ಇಂಡಿಯನ್‌ಓಪನ್ ಆಫ್ ಸರ್ಫಿಂಗ್ ಪುರುಷರ ವಿಭಾಗದಲ್ಲಿ ಶ್ರೀಕಾಂತ್ ಡಿಗೆ, ಕಮಲಿ ಮೂರ್ತಿಗೆಗೆಲುವು!
ಇಂಡಿಯನ್‌ಓಪನ್ ಆಫ್ ಸರ್ಫಿಂಗ್ ಪುರುಷರ ವಿಭಾಗದಲ್ಲಿ ಶ್ರೀಕಾಂತ್ ಡಿಗೆ, ಕಮಲಿ ಮೂರ್ತಿಗೆಗೆಲುವು!
ಮಂಗಳೂರು, ಜೂನ್ 20, 2025: ತಮಿಳುನಾಡಿನ ಶ್ರೀಕಾಂತ್ ಡಿಪುರುಷರ ಓಪನ್ ವಿಭಾಗದಲ್ಲಿ ಪ್ರಶಸ್ತಿಗೆದ್ದು ಮೆರೆದರೆ, ಕಮಲಿ ಮೂರ್ತಿ ಮಹಿಳೆಯರ ಓಪನ್ ಮತ್ತು ಗೋಮ್ಸ್ ಗರ್ಲ್ಸ್ (ಯು-16) ವಿಭಾಗಗಳಲ್ಲಿ ವಿಜೇತರಾದರು. ತಮಿಳುನಾಡಿನ ಪ್ರಹ್ಲಾದ್ ಶ್ರೀರಾಮ್ ಕೂಡಗೋಮ್ಸ್ ಬಾಯ್ಸ್ (ಯು-16) ವಿಭಾಗದಲ್ಲಿ ಜಯ ಸಾಧಿಸಿದರು. ಈ ಮೂಲಕ 2025ರ ರಾಷ್ಟ್ರೀಯ ಸರ್ಫಿಂಗ್‌ಚಾಂಪಿಯನ್ ಶಿಪ್ ಸರಣಿಯ ಎರಡನೇ ಹಂತವಾಗಿದ್ದ6ನೇ ಇಂಡಿಯನ್ ಓಪನ್ ಆಫ್‌ಸರ್ಫಿಂಗ್ ನಲ್ಲಿ ಎಲ್ಲಾ ನಾಲ್ಕು ವಿಭಾಗಗಳನ್ನೂ ತಮಿಳುನಾಡಿನ ಸರ್ಫರ್ ಗಳು ತಮ್ಮದಾಗಿಸಿಕೊಂಡರು.
ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜಿಸಿದ್ದ ಹಾಗೂ ಮಂತ್ರ ಸರ್ಫ್ ಕ್ಲಬ್ ಆತಿಥ್ಯವಹಿಸಿದ್ದ ಈಸ್ಪರ್ಧೆ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ನಡೆದಿತ್ತು. ಮೂಲತ: ಮೇ 30ರಿಂದ ಜೂನ್ 1ರವರೆಗೆ ನಡೆಯಬೇಕಿದ್ದ ಈ ಸ್ಪರ್ಧೆಯನ್ನು ಮಂಗಳೂರಿನಲ್ಲಿ ಸಂಭವಿಸಿದಬಿರುಗಾಳಿ ಹಾಗೂ ಮಳೆ ಕಾರಣದಿಂದಮುಂದೂಡಲಾಗಿದ್ದು, ನಂತರ ಸಾರ್ವಜನಿಕರ ಪ್ರವೇಶವಿಲ್ಲದಂತೆ ಭಾಗವಹಿಸುವ ಸ್ಪರ್ಧಾರ್ಥಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಮಾತ್ರ ಈ ಸ್ಪರ್ಧೆಯನ್ನು ನಡೆಸಲಾಯಿತು.
ಪುರುಷರ ವಿಭಾಗದಲ್ಲಿ ಶ್ರೀಕಾಂತ್ ಡಿಹೊಸಚಾಂಪಿಯನ್
ಹಿಂದಿನ ವರ್ಷ ಎರಡನೇ ಸ್ಥಾನಗಳಿಸಿದ್ದಶ್ರೀಕಾಂತ್ ಡಿ ಈಬಾರಿ14.63 ಅಂಕಗಳೊಂದಿಗೆ ಜಯಸಾಧಿಸಿದರು. ರಾಷ್ಟ್ರೀಯ ಚಾಂಪಿಯನ್ ರಮೇಶ್ ಬುದಿಲಾಲ್ (11.87) ಎರಡನೇ ಸ್ಥಾನ ಪಡೆದರೆ, ಶಿವರಾಜ್ ಬಾಬು (9.77) ಮತ್ತು ಸಂಜಯ್ ಸೆಲ್ವಮಣಿ (7.07) ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದರು.
ಕಮಲಿ ಮೂರ್ತಿಗೆ ಡಬಲ್ ಖುಷಿ
ತಾನು ದೇಶದ ಅಗ್ರಮಹಿಳಾ ಸರ್ಫರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಕಮಲಿ ಮೂರ್ತಿ, ಮಹಿಳೆಯರ ಓಪನ್ ಮತ್ತು ಗೋಮ್ಸ್ ಗರ್ಲ್ಸ್ ವಿಭಾಗಗಳಲ್ಲೂಗೆಲುವು ಸಾಧಿಸಿದರು. ಮಹಿಳೆಯರಓಪನ್ ಫೈನಲ್ ನಲ್ಲಿ 13.33 ಅಂಕಗಳೊಂದಿಗೆ ಅವರು ಸುಗರ್ ಶಾಂತಿ ಬನರ್ಸ್ (10.50) ಅವರನ್ನು ಸೋಲಿಸಿದರು. ಸೃಷ್ಟಿ ಸೆಲ್ವಂ2.47 ಅಂಕಗಳೊಂದಿಗೆ ಮೂರನೇ ಸ್ಥಾನಪಡೆದುಕೊಂಡರು.
ಗೋಮ್ಸ್ ಗರ್ಲ್ಸ್ ಫೈನಲ್ ನಲ್ಲಿ ಕಮಲಿ ಈ ಸ್ಪರ್ಧೆಯಲ್ಲೇ ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡಿ 15.50 ಅಂಕಗಳನ್ನು ಪಡೆದುಕೊಂಡರು. ಆದ್ಯಾ ಸಿಂಗ್ (2.36) ಮತ್ತು ಸಾನ್ವಿ ಹೆಗ್ಡೆ (2 20) ಅವರು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.
ಗೋಮ್ಸ್ ಬಾಯ್ಸ್ ವಿಭಾಗದಲ್ಲಿ ಪ್ರಹ್ಲಾದ್ ಶ್ರೀರಾಮ್ ಮೇಲುಗೈ
ಗೋಮ್ಸ್ ಬಾಯ್ಸ್ (ಯು-16) ವಿಭಾಗದಫೈನಲ್ ನಲ್ಲಿ ಪ್ರಹ್ಲಾದ್ ಶ್ರೀರಾಮ್ 11.06 ಅಂಕಗಳೊಂದಿಗೆ ಗೆಲುವು ದಾಖಲಿಸಿದರು.ಹರಿಷ್ ಪಿ(9.67) ಮತ್ತು ಸೊಮ್ ಸೇಥಿ (9.30) ಅವರೊಂದಿಗೆ ಈ ವಿಭಾಗದ ಪೈಪೋಟಿ ತೀವ್ರವಾಗಿದ್ದು, ಭಾರತದ ಯುವ ಸರ್ಫಿಂಗ್ ಪ್ರತಿಭೆಗಳ ಸ್ನಾಯಿಯನ್ನೇ ಪ್ರತಿಬಿಂಬಿಸಿತು.
ಅರಬ್ಬಿ ಸಮುದ್ರದಲ್ಲಿ ಮುಂಗಾರು ಚಟುವಟಿಕೆ ಮತ್ತು ಚಂಡಮಾರುತದ ಪರಿಣಾಮವಾಗಿ ಉಂಟಾದ ತೀವ್ರಹವಾಮಾನ ಕಾರಣದಿಂದ ಈ ಸ್ಪರ್ಧೆ ಮುಂದೂಡಲ್ಪಟ್ಟಿದ್ದರೂ ಸರ್ಫಿಂಗ್ ಸ್ವಾಮಿ ಫೌಂಡೇಶನ್, ಮಂತ್ರ ಸರ್ಫ್ ಕ್ಲಬ್ ಮತ್ತು ಸರ್ಫಿಂಗ್
ಫೆಡರೇಷನ್ ಆಫ್ ಇಂಡಿಯಾದ ಆಯೋಜನಾ ಸಮಿತಿ ಸ್ಪರ್ಧೆಯನ್ನು ಸುರಕ್ಷಿತವಾಗಿ ಪುನರಾರಂಭಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿತು.
ಈಬಗ್ಗೆ ಮಾತನಾಡಿದಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ಉಪಾಧ್ಯಕ್ಷ ಹಾಗೂಮಂತ್ರ ಸರ್ಫ್ ಕ್ಲಬ್ ನಿರ್ದೇಶಕ ರಾಮ್ ಮೋಹನ್ ಪರಂಜಪೆ ಸ್ಪರ್ಧೆವಿಳಂಬವಾಗಿದ್ದರು, ಅದರ ಗುಣಮಟ್ಟ ಅತ್ಯುತ್ತಮವಾಗಿತ್ತು. ರಾಷ್ಟ್ರೀಯ ಸರಣಿಯ ಎರಡನೇಹಂತವಾಗಿದ್ದ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಅನ್ನು ರದ್ದುಪಡಿಸಿದ್ದರೆ, ಸ್ಪರ್ಧಾರ್ಥಿಗಳ ಶ್ರೇಯಾಂಕಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿತ್ತು ಎಂದಿದ್ದಾರೆ.

Comments
Post a Comment