ಚಿಕ್ಕಮಗಳೂರಿನಿಂದಬೆಂಗಳೂರಿಗೆ ಕಾಲಿಟ್ಟ 'ರ್ಯಾಲಿ ಆಫ್ ಬೆಂಗಳೂರು'
ಚಿಕ್ಕಮಗಳೂರಿನಿಂದಬೆಂಗಳೂರಿಗೆ ಕಾಲಿಟ್ಟ 'ರ್ಯಾಲಿ ಆಫ್ ಬೆಂಗಳೂರು'
ಬೆಂಗಳೂರು, ಜೂನ್ 20,2025: ಈರ್ಯಾಲಿಯನ್ನು ವಿಜಯನಗರ ಅಟೋಮೋಟಿವ್ ಸ್ಪೋರ್ಟ್ಸ್ ಅಸೋಸಿಯೇಷನ್ (VASA) ಎಫ್ ಎಂಎಸ್ ಸಿಐ ಆಶ್ರಯದಲ್ಲಿ ಮತ್ತು ಇಂಡಿಯಾ ಮೋಟಾರ್ ಸ್ಪೋರ್ಟ್ಸ್ ನ ನಾಯಕತ್ವದಲ್ಲಿ ಬಿ.ಜಿ.ಸುಧೀಂದ್ರ ಅವರ ಪ್ರೋತ್ಸಾಹದೊಂದಿಗೆ ಆಯೋಜಿಸಲಾಗಿದೆ.
ಈಬಾರಿ* ರ್ಯಾಲಿ ಆಫ್‌ಬೆಂಗಳೂರು" ಜೂನ್ 21 ಮತ್ತು 22ರಂದು ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ಶಕ್ತಿ ಹಿಲ್ ರೆಸಾರ್ಟ್ ನಲ್ಲಿ ನಡೆಯಲಿದೆ. ಜೆಕೆ ಟೈರ್ ಮೋಟಾರ್‌ಸ್ಪೋರ್ಟ್ ಮತ್ತು ವಂಸಿ ಮೆರ್ಲಾ ಸ್ಪೋರ್ಟ್ಸ್ ಫೌಂಡೇಶನ್ ನ ಬೆಂಬಲದಿಂದ ಈ ಸ್ಪರ್ಧೆಯಲ್ಲಿ ಅನೇಕ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ.
ರ್ಯಾಲಿ ಆಫ್ ಬೆಂಗಳೂರು ಸ್ಪರ್ಧಾತ್ಮಕವರ್ಗಗಳ ಸಂಪೂರ್ಣ ಪಟ್ಟಿಯನ್ನು ಒಳಗೊಂಡಿದ್ದು ಇದರಲ್ಲಿ INTSDRC-1 (ಒವರ್ ಆಲ್), INTSDRC-2, ಪ್ರೊ.ಸ್ಟಾಕ್ ವುಮೆನ್ಸ್, ಕಪಲ್ (INTSDRC-C) ಮತ್ತು ಕಾರ್ಪೊರೇಟ್ (INTSDRC-Corp) ವರ್ಗಗಳು ಸೇರಿವೆ.
ಈರ್ಯಾಲಿಯಲ್ಲಿ ಭಾಗವಹಿಸುವ ಚಾಲಕರು ಮತ್ತು ಸಿಬ್ಬಂದಿಗೆ ಸಮಗ್ರ ವೈದ್ಯಕೀಯನೆರವನ್ನು ಒದಗಿಸಲು ನ್ಯಾನೋ ಆಸ್ಪತ್ರೆಗಳು ಮತ್ತು ಟೂಸ್ಕ್ಯಾನ್ ಡಯಾಗೋಸ್ಟಿಕ್ಸ್ ಆರೋಗ್ಯ ಪಾಲುದಾರರಾಗಿ ಜೊತೆ ಸೇರಿದ್ದಾರೆ. ಜೊತೆಗೆ ಕಫೆ ಪೆಟ್ರಿಕೋರ್, ಆಕ್ಟಿನ್ ಪಿಟ್ಸ್ ಮತ್ತು ಗಿಗಾಬೈಟ್ ಇಂಕ್ (ಟೆಕ್ಪಾರ್ಟ್ ನರ್) ಮುಂತಾದ ಪ್ರಮುಖ ಸಹಯೋಗಿಗಳೂ ಈ ರ್ಯಾಲಿಗೆ ಬೆಂಬಲ ನೀಡುತ್ತಿದ್ದಾರೆ.
ದೇಶದ ಅತಿಪುರಾತನಮೋಟಾರ್ ಸ್ಪೋರ್ಟ್ಸ್ ಸಂಸ್ಥೆಗಳಲ್ಲಿ ಒಂದಾದ ವಿಜಯನಗರ ಆಟೋಮೋಟಿವ್‌ಸ್ಪೋರ್ಟ್ಸ್ ಅಸೋಸಿಯೇಷನ್ (VASA) ಈವರ್ಷ ತನ್ನ 30ನೇವರ್ಷಾಚರಣೆಯನ್ನು ಆಚರಿಸುತ್ತಿದ್ದು ಇದರೊಂದಿಗೆ ಇದು ಸಂಸ್ಥೆಯ ಪರಂಪರೆಯ ಹೆಮ್ಮೆಗೂ ಸಾಕ್ಷಿಯಾಗಲಿದೆ.

Comments
Post a Comment