ರಾಜ್ಯದ ಮಹಾ ನಗರ ಪಾಲಿಕೆ. ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತಿ ಗಳಲ್ಲಿಕೆಲಸ ಮಾಡುವ ನೀರುಸರಬರಾಜು ನೌಕರರು ನೇರ ನೇಮಕಾತಿ/ನೇರ ಪಾವತಿಗೆ ಒತ್ತಾಯಿಸಿ ಅನಿರ್ದಿಷ್ಟ ಮುಷ್ಕರ ಮಾಡುವ ಕುರಿತು.
ರಾಜ್ಯದ ಮಹಾ ನಗರ ಪಾಲಿಕೆ. ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತಿ ಗಳಲ್ಲಿಕೆಲಸ ಮಾಡುವ ನೀರುಸರಬರಾಜು ನೌಕರರು ನೇರ ನೇಮಕಾತಿ/ನೇರ ಪಾವತಿಗೆ ಒತ್ತಾಯಿಸಿ ಅನಿರ್ದಿಷ್ಟ ಮುಷ್ಕರ ಮಾಡುವ ಕುರಿತು.
ಮೆಲ್ಕಂಡ ವಿಷಯಕ್ಕೆ ಸಬಂಧಿಸಿದ್ದಂತೆ ಕರ್ನಾಟಕರಾಜ್ಯದ ಮಹಾನಗರಪಾಲಿಕೆ. ನಗರಸಭೆ. ಪುರಸಭೆ. ಪಟ್ಟಣಪಂಚಾಯತಿಗಳಲ್ಲಿ ಕೆಲಸ ಮಾಡುವ ನಮ್ಮ ನೀರುಸರಬರಾಜು ನೌಕರರಿಗೆ ಕಳೆದ 20-25ವರ್ಷಗಳಿಂದ ಯಾವುದೇ ಸೇವಾ ಸೌಲಭ್ಯ ನೀಡದ ಸರ್ಕಾರ ನಮ್ಮ ನೌಕರರನ್ನು ಶೋಷಣೆ ಮಾಡುತ್ತಿದ್ದು. ಈ ಕುರಿತು ಸಾಕಷ್ಟುಬಾರಿ ಸರ್ಕಾರದಲ್ಲಿ ಅಂಗಲಾಚಿ ಬೇಡಿಕೊಂಡರು ನಮ್ಮ ನೌಕರರನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದೆ. ಅವರಜೊತೆಯಲ್ಲಿ ಕೆಲಸಮಾಡುವ ಮತ ಸಾರ್ವಜನಿಕರಿಗೆ ಅತ್ಯಮೂಲ್ಯವಾಗಿ ನಿತ್ಯ ಜೀವನಕ್ಕೆ ಅತಿಅವ್ಯಶಕವಾಗಿ ಬೇಕಾಗಿರುವ ನೀರನ ಒದಗಿಸುತ್ತಿರುವ ನಮಗೆಮಾತ್ರ ಇದುವರೆಗೂ ಒಂದುಬಾರಿಯೂ ವಿಶೇಷನೇಮಕಾ ಮಾಡಿರುವುದಿಲ್ಲ. ಅಸ್ಟೇಏಕೆ ನೇರಪಾವತಿಯು ಸಹಾಮಾಡದೆ ನಮ್ಮನ್ನು ಜೀತಪದ್ಧತಿ ಮಾದರಿಯ ನಮ್ಮನ್ನ ಕಡೆಗಣಿಸಿದ್ದಾರೆ. ನಾವು ಮಾನ್ಯಮುಖ್ಯಮಂತ್ರಿಯವರಿಗೆ. ಸಂಬಂಧಪಟ್ಟ ಸಚಿವರುಗಳ ಮತ್ತು ಅಧಿಕಾರಿಗಳಿಗೆ. ಅನೇಕಬಾರಿ ಮನವಿ ಮಾಡಿ ಮಾಡಿ ಎಲ್ಲಾ ರೀತಿಯಲ್ಲೂ ಸಾಕಾಗಿದೆ.
ಇಲ್ಲಿ ನಿಮ್ಮ ಗಮನಕ್ಕೆ ಒಂದನ್ನು ಹೇಳಲು ಬಯಸುತ್ತಾ ಇದ್ದೇನೆ, ಅದೇನಂದರೆ ಈಗಾಗಲೇ (C&R) ನಲ್ಲಿ ನಮ್ಮಗಳ ಹುದ್ದೆಗಳು ಖಾಲಿ ಇದ್ದು ಇದಕ್ಕೆ ಸಂಬಂಧಿಸಿದಂತೆ ಮಾನ್ಯ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಇಲಾಖೆಯ ಅಧಿಕಾರಿಗಳು, ಮತ್ತು ಪೌರಾಡಳಿತ ನಿರ್ದೇಶಕರು, ಒಳಗೊಂಡಂತೆ ದಿ:23/08/2018 ರಂದು ನಮ್ಮ ನೀರು ಸರಬರಾಜು ನೌಕರರಿಗೂ ಸಹಾ ಪೌರಕಾರ್ಮಿಕರಂತೆ ವಿಶೇಷ ನೇಮಕಾತಿ/ನೇರಪಾವತಿ ಮಾಡುವ ಸಂಬಂಧ ನಡವಳಿ(ಕಡತದ : UDD.44.TMS.2018) ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಮುನ್ಸಿಪಾಲಿಟಿಗಳಿಗೆ ಪತ್ರದಮುಖೇನ ನಮ್ಮಗಳ ಸಂಪೂರ್ಣ ಮಾಡಿ ಸದರಿವಿಷಯಕ್ಕೆ ಮಾಹಿತಿಯನ್ನು ಪಡೆದುಕೊಂಡು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವುದು ಸರಿಯಷ್ಟೆ. ಸದರಿ ಕಡತವನ್ನು ಮಾನ್ಯ ಆರ್ಥಿಕ ಇಲಾಖೆಯು ನೀರುಸರಬರಾಜು ನೌಕರರಿಗೆ ಪ್ರಸ್ತುತ ಕನಿಷ್ಠ ವೇತನದಲ್ಲೇ ಮುಂದುವರೆಸುವುದು ಎಂದು ಕಡತವನ್ನು ನಗರಾಭಿವೃದ್ಧಿ ಇಲಾಖೆಗೆ ವಾಪಸು ಕಳಿಸಿರುತ್ತಾರೆ. ನಂತರ ನಾವುಗಳು ಸದ್ಯಕ್ಕೆ ನೇರಪಾವತಿಯಾದರು ಆದೇಶಮಾಡಿ ಎಂದು ಕಾರ್ಯದರ್ಶಿಯವರಲ್ಲಿ ಮನವಿಮಾಡಲಾಗಿ ಸದರಿ ನೇರಪಾವತಿ ಮಾಡಲು ಕಡತವನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿ. ಈ ಕಡತವನ್ನು ನೌಕರರ ಮಾಹಿತಿಯೊಂದಿಗೆ ಮರುಪ್ರಸ್ತಾವನೆ ಸಲ್ಲಿಸಲು ದಿ: 05/10/2024ರಂದು ನಗರಾಭಿವೃದ್ಧಿ ಇಲಾಖೆಗೆ ಆರ್ಥಿಕ ಇಲಾಖೆಯು ಕಡತವನ್ನು ವಾಪಸ್ಸು ಸಲ್ಲಿಸಿದ್ದು ಈ ಕಡತ ಪೌರಾಡಳಿತ ನಿರ್ದೇಶನಾಲಯಕ್ಕೆ ಬಂದು 6 ತಿಂಗಳಾಗಿದ್ದರು ಇದುವರೆಗೂ ಕ್ರಮ ಜರುಗಿಸಿರುವುದಿಲ್ಲ.ಮತ್ತು ಮಹಾನಗರ ಪಾಲಿಕೆಯ ಕಡತ (ಸಂಖ್ಯೆ:UDD/56/MNE/2023 COM-1038523)ವು ಸಹಾ ಆರ್ಥಿಕ ಇಲಾಖೆಯಿಂದ ನಗರಾಭಿವೃದ್ಧಿ ಇಲಾಖೆಗೆ ಸಮಿತಿ ರಚನೆ ಮಾಡಿ ಮರುಪ್ರಸ್ತಾವನೆ ಸಲ್ಲಿಸಲು ತಿಳಿಸಿ ಕಡತವಾಪಸ್ ಮಾಡಿ ಸರಿಸುಮಾರು 8-9ತಿಂಗಳಾಗಿದ್ದರು ಇದುವರೆಗೂ ಕ್ರಮ ಕೈಗೊಂಡಿರುವುದಿಲ್ಲ, ಇಷ್ಟೊಂದು ಶೋಷಣೆ ಆಗುತ್ತಿದ್ದರು ನಮ್ಮ ನೀರು ಸರಬರಾಜು ನೌಕರರು ಸಾರ್ವಜನಿಕರ ಹಿತದೃಷ್ಟಿಯಿಂದ ಇದುವರೆಗೂ ಯಾವುದೇ ಸಂದರ್ಭದಲ್ಲಿಯೂ ಸಹಾ ನೀರು ಸರಬರಾಜು ಸ್ಥಗಿತಗೊಳಿಸಿ ಮುಷ್ಕರ ಮಾಡಿರುವುದಿಲ್ಲ. ಆದರೆ ನಮ್ಮ ನೌಕರರ ಮತ್ತು ಅವರ ಕುಟುಂಬಗಳ ಸೇವಾ ಭದ್ರತೆಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಅನಿವಾರ್ಯವಾಗಿ ಇದುವರೆಗೂ ಇಷ್ಟು ಸಮಯ ನೀಡಿದರು ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಯಾದ ನೇರಪಾವತಿ/ನೇರನೇಮಕಾತಿ ಈಡೇರಿಸಲಿಲ್ಲ. ಆದುದರಿಂದ ನಾವುಗಳು ದಿ:18/6/2025 ರಂದುಮುಷ್ಕರ ಮಾಡಲು ನಮ್ಮಸಂಘದ ಪದಾಧಿಕಾರಿಗಳೆಲ್ಲರೂ ತೀರ್ಮಾನಿಸಿದ್ದು. ಈ ನಮ್ಮ ಮುಷ್ಕರಕ್ಕೆ ಜನ ಪ್ರತಿನಿಧಿಗಳು. ಸಾರ್ವಜನಿಕರು ಅನ್ಯತಾ ಭಾವಿಸದೆ ಸಹಕರಿಸಬೇಕಾಗಿ ಹಾಗೂ ಸಾರ್ವಜನಿಕರು ಮತ್ತು ಮಾಧ್ಯಮ ಮಿತ್ರರಾದ ತಾವುಗಳು ನಮ್ಮ ನೌಕರರ ನೇರ ನೇಮಕಾತಿ/ನೇರಪಾವತಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕಾಗಿ ಈ ಮೂಲಕ ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ.
(ಪಾವಗಡ ಶ್ರೀರಾಮ್) ಸಂಸ್ಥಾಪಕ ಅಧ್ಯಕ್ಷರು

Comments
Post a Comment