ಮುಖ್ಯಮಂತ್ರಿ, ಉಪಖ್ಯಮಂತ್ರಿ ಹಾಗೂ ಗೃಹ ಸಚಿವರು ತಮ್ಮ ಸ್ಥಾನದಿಂದ ರಾಜಿನಾಮೇ ಕೊಡಬೇಕು,ಹಾಗೂ ನಾಲವರು ಪೋಲೀಸರ ಅಮಾನತು ಆದೇಶವನ್ನು ಹಿoತೆಗೆದುಕೊಳ್ಳಬೇಕು, ಎಂದು ಹೇಳಿದರು.


ಗಾಂಧಿನಗರ ಜಿಲ್ಲಾ ಸಂಚಾಲಕ ಅಭಿನಂದನ್ ಮಿರ್ಜಿ ಮಾತನಾಡಿ  ಜೂನ್ 4 ಬೆಂಗಳೂರಿನ ಇತಿಹಾಸದಲ್ಲಿ ಸುವರ್ಣ ದಿನವಾಗಬೇಕಿತ್ತು. ಆದರೆ ರಾಜ್ಯ ಸರ್ಕಾರದ ಬೇಜವಾಬ್ದಾರಿ ಕೃತ್ಯಗಳಿಂದಾಗಿ ಅದು ಕರಾಳ ದಿನವಾಗಿ ಮಾರ್ಪಟ್ಟಿತು. ಸರ್ಕಾರವು ಎಲ್ಲರ ಗಮನ ಸೆಳೆಯಲು ಬಯಸಿ, ಪೊಲೀಸರು ನೀಡಿದ ಎಲ್ಲಾ ಎಚ್ಚರಿಕೆಗಳನ್ನು ಅದು ನಿರ್ಲಕ್ಷಿಸಿತು. 

ವಿಧಾನಸೌಧದ ಮುಂದೆ ನಿರೀಕ್ಷೆಗಿಂತ ಸುಮಾರು 10 ಪಟ್ಟು ಹೆಚ್ಚು ಜನಸಂದಣಿಯನ್ನು ಕಂಡ ನಂತರವೂ ಸಿಎಂ ಮತ್ತು ಡಿಸಿಎಂ ಕಾರ್ಯಕ್ರಮವನ್ನು ಮುಂದುವರೆಸಿದರು. ಸಾವಿನ ವರದಿಗಳನ್ನು ಪಡೆದ ನಂತರವೂ ಕಾರ್ಯಕ್ರಮವು ಚಿನಸ್ವಾಮಿಯಲ್ಲಿ ನಡೆಯಿತು. 

ಈಗ ಸರ್ಕಾರವು ಪೊಲೀಸರು, ಫ್ರಾಂಚೈಸಿ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ದೂಷಿಸುತ್ತಿದೆ ಹಾಗೂ ತನ್ನ ಮೇಲೆಯೇ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ಉಚಿತ ಪ್ರಚಾರ ಮಾತ್ರ ಬೇಕೇ ಹೊರತು ಕೃತ್ಯಗಳಿಗೆ ಜವಾಬ್ದಾರಿಯನ್ನು ಬಯಸುವುದಿಲ್ಲ ಸರ್ಕಾರವು ತುಂಬಾ ಬೇಜವಾಬ್ದಾರಿಯಿಂದ ವರ್ತಿಸಲು ಬಯಸಿದರೆ, ಅವರು ಕೆಳಗಿಳಿಯುವುದು ಉತ್ತಮ ಮತ್ತು ನಾವು, ರಾಜ್ಯದ ಪ್ರಜೆಗಳು, ಜವಾಬ್ದಾರಿಯುತ ವ್ಯಕ್ತಿಯನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.


ಪ್ರತಿಭಟನೆಯಲ್ಲಿ ಬೆಂಗಳೂರು ದಕ್ಷಿಣ  ವಿಭಾಗ ಸಂಘಟನಾ ಕಾರ್ಯದರ್ಶಿಯಾದ ವಿಜಯ್ ಗೌಡರ್, ಗಾಂಧಿನಗರ ಜಿಲ್ಲಾ ಸಂಘಟನ ಕಾರ್ಯದರ್ಶಿ ಹರ್ಷಿತ್ ಕೊಯಿಲ, ಮಾಧ್ಯಮ ಸಂಚಾಲಕ್ ಪ್ರೀತಿ ವಿ ಆರಾಧ್ಯ, ಸಂಪತ್, ಶಶಾಂಕ್ ಉಪಸ್ಥಿತರಿದ್ದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims