ನವೆಂಬರ್ 29 ರಿಂದಅಲ್ಟಿಮೇಟ್ ಖೋಖೋಸೀಸನ್3ಪ್ರಾರಂಭ!

 ನವೆಂಬರ್ 29 ರಿಂದಅಲ್ಟಿಮೇಟ್ ಖೋಖೋಸೀಸನ್3ಪ್ರಾರಂಭ!


ಗುರುಗ್ರಾಮ್, ಜೂನ್ 14, 2025: ಭಾರತದ ಖೋ ಖೋ ಫೆಡರೇಷನ್ (ಕೆಕೆಎಫ್‌ಐ) ಮುಂದಿನ ಮೂರನೇ ಸೀಸನ್ ಅಲ್ಟಿಮೇಟ್ ಖೋ ಖೋ (ಯುಕೆಕೆ) ಆಟಗಾರರ ಹರಾಜಿಗೆ ಮೊದಲ ಬಾರಿಗೆ ಅಂತರರಾಷ್ಟ್ರೀಯ ಆಟಗಾರರನ್ನು ಸೇರಿಸಲಾಗುವುದು ಎಂದು ಘೋಷಿಸಿದೆ. ಈ ಘೋಷಣೆಯನ್ನು KKFI ಅಧ್ಯಕ್ಷ ಶ್ರೀ ಸುಧಾಂಶು ಮಿತ್ತಲ್ ಅವರು ಜೂನ್ 13ರಂದು ಶ್ರೀ ಗುರು ಗೋಬಿಂದ್ ಸಿಂಗ್ ಟೆರ್ಸೆಂಟಿನರಿ (SGT) ವಿಶ್ವವಿದ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ


ಈ ಸುದ್ದಿಗೋಷ್ಠಿಯಲ್ಲಿ ಹರಿಯಾಣ ಸರ್ಕಾರದ ರಾಜ್ಯ ಸಚಿವ ಶ್ರೀ ಗೌರವ್ ಗೌತಮ್ ಉಪಸ್ಥಿತರಿದ್ದರು. ಕೆಕೆಎಫ್‌ಐಯು ಖೋ ಖೋವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುವ ಮತ್ತು ಹರಿಯಾಣದಲ್ಲಿ ಕ್ರೀಡಾ ಅಭಿವೃದ್ಧಿಯ ಸ್ಥಿತಿಯನ್ನು ಸುಧಾರಿಸುವ ಪ್ರಯತ್ನಗಳನ್ನು ಗೌತಮ್ ಅವರು ಪ್ರಶಂಸಿಸಿದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ ಇತರ ಗಣ್ಯರಾದ ಪ್ರೊ. ಡಾ. ಹೇಮಂತ್ ವರ್ಮಾ (SGT ವಿಶ್ವವಿದ್ಯಾಲಯದ ಕುಲಪತಿ), ಶ್ರೀ ಅಮೃತ್ ಸಿಂಗ್ ಚಾವ್ಹಾ (SGT ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು) ಮತ್ತು ಶ್ರೀ ಜವಾಹರ್ ಸಿಂಗ್ ಯಾದವ್ (ಹರಿಯಾಣ ಖೋ ಖೋ ಫೆಡರೇಶನ್ ಅಧ್ಯಕ್ಷ). ಇವರು ಖೋ ಖೋ ಆಟವನ್ನು ಹರಿಯಾಣದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುವುದಾಗಿ, ಆಟಗಾರರಿಗೆ ಹೆಚ್ಚಿನ ಸೌಲಭ್ಯಗಳು ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುವುದು ಎಂದು ಈ ಸಂಧರ್ಭದಲ್ಲಿ ತಿಳಿಸಿದ್ದಾರೆ.


ಇದೇ ಸಂದರ್ಭದಲ್ಲಿ KKFI ಮತ್ತು SGT ವಿಶ್ವವಿದ್ಯಾಲಯವು ದೇಶೀಯ ಕ್ರೀಡೆಗಳಿಗಾಗಿ ಶಿಕ್ಷಣ ಮತ್ತು ವೈಜ್ಞಾನಿಕ ಸಂಪತ್ತು ಅಭಿವೃದ್ಧಿಗೆ ಒಟ್ಟಾಗಿ ಕೆಲಸಮಾಡುವ ಉದ್ದೇಶದಿಂದ ಒಪ್ಪಂದ ಪತ್ರವೊಂದಕ್ಕೆ ಸಹಿ ಮಾಡಲಾಗಿದೆ.


ಈ ಬಗ್ಗೆ ಮಾತನಾಡಿದ ಸುಧಾಂಶು ಮಿತ್ತಲ್ 'ಖೋ ಖೋ ಭಾರತದ ಕ್ರೀಡಾ ನಾವೀನ್ಯತೆ ಮತ್ತು ಮಹತ್ವಾಕಾಂಕ್ಷೆಯ ಪ್ರತೀಕವಾಗಿದೆ. ಅಲ್ಟಿಮೇಟ್ ಖೋ ಖೋ ಸೀಸನ್ 3 ನವೆಂಬರ್ 29, 2025 ರಿಂದ ಪ್ರಾರಂಭವಾಗಲಿದೆ. ಮೊದಲ ಬಾರಿಗೆ ಲೀಗ್‌ ಗೆ ಅಂತರರಾಷ್ಟ್ರೀಯ ಆಟಗಾರರನ್ನು ಸೇರಿಸುವ ಮೂಲಕ ನಾವು ಇನ್ನೊಂದು ದೊಡ್ಡ ಹೆಜ್ಜೆ ಇಡುತ್ತಿದ್ದೇವೆ ಎಂದರು.


SGT ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ನಡೆಯುತ್ತಿರುವ ತರಬೇತಿ ಕಾರ್ಯಕ್ರಮ - ಆಡಳಿತ ಮಟ್ಟದ ತರಬೇತಿ ಶಿಬಿರ (Level III A) ಬಗ್ಗೆ ಕೂಡ ಮಾಹಿತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಭಾರತದ ವಿವಿಧ 30 ರಾಜ್ಯಗಳಿಂದ ಮತ್ತು 15ಕ್ಕೂ ಹೆಚ್ಚು ದೇಶಗಳಿಂದ ಸುಮಾರು 230ಕ್ಕೂ ಹೆಚ್ಚು ಕೋಚ್ ಗಳು ಮತ್ತು ತಾಂತ್ರಿಕ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.


2022ರಲ್ಲಿ ಆರಂಭವಾದ UKK ಈಗಾಗಲೇ ಪ್ರಖ್ಯಾತಿಯನ್ನು ಗಳಿಸಿದ್ದು ಪ್ರೋ ಕಬಡ್ಡಿ ಲೀಗ್ ಮತ್ತು ಇಂಡಿಯನ್ ಸೂಪರ್ ಲೀಗ್ ನಂತರದ ದೇಶದ ಮೂರನೇ ಅತ್ಯಧಿಕ ವೀಕ್ಷಿತ ಕ್ರೀಡಾ ಲೀಗ್ ಆಗಿದೆ. ಮೊದಲ ಸೀಸನ್ ನಲ್ಲಿ ಒಡಿಶಾ ಜಗರ್ ನಾಟ್ಸ್‌ ವಿಜೇತರಾದರೆ, 2023- 24ರಲ್ಲಿ ಗುಜರಾತ್ ಜೈಂಟ್ಸ್ ಚಾಂಪಿಯನ್ ಆಗಿದ್ದಾರೆ.


Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims