ರ್ಯಾಲಿ ಆಫ್ ಚಿಕ್ಕಮಗಳೂರು: 130ಕ್ಕೂ ಹೆಚ್ಚು ಸ್ಪರ್ಧಿಗಳ ನಡುವೆ ಮಹೇಶ್ವರನ್ ಏನ್ ಗೆ ಗೆಲುವು!

 ರ್ಯಾಲಿ ಆಫ್ ಚಿಕ್ಕಮಗಳೂರು: 130ಕ್ಕೂ ಹೆಚ್ಚು ಸ್ಪರ್ಧಿಗಳ ನಡುವೆ ಮಹೇಶ್ವರನ್ ಏನ್ ಗೆ ಗೆಲುವು!



ಚಿಕ್ಕಮಗಳೂರು, ಜೂನ್ 2, 2025: ಚಿಕ್ಕಮಗಳೂರಿನಲ್ಲಿ ನಡೆದ 2025 ರ ರ್ಯಾಲಿ ಆಫ್ ಚಿಕ್ಕಮಗಳೂರು INTSDRC-1 ಯಲ್ಲಿ ಮಹೇಶ್ವರನ್‌ಎನ್, ಸಹ-ಚಾಲಕ ಪ್ರಕಾಶ್ ಮುತ್ತುಸ್ವಾಮಿ ಅವರೊಂದಿಗೆ, ಅಸಾಧಾರಣ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದರು.


ಫೆಡರೇಷನ್ ಆಫ್ ಮೋಟಾ‌ರ್ ಸ್ಪೋರ್ಟ್ ಕ್ಲಬ್ ಆಫ್ ಇಂಡಿಯಾ (FMSCI) ಆಯೋಜಿಸಿದಭಾರತೀಯನ್ಯಾಷನಲ್ ಟೈಮ್ ಸ್ಪೀಡ್ ಡಿಸ್ಟನ್ಸ್‌ ರ್ಯಾಲಿಚಾಂಪಿಯನ್ ಶಿಪ್ (4W) 2025ರ ಮೊದಲ ಅರ್ಹತಾ ಸುತ್ತಾಗಿ ಈರ್ಯಾಲಿ ನಡೆಯಿತು. ಒಟ್ಟು ಎಂಟುವಿಭಾಗಗಳಲ್ಲಿ 130ಕ್ಕೂ ಹೆಚ್ಚು ಕಾರುಗಳು ಭಾಗವಹಿಸಿದ ಈಸುತ್ತು, ಚಾಂಪಿಯನ್ ಶಿಪ್ ಇತಿಹಾಸದಲ್ಲೇ ಗರಿಷ್ಠ ಭಾಗವಹಿಸುವಿಕೆ ದಾಖಲಿಸಿದೆ.


ಇತರ ವಿಭಾಗಗಳ ವಿಜೇತರಲ್ಲಿ ಎ ವಿನೋದ್ (INTSDRC-2), ಅಪರ್ಣಾ ಪಠಕ್ (ಮಹಿಳಾ ಮತ್ತು ಕರ್ನಾಟಕ ರಾಜ್ಯ ವಿಭಾಗಗಳು), ವಿನಯ್ ಪ್ರಸನ್ನ (ಪ್ರೋಸ್ಟಾಕ್), ಭವಾನಿ ಬಾಲಕೃಷ್ಣನ್ (ಕಪಲ್‌ ಮತ್ತು ಸೂಪ‌ರ್ ಕಾರ್‌ವಿಭಾಗಗಳು) ಸೇರಿದ್ದರು.


INTSDRC-1 ವಿಭಾಗದಲ್ಲಿ ಮಹೇಶ್ವರನ್ ಎನ್ ಮತ್ತು ಪ್ರಕಾಶ್‌ ಮುತ್ತುಸ್ವಾಮಿ ಪ್ರಥಮಸ್ಥಾನದಲ್ಲಿದ್ದು ಎರಡನೇ ಸ್ಥಾನದಲ್ಲಿದ್ದ ತಂಡಕ್ಕಿಂತ ಸುಮಾರು ಒಂದು ನಿಮಿಷ ಮುನ್ನಡೆಯಿದ್ದರು. ಸಂತೋಷ್ ಕುಮಾ‌ರ್ ವಿಮತ್ತು ಟಿ. ನಾಗರಾಜನ್‌ಎರಡನೇಸ್ಥಾನದಲ್ಲಿದ್ದು ಗಣೇಶ್ ಮೂರ್ತಿ ಮತ್ತು ಚಂದ್ರಶೇಖರ್ ಮೂರನೇ ಸ್ಥಾನಪಡೆದರು.


INTSDRC-2ವಿಭಾಗದಲ್ಲಿ ಎ ವಿನೋದ್ ಮತ್ತು ಎನ್ ಮುರುಗನ್ ಮೊದಲ ಸ್ಥಾನ ಪಡೆದರೆ, ಮಂಜುಜೈನ್ ಮತ್ತು ಡಿಂಕಿ ವರ್ಗೀಸ್ ಎರಡನೇ ಸ್ಥಾನ ಹಾಗೂ ರಾಹೀಲ್ ಅಹ್ಮದ್ ಮತ್ತು ಸಕಾಯನಕುಮಾ‌ರ್ ಮೂರನೇ ಸ್ಥಾನ ಪಡೆದುಕೊಂಡರು


ಮಹಿಳಾ ವಿಭಾಗದಲ್ಲಿ ಅಪರ್ಣಾ ಪಠಕ್ ಮತ್ತು ಲಲಿತಾ ಗೌಡ ತಂಡ ಒಂದುಗಂಟೆಗೂ ಹೆಚ್ಚು ಮುನ್ನಡೆಯೊಂದಿಗೆ ಗೆಲುವು ಸಾಧಿಸಿತು. ಕ್ಷಮತಾ ಮತ್ತು ಅಮೋಲ್ ತಂಡ ಎರಡನೇ ಸ್ಥಾನ ಪಡೆದರೆ, ವ ಪಠಕ್ ಮತ್ತು ರಾಮುಚಂದ್ರ ಮೂರನೇ ಸ್ಥಾನ ಪಡೆದರು.


ಪ್ರೋಸ್ಟಾಕ್ ವಿಭಾಗದಲ್ಲಿ ವಿನಯ್ ಪ್ರಸನ್ನ ಮತ್ತು ಅದಿ ಆಂಥನಿ ಮೊದಲಸ್ಥಾನದಲ್ಲಿದ್ದರು. ಡಿಕೀರ್ತಿ ಪ್ರಸಾದ್‌ ಮತ್ತು ಸಿ ಸಬ್ಸಿವೇಲ್‌ ಎರಡನೇ ಸ್ಥಾನ, ವಿನಯ್‌ ಕುಮಾರ್‌ಎಂಮತ್ತು ವೈಅರುಣ್ ಮೂರನೇ ಸ್ಥಾನಪಡೆದರು.


ಕಪಲ್ ವಿಭಾಗದಲ್ಲಿ ಭವಾನಿ ಬಾಲಕೃಷ್ಣನ್ ಮತ್ತು ಆನಂದರಾಜ್ ಎಸ್ 6 ನಿಮಿಷಗಳ ಮುನ್ನಡೆಯೊಂದಿಗೆ ಜಯ ಸಾಧಿಸಿದರು.ಶ್ರುತಾ ಜಯಂತ್ ಮತ್ತು ಜಯಂತ್ ಎಂಜೈನ್ ಎರಡನೇ ಸ್ಥಾನ, ರಾವಮಿ ಮಾಬೆಲ್ ಮತ್ತು ವಿನೋತ್ ಕುಮಾರ್‌ಮೂರನೇ ಸ್ಥಾನ ಪಡೆದರು.


ಸೂಪರ್‌ಕಾರ್‌ ವಿಭಾಗದಲ್ಲೂ ಭವಾನಿ ಬಾಲಕೃಷ್ಣನ್ ಮತ್ತು ಆನಂದರಾಜ್ಎಸ್ ಮೊದಲ ಸ್ಥಾನ ಪಡೆದರೆ, ಕರ್ನಾಟಕ ರಾಜ್ಯ ವಿಭಾಗದಲ್ಲಿ ಅಪರ್ಣಾ ಪಠಕ್ ಮತ್ತು ಲಲಿತಾ ಗೌಡ ಮೊದಲ ಸ್ಥಾನ ಪಡೆದರು. ನಾನು ಜಾನ್‌ ಮತ್ತು ಡಿಂಕಿ ವರ್ಗೀಸ್‌ ದ್ವಿತೀಯಸ್ಥಾನಹಾಗೂ ರಾಹೀಲ್ ಅಹ್ಮದ್ ಮತ್ತು ಸರವಣ ಕುಮಾರ್ ತೃತೀಯ ಸ್ಥಾನದಲ್ಲಿ ಸ್ಪರ್ಧೆಯನ್ನು ಮುಗಿಸಿದರು.


ಚಿಕ್ಕಮಗಳೂರಿನ ಮೋಟಾರ್ ಸ್ಪೋರ್ಟ್ಸ್ ಕ್ಲಬ್ (MSCC) ಆಯೋಜಿಸಿದ್ದ ಈ ಇವೆಂಟ್ ನ್ನು ಜೆಕೆಟೈರ್ ಮೋಟಾರ್ ಸ್ಪೋರ್ಟ್ಸ್ ಸಹಯೋಗದಲ್ಲಿ ಹಾಗೂ ವಾಮ್ಮಿ ಮೆರ್ಲಾ ಸ್ಪೋರ್ಟ್ಸ್ ಫೌಂಡೇಶನ್ ಸಹ ಪ್ರಾಯೋಜಕತ್ವದಲ್ಲಿ ನಡೆಸಲಾಯಿತು. ಸೌತ್ ರೋನ್ ನರೌಂಡ್ 1 ತಜ್ಞರು ಹಾಗೂ ಹೊಸ ಪ್ರತಿಭೆಗಳನ್ನು ಒಟ್ಟುಗೂಡಿಸಿ, ಸುಂದರ ಆದರೆ ತಾಂತ್ರಿಕವಾಗಿ ಸವಾಲುಗಳಿರುವ ಚಿಕ್ಕಮಗಳೂರಿನ ಹಾದಿಗಳನ್ನು ನವೀನ ಧೈರ್ಯದಿಂದ ನವಿರಾಗಿ ನಿರ್ವಹಿಸಲು ಪೂರಕವಾಗಿದೆ.


Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims