ರಾಯಚೂರಿನ ಮಾನವಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ; ದಲಿತ ಸೇನೆಯಿಂದ ಬೃಹತ್ ಪ್ರತಿಭಟನೆ.
ರಾಯಚೂರಿನ ಮಾನವಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ; ದಲಿತ ಸೇನೆಯಿಂದ ಬೃಹತ್ ಪ್ರತಿಭಟನೆ.
ಬೆಂಗಳೂರು.ಮೇ 28; ರಾಯಚೂರು ಜಿಲ್ಲೆಯ ಮಾನವಿ ಹಾಗೂ ಅಕರೇರಾ ತಾಲೂಕಿನ ಹಿಂದೂಸ್ತಾನ ಸ್ಟೋನ್ ಕ್ರಷರ್ ಪ್ರೈ.ಲಿ ಕಂಪನಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿರುವುದು ಸಾಬಿತಾಗಿದ್ದು, ತಕ್ಷಣ ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಬೇಕು, ಗಣಿ ಮತ್ತು ಭೂ ವಿಜ್ಞಾನಿ ಅಧಿಕಾರಿ ಪುಷ್ಪಲತಾ ಇವರನ್ನು ಅಮಾನತು ಮಾಡಬೇಕು ಹಾಗೂ ಅಕ್ಟರ್ ಪಾಷಾ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸರಕಾರಕ್ಕೆ ವಂಚನೆ ಮಾಡಿರುವ ರಾಜಧನವನ್ನು ಸರಕಾರದ ಖಜಾನೆಗೆ ಪುನಃ ಪಾವತಿಸಬೇಕು ಎಂದು ದಲಿತಾ ಸೇನೆಯವತಿಯಿಂದ ಬೃಹತ್ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ದಲಿತ ಸೇನೆಯ ರಾಜ್ಯಾಧ್ಯಕ್ಷ ಖಾಲೀದ್ ಖಾನ್ ಮಾತನಾಡಿ,
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೋಟಿಸ್‌ಗಳ ಪ್ರಕಾರ 81,281 ವಿದ್ಯುತ್ ಯೂನಿಟ್‌ನ್ನು ಬಳಸಿ ಸರಕಾರಕ್ಕೆ ಕೇವಲ 2000 ಮೆಟ್ರಿಕ್ ಟನ್ ರಾಜಧನ ಪಾವತಿಸಲಾಗಿದೆ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಲ್ಲು ಗಣಿಗಾರಿಕೆಯ ಮಾಲೀಕನಿಗೆ ಮೂರು ಭಾರೀ ನೋಟಿಸ್‌ಗಳನ್ನು ನೀಡಲಾಗಿದೆ, 81281 ಯೂನಿಟ್ ವಿದ್ಯುತ್‌ಗೆ 15512 ಮೆಟ್ರಿಕ್ ಟನ್ ಎಂ.ಸ್ಯಾಂಡ್ ಹಾಗೂ ಕಲ್ಲುಪುಡಿ ಉತ್ಪಾದನೆಯಾಗುತ್ತಿದ್ದು, ಆದರೆ ಕಲ್ಲುಗಣಿ ಗುತ್ತಿಗೆಯ ಮಾಲಿಕ ಕೇವಲ 2000 ಮೆಟ್ರಿಕ್ ಟನ್ ರಾಜಧನ ಪಾವತಿಸಿದ್ದು, ಉಳಿದ 13512 ಮೆಟ್ರಿಕ್ ಟನ್ ರಾಜಧನ ಪಾವತಿಸಿಲ್ಲ, ಈ ಹಿನ್ನಲೆಯಲ್ಲಿ ಮೇ ಮೂರರಂದು ಕಾಟಾಚರಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸರಕಾರಕ್ಕೆ ಹಾನಿ ಮಾಡಿದ್ದಾರೆ ಎಂದು ಪತ್ರ ಕೊಟ್ಟು ತಾತ್ಕಾಲಿಕವಾಗಿ ಕಲ್ಲು ಗಣಿಕಾರಿಕೆಯನ್ನು ರದ್ದು ಮಾಡಿರುತ್ತಾರೆ, ಎಲ್ಲಾ ಅಕ್ರಮಗಳು ಸಾಬಿತಾಗಿದ್ದರೂ ಆಕ್ರಮವನ್ನು ತಡೆಯಲು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದರು.
ಮಾನವಿ ಹಾಗೂ ಅರಕೇರಾ ತಾಲೂಕಿನಲ್ಲಿರುವ ಹಿಂದೂಸ್ತಾನ ಸ್ಟೋನ್ ಕ್ರಷರ್ ಪ್ರೈ.ಲಿ ಕಂಪನಿ ಮತ್ತು ಎಸ್.ಎ.ಪಿ ಕಂಪನಿ, ವಿರುದ್ಧ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿದ್ದು ಸಾಬೀತಾಗಿದ್ದು ಕಂಪನಿಯನ್ನು ತಕ್ಷಣವೇ ಕಪ್ಪು ಪಟ್ಟಿಗೆ ಹಾಕಬೇಕು ಗಣಿ ಮತ್ತು ಭೂ ವಿಜ್ಞಾನಿ ಅಧಿಕಾರಿಯಾದ ಪುಷ್ಪಲತ ಇವರನ್ನು ಅಮಾನತು ಮಾಡಬೇಕು ಹಾಗೂ ಅಕ್ಟರ್ ಪಾಷಾ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸರಕಾರಕ್ಕೆ ವಂಚನೆ ಮಾಡಿರುವ ರಾಜಧನವನ್ನು ಸರಕಾರದ ಖಜಾನೆಗೆ ಪುನಃ ಪಾವತಿಸಿಕೊಳ್ಳಬೇಕೆಂದು ರಾಯಚೂರು ಜಿಲ್ಲಾಧಿಕಾರಿಗಳು ಈಗಾಗಲೇ ಶಿಫಾರಸ್ಸು ಮಾಡಿದ್ದಾರೆ, ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಒಂದು ವಾರದ ಒಳಗಡೆ ನಮ್ಮ ಬೇಡಿಕೆ ಈಡೇರಿಸದೇ ಇದ್ದ ಪಕ್ಷದಲ್ಲಿ ನಮ್ಮ ಸಂಘಟನೆ ಮೂಲಕ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಮೂಲಕ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೇಂದ್ರ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Comments
Post a Comment