ಖೋಖೋಜಾಗತಿಕರಣಕ್ಕೆ ಕೆಕೆಎಫ್ ಐಯಿಂದ ಉನ್ನತಮಟ್ಟದತರಬೇತಿ ಕಾರ್ಯಕ್ರಮ

 ಖೋಖೋಜಾಗತಿಕರಣಕ್ಕೆ ಕೆಕೆಎಫ್ ಐಯಿಂದ ಉನ್ನತಮಟ್ಟದತರಬೇತಿ ಕಾರ್ಯಕ್ರಮ



ಜೂನ್ 3, 2025: ವಿಜ್ಞಾನ ಮತ್ತು ತಾಂತ್ರಿಕತೆಯನ್ನು ಆಧಾರವನ್ನಾಗಿಸಿಕೊಂಡು ಖೋಖೋ ಆಟವನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸಲು ಭಾರತ ಖೋಖೋ ಫೆಡರೇಷನ್ (KKFI), ಅಂತರರಾಷ್ಟ್ರೀಯ ಖೋಖೋ ಫೆಡರೇಷನ್ (IKKF)ನ ಆಶ್ರಯದಲ್ಲಿ ತರಬೇತುದಾರರು ಮತ್ತು ತಾಂತ್ರಿಕ ಅಧಿಕಾರಿಗಳಿಗೆ ಉನ್ನತ ಮಟ್ಟದ ॥॥-ಎ ತರಬೇತಿ ಕೋರ್ಸ್ ಅನ್ನು ನಡೆಸುತ್ತಿದೆ. ಜಾಗತಿಕ ತರಬೇತುದಾರರು ಮತ್ತು ತಾಂತ್ರಿಕ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದೆ. ಈ ತರಬೇತಿ ಕಾರ್ಯಕ್ರಮ ಜೂನ್ 2ರಂದು ಶ್ರೀ ಗುರು ಗೋಬಿಂದ್ ಸಿಂಗ್ ಟೆರ್ಸೆಂಟಿನರಿ (SGT) ಯೂನಿವರ್ಸಿಟಿ, ಬುಧರದಲ್ಲಿ ಪ್ರಾರಂಭಗೊಂಡಿದ್ದು ಜೂನ್ 15ರವರೆಗೆ ನಡೆಯಲಿದೆ.


ಈ ಕಾರ್ಯಕ್ರಮವು ಶ್ರೀಲಂಕಾ, ಬಾಂಗ್ಲಾದೇಶ, ಇರಾನ್, ಆಸ್ಟ್ರೇಲಿಯಾ, ಇಂಗ್ಲೆಂಡ್, ಕೊರಿಯಾ ಮತ್ತು ಮಲೇಷ್ಯಾವನ್ನು ಪ್ರತಿನಿಧಿಸುವ ಸುಮಾರು 20 ಅಂತರರಾಷ್ಟ್ರೀಯ ತರಬೇತುದಾರರು ಮತ್ತು ಅಧಿಕಾರಿಗಳನ್ನು ಒಟ್ಟುಗೂಡಿಸುತ್ತಿದೆ. ಜೊತೆಗೆ ಭಾರತದಾದ್ಯಂತ 50 ತರಬೇತುದಾರರು ಮತ್ತು 65 ತಾಂತ್ರಿಕ ಅಧಿಕಾರಿಗಳನ್ನು ಒಟ್ಟುಗೂಡಿಸುತ್ತದೆ.


ತರಬೇತುದಾರರಿಗೆ ತರಬೇತಿ ಅವಧಿಗಳನ್ನು ಜೂನ್ 2 ರಿಂದ ಜೂನ್ 11 ರವರೆಗೆ ನಿಗದಿಪಡಿಸಲಾಗಿದೆ. ನಂತರ ತಾಂತ್ರಿಕ ಅಧಿಕಾರಿಗಳಿಗೆ ಜೂನ್ 12ರಿಂದ ಜೂನ್ 15ರವರೆಗೆ ಅವಧಿಗಳನ್ನು ನಿಗದಿಪಡಿಸಲಾಗಿದೆ.


ಅಡ್ವಾನ್ಸ್ ಲೆವೆಲ್ III-A ತರಬೇತಿ ಕೋರ್ಸ್ ಅನ್ನು ತಾಂತ್ರಿಕ ಶ್ರೇಷ್ಠತೆ ಮತ್ತು ಕ್ರೀಡೆಯಲ್ಲಿ ಸಮಗ್ರ ಅಭಿವೃದ್ಧಿ ಎರಡನ್ನೂ ಪರಿಹರಿಸಲು ವಿನ್ಯಾಸಗೊಳಿಸಲಾಗಿದೆ. ಈ ತರಬೇತಿಯಲ್ಲಿ ಭಾಗವಹಿಸುವವರಿಗೆ ಆಟೊಜೆನಿಕ್ ತರಬೇತಿ, ಖೋಖೋದಲ್ಲಿ ಕ್ರೀಡಾ ವಿಜ್ಞಾನ ಪರಿಚಯ, ಡೋಪಿಂಗ್ ಬಗ್ಗೆ ಜಾಗೃತಿ, ಕ್ರೀಡಾ ಮನಶಾಸ್ತ್ರ, ಕ್ರೀಡಾ ಸಾಧನಗಳ ಬಳಕೆ, ಹಾಗೂ IKKFನ ಇತ್ತೀಚಿನ ನಿಯಮಗಳು ಮತ್ತು ಮಾರ್ಗಸೂಚಿಗಳ ಕುರಿತು ತರಬೇತಿ ನೀಡಲಾಗುತ್ತದೆ.


