ಪ್ರತಿಯೊಬ್ಬರೂ ಪ್ರೀತಿ ವಿಶ್ವಾದಿಂದ ಬದುಕ ಬೇಕು- ನ್ಯಾ.ವೆಂಕಟಾಚಲಯ್ಯ,
ಪ್ರತಿಯೊಬ್ಬರೂ ಪ್ರೀತಿ ವಿಶ್ವಾದಿಂದ ಬದುಕ ಬೇಕು- ನ್ಯಾ.ವೆಂಕಟಾಚಲಯ್ಯ,
ಬಿ.ಕೆ.ಗಿರೀಶ್ ಉಪ್ಪಾರ ಹುಟ್ಟು ಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ.
ಬೆಂಗಳೂರು ಮೇ 28; ಪ್ರತಿಯೊಬ್ಬರೂ ಪ್ರೀತಿ ಸ್ನೇಹ ಬಾಂಧವ್ಯದಿಂದ ಬದುಕಬೇಕು ಆಗ ಮಾತ್ರ ಜೀವನ ಸಾರ್ಥಕವಾಗಲಿದೆ ಎಂದು ಸುಪ್ರೀಮ್ ಕೋರ್ಟ್ ನಿವೃತ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ತಿಳಿಸಿದರು.
ಗಿರೀಶ್ ಉಪ್ಪಾರ್ ಚಾರಿಟಬಲ್ ಟ್ರಸ್ಟ್ ,ರಾಜ್ಯ ಉಪ್ಪಾರ ಸಂಘ,ರಾಜ್ಯ ಉಪ್ಪಾರ ಮಹಾಸಭಾ ವತಿಯಿಂದ ರಾಜ ಋಷಿ ಭಗೀರಥ ಮಹರ್ಷಿಗಳ ಜಯಂತೋತ್ಸವ ಮತ್ತು ಗಿರೀಶ್ ಉಪ್ಪಾರ ಹುಟ್ಟು ಹಬ್ಬದ ಪ್ರಯುಕ್ತ ದಂಪತಿಗಳಿಗೆ ಸನ್ಮಾನ ಮಾಡಿ ಮಾತನಾಡಿದ ಅವರು,ಕೋವಿಡ್ ಸಂದರ್ಭದಲ್ಲಿ ಎಷ್ಟೇ ಸಂಪತ್ತಿದ್ದರೂ ಶ್ರೀಮಂತರಾಗಿದ್ದರೂ ಜನರು ಸಾವನ್ನಪ್ಪಿದ್ದಾರೆ ಆದ್ದರಿಂದ ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಪ್ರೀತಿ ವಿಶ್ವಾಸದಿಂದ ಬದುಕು ಬೇಕು ಎಂದು ಹೇಳಿದರು.
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ,ಸಮಾಜದ ಪರವಾಗಿ,ಬಡವರ ಪರವಾಗಿ ಗಿರೀಶ್ ಉಪ್ಪಾರ್ ಅವರು ಶ್ರಮಿಸುತ್ತಿದ್ದಾರೆ,ರಾಜ್ಯದಲ್ಲಿ ಉಪ್ಪಾರ ಸಮುದಾಯ ನಿರ್ಣಾಯಕ ಪಾತ್ರವಹಿಸುತ್ತಿದೆ,ರಾಜಕೀಯ ವಾಗಿ ಉಪ್ಪಾರ ಸಮಾಜ ಮುಂದೆ ಬರಬೇಕೆಂಬುದು ನಮ್ಮ ಉದ್ದೇಶವಾಗಿದೆ,ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕಾಲದಲ್ಲಿ ಉಪ್ಪಾರ ಸಮುದಾಯಕ್ಕೆ ಉತ್ತಮ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿ ತರುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.
ಬಿ.ಕೆ.ಗಿರೀಶ್ ಉಪ್ಪಾರ ಮಾತನಾಡಿ,ಬರುವ ನವೆಂಬರ್ ನಲ್ಲಿ ಬಾರೀ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಾರೀ ದೊಡ್ಡ ಪ್ರಮಾಣದ ಉಪ್ಪಾರ ಸಮಾವೇಶ ಏರ್ಪಡಿಸಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಸವದತ್ತಿಯ ವಸಿಷ್ಠ ಆಶ್ರಮದ ಭಾರ್ಗವನಂದಗಿರಿ ಮಹಾಸ್ವಾಮೀಜಿ ಮಾತನಾಡಿ,
ಸವದತ್ತಿಯ ವಸಿಷ್ಠ ಆಶ್ರಮದ ಭಾರ್ಗವನಂದಗಿರಿ ಮಹಾಸ್ವಾಮೀಜಿ ಮಾತನಾಡಿ,ಹಿಂದೂ ಧರ್ಮಕ್ಕೆ ಯಾವುದೇ ಸಂದರ್ಭದಲ್ಲಿನ ದಕ್ಕೆ ಬಂದಾಗ ಶರಣರು,ಸ್ವಾಮೀಜಿಗಳು ಮುಂದೆ ಬರಬೇಕು,ಪ್ರಧಾನಿ ನರೇಂದ್ರ ಮೋದಿಯವರು ರಾಮನ ಅವತಾರದಲ್ಲಿ ದೇಶದಲ್ಲಿ ಉದ್ಬವಿಸಿದ್ದಾರೆ,ಇಡೀ ದೇಶದಲ್ಲಿ ಉಪ್ಪಾರ ಸಮಾಜ ಹದಿಮೂರು ಕೋಟಿಯಷ್ಟು ಜನಸಂಖ್ಯೆಯಿದ್ದು,ಉಪ್ಪಾರ ಸಮಾಜದಲ್ಲಿ ಇನ್ನಷ್ಟು ಜಾಗೃತಿ,ಅರಿವು ಅಗತ್ಯವಾಗಿದೆ ಎಂದರು.
ಚಿತ್ತಾಪುರದ ಅಖಿಲ ಭಾರತ ಉಪ್ಪಾರ ಗುರುಪೀಠ ರಾಂಪುರ ಹಳ್ಳಿಯ ಭಗೀರಥಾನಂದಪುರಿ ಸ್ವಾಮೀಜಿ,ಸುರಗೂರು ಅಯ್ಯನ ಮಠದ ಮಹದೇವಯ್ಯ ಮಹಾಸ್ವಾಮಿ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಗಿರೀಶ್ ಉಪ್ಪಾರ ಹುಟ್ಟು ಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ಬಟ್ಟೆಗಳನ್ನು ವಿತರಿಸಲಾಯಿತು.

Comments
Post a Comment