ವೇತನ ಅನುದಾನದ ಭರವಸೆಗೆ ಒಳಪಟ್ಟು ಸಂಘ ಸಂಸ್ಥೆಗಳು, ಐಟಿಐಗಳನ್ನು ಸ್ಥಾಪನೆ ಮಾಡಿವೆ. ಬಿ.ಇ., ಡಿಪ್ಲೋಮಾ ವಿದ್ಯಾರ್ಹತೆಯ ತಾಂತ್ರಿಕ ಸಿಬ್ಬಂ
ವೇತನ ಅನುದಾನದ ಭರವಸೆಗೆ ಒಳಪಟ್ಟು ಸಂಘ ಸಂಸ್ಥೆಗಳು, ಐಟಿಐಗಳನ್ನು ಸ್ಥಾಪನೆ ಮಾಡಿವೆ. ಬಿ.ಇ., ಡಿಪ್ಲೋಮಾ ವಿದ್ಯಾರ್ಹತೆಯ ತಾಂತ್ರಿಕ ಪತ್ರಿಕಾ ಪ್ರಕಟಣೆ
ರಾಜ್ಯ ಸರ್ಕಾರದ 1997ರ ವೇತನ ಅನುದಾನದ ಭರವಸೆಗೆ ಒಳಪಟ್ಟು ಸಂಘ ಸಂಸ್ಥೆಗಳು, ಐಟಿಐಗಳನ್ನು ಸ್ಥಾಪನೆ ಮಾಡಿವೆ. ಬಿ.ಇ., ಡಿಪ್ಲೋಮಾ ವಿದ್ಯಾರ್ಹತೆಯ ತಾಂತ್ರಿಕ ಸಿಬ್ಬಂದಿಗೆ ಕನಿಷ್ಠ 7 ವರ್ಷ ಪೂರೈಸಿದ ನಂತರ ದೇತನಾನುದಾನ ದೊರೆಯುವುದೆಂದು ತಿಳಿಸಿವೆ. ಹಾಗಾಗಿ ತಾಂತ್ರಿಕ ಸಿಬ್ಬಂದಿಗಳು ಅನ್ಯ ಉದ್ಯೋಗಗಳನ್ನು ಆರಸದೆ ಐ.ಟಿ.ಐ.ಗಳನ್ನು ನೆಚ್ಚಿಕೊಂಡು ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿ ಕೋರ್ಸ್‌ಗಳ ತರಬೇತಿ ನೀಡಿ ಉದ್ಯೋಗಕ್ಕೆ ದಾರಿ ಮಾಡಿಕೊಟ್ಟಿರುತ್ತಾರೆ. ಸರ್ಕಾರದ ಈ ಆದೇಶ ಬಲದಿಂದ 2 ಸಾವಿರ ಇಸವಿ ನಂತರ ಸುಮಾರು 800 ಐ.ಟಿ.ಐ.ಗಳು ರಾಜ್ಯದಲ್ಲಿ ಸ್ಥಾಪನೆಯಾಗಿವೆ. ಈ ನಡುವೆ ಸರ್ಕಾರ 1997ರ ಈ ಆದೇಶವನ್ನು 2010ರಲ್ಲಿ ಹಿಂಪಡೆದು ಇದರ ಪೂರ್ವದಲ್ಲಿ ಸ್ಥಾಪನೆಯಾಗಿರುವ ಐ.ಟಿ.ಐ. ಸಂಸ್ಥೆಗಳನ್ನು ಸಿಬ್ಬಂದಿಗಳನ್ನು ಆತಂತ್ರಗೊಳಿಸಿದೆ. ಈ ವೇತನ ಅನುದಾನಕ್ಕೆ ಪರ್ಯಾಯವೆಂದು ವಿದ್ಯಾರ್ಥಿ ಕೇಂದ್ರಿತ ಅನುದಾನಕ್ಕೆ ಆದೇಶಿಸಲಾಗಿದೆ. ಆದರೆ ಇದನ್ನು ಐ.ಟಿ.ಐ. ಸಂಸ್ಥೆಗಳು, ಸಿಬ್ಬಂದಿಗಳು ತಿರಸ್ಕರಿಸಿದ್ದಾರೆ.
ಇನ್ನು 2018ರಲ್ಲಿ 456 ಐಟಿಐಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಅಂದಿನ ಮಾನ್ಯ ಕೌಶಲ್ಯಾಭಿವೃದ್ಧಿ ಸಚಿವರಾದ ಸನ್ಮಾನ್ಯ ಶ್ರೀ ಸಂತೋಷ್ ಲಾಡ್ ರವರು ಪರಿವೀಕ್ಷಣೆ ನಡೆಸಿ ರೂ. 125 ಕೋಟಿ ಬಜೆಟ್ ಗಾತ್ರವನ್ನು ಸಿದ್ದಪಡಿಸಿದ್ದರು. ಆದರೂ ಅನುದಾನ ದೊರೆಯಲೇ ಇಲ್ಲ. ಕಳೆದ ವರ್ಷ ವಿಧಾನಸೌಧದ ಮುಂಭಾಗದಲ್ಲಿ ಜರುಗಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಸರ್ಕಾರ ಇನ್ನೂ ಮೀನಾಮೇಷ ಏಣಿಸುತ್ತಿದೆ.
ಇಂದು ಐಟಿಐ ತರಬೇತಿ ಪಡೆದಂತಹ ಯುವಕರು ವಿವಿದೆಡೆ ಉದ್ಯೋಗವನ್ನು ಹೊಂದಿ ಉತ್ತಮ ಜೀವನ ಸಾಗಿಸುತ್ತಿದ್ದಾರೆ. ಆದರೆ ಖಾಸಗಿ ಐಟಿಐಗಳ ಸಿಬ್ಬಂದಿಗಳ ಜೀವನ ಸಂಕಷ್ಟಕ್ಕೆ ಸಿಲುಕಿವೆ. ಇನ್ನೂ ಖಾಸಗಿ ಐಟಿಐಗಳ ಅನುದಾನ ನೀತಿಯೇ ಬೇರೆ ಇದೆ. ಇದನ್ನು ಖಾಸಗಿ ಶಾಲಾ ಕಾಲೇಜುಗಳ ಅನುದಾನ ನೀತಿಗೆ ಹೋಲಿಸುವಂತಿಲ್ಲ, ಖಾಸಗಿ ಐಟಿಐಗಳ ಸ್ಥಾಪನೆ ಕಾಲದಲ್ಲಿ ಅನುದಾನ ರಹಿತವಾಗಿ ನಡೆಸಬೇಕೆಂಬ ಷರತ್ತು ಇರುವುದಿಲ್ಲ. ಇದು ಐಟಿಐ ಶಿಕ್ಷಣದ ಮಹತ್ವವನ್ನು ತಿಳಿಸುತ್ತದೆ. ಇದನ್ನು ನೋಡಿಯಾದರು ಸರ್ಕಾರ ಕೂಡಲೇ ವೇತನಾನುದಾನ ಸಂಹಿತೆಯನ್ನು ಮರು ಜಾರಿಗೊಳಿಸಬೇಕೆಂದು ನಮ್ಮ ಸಂಘವು ಆಗ್ರಹಿಸುತ್ತಿದೆ.
ಎಸ್.ಎಂ.ನರಬೆಂಚ
ಅಧ್ಯಕ್ಷರು

Comments
Post a Comment