ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ’ -ಇದು ಜೀ಼ ಕನ್ನಡದ ಹೊಸ ಅಧ್ಯಾಯ!

 ‘ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ’ -ಇದು ಜೀ಼ ಕನ್ನಡದ ಹೊಸ ಅಧ್ಯಾಯ!

ಬೆಂಗಳೂರು, ಜೂನ್ 7, 2025: ಕನ್ನಡಿಗರ ನೆಚ್ಚಿನ ಜೀ಼ ಕನ್ನಡ ವಾಹಿನಿ ಒಂದು ತಿಂಗಳಲ್ಲಿ 12.2ಮಿಲಿಯನ್ ಮನೆಗಳ 45 ಕ್ಕೂ ಅಧಿಕ ಮಿಲಿಯನ್ ವೀಕ್ಷಕರನ್ನು ತಲುಪಿದ್ದು, ಈಗ ‘ಸದಾ ನಿಮ್ಮೊಂದಿಗೆ’ ಎಂಬ ಬ್ರಾಂಡ್ ಟ್ಯಾಗ್ ಲೈನ್ ಮೂಲಕ ಹೊಸತನದೊಂದಿಗೆ ನಿಮ್ಮ ಮುಂದೆ ಬರಲಿದೆ. ಸದಾ ನಿಮ್ಮೊಂದಿಗೆ ಅಭಿಯಾನವು ಕರುನಾಡಿನ ಸಂಸ್ಕೃತಿ ಮತ್ತು ಒಗ್ಗಟ್ಟನ್ನು ಬಿಂಬಿಸುತ್ತದೆ. 

‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬ ಬಲವಾದ ಅಂಶವನ್ನು ಇಟ್ಟುಕೊಂಡು ಮಾಡಿರುವ ಈ ಅಭಿಯಾನವು ಎಲ್ಲರೂ ಜೊತೆಯಾಗಿ ಬೆಳೆಯೋಣ, ಜೊತೆಯಾಗಿ ಸಂಭ್ರಮಿಸೋಣ ಮತ್ತು ಜೊತೆಯಾಗಿದ್ದರೆ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ಸುಂದರವಾಗಿ ತೋರಿಸಿಕೊಡುತ್ತದೆ. ಜೊತೆಯಾಗಿರುವ ಪ್ರತಿಯೊಂದು ಕ್ಷಣವೂ ಭರವಸೆಯನ್ನು ಕೊಡುತ್ತದೆ, ಬೆಂಬಲವನ್ನು ಸೂಚಿಸುತ್ತದೆ ಮತ್ತು ನಮ್ಮ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ನಾವು ಯಾವುದೇ ತರಹದ ಸವಾಲುಗಳನ್ನು ಎದುರಿಸಬಹುದು ಎಂಬುದನ್ನು ಸಾರಿ ಹೇಳುತ್ತದೆ. 

ಜೀ಼ ಕನ್ನಡದ ಬ್ರಾಂಡ್ ಫಿಲಂ ನಲ್ಲಿ  ಕನ್ನಡಿಗರ ವಿಶ್ವಾಸ, ಪ್ರೀತಿ, ಒಗ್ಗಟ್ಟು ಹಾಗು ಹಳೆಯ ಮತ್ತು ಶ್ರೇಷ್ಠವಾದ ಪರಂಪರೆಯನ್ನು ತುಂಬಾ ಸುಂದರವಾಗಿ ಕಂಡುಬಂದಿದೆ. ಮಂಡ್ಯದ ಕಣ್ಣುಕುಕ್ಕುವ ಪ್ರಕೃತಿ ಸೌಂದರ್ಯದ ನಡುವೆ ಸೆರೆಹಿಡಿಯಲಾದ ಈ ಚಿತ್ರದಲ್ಲಿ  ಕರ್ನಾಟಕದ ಸಾಂಪ್ರದಾಯಿಕ ಮದುವೆಯು ಕಂಡುಬರುತ್ತದೆ. ಇಲ್ಲಿ ಕಾಣಿಸುವ ಪುರಾತನ ದೇವಸ್ಥಾನ , ರಂಗುರಂಗಾದ ರಂಗೋಲಿ, ಚಪ್ಪರ, ಅರಶಿನ ಶಾಸ್ತ್ರ ಸೇರಿ ಬಗೆ ಬಗೆಯ ಸಾಂಸ್ಕೃತಿಕ ಅಂಶಗಳು ಸುಂದರವಾದ ದೃಶ್ಯಕಾವ್ಯವೇ ಸರಿ! 

ಮಗಳ ಮದುವೆಯ ಹಿಂದಿನ ದಿನ ಕರ್ತವ್ಯ ನಿಷ್ಠೆಯ ನಿಮಿತ್ತ ಮತ್ತೆ ಸೈನ್ಯಕ್ಕೆ ಹೋಗುವ ಅಪ್ಪನ ಭಾಗಣೆಗಳನ್ನು ಈ ಚಿತ್ರದಲ್ಲಿ ತುಂಬಾ ಭಾವನಾತ್ಮಕವಾಗಿ ತೋರಿಸಲಾಗಿದೆ. ತಂದೆಯ ಅನುಪಸ್ಥಿತಿಯಲ್ಲಿ ಇಡೀ ಗ್ರಾಮವೇ ತಾಯಿಯ ಬೆಂಬಲಕ್ಕೆ ಬಂದು ಮದುವೆಯ ಒಂದೊಂದು ಜವಾಬ್ದಾರಿಯನ್ನು ಒಬ್ಬೊಬ್ಬರು ಹೊತ್ತುಕೊಂಡು ಸಲೀಸಾಗಿ ಮಗಳ ಮದುವೆಯನ್ನು ನೆರವೇರಿಸಲು ಸಹಾಯ ಮಾಡುತ್ತಾರೆ. ಸೈನಿಕ ವಾಪಾಸಾದಾಗ ಆತನ ಹೆಂಡತಿ "ಇಷ್ಟು ದೊಡ್ಡ ಕುಟುಂಬವೇ ನಮ್ಮ ಜೊತೆ ಇದ್ದ ಮೇಲೆ, ನಮಗೇನು ಚಿಂತೆ" ಎನ್ನುತ್ತಾಳೆ. "ಕೂಡಿ ಬಾಳಿದರೆ ಸ್ವರ್ಗ ಸುಖ" ಎಂಬುದು ಈ ಅಭಿಯಾನದ ಮುಖ್ಯ ಅಂಶ!

ಜೀ಼ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು " ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ ಅಭಿಯಾನವು ನಾವು ನಮ್ಮ ವೀಕ್ಷಕರ ಜೊತೆಗೆ ಹೊಂದಿರುವ ಭಾವನೆಗಳ ಸಂಭ್ರಮಾಚರಣೆ. ಜೀ಼ ಕನ್ನಡದ ಬ್ರಾಂಡ್ ಫಿಲಂ ಕರ್ನಾಟಕದ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬಿಂಬಿಸುತ್ತದೆ. ಇದು ಬರೀ ರಿಬ್ರ್ಯಾಂಡಿಂಗ್ ಆಗಿರದೆ ವೀಕ್ಷಕರ ಜೊತೆಗೆ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಮಾಡಲಿದೆ" ಎಂದರು.  

23ನೇ ಜೀ ಸಿನಿ ಅವಾರ್ಡ್ಸ್ 2025 ರ ಪ್ರಸಾರದ ಸಂದರ್ಭದಲ್ಲಿ ಈ ಅಭಿಯಾನವನ್ನು ಅನಾವರಣಗೊಳಿಸಲಾಯಿತು. ಎಲ್ಲಾ ಏಳು ಭಾಷೆಯಲ್ಲಿ ಈ ಅಭಿಯಾನವು ಏಕಕಾಲದಲ್ಲಿ ಪ್ರದರ್ಶನಗೊಳ್ಳುವುದರೊಂದಿಗೆ ಒಂದೇ ಸಮಯದಲ್ಲಿ ಏಳು ವಿಭಿನ್ನ ಧ್ವನಿಗಳ ಮೂಲಕ ಒಂದೇ ಕಲ್ಪನೆಯನ್ನು ಅನುಭವಿಸುವ ವಿಭಿನ್ನ ಅವಕಾಶ ಪ್ರೇಕ್ಷಕರಿಗೆ ದೊರಕಿತು. 

ಜೀ಼ ಕನ್ನಡದ ‘ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ’ ಅಭಿಯಾನ ಪ್ರಸಾರ ಆದ ನಂತರ, ಧಾರಾವಾಹಿಗಳು, ನಾನ್ ಫಿಕ್ಷನ್ ಷೋಗಳಲ್ಲಿ ಅಭಿಯಾನದ ಮುಖ್ಯ ದ್ಯೇಯವನ್ನು ಕಥೆ, ಸ್ಕಿಟ್ ಗಳ ಮೂಲಕ ವೀಕ್ಷಕರಿಗೆ ಇನ್ನಷ್ಟು ತಲುಪಿಸುವ ಪ್ರಯತ್ನ ಮಾಡಲಾಗುತ್ತದೆ ‘ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ’  ಅಭಿಯಾನದಿಂದ ಜೀ಼ ಕನ್ನಡ ಬರೀ ಕಂಟೆಂಟ್ ಪ್ರೊವೈಡರ್ ಆಗಿರದೇ, ಒಗ್ಗಟ್ಟು, ಮೌಲ್ಯಗಳು, ಸಾಂಸ್ಕೃತಿಕ ಹಾಗು ಕನ್ನಡನಾಡಿನ ಪರಂಪರೆಯನ್ನು ಎತ್ತಿಹಿಡಿಯುವ ಕಲ್ಚರಲ್ ಪ್ರೊವೈಡರ್ ಆಗಲಿದೆ.  

ಒಟ್ಟಾಗಿ ಇರುವುದು ಎಂದೆಂದಿಗೂ ವಿಶೇಷ; ಹೆಮ್ಮೆಯೊಡನೆ ಜೀ಼ ಪ್ರಸ್ತುತ ಪಡಿಸುತ್ತಿದೆ ಸ್ನೇಹ ಪ್ರೀತಿ ಮತ್ತು ಕುಟುಂಬದ ಕಥೆಗಳು. ಪ್ರತಿದಿನ, ಪ್ರತಿಕ್ಷಣ ‘ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ’!

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims