ನಿಮ್ಮ ಮನೆ, ಆಫೀಸ್, ಅಂಗಡಿಯ ವಿದ್ಯುತ್​ ಮೀಟರ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಚಿವ ಕೆಜೆ ​ಜಾರ್ಜ್

 

ನಿಮ್ಮ ಮನೆ, ಆಫೀಸ್, ಅಂಗಡಿಯ ವಿದ್ಯುತ್​ ಮೀಟರ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಚಿವ ಕೆಜೆ ​ಜಾರ್ಜ್

ಬೆಂಗಳೂರು: ರಾಜ್ಯದ ಎಲ್ಲ ವಿದ್ಯುತ್​ ಮೀಟರ್‌ಗಳನ್ನು ಸ್ಮಾರ್ಟ್ ಮೀಟರ್ ಮಾಡಲಾಗುವುದು ಎಂದು ಇಂಧನ ಸಚಿವ ಕೆಜೆ ಜಾರ್ಜ್​ ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸದ್ಯ ಕೆಲ ಮೀಟರ್‌ಗಳನ್ನು ಮಾತ್ರ ಸ್ಮಾರ್ಟ್​ಮೀಟರ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಮೀಟರ್​ಗಳನ್ನು ಸ್ಮಾರ್ಟ್​ ಮೀಟರ್​ ಮಾಡಲಾಗುವುದು. ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ಹೆಚ್ಚು ಅನುಕೂಲವಾಗಲಿದೆ. ಮೊಬೈಲ್ ರೀಚಾರ್ಜ್ ರೀತಿ ಮೀಟರ್ ರೀಚಾರ್ಜ್ ಮಾಡಬಹುದು ಎಂದರು.

ಪರಿಷ್ಕೃತ ವಿತರಣಾ ವಲಯ ಯೋಜನೆ (RDSS)ಗೆ ಕೇಂದ್ರ ಸರ್ಕಾರ ಒಪ್ಪಿದೆ. ನಮ್ಮ ಸಂಪುಟವೂ ಒಪ್ಪಿದರೇ RDSS ಸ್ಕೀಮ್ ಜಾರಿ ಮಾಡುತ್ತೇವೆ. ಹೊಸ ಸ್ಮಾರ್ಟ್ ಮೀಟರ್​ಗೆ ಸಿಮ್ ರೀತಿ ಅಳವಡಿಸಲಾಗಿದೆ. ಒಂದು ಸ್ಮಾರ್ಟ್​​ ಮೀಟರ್‌ಗೆ ಐದು ಸಾವಿರ ರೂಪಾಯಿ ಇದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮತ್ತು ಕೇಂದ್ರ ಇಲಾಖೆ ಸೂಚನೆಯಂತೆ ಪಡೆಯಬೇಕಿದೆ‌. ಹಳೇ ಮೀಟರ್ ಹಿಂಪಡೆಯುವುದಿಲ್ಲ ಎಂದು ತಿಳಿಸಿದರು.
ಎಇ, ಜೆಇ ನೇಮಕಾತಿ ಹುದ್ದೆಗೆ ಮರು ಪರೀಕ್ಷೆ ನಡೆಸುವ ವಿಚಾರವಾಗಿ ಮಾತನಾಡಿದ ಅವರು, ಕೋರ್ಟ್ ಮರು ಪರೀಕ್ಷೆಗೆ ಸೂಚಿಸಿದೆ. ಕೆಇಎಯವರು ನೆಗೆಟಿವ್ ಮಾರ್ಕ್ಸ್​ ಹಾಕಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ​ನೆಗೆಟಿವ್​ ಮಾರ್ಕ್ಸ್​ ಬಗ್ಗೆ ಮೊದಲೇ ಹೇಳಬೇಕಿತ್ತು ಅಂತ ವಿರೋಧ ವ್ಯಕ್ತವಾಗಿತ್ತು.

ಏನಿದು ಸ್ಮಾರ್ಟ್‌ ಮೀಟರ್‌?
ಸ್ಮಾರ್ಟ್‌ ವಿದ್ಯುತ್‌ ಮೀಟರ್‌ ಒಂದು ರೀತಿಯಲ್ಲಿ ಮೊದಲೇ ಪಾವತಿಸಿ ವಿದ್ಯುತ್‌ ಬಳಸುವ ವ್ಯವಸ್ಥೆ. ಈ ನೂತನ ವ್ಯವಸ್ಥೆಯಲ್ಲಿ ಮೊಬೈಲ್‌ ಫೋನ್‌ಗಳ ಮಾದರಿಯಲ್ಲೇ ವಿದ್ಯುತ್‌ ಬಳಕೆಗೂ ಪ್ರೀಪೇಯ್ಡ್‌ ರೀಚಾರ್ಜ್‌ ಕಾರ್ಡ್‌ ಪರಿಚಯಿಸಲಾಗುತ್ತಿದೆ. ಗ್ರಾಹಕರು, ಪ್ರೀಪೇಯ್ಡ್‌ ಮೊಬೈಲ್‌ ಸಿಮ್‌ ಮಾದರಿಯಲ್ಲಿ ಮೊದಲೇ ಹಣ ಕಟ್ಟಿ ವಿದ್ಯುತ್‌ ಸಂಪರ್ಕ ಪಡೆಯಬೇಕಾಗುತ್ತದೆ. ಪ್ರೀಪೇಯ್ಡ್‌ ಸಿಮ್‌ ಕಾರ್ಡ್‌ಗಳ ರೀತಿಯಲ್ಲೇ ಪ್ರೀಪೇಯ್ಡ್‌ ಸ್ಮಾರ್ಟ್‌ ಮೀಟರ್‌ಗಳೂ ಕಾರ್ಯ ನಿರ್ವಹಿಸುತ್ತವೆ.

ಪ್ರೀಪೇಯ್ಡ್‌ ಸಿಮ್‌ ಕಾರ್ಡ್‌ಗಳನ್ನು ರೀಚಾರ್ಜ್‌ ಮಾಡಿಸಿ ತಮಗೆ ಬೇಕಾದಷ್ಟು ಟಾಕ್‌ ಟೈಮ್‌ ಹಾಗೂ ಇಂಟರ್‌ನೆಟ್‌ ಡೇಟಾ ಪಡೆಯಬಹುದು. ಹಾಗೆಯೇ, ಗ್ರಾಹಕರು ಪ್ರೀಪೇಯ್ಡ್‌ ವಿದ್ಯುತ್‌ ಮೀಟರ್‌ಗಳನ್ನು ಆನ್‌ಲೈನ್‌ ಮೂಲಕ ಅಥವಾ ಸಮೀಪದ ವಿದ್ಯುತ್‌ ವಿತರಣಾ ಕಚೇರಿಗಳಲ್ಲಿ ರೀಚಾರ್ಜ್‌ ಮಾಡಿಸಿ ತಮಗೆ ಬೇಕಾದಷ್ಟು ಯೂನಿಟ್‌ಗಳನ್ನು ಪಡೆಯಬಹುದು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims