ರಾಜ್ಯದಲ್ಲಿ ಖಾಲಿ ಇರುವ ನಾಲ್ಕು ವಿಧಾನ ಪರಿಷತ್ತಿನ ಸದಸ್ಯ ಸ್ಥಾನಗಳಲ್ಲಿ ಒಂದನ್ನು ಛಲವಾದಿ ಸಮಾಜಕ್ಕೆ ಕೊಡಬೇಕು ಎಂದು ಕರ್ನಾಟಕ ಛಲವಾದಿ ಮಹಾಸಭಾದ ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ಜಿಲ್ಲಾ ಛಲವಾದಿ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
: ರಾಜ್ಯದಲ್ಲಿ ಖಾಲಿ ಇರುವ ನಾಲ್ಕು ವಿಧಾನ ಪರಿಷತ್ತಿನ ಸದಸ್ಯ ಸ್ಥಾನಗಳಲ್ಲಿ ಒಂದನ್ನು ಛಲವಾದಿ ಸಮಾಜಕ್ಕೆ ಕೊಡಬೇಕು ಎಂದು ಕರ್ನಾಟಕ ಛಲವಾದಿ ಮಹಾಸಭಾದ ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ಜಿಲ್ಲಾ ಛಲವಾದಿ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
ಅವರುಗಳು ಪ್ರತಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಅವಿಭಜಿತ ಜಿಲ್ಲೆಯಲ್ಲೇ ಹಿರಿಯರೂ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬದಾಮಿ ಮತಕ್ಷೇತ್ರದಲ್ಲಿ ಜಯಬೇರಿ ಬಾರಿಸಲು ಹಗಲು ರಾತ್ರಿ ಶ್ರಮಿಸಿದ ಡಾ॥ ಎಂ.ಎಸ್.ಛಲವಾದಿ ಅವರಿಗೆ ನೀಡಿ ಬಾಗಲಕೋಟೆ ಜಿಲ್ಲೆಗೆ ನ್ಯಾಯ ಒದಗಿಸಬೇಕೆಂದು ಹೇಳಿದರು.
ಛಲವಾದಿ ಅವರು ಅವಿಭಜಿತ ವಿಜಯಪುರ ಜಿಲ್ಲೆಯಲ್ಲೇ ಕಾಂಗ್ರೇಸ್ ಪಕ್ಷಕ್ಕೆ ದುಡಿದವರಾಗಿದ್ದಾರೆ. ಎರಡೂ ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಇದೆ. ಬಾಗಲಕೋಟೆ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಬೇಕಾಗಿದ್ದ ಛಲವಾದಿ ಅವರಿಗೆ ಕಾಲ ಅನ್ಯಾಯ ಮಾಡಿತು. ಅವರಿಗೆ ನ್ಯಾಯ ಕೊಡಿಸಬೇಕಾದ ಅವಕಾಶ ಈದೀಗ ಬಂದಿದೆ.
ಎರಡೂ ಜಿಲ್ಲೆಯ ಸಚಿವರುಗಳು ಶಾಸಕರುಗಳು ಈ ದಿಸೆಯಲ್ಲಿ ಸಹಕಾರ ನೀಡಿ ಛಲವಾದಿ ಸಮುದಾಯದ ಪ್ರೀತಿಗೆ ಪಾತ್ರರಾಗಬೇಕು ಎಂದು ಹೇಳಿದರು.
ಸಮುದಾಯ ಯಾವಾಗಲೂ ಕಾಂಗ್ರೇಸ್ ಪರವಾಗಿ ಕೆಲಸ ಮಾಡಿದೆ ಮಾಡುತ್ತಲೇ ಇದೆ. ಕಷ್ಟ ಕಾಲದಲ್ಲೂ ಪಕ್ಷವನ್ನು ಛಲವಾದಿ ಸಮಾಜ ಕೈ ಬಿಟ್ಟಿಲ್ಲ ಸಮುದಾಯವನ್ನು ಕಾಂಗ್ರೇಸ್ ಕೈ ಬಿಡುವುದಿಲ್ಲ ಎಂಬ ನಂಬಿಕೆ ನಮಗಿದೆ ಎಂದು ತಿಳಿಸಿದರು.
68 ವರ್ಷದ ಡಾ|| ಎಂ.ಎಸ್.ಛಲವಾದಿ ಅವರು ಎಂ.ಎ. ಪಿ.ಹೆಚ್.ಡಿ. ಪಧವಿದರರಾಗಿದ್ದು ಸಧ್ಯ ರಾಜ್ಯ ಕೆ.ಪಿ.ಸಿ.ಸಿ. ಯ ಜನರಲ್ ಸೆಕ್ರೇಟರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಟ್ವಿಟರ್ ಹಾಗೂ ಇನ್ ಸ್ಟಾಗ್ರಾಮ್ ಸೇರಿದಂತೆ ಹತ್ತು ಹಲವಾರು ಕಾರ್ಯದಲ್ಲಿ ಸಕ್ರೀಯರಾಗಿದ್ದಾರೆ.
ಬದಾಮಿಯ ಕಾಳಿದಾಸ ಕೋ-ಆಫ್ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಕೀರ್ತಿ ಇವರದಾಗಿದೆ.
ಬೆಳಗಾವಿಯ ವಿಭಾಗ ಮಟ್ಟದಲ್ಲಿ ಕಾಂಗ್ರೇಸ್ ಪಕ್ಷದ ಬಲವರ್ಧನೆ ಮಾಡಲು ಹಗಲು ರಾತ್ರಿ ಶ್ರಮವಹಿಸಿದ ಡಾ|| ಛಲವಾದಿ ಅವರಿಗೆ ಎಲ್ಲ ನಾಯಕರೂ ಬೆಂಬಲಿಸಿ ಸೂಕ್ತವಾದ ನ್ಯಾಯ ಕೊಡಿಸಲು ನಾವೆಲ್ಲರೂ ಮನವಿ ಮಾಡುತ್ತಿದ್ದೇವೆ ಎಂದು

Comments
Post a Comment