ಜೂನ್ 5ರಂದು ಮಹತ್ವಪೂರ್ಣ ಸೆಷನ್ ಗಳಲ್ಲಿ ಡಾ. ಪೂಜಾ ಭಾಟಿ ಅವರಿಂದ ಖೋಖೋದಲ್ಲಿ ಕ್ರೀಡಾ ವಿಜ್ಞಾನ', ಡಾ. ವಿಕಾಸ್ ತ್ಯಾಗಿ ಮತ್ತು ಡಾ. ಅನುರಾಗ್ ಅವರಿಂದ ಡೋಪಿಂಗ್ ಬಗ್ಗೆ ಜಾಗೃತಿ', ಹಾಗೂ ಖ್ಯಾತ ಕೋಚ್ ಡಾ. ಎಚ್.ವಿ.ನಟರಾಜ್ ಅವರಿಂದ ಆಕ್ರಮಣಕಾರರ ತರಬೇತಿ' ಸೇರಿವೆ. ದಿನದ ಆರಂಭದಲ್ಲಿ ಶ್ರೀಅಶ್ವನಿ ಶರ್ಮಾ ಅವರ ನೇತೃತ್ವದಲ್ಲಿ ದೈಹಿಕ ವ್ಯಾಯಾಮ ಸೆಷನ್ ಕೂಡ ನಡೆಯಲಿದೆ.


ಈ ಬಗ್ಗೆ ಮಾತನಾಡಿದ ಖೋಖೋ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಶ್ರೀ ಸುಧಾನ್ನು ಮಿಟ್ಟಲ್ 'ಈ ಕೋರ್ಸ್ ಮುಂದಿನ ಪೀಳಿಗೆ ತರಬೇತುದಾರರು ಮತ್ತು ಅಧಿಕಾರಿಗಳನ್ನು ಸಿದ್ಧಪಡಿಸುವ ನಮ್ಮ ಬದ್ಧತೆಯನ್ನು ಈ ತರಬೇತಿ ಆವಿಷ್ಕರಿಸುತ್ತದೆ ಎಂದರು.


ಜೂನ್ 11ರಂದು ತರಬೇತುದಾರರ ವಿಭಾಗವು ಪ್ರಾಯೋಗಿಕ ಪರೀಕ್ಷೆ ಮತ್ತು ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾಗಲಿದೆ.


ಇತ್ತೀಚಿನ ವರ್ಷಗಳಲ್ಲಿ ಖೋಖೋ ಆಟವು ಸಾಂಪ್ರದಾಯಿಕ ಭಾರತೀಯ ಆಟದಿಂದ ಅತಿ ವೇಗದ ಪ್ರೊಫೆಷನಲ್ ಆಡಳಿತದ ಕ್ರೀಡಾ ವಿಭಾಗವಾಗಿ ರೂಪಾಂತರಗೊಂಡಿದೆ. ' ವಜಿರ್' ಪಾತ್ರದ ಪರಿಚಯದಿಂದ ಆಟದ ಗತಿಯು ಹೆಚ್ಚಿಸಲ್ಪಟ್ಟಿದೆ. ಕ್ರೀಡಾ ವಿಜ್ಞಾನ ಮತ್ತು ಡೇಟಾ ಆಧಾರಿತ ತರಬೇತಿ ಪದ್ಧತಿಗಳ ಬಳಕೆ ಆಟದ ಅಂತಾರಾಷ್ಟ್ರೀಯ ಆಕರ್ಷಣೆಯನ್ನು ಹೆಚ್ಚಿಸಿದೆ.


ಈ ತರಬೇತಿ ಕಾರ್ಯಕ್ರಮದ ಮೂಲಕ, ಭಾರತವು ಖೋಖೋ ಆಟದ ಜಾಗತಿಕ ಅಭಿವೃದ್ಧಿಗೆ ಕೇಂದ್ರ ಬಿಂದು ಆಗುವ ಕನಸನ್ನು ಸಾಕಾರಗೊಳಿಸಲು ಕೆಕೆಎಫ್ ಐಬದ್ಧವಾಗಿದೆ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims