ಬೆಂಗಳೂರು ಪ್ರಾಧಿಕಾರದಿಂದ ರೂಪಿಸಲ್ಲಟಂತಹ ಬಡಾವಣೆಯಾದ ಬನಶಂಕರಿ 6 ನೇ ಹಂತದ ನಿವೇಶನದಾರರು ಕಾನೂನಾತ್ಮಕ ಸಂಬಂದ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ.

 ಬೆಂಗಳೂರು ಪ್ರಾಧಿಕಾರದಿಂದ ರೂಪಿಸಲ್ಲಟಂತಹ ಬಡಾವಣೆಯಾದ ಬನಶಂಕರಿ 6 ನೇ ಹಂತದ ನಿವೇಶನದಾರರು ಕಾನೂನಾತ್ಮಕ ಸಂಬಂದ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. 


ಬೆಂಗಳೂರು ಪ್ರಾಧಿಕಾರದಿಂದ ರೂಪಿಸಲ್ಲಟಂತಹ ಬಡಾವಣೆಯಾದ ಬನಶಂಕರಿ 6 ನೇ ಹಂತದ ನಿವೇಶನದಾರರು ಕಾನೂನಾತ್ಮಕ ಸಂಬಂದ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಹಂತದ ಬಡಾವಣೆಗೆ ಸಂಬಂದಿಸಿದಂತೆ ನ್ಯಾಯಾಲಯಗಳಲ್ಲಿ ಅನೇಕ ವ್ಯಾಜ್ಯಗಳಿದ್ದು, ಈಗಾಗಲೆ 2, 3, 4 ಮತ್ತು 5 ನೇ ಬ್ಲಾಕುಗಳಿಗೆ ಸಂಬಂದಿಸಿದಂತೆ ನಿವೇಶನಗಳು ಹಂಚಿಕೆಯಾಗಿದ್ದರೂ ಮನೆಗಳನ್ನು ಕಟ್ಟಿದ್ದರೂ ಸಹ ತೀರ್ಪು ಭೂ ಮಾಲೀಕರ ಪರವಾಗಿ ಆಗಿದ್ದು ಇದರಿಂದ ಇದರಿಂದ ಸುಮಾರು 350 ಕ್ಕೂ ಹೆಚ್ಚು ನಿವೇಶನ ಖರೀದಿಸಿದವರ ಭವಿಷ್ಯ ಡೋಲಾಯಮಾನವಾಗಿದೆ. ಇದೇ ರೀತಿಯ ಸಮಸ್ಯೆ ಎದುರಿಸುತ್ತಿರುವ 6ನೇ ಹಂತ 11ನೇ ಬ್ಲಾಕಿನ ಸರ್ವೆ ಸಂಖ್ಯೆ 3/1 ರ ನಿವೇಶನದಾರರಾದ ನಾವುಗಳು ಈ ತೀರ್ಪಿನಿಂದ ವಿಚಲಿತರಾಗಿದ್ದೇವೆ. ಇದೇ ಸಂದರ್ಭದಲ್ಲಿ ತಾಲ್ಲೂಕು ಕಛೇರಿಯ ಸಿಬ್ಬಂದಿ ಕಾನೂನು ಬಾಹಿರವಾಗಿ ಭೂ ಮಾಲೀಕರಿಗೆ ಅನುಕೂಲವಾಗುವಂತೆ ಕ್ರಮಗಳನ್ನು ಕೈಗೊಂಡಿದ್ದಾರೆ. ಸುಮಾರು 1 ವರ್ಷದಿಂದ ಈ ನಿಟ್ಟಿನಲ್ಲಿ ಬೆಂ.ಅ.ಪ್ರಾ. ಕ್ಕೆ ಅಲೆದು ಎಷ್ಟೇ ಮನವರಿಕೆ ಮಾಡಿಕೊಟ್ಟರೂ ಯಾವುದೇ ಪಲಿತಾಂಶ ಆಗದೆ ಇರುವುದರ ಹಿನ್ನೆಲೆಯಲ್ಲಿ ಹತಾಷೆಗೊಂಡು ಮಾಧ್ಯಮಕ್ಕೆ ಮೊರೆಹೋಗಿ ಕೆಳಕಂಡ ವಾಸ್ತವಾಂಶಗಳನ್ನು ನಿಮ್ಮಗಳ ಮುಂದೆ ಇಡಲಾಗುತ್ತಿದೆ.

ಪ್ರಕರಣದ ವಾಸ್ತವಾಂಶಗಳು.

ಬನಶಂಕರಿ 6ನೇ ಹಂತ 11 ನೇ ಬ್ಲಾಕ್ ನಿರ್ಮಾಣಕ್ಕಾಗಿ ಹಲವು ಸರ್ವೆಗಳಲ್ಲಿನ ಜಮೀನುಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ 1976 ರಡಿಯಲ್ಲಿ ಸ್ವಾದೀನಪಡಿಸಿಕೊಳ್ಳಲಾಗಿದೆ. ಸರ್ವೆ ಸಂಖ್ಯೆ 3/1 ರಲ್ಲಿ ಈ ಉದ್ದೇಶಕ್ಕಾಗಿ 3 ಎಕರೆ 12 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪ್ರಿಲಿಮಿನರಿ ನೋಟಿಫಿಕೇಶನ್ ಅನ್ನು ದಿನಾಂಕ 15-11-2000 ರಲ್ಲೂ ಅಂತಿಮ ಅಧಿಸೂಚನೆಯನ್ನು 21-08-2001 ರಲ್ಲಿಯೂ ಹೊರಡಿಸಿರುತ್ತದೆ. ಎರಡೂ ಅಧಿಸೂಚನೆಗಳ ಪ್ರತಿಗಳನ್ನು ಕ್ರಮವಾಗಿ ಅನುಬಂಧ- ಹಂಚಿಕೆ ಮಾಡಿರುವುದರಿಂದ ಮತ್ತು ಮನೆ ಕಟ್ಟಲು ಪ್ಲಾನ್ ಸಹ ಮಂಜೂರು ಮಾಡುತಿರುವುದರಿಂದ ಮನೆ ಕಟ್ಟಲು ಹೋದಾಗ ರಿಟ್ ಅಪೀಲು ಹಾಕಿರುವ ಭೂ ಮಾಲೀಕರು ನಿವೇಶನದಾರರೊಂದಿಗೆ ಸಂಘರ್ಷಕ್ಕೆ ಇಳಿಯುತ್ತಿದ್ದಾರೆ ಮತ್ತು ಮನೆ ಕಟ್ಟಲು ತಡೆಯೊಡ್ಡುತ್ತಿದ್ದಾರೆ ಯಾರೂ ಸಹ ಈ ನಿವೇಶನಗಳನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ. ಇಲ್ಲಿನ ನಿವೇಶನದಾರರು ಮನೆ ಕಟ್ಟಲಾಗದೆ ಸದರಿ ನಿವೇಶನಗಳನ್ನು ಮಾರಲು ಸಹ ಅಗದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಜಿಲ್ಲಾಧಿಕಾರಿಗಳು ಸದರಿ ಸರ್ವೆ ಸಂಖ್ಯೆಯ ಪಹಣಿಯನ್ನು ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ಬೆಂ.ಅ.ಪ್ರಾ. ಕ್ಕೆ ವರ್ಗಾವಣೆಯನ್ನು ಮಾಡಬೇಕಿತ್ತು. ಆದರೆ ಮಾಡಿರುವುದಿಲ್ಲ.

. ಇದೀಗ ಬೆಂಗಳೂರು ದಕ್ಷಿಣ ತಾಲ್ಲೂಕಿನ ವಿಭಾಗಾಧಿಕಾರಿಗಳು ನ್ಯಾಯಾಲಯದಿಂದ ಯಥಾಸ್ಥಿತಿ ಕಾಯ್ದುಕೊಳ್ಳುವ ಆಜ್ಞೆ ಇದ್ದರೂ ಮ್ಯುಟೇಷನ್ ಬದಲಾಯಿಸಿ ಪಹಣಿ ನೀಡಿರುತ್ತಾರೆ.

ಪ್ರಾಧಿಕಾರದಿಂದ ಮತ್ತು ಸರ್ಕಾರದಿಂದ ಆಗಿರುವ ಲೋಪಗಳು ಮತ್ತು ನಮ್ಮ ಆಕ್ಷೇಪಣೆಗಳು

1. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಂತಿಮ ಅಧಿಸೂಚನೆ ಹೊರಡಿಸಿದ ಕೂಡಲೆ ಸದರಿ ಸರ್ವೆ ಸಂಖ್ಯೆಯ ಪಹಣಿಯನ್ನು ಪ್ರಾಧಿಕಾರದ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳಬೇಕಿತ್ತು. ಈ ನಿಟ್ಟಿನಲ್ಲಿ ಯಾವುದೇ ಕ್ರಮ ವಹಿಸಿರುವುದಿಲ್ಲ. ಈ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಡಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಪಹಣಿ ವರ್ಗಾವಣೆ ಬಗ್ಗೆ ಯಾವುದೇ ಪತ್ರ ವ್ಯವಹಾರ ನಡೆಸಿರುವುದು ಕಂಡುಬಂದಿರುವುದಿಲ್ಲವೆಂದು ಬೆಂ.ಅ.ಪ್ರಾ. ವಿಶೇಷ ಭೂಸ್ವಾಧಿನಾಧಿಕಾರಿಗಳು ದಿನಾಂಕ 30-01-2025 ರಂದು ತಿಳಿಸಿರುತ್ತಾರೆ. ಪ್ರತಿ ಲಗತ್ತಿಸಿದೆ. (ಅನುಬಂಧ-7) ಇದು ಎಲ್ಲೋ ಭೂಮಾಲೀಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಈ ರೀತಿಯ ಅಧಿಕಾರ ದುರುಪಯೋಗ ಆಗಿದೆಯೆಂದು ಅನುಮಾನ ಉಂಟಾಗುತ್ತಿದೆ.

2. ಈ ಪ್ರಕರಣಗಳಿಗೆ ಸಂಬಂದಿಸಿದಂತೆ ಪ್ರಾಧಿಕಾರಕ್ಕೆ ಹೋಗಿ ವಿಚಾರಿಸಲಾಗಿ ಅಲ್ಲಿನ ಕಾನೂನು ವಿಭಾಗದಲ್ಲಿ ಯಾವುದೇ ಕಡತಗಳನ್ನು ನಿರ್ವಹಿಸಿಲ್ಲದಿರುವುದು ಕಂಡು ಬಂದಿರುತ್ತದೆ. ಈ ವಿಭಾಗದ ಮುಖ್ಯಸ್ಥರು ಸರ್ಕಾರದ ನಿವೃತ್ತ ಅಧಿಕಾರಿಗಳಾಗಿದ್ದು ಅವರ

ಲಗತ್ತಿಸಿದೆ. (ಅನುಬಂಧ-7) ಇದು ಎಲ್ಲೋ ಭೂಮಾಲೀಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಈ ರೀತಿಯ ತಟಸ್ಥ ದೋರಣೆ ಅನುಸರಿಸುತ್ತಿದ್ದಾರೆಂಬ ಅನುಮಾನ ಉಂಟಾಗುತ್ತಿದೆ.

2. ಈ ಪ್ರಕರಣಗಳಿಗೆ ಸಂಬಂದಿಸಿದಂತೆ ಪ್ರಾಧಿಕಾರಕ್ಕೆ ಹೋಗಿ ವಿಚಾರಿಸಲಾಗಿ ಅಲ್ಲಿನ ಕಾನೂನು ವಿಭಾಗದಲ್ಲಿ ಯಾವುದೇ ಕಡತಗಳನ್ನು ನಿರ್ವಹಿಸಿಲ್ಲದಿರುವುದು ಕಂಡು ಬಂದಿರುತ್ತದೆ. ಈ ವಿಭಾಗದ ಮುಖ್ಯಸ್ಥರು ಸರ್ಕಾರದ ನಿವೃತ್ತ ಅಧಿಕಾರಿಗಳಾಗಿದ್ದು ಅವರ ಅಧಕ್ಷತೆ ಎದ್ದು ಕಾಣುತ್ತದೆ. ಅವರಿಗೆ ವಿಭಾಗದಲ್ಲಿ ಯಾವುದೇ ನಿಯಂತ್ರಣ ಇರುವುದಿಲ್ಲ. ಸಾವಿರಾರು ಜನರಿಗೆ ಸೂರು ಒದಗಿಸುವ ಪ್ರಾಧಿಕಾರವು ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ.

3. ದಿನಾಂಕ 27-7-2016 ರಂದು ನ್ಯಾಯಾಲಯವು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ (status quo) ಹೇಳಿದ್ದು ಸುಮಾರು 9 ವರ್ಷಗಳು ಕಳೆದರೂ ಈ ಬಗ್ಗೆ ಹೆಚ್ಚು ಅಸ್ತೆ ವಹಿಸಿ ತಾನೇ ಹಂಚಿಕೆ ಮಾಡಿರುವ ನಿವೇಶನದಾರರ ಹಿತಾಸಕ್ತಿ ಕಾಪಾಡಲು ಮುಂದಾಗಿ ನ್ಯಾಯಾಲಯದಲ್ಲಿ ಈ ವ್ಯಾಜ್ಯವನ್ನು ಇತ್ಯರ್ಥ ಪಡಿಸುವಲ್ಲಿ ಪ್ರಾಧಿಕಾರವು ವಿಫಲವಾಗಿದೆ.

4. ಸದರಿ ಜಮೀನು ಈಗಾಗಲೆ ಪ್ರಾಧಿಕಾರದ ವಶದಲ್ಲಿದೆ. ಹಾಗು ನ್ಯಾಯಾಲಯದಲ್ಲಿ ಈ ಬಗ್ಗೆ ತಡೆ ಆಜ್ಞೆ ಇದ್ದರೂ ಸಹ ಬೆಂಗಳೂರು ದಕ್ಷಿಣ ತಾಲ್ಲೂಕು ವಿಭಾಗಾಧಿಕಾರಿಗಳು ಈಗಾಗಲೆ ಮೃತ ಪಟ್ಟಿರುವ ಶ್ರೀ ಚಿಕ್ಕ ರೇವಣ್ಣ ಬಿನ್ ಲೇಟ್ ದೊಡ್ಡನಂಪಯ್ಯ ಇವರಿಗೆ 3 ಗುಂಟೆಗಳನ್ನು ಹಾಗೂ ಶ್ರೀ ಎನ್ ಮುನಿಸ್ವಾಮಿ ರವರಿಗೆ 24 ಗುಂಟೆಗಳನ್ನು ತಮ್ಮ ಆದೇಶ ಸಂಖ್ಯೆ ಆ‌ರ್.ಎಸ್. 143/2024, ದಿನಾಂಕ 10-9-2024 ರಲ್ಲಿ ವಿಭಜನೆ ಎಂದು ತೋರಿಸಿ ಪಹಣಿ ಬದಲಾಯಿಸಿರುತ್ತಾರೆ. (ಪಹಣಿ ಪ್ರತಿ ಲಗತ್ತಿಸಿದೆ ಅನುಬಂಧ-8) ಯಥಾಸ್ಥಿತಿ ಆದೇಶ ಇದ್ದರೂ ಸಹ, ಸದರಿ ಅಸ್ತಿಯು ಬೆಂ.ಅ.ಪ್ರಾ. ದ ಸ್ವಾಧೀನದಲ್ಲಿದ್ದರು ಸಹ ಈ ರೀತಿಯ ಆದೇಶವನ್ನು ವಿಭಾಗಾಧಿಕಾರಿಗಳು ಕಾನೂನು ಬಾಹಿರವಾಗಿ ಸದರಿ ಅರ್ಜಿದಾರರಿಗೆ ನ್ಯಾಯಾಲಯದಲ್ಲಿ ಅನುಕೂಲವಾಗುವ ಉದ್ದೇಶದಿಂದಲೇ ಮಾಡಿದ್ದಾರೆ ಎನ್ನುವುದಕ್ಕೆ ಪೂರಕವಾಗಿದೆ.

ಮುಖ್ಯವಾಗಿ ನ್ಯಾಯಾಲಯದಲ್ಲಿ ಸದರಿ ಪಹಣಿ ಸಲ್ಲಿಸಿ ಸದರಿ ಜಮೀನುಗಳು ಇನ್ನೂ ಭೂಮಾಲೀಕರ ಸ್ವಾಧಿನದಲ್ಲಿದೆಯೆಂದೂ ಪ್ರಾಧಿಕಾರವು ಇಲ್ಲಿ ಬಡಾವಣೆ ನಿರ್ಮಾಣ ಮಾಡಿಲ್ಲವೆಂದು ವಾದ ಮಾಡಿ ವಿಚಾರಣೆಯ ದಿಕ್ಕು ಬದಲಿಸುವ ಪ್ರಯತ್ನ ಇದಾಗಿದೆ. ಇದನ್ನು ಸದರಿ ಸರ್ವೆ ಸಂಖ್ಯೆಯಲ್ಲಿ ನಿವೇಶನಗಳನ್ನು ಹೊಂದಿರುವ ನಾವುಗಳು ತೀವ್ರವಾಗಿ

ಖಂಡಿಸುತ್ತೇವೆ.  ಇಂದೇ ಈ ಬಗ್ಗೆ ನಾವುಗಳು ಮಾನ್ಯ ಲೋಕಾಯುಕ್ತರಿಗೆ.  ಜಿಲ್ಲಾಧಿಕಾರಿಗಳಿಗೆ ಮತ್ತು ಬೆಂ.ಎ.ಪ್ರಾ.  ಅಯುಕ್ತರಿಗೆ ದೂರು ಸಲ್ಲಿಸಲು.

 ಹಾಗೂ ಈ ಮೂಲಕ ನಾವುಗಳು ಬನಶಂಕರಿ 6ನೇ ಹಂತ, 11ನೇ ಬ್ಲಾಕಿನ ನಿವೇಶನದಾರರು, ಜಿಲ್ಲಾಧಿಕಾರಿಗಳು ಮತ್ತು ಪ್ರಾಧಿಕಾರದ ಆಯುಕ್ತರು ಕೆಳಗಿನಂತೆ  ಕೈಗೊಳ್ಳಬೇಕಾಗಿ ಕೋರುತ್ತೇವೆ

 1 ನ್ಯಾಯಾಲಯದಲ್ಲಿ ಉಳಿಕೆಯಿರುವ ವ್ಯಾಜ್ಯಗಳನ್ನು ಕೂಡಲೆ ಇತ್ಯರ್ಥಗೊಳಿಸಲು ಕ್ರಮವಹಿಸುವುದು.  WA ಸಂಖ್ಯೆ 4348/2015 ಕ್ಕೆ ಸಂಬಂದಿಸಿದಂತೆ ವಾಸ್ತವಾಂಶಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಮನವರಿಕೆ ಮಾಡಲು ವಕೀಲರ ಮುಖೇನ ಕ್ರಮವಹಿಸಿ ನಿವೇಶನದಾರರು  ಹಿತರಕ್ಷಣೆಯನ್ನು ಮಾಡುವುದು.

 2 ವಿಭಾಗಾಧಿಕಾರಿಗಳು ಹೊರಡಿಸಿರುವ ದಿನಾಂಕ 10-9-2024 ರ ಆದೇಶವನ್ನು ಅನೂರ್ಜಿತಗೊಳಿಸುವುದು.  ಈ ಆದೇಶವು ನ್ಯಾಯಾಲಯದ ದಿನಾಂಕ 29-07-2016 ರ ಯಥಾಸ್ಥಿತಿ ಕಾಪಾಡುವಂತೆ ತಿಳಿಸುವ ಆದೇಶದ ಉಲ್ಲಂಘನೆಯಾಗಿದೆ.  ಹಾಗೂ ಬೆಂ.ಎ.ಪ್ರಾ.  ದ ಹಾಗೂ ನಿವೇಶನದಾರರ ಹಿತಕ್ಕೆ ಹಾನಿ ಉಂಟು ಮಾಡುತ್ತಿದೆ.

 3 ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ಬೆಂ.ಎ.ಪ್ರಾ.  ದ ಮೇಲಿನ ನಂಬಿಕೆ ಉಳಿಯುವಂತೆ ಮತ್ತು ತಾವೇ ಹಂಚಿಕೆ ಹೊಂದಿರುವ ನಿವೇಶನದಾರರ ಹಿತರಕ್ಷಣೆಯನ್ನು ಮಾಡುವಂತೆ ಈ ಮೂಲಕ ಕೋರಿದೆ.

 ಎಂ.  ರವಿಶಂಕರ

 ನಿವೃತ್ತ ಕರ್ನಾಟಕ ಸಾಮಾನ್ಯ ಸೇವೆಗಳು

 ಸಾಮಾಜಿಕ ಕಾರ್ಯಕರ್ತ

 ಕ್ಷುಲ್ಲಕರಾಗಿರಿ

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims