ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಶೈಕ್ಷಣಿಕ ಕ್ಷೇತ್ರದ ಕಡೆಗಣನೆ ಹಾಗೂ ಸರ್ಕಾರಿ ಶಿಕ್ಷಣ ವ್ಯವಸ್ಥೆ ಹಾಗೂ ಸಂಸ್ಥೆಗಳ ಬಲವರ್ಧನೆಯಲ್ಲಿ ಉನ್ನತ ಶಿಕ್ಷಣ ಸಚಿವರ ದಿವ್ಯ ನಿರ್ಲಕ್ಷವನ್ನು ಖಂಡಿಸಿ,

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಶೈಕ್ಷಣಿಕ ಕ್ಷೇತ್ರದ ಕಡೆಗಣನೆ ಹಾಗೂ ಸರ್ಕಾರಿ ಶಿಕ್ಷಣ ವ್ಯವಸ್ಥೆ ಹಾಗೂ ಸಂಸ್ಥೆಗಳ ಬಲವರ್ಧನೆಯಲ್ಲಿ ಉನ್ನತ ಶಿಕ್ಷಣ ಸಚಿವರ ದಿವ್ಯ ನಿರ್ಲಕ್ಷವನ್ನು ಖಂಡಿಸಿ, ಪತ್ರಿಕಾಗೋಷ್ಠಿ 



ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಶೈಕ್ಷಣಿಕ ಕ್ಷೇತ್ರದ ಕಡೆಗಣನೆ ಹಾಗೂ ಸರ್ಕಾರಿ ಶಿಕ್ಷಣ ವ್ಯವಸ್ಥೆ ಹಾಗೂ ಸಂಸ್ಥೆಗಳ ಬಲವರ್ಧನೆಯಲ್ಲಿ ಉನ್ನತ ಶಿಕ್ಷಣ ಸಚಿವರ ದಿವ್ಯ ನಿರ್ಲಕ್ಷವನ್ನು ಖಂಡಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ರಾಜ್ಯ ಕಾರ್ಯದರ್ಶಿ ಇಂದು  ಪ್ರೆಸ್ ಕ್ಲಬ್ ನಲ್ಲಿ  ಮಾಧ್ಯಮಗಳನ್ನು ಉದ್ದೇಶಿಸಿ ಪತ್ರಿಕಾ ಗೋಷ್ಠಿಯನ್ನು ನಡೆಸಿದರು.


1. ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳ ಪರಿಸ್ಥಿತಿ.

* ಕರ್ನಾಟಕ ರಾಜ್ಯದಲ್ಲಿ ಅಕ್ಕಮಹಾದೇವಿ, ರಾಯಚೂರು, ಕಲಬುರ್ಗಿ, ಧಾರವಾಡ, ನೃಪತುಂಗ ವಿಶ್ವವಿದ್ಯಾಲಯ ಹಾಗೂ ಪ್ರಿಯಾಂಕ ಖರ್ಗೆ ರವರ ಸ್ವ -ಹಿತಾಸಕ್ತಿಯ ಪರಿಣಾಮ , ರಾಜ್ಯಪಾಲರ ಅಧಿಕಾರ ಮೋಟಕುಗೊಳಿಸಿ ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ನೀಡುವ ಸಲುವಾಗಿ ರಾಜ್ಯದ ಏಕೈಕ ಗ್ರಾಮೀಣ ಅಭಿವೃದ್ಧಿ ವಿವಿ ಆರ್ ಡಿ ಪಿ ಆರ್ ವಿಶ್ವವಿದ್ಯಾಲಯವು ಕೂಡ ಕಳೆದೊಂದು ವರ್ಷದಿಂದ ಉಪ ಕುಲಪತಿಗಳ ನೇಮಕವಾಗದೆ ಸಮರ್ಪಕ ಆಡಳಿತ ನೀಡುವುದು ದುಸ್ತರವಾಗಿದೆ, ಸಂಶೋಧನಾ ಆಧಾರಿತ ವಿಶ್ವವಿದ್ಯಾಲಯಗಳಾಗಿ ಹೆಗ್ಗಳಿಕೆ ಹೊಂದಬೇಕಾಗಿದ್ದ ನಮ್ಮ ಶೈಕ್ಷಣಿಕ ಸಂಸ್ಥೆಗಳು ಭ್ರಷ್ಟಾಚಾರದ ಕೇಂದ್ರಗಳಾಗುತ್ತಿರುವುದು ದುರ್ವಿಧಿ.

*  ನಮ್ಮ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 3,000 ಕ್ಕಿಂತ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇರುವುದು, ಯಾವುದೇ ರಾಜ್ಯ ಸರ್ಕಾರದಿಂದ ಸಮರ್ಪಕ ಅನುದಾನ ಬಿಡುಗಡೆಯಾಗದಿರುವುದು, PM-USHA ಇತರೆ ಯೋಜನೆಗಳಲ್ಲಿ ಹಂಚಿಕೆಯಾದ ಅನುದಾನದ ಅಸಮರ್ಪಕ ಬಳಕೆ ಇವೆಲ್ಲದರಿಂದಾಗಿ ಕುಂಟುತ್ತಿದ್ದ ವಿಶ್ವವಿದ್ಯಾಲಯದ ಶಿಕ್ಷಣ ತೆವಳುವಂತಾಗಿದೆ ಹಾಗೂ ರಾಜ್ಯ ಸರ್ಕಾರವು ಈ ಸಾಲಿನ ಬಜೆಟ್ ನಲ್ಲಿ ಒಟ್ಟಾರೆಯಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಶೇಕಡ 10ರಷ್ಟು ಅನುದಾನವನ್ನು ಮೀಸಲಿಟ್ಟಿದ್ದರು ಕೂಡ ಅದರಲ್ಲಿ ಉನ್ನತ ಶಿಕ್ಷಣ ಕ್ಷೇತ್ರದ ಪಾಲು ಕೇವಲ 2.6ರಷ್ಟಿದೆ, ಇದರ ಪರಿಣಾಮ ರಾಜ್ಯದ ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ಬಡ- ಮಾಧ್ಯಮ ವರ್ಗ ಕುಟುಂಬದ ಅವಕಾಶ ವಂಚಿತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವುದರಲ್ಲಿ ಸರ್ಕಾರಗಳು ವಿಫಲಗೊಳ್ಳುತ್ತಿವೆ. ಈ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆ ಪೂರ್ಣಗೊಳ್ಳಲು ಕನಿಷ್ಠಪಕ್ಷ ಅತಿಥಿ ಉಪನ್ಯಾಸಕರನ್ನು ಸರಿಯಾದ ಸಮಯಕ್ಕೆ ನೇಮಕಾತಿ ಮಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸುತ್ತೇವೆ.

* ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ನೀಡುವ ಏಕರೂಪ ಶೈಕ್ಷಣಿಕ ವೇಳಾಪಟ್ಟಿಯನ್ನು ಅನುಸರಿಸಲು ರಾಜ್ಯದ ವಿಶ್ವವಿದ್ಯಾಲಯಗಳು ಕ್ರಮವಹಿಸಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.

2. ರಾಜ್ಯದ ಸರ್ಕಾರಿ ಕೋಟಾ ಇಂಜಿನಿಯರಿಂಗ್ ಸೀಟುಗಳ ಶುಲ್ಕದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಹಾಗೂ ಸೀಟ್ ಬ್ಲಾಕಿಂಗ್ ದಂಧೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲ. 

* ಕರ್ನಾಟಕ ರಾಜ್ಯವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ, ವಿಪುಲ ಅವಕಾಶಗಳು ದೊರೆತಂತೆ ಇಂಜಿನಿಯರಿಂಗ್ ಶಿಕ್ಷಣದ ಮಹತ್ವವು ಕೂಡ ಹೆಚ್ಚಾಯಿತು. ಈ ಪ್ರಸಕ್ತ ಶೈಕ್ಷಣಿಕ ಸಾಲಿನ ಇಂಜಿನಿಯರಿಂಗ್  ಸೀಟ್ ನ ಶುಲ್ಕದಲ್ಲಿ ಶೇಕಡ 7ರಷ್ಟು ಹೆಚ್ಚಿಸಲು ಅನುಮತಿ ನೀಡಿರುವುದು , ಸರ್ಕಾರ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಲಾಬಿಗೆ ಮಣಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದರ ಪರಿಣಾಮ ಕಳೆದ ಹತ್ತು ವರ್ಷಗಳಲ್ಲಿ ಇಂಜಿನಿಯರಿಂಗ್ ಕಾಲೇಜುಗಳ ಸರ್ಕಾರಿ ಕೋಟಾದ ಸೀಟಿನ ಶುಲ್ಕದಲ್ಲಿ 300% ಹೆಚ್ಚಳವಾಗಿರುವುದು ಕಳವಳಕಾರಿ. ಪ್ರತಿ ವರ್ಷವೂ ಶೇಕಡಾ 10ರಷ್ಟು ಶುಲ್ಕ ಹೆಚ್ಚಳವನ್ನು ಪ್ರತೀತಿ ಎಂಬಂತೆ ಹೆಚ್ಚಿಸುವುದು ಸಮಂಜಸವಾದ ಕ್ರಮವಲ್ಲ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು. 

* ಇದರೊಂದಿಗೆ ಕರ್ನಾಟಕದಲ್ಲಿನ ಬಹುತೇಕ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಬೋಧಕರಿಲ್ಲದೆ ,ಪ್ರಾಯೋಗಿಕ ಉಪಕರಣಗಳಿಲ್ಲದೆ, ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಬಡವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಾಯಕಲ್ಪ ನೀಡಬೇಕೆಂದು ವಿದ್ಯಾರ್ಥಿ ಪರಿಷತ್ ಒತ್ತಾಯಿಸುತ್ತದೆ.

* ಇಷ್ಟೇ ಅಲ್ಲದೆ , ಸಿಇಟಿ ಸೀಟು ಹಂಚಿಕೆ ವಿಷಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA), ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಬ್ಲಾಕಿಂಗ್ ದಂಧೆ ಬೆಳಕಿಗೆ ಬಂದು ಸಬಿತ್ತಾದರೂ ಕೂಡ ಯಾವುದೇ ಕಠಿಣ ಕ್ರಮಗಳು ಕೈಗೊಳ್ಳದೆ ಇರುವುದರಿಂದ ವಿದ್ಯಾರ್ಥಿಗಳಲ್ಲಿ ಪಾರದರ್ಶಕ ಸೀಟು ಹಂಚಿಕೆಯ ಕುರಿತು ಸಂಶಯವಿರುವುದು ಸತ್ಯ.


3. ವಿದ್ಯಾರ್ಥಿ ವೇತನ ಮತ್ತು ವಿದ್ಯಾರ್ಥಿ ನಿಲಯ ಅಸಮರ್ಪಕ ನಿರ್ವಹಣೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಧಕ್ಕೆ.


* ಈ ಹಿಂದೆ ರಾಜ್ಯ ಸರ್ಕಾರವು ರೈತ ವಿದ್ಯಾನಿಧಿ ,ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನ,  ವಿದ್ಯಾಸಿರಿ ಎಂಬಂತಹ ಉಪಯುಕ್ತ ಯೋಜನೆಗಳನ್ವಯ ವಿದ್ಯಾರ್ಥಿ ವೇತನ ನೀಡುತಲಿತ್ತು. ಆದರೆ ಪ್ರಸಕ್ತ ರಾಜ್ಯ ಸರ್ಕಾರವು ಗಣನೀಯ ಪ್ರಮಾಣದಲ್ಲಿ ( ಶೇಕಡ 80 ರಿಂದ 85ರಷ್ಟು  ) ವಿದ್ಯಾರ್ಥಿ ವೇತನ ನೀಡುವುದನ್ನು ಕಡಿತ ಮಾಡಿದೆ ಅಷ್ಟೇ ಅಲ್ಲದೆ ಹಲವಾರು ಗೊಂದಲಗಳ ನಡುವೆ ಶೇಕಡ 30ರಷ್ಟು  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೈತಪ್ಪುತ್ತಿದೆ.

* ರಾಜ್ಯದ ಓಬಿಸಿ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಡಿಯಲ್ಲಿ ಫ್ರೀ -ಮ್ಯಾಟ್ರಿಕ್ ಪೋಸ್ಟ್- ಮ್ಯಾಟ್ರಿಕ್ ಒಳಗೊಂಡಂತೆ ಸರಿಸುಮಾರು 4,800 ಹಾಸ್ಟೆಲ್ ಗಳಲ್ಲಿ 4.5 ಲಕ್ಷ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯದೊಂದಿಗೆ ಶಿಕ್ಷಣ ಪಡೆಯಲು ಸಾಧ್ಯವಾಗಿದೆ, ನಮ್ಮ ರಾಜ್ಯದಲ್ಲಿ ಇನ್ನೂ 05 ಲಕ್ಷ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತರಾಗಿದ್ದಾರೆ ವಿಶೇಷವಾಗಿ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಸೌಲಭ್ಯವಿಲ್ಲದಿರುವುದು ಗಂಭೀರವಾದ ಸಮಸ್ಯೆ. ಹಾಲಿ  ಇರುವಂತಹ ಹಾಸ್ಟೆಲ್ ಗಳಲ್ಲಿ ಶುದ್ಧವಾದ ಆಹಾರ -ನೀರು , ಸ್ವಚ್ಛ ಶೌಚಾಲಯ ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಲ್ಲಿ ಲೋಪಗಳಿರುವುದು ಕೂಡ ಸತ್ಯ.

4. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ UUCMS ತಂತ್ರಾಂಶದ ಕುರಿತಾಗಿರುವ ಸಮನ್ವಯದ ಕೊರತೆ ನೀಗಿಸಿ,  ಬಳಕೆದಾರರ ಸ್ನೇಹಿ ತಂತ್ರಾಂಶವಾಗಿ ಅಭಿವೃದ್ಧಿಪಡಿಸಲು ಅಗ್ರಹ.

ಒಟ್ಟಾರೆಯಾಗಿ ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳ ಪರಿಸ್ಥಿತಿ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಯು ಸಂಪೂರ್ಣವಾಗಿ ಗೊಂದಲಮಯವಾಗಿದ್ದರು ಕೂಡ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ ಸುಧಾಕರ್ ಅವರು ನಿಷ್ಕ್ರಿಯರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳಿಗೆ ಬದ್ಧತೆ ತೋರದೆ, ಉನ್ನತ ಶಿಕ್ಷಣ ಇಲಾಖೆಗೆ ಯಾವುದೇ ಹೊಸತನವನ್ನು ತರದೆ  ಕಾಣೆಯಾಗಿರುವುದು ವಿದ್ಯಾರ್ಥಿಗಳಲ್ಲಿ ನಿರಾಸೆ ಮೂಡಿಸಿದೆ. ಈ ರಾಜ್ಯ ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳೇ ಅಭಿವೃದ್ಧಿಯ ಸೂಚಕವೆಂಬಂತೆ, ಐಪಿಎಲ್ ಟ್ರೋಫಿ ಜಯ್ಸಿದವರ ಸನ್ಮಾನ ಕಾರ್ಯಕ್ರಮವೇ ತನ್ನ ಆದ್ಯ ಕರ್ತವ್ಯ ಎಂಬಂತೆ ಯಾವುದೇ ದೂರ ದೃಷ್ಟಿ ಇಲ್ಲದೆ ಶೈಕ್ಷಣಿಕ ಕ್ಷೇತ್ರದಂತಹ ಪ್ರಧಾನ ಕ್ಷೇತ್ರವನ್ನು ನಿರ್ಲಕ್ಷಿಸಿರುವುದು ಅಕ್ಷಮ್ಯ. ಈ ಕೂಡಲೇ ರಾಜ್ಯ ಸರ್ಕಾರವು ಈ ಮೇಲಿನ ಎಲ್ಲ ವಿಚಾರಗಳ ಬಗೆಗೆ ಗಮನವನ್ನು ಕೇಂದ್ರೀಕರಿಸಿ ಒಟ್ಟಾರೆ ಶೈಕ್ಷಣಿಕ ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ತೋರಿಸಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ. ಈ ರಾಜ್ಯದ ಶೈಕ್ಷಣಿಕ ವಿಚಾರಗಳಲ್ಲಿ ಸರ್ಕಾರದ ದಿವ್ಯ ನಿರ್ಲಕ್ಷ ಧೋರಣೆ ಮುಂದುವರೆದರೆ ವಿದ್ಯಾರ್ಥಿ ಪರಿಷತ್ ರಾಜ್ಯಾದ್ಯಂತ ತೀವ್ರ ಹೋರಾಟವನ್ನು ಹಮ್ಮಿಕೊಳ್ಳುವದಾಗಿ ಎಚ್ಚರಿಸುತ್ತದೆ.


 ಈ ಸಂದರ್ಭ ರಾಜ್ಯ ಮಾಧ್ಯಮ ಪ್ರಮುಖ್ ಪ್ರೀತಿ ವಿ  ಆರಾಧ್ಯ, ರಾಜ್ಯ ಕಾರ್ಯ ಸಮಿತಿ ಸದಸ್ಯರಾದ ಅಭಿನಂದನ್ ಮತ್ತು ವಿಜಯ್ ಉಪಸ್ಥಿತರಿದ್ದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims