ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ 800ಕೋಟಿ ರೂಪಾಯಿ ಭ್ರಷ್ಟಚಾರ; ಕಾರ್ಮಿಕರ ಮುಖಂಡರ ಆರೋಪ.
ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ 800ಕೋಟಿ ರೂಪಾಯಿ ಭ್ರಷ್ಟಚಾರ; ಕಾರ್ಮಿಕರ ಮುಖಂಡರ ಆರೋಪ.
ಬೆಂಗಳೂರು ಜೂನ್ 26; ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಬೇಕಿಲ್ಲದ ಯೋಜನೆಗಳನ್ನು ಜಾರಿ ಮಾಡಿ 800ಕೋಟಿ ರೂಪಾಯಿಗಳನ್ನು ದುರುಪಯೋಗ ಪಡಿಸಿಕೊಂಡಿದ್ದು ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಹೋರಾಟ ಸಮನ್ವಯ ಸಮಿತಿ ಒತ್ತಾಯಿಸಿದೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ,ನೆರವು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಆಶ್ವಥ ಮರಿಗೌಡ,ಕಾರ್ಮಿಕ ಮುಖಂಡರಾದ ರಮೇಶ್,ಟಿ.ಕುಮಾರ್,ಜ್ಯೋತಿ ರಾಜ್ಯದ್ಯಾಂತ ಒಂದು ವರ್ಷಕ್ಕೆ ಮಂಡಳಿಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ದೊರಕುವ ಸೌಲಭ್ಯಗಳ ಒಟ್ಟು ಮೌಲ್ಯ 100ರಕೋಟಿ ರೂಪಾಯಿ ಆಗಿದೆ.
ಕಳೆದ ಒಂದು ವರ್ಷಗಳಿಂದ ಮಂಡಳಿಯಿಂದ ಅಂತ್ಯ ಸಂಸ್ಕಾರ, ಮದುವೆ ಸಹಾಯಧನ, ಕುಟುಂಬ ಪಿಂಚಣಿ, ವೈದ್ಯಕೀಯ ಧನಸಹಾಯ, ಶೈಕ್ಷಣಿಕ ಸಹಾಯಧನ, ಅಪಘಾತ ಸಹಾಯಧನ ಯಾವುದೇ ರೀತಿಯ ಹಣಕಾಸಿನ ಸೌಲಭ್ಯಗಳನ್ನು ಕಳೆದ ಒಂದು ವರ್ಷಗಳಿಂದ ಮಂಡಳಿ ಬಿಡುಗಡೆ ಮಾಡಿರುವುದಿಲ್ಲ. ಒಂದು ವರ್ಷಕ್ಕೆ ಮಂಡಳಿಯಲ್ಲಿರುವ ಸೆಸ್ ಹಣಕ್ಕೆ ರೂ.50 ಕೋಟಿ ಬಡ್ಡಿ ಬರುತ್ತದೆ. ಆದರೆ ಕಳೆದ ಒಂದು ವರ್ಷಗಳಿಂದ ಮಂಡಳಿಯಿಂದ ನೀಡಬೇಕಾದ ಸೌಲಭ್ಯಗಳಿಗೆ ಕತ್ತರಿ ಹಾಕಿ ಈ ರೀತಿಯ ಯೋಜನೆಗಳನ್ನು ಸಚಿವ ಸಂತೋಷ್.ಎಸ್. ಲಾಡ್, ಕಾರ್ಮಿಕ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
2023, 2024, 2025 ನೇ ಸಾಲಿನಲ್ಲಿ ರಾಜ್ಯಾದ್ಯಾಂತ ನೊಂದಾಯಿತಿ ಕಟ್ಟಡ ಕಾರ್ಮಿಕರಿಗೆ ಅಧಿಕಾರಿಗಳು ಮಂಜೂರಾತಿ ಮಾಡಿದ ಅರ್ಜಿಗಳನ್ನು ಮತ್ತು ಮರುಪರಿಶೀಲನೆ ಮಾಡಿಸಲು ಖಾಸಗಿ ಕಂಪನಿಯವರಿಗೆ ಮರು ಟೆಂಡರ್ ನೀಡಿ ಕೋಟಿಗಟ್ಟಲೇ ಅವ್ಯವಹಾರವಾಗಿದೆ. ಈ ಕಾರ್ಯಕ್ರಮವು ಬೋಗಸ್ ಕಾರ್ಯಕ್ರಮವಾಗಿದೆ,2024-25
ಮಂಡಳಿಯಿಂದ ನೀಡುವ ಸೌಲಭ್ಯಗಳಿಗೆ ಕತ್ತರಿ ಹಾಕಲು ಕುಟುಂಬ ಐಡಿ ಹೆಸರಿನಲ್ಲಿ ವಂಚಿಸಲಾಗುತ್ತಿದೆ, 2024-25 ನೇ ಸಾಲಿನಲ್ಲಿ ರಾಜ್ಯಾದ್ಯಾಂತ ನೊಂದಾಯಿತಿ ಕಟ್ಟಡ ಕಾರ್ಮಿಕರಿಗೆ ಸಂಚಾರ ಆರೋಗ್ಯ ತಪಾಸಣೆಗೆ ಎಂದು 100 ಬಸ್ಸುಗಳನ್ನು ಮಂಡಳಿಯಿಂದ ಮಂಜೂರು ಮಾಡಿದ್ದು, ರಾಜ್ಯಾದ್ಯಾಂತ 100 ಬಸ್ಸುಗಳು ಕಾರ್ಯನಿರ್ವಹಿಸುತ್ತಿದ್ದು, ನೊಂದಾಯಿತಿ ಕಟ್ಟಡ ಕಾರ್ಮಿಕರಿಗೆ ಯಾವುದೇ orac ಕಾರ್ಯಕ್ರಮವಾಗಿರುತ್ತದೆ. ಉಪಯೋಗವಾಗಿರುವುದಿಲ್ಲ ಎಂದು ಹೇಳಿದರು.
2024-25 ನೇ ಸಾಲಿನಲ್ಲಿ ರಾಜ್ಯಾದ್ಯಾಂತ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಪ್ರಿವೆಂಟರಿ ಹೆಲ್ತ್ಕೇರ್ ಚೆಕಪ್ ಮತ್ತು ತರಬೇತಿ ಕಾರ್ಯಕ್ರಮಕ್ಕಾಗಿ ರೂ.310 ಕೋಟಿ ರೂಪಾಯಿ ವ್ಯಯಮಾಡಲಾಗಿದೆ, ಈ ಕಾರ್ಯಕ್ರಮವು ಬೋಗಸ್ ಕಾರ್ಯಕ್ರಮವಾಗಿದೆ ನಿಯಮಾನುಸಾರ 20 ರೀತಿಯ ರಕ್ತ ಮಾದರಿಯ ಪರೀಕ್ಷೆಗಳನ್ನು ಮಾಡಬೇಕಾಗಿರುತ್ತದೆ. ಆದರೆ ಕೇವಲ 2 ಅಥವಾ 3 ರೀತಿಯ ಚಕಪ್ ನಡೆಸಿ ಪರೀಕ್ಷಾ ವರದಿಯನ್ನು ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ನೀಡಿರುತ್ತಾರೆ. ಪರೀಕ್ಷಾ ವರದಿಯಲ್ಲಿ ಎಲ್ಲಾರಿಗೂ ಒಂದೇ ರೀತಿಯ ನಾರ್ಮಲ್ ಎಂದು ವರದಿಯನ್ನು ನೀಡಿದ್ದಾರೆ ಎಂದರು.
2024-25 ನೇ ಸಾಲಿನಲ್ಲಿ ರಾಜ್ಯಾದ್ಯಾಂತ ನೊಂದಾಯಿತಿ ಕಟ್ಟಡ ಕಾರ್ಮಿಕರಿಗೆ ಕೌಶಲ್ಯ ತರಬೇತಿ, ಉಪಕರಣಗಳ ಸುರಕ್ಷಿತ ಬಳಕೆ ಕುರಿತ ತರಬೇತಿ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಪೋಲು ಮಾಡುತ್ತಿದ್ದು, ಚಿತ್ರದುರ್ಗ ಜಿಲ್ಲೆ ಒಂದರಲ್ಲಿ ಸುಮಾರು ನಾಲ್ಕು ಸಾವಿರ ಕಟ್ಟಡ ಕಾರ್ಮಿಕರಿಗೆ ತರಬೇತಿ ನೀಡಲು ಒಬ್ಬ ಕಟ್ಟಡ ಕಾರ್ಮಿಕರಿಗೆ ರೂ.3532/- ಗಳಲ್ಲಿ ರೂ.632/- ಗಳನ್ನು 2 ದಿನದ ತರಬೇತಿಗೆ ನೀಡಬೇಕೆಂಬ ಆದೇಶ ಇರುತ್ತದೆ. ಆದರೆ ನಿಯಮವಳಿಗಳನ್ನು ಗಾಳಿಗೆ ತೂರಿ ಯಾವುದೇ ರೀತಿಯ ತರಬೇತಿ ನೀಡದೇ, ಯಾವ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ತರಬೇತಿ ಭತ್ಯೆ ರೂ.632 ಗಳನ್ನು ಸಹ ಲೂಟಿ ಮಾಡಲಾಗಿದೆ. ಒಟ್ಟಾರೆ ರಾಜ್ಯಾಂದ್ಯಂತ ರೂ.254.00 ಕೋಟಿ ರೂ.30ಲಕ್ಷದ 4ಸಾವಿರ ರೂಪಾಯಿ ವ್ಯಯಿಸಲಾಗಿದೆ. ಇದು ಕಟ್ಟಡ ಕಾರ್ಮಿಕರ ಹೆಸರಲ್ಲಿ ಈ ರೀತಿ ಆರ್.ಪಿಎಲ್ ತರಬೇತಿ ಕಾರ್ಯಕ್ರಮ ನಡೆದಿದ್ದು. ಏನೂ ನೋದಾಯಿತ ಕಟ್ಟಡ ಕಾರ್ಮಿಕರಿಗೆ ಪ್ರಯೋಜನವಿಲ್ಲದಂತಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಮುಖಂಡರಾದ ರಮೇಶ್ ಘೋರ್ಪಡೆ, ಧಾರವಾಡದ ಬಂಡಿ ವಡ್ಡರ, ಮಂಗಳೂರಿನ ಜಯರಾಜ್ ಸಾಲಿಯಾನ,ರಾಯಚೂರಿನ ತಿಮ್ಮಣ್ಣ ಸ್ವಾಮಿ, ಗದಗನ ಇರ್ಪಾನ್ ಡಂಬಳ, ಮೈಸೂರಿನ ಶಿವಣ್ಣ ಮತ್ತಿತರರು ಹಾಜರಿದ್ದರು.


Comments
Post a Comment