ತಿಮ್ಮಕ್ಕ ಅವರ ಅನುಮತಿ ಇಲ್ಲದೇ ಚಿತ್ರೀಕರಣ: ಚಿತ್ರತಂಡದ ವಿರುದ್ಧ ಕಾನೂನು ಕ್ರಮಕ್ಕೆ ಸೂಚನೆ
ತಿಮ್ಮಕ್ಕ ಅವರ ಅನುಮತಿ ಇಲ್ಲದೇ ಚಿತ್ರೀಕರಣ: ಚಿತ್ರತಂಡದ ವಿರುದ್ಧ ಕಾನೂನು ಕ್ರಮಕ್ಕೆ ಸೂಚನೆ

ಬೆಂಗಳೂರು, ಜೂನ್ 16 –
ವೃಕ್ಷಮಾತೆ ನಾಡೋಜ ಪಾ. ಸಾಲುಮರದ ತಿಮ್ಮಕ್ಕ ಅವರ ಜೀವನವನ್ನು ಆಧಾರವಿಸಿಕೊಂಡು ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ’ ಎಂಬ ಶೀರ್ಷಿಕೆಯಡಿ ಚಲನಚಿತ್ರ ಚಿತ್ರೀಕರಣ ನಡೆಯುತ್ತಿರುವುದನ್ನು ಖಂಡಿಸಿರುವ ತಿಮ್ಮಕ್ಕ ಅವರು, ತಮ್ಮ ಅನುಮತಿ ಇಲ್ಲದೇ ನಡೆಯುತ್ತಿರುವ ಈ ಚಿತ್ರೀಕರಣವನ್ನು ತಕ್ಷಣವೇ ನಿಲ್ಲಿಸಲು ಆಗ್ರಹಿಸಿದ್ದಾರೆ.
ಸೈಲಾಡ್ ದೀಲಿನ್ ಕುಮಾರ್ ಹಾಗೂ ಒರಟಶ್ರೀ ಎಂಬವರು ಈ ಸಿನಿಮಾ ಚಿತ್ರೀಕರಣ ನಡೆಸುತ್ತಿದ್ದು, ತಿಮ್ಮಕ್ಕ ಅವರ ಪ್ರಕಾರ, ಈ ಕುರಿತು ಯಾವುದೇ ಪೂರ್ವ ಮಾಹಿತಿ ನೀಡಲಾಗಿಲ್ಲ. ಜೂನ್ 13 ರಂದು ರಾಮನಗರ ಜಿಲ್ಲೆಯ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿತ್ರೀಕರಣ ನಡೆಯುತ್ತಿರುವ ಬಗ್ಗೆ ಅಭಿಮಾನಿಗಳಿಂದ ದೂರವಾಣಿ ಸಂದೇಶದ ಮೂಲಕ ಮಾಹಿತಿ ಪಡೆದ ತಿಮ್ಮಕ್ಕ ಅವರು ಸ್ಥಳಕ್ಕೆ ತೆರಳಿ ಖುದ್ದು ಪರಿಸ್ಥಿತಿ ಪರಿಶೀಲಿಸಿ, ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
“ನನ್ನ ಅನುಮತಿ ಇಲ್ಲದೇ, ನನ್ನ ಹೆಸರು ಬಳಸಿ ಸಿನಿಮಾ ತಯಾರಿಸುತ್ತಿರುವುದು ನನ್ನ ವ್ಯಕ್ತಿತ್ವಕ್ಕೆ ಅವಮಾನ. ನಾನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇನೆ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಸರ್ಕಾರದ ಗಮನಕ್ಕೆ ತಂದಿದ್ದೇನೆ” ಎಂದು ತಿಮ್ಮಕ್ಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಭಿಮಾನಿಗಳಿಗೂ ಅವರು ಮನವಿ ಮಾಡಿದ್ದಾರೆ – “ಯಾರೂ ಚಿತ್ರೀಕರಣ ಸ್ಥಳದಲ್ಲಿ ಗದ್ದಲ ಅಥವಾ ಘರ್ಷಣೆಗೆ ಕಾರಣವಾಗಬಾರದು. ಶಾಂತಿಯುತವಾಗಿ ವಿಚಾರಿಸಿ, ಅವರಲ್ಲಿ ಅನುಮತಿ ಪಡೆದಿರುವುದೇ ಎಂಬುದನ್ನು ಖಚಿತಪಡಿಸಿ” ಎಂದು ತಿಳಿಸಿದರು.
ಇನ್ನೊಂದೆಡೆ, ತಮ್ಮ ಪುತ್ರ ಉಮೇಶ್ ಅವರು ಚಿತ್ರತಂಡವನ್ನು ಪ್ರಶ್ನಿಸಿದಾಗ ಅವಮಾನಕಾರಿ ಭಾಷೆ ಬಳಕೆಯಾಗಿದೆ. ಇದನ್ನು ತಿಮ್ಮಕ್ಕ ಅವರು ಖಂಡಿಸಿ, “ಅವನ ವಿರುದ್ಧ ಹಣ ಹಾಗೂ ಕಾರು ಕೇಳಿದರೆಂಬ ಸುಳ್ಳು ಅಪಪ್ರಚಾರ ಮಾಡಲಾಗಿದೆ. ಈ ಬಗ್ಗೆ ನಾನು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವೆ” ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾದ ಪ್ರಮುಖರು:
ನಾಡೋಜ ಪಾ. ಸಾಲುಮರದ ತಿಮ್ಮಕ್ಕ
ಉಮೇಶ್ ತಿಮ್ಮಕ್ಕ
ಎಚ್. ಬಸವರಾಜು – ಮಾಜಿ ವಿರೋಧ ಪಕ್ಷದ ನಾಯಕರು, ಬಿಬಿಎಂಪಿ
ರಾಮಚಂದ್ರ (ಹೊಡಿ ಚಿನ್ನಿ) – ರಾಷ್ಟ್ರೀಯ ಅಧ್ಯಕ್ಷರು, ಬಿಎಸ್‌ಎಸ್
ಇಂದಿರಮ್ಮ ಬೇಲೂರು – “ಸಾಲುಮರದ ಸರದಾರಿ” ಕೃತಿಯ ಲೇಖಕಿ
Comments
Post a Comment