ಪುನಃ ರಾಲಿಗೆ ಮರಳಿದಹರಿತ್ ನೋಹ್: ದಕ್ಷಿಣ ಆಫ್ರಿಕಾದಸಫಾರಿ ರಾಲಿಯಲ್ಲಿ ಸ್ಪರ್ಧೆ
ಪುನಃ ರಾಲಿಗೆ ಮರಳಿದಹರಿತ್ ನೋಹ್: ದಕ್ಷಿಣ ಆಫ್ರಿಕಾದಸಫಾರಿ ರಾಲಿಯಲ್ಲಿ ಸ್ಪರ್ಧೆ
, 17, 2025: 2025 ರಾಲಿಯಲ್ಲಿ ಕೈ ಮುರಿದುಕೊಂಡು ಸ್ಪರ್ಧೆಯಿಂದ ಹೊರಗುಳಿದ ಭಾರತದ ಆಗ್ರಸ್ಥಾನದಲ್ಲಿರುವರ ಇಲಿ ರೈಡರ್ ಹರಿತ್ ನೋಹ್ ಮತ್ತೆ ಸ್ಪರ್ಧೆಗೆ ಮರಳಿದ್ದಾರೆ. 2024ರ ಡಕಾರ್ ರಾಲಿ ರೇಸ್ ಅನ್ನು ಗೆದ್ದಿದ್ದ ಹರಿತ್ ಇದೀಗ ದಕ್ಷಿಣ ಆಫ್ರಿಕಾದಸಫಾರಿದ ಇಲಿಯಲ್ಲಿ ಮತ್ತೆ ಪಾಲ್ಗೊಳ್ಳಲಿದ್ದಾರೆ.
ಎಫ್ ಐಎ ಎಫ್ ಐಎಂ ವರ್ಲ್ಡ್ ರಾಲಿ-ರೇಡ್ ಚಾಂಪಿಯನ್ ಶಿಪ್ (W2RC) 2025ರ ಮೂರನೇ ಸುತ್ತಾಗಿ ನಡೆಯುವ ದಕ್ಷಿಣ ಆಫ್ರಿಕಾದ ಸಫಾರಿ ರಾಲಿಯಲ್ಲಿ ಭಾರತದ ಹರಿತ್ ನೋಹ್ ಸ್ಪರ್ಧಿಸುತ್ತಿದ್ದಾರೆ. ಮೇ 18 ರಿಂದ 24 ರವರೆಗೆ ಸನ್ ಸಿಟಿರಿಸಾರ್ಟ್ ನಿಂದ ರಾಲಿ ಆರಂಭವಾಗಲಿದೆ.
ಶೆರ್ಕೋ ಟಿವಿಎಸ್ ರಾಲಿ ಫ್ಯಾಕ್ಟರಿ ತಂಡದ ಸದಸ್ಯರಾದ ಹರಿತ್, ಡಕಾರ್ 2025ರ ಪ್ರೊಲೋಗ್ ಹಂತದಲ್ಲಿ ಬಿದ್ದ ಪರಿಣಾಮ ಕೈ ಮುರಿದುಕೊಂಡಿದ್ದರು, ಆ ಹಂತವನ್ನು ಪೂರ್ಣಗೊಳಿಸಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹರಿತ್ ಈಗ, ನಾಲ್ಕು ತಿಂಗಳಚಿಕಿತ್ಸೆಯನಂತರ ಮತ್ತೆಸ್ಪರ್ಧೆಗೆ ಮರಳಿದ್ದು, 2026ರಡಕಾರ್ ರಾಲಿಗೆ ತೀವ್ರಪೈಪೋಟಿ ನೀಡಲಿದ್ದಾರೆ.
ಈ ಬಗ್ಗೆ ಮಾತನಾಡಿದ ಹರಿತ್ 'ಡಕಾರ್ ನನಂತರ ನಾನೊಂದು ವಿಶ್ರಾಂತಿ ತೆಗೆದುಕೊಂಡೆ, ಆದರೆ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಮತ್ತು ನಾನು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಈ ರೇಸ್ ನನ್ನ ಪುನಃಪ್ರವೇಶ, ಆದ್ದರಿಂದ ಸ್ವಲ್ಪ ಆತಂಕ ಇದ್ದೇ ಇರುತ್ತದೆ, ಅದು ಸಹಜ. ದಕ್ಷಿಣ ಆಫ್ರಿಕಾದ ಸಫಾರಿ ರಾಲಿ ಎಲ್ಲರಿಗೂ ಹೊಸದು, ಮಾರ್ಗವು ಎಲ್ಲರಿಗೂ ಅಪರಿಚಿತ ಪ್ರತಿಯೊಂದು ಕಿಲೋಮೀಟರ್ ಅನ್ನು ಗಮನದಿಂದತೆಗೆದುಕೊಳ್ಳುವುದು ನನ್ನ ತಂತ್ರ ಎಂದು ಹೇಳಿದ್ದಾರೆ.
ಹರಿತ್ ನೋಹ್ ಅವರ ಈ ಮರಳಿಕೆಯು ವೈಯಕ್ತಿಕ ಸಾಧನೆಗೆ ಮಾತ್ರವಲ್ಲ, ಭಾರತೀಯ ಮೋಟಾರ್ ಸ್ಪೋರ್ಟಿಗೂ ಮಹತ್ವದ್ದಾಗಿದೆ. ಇಂತಹ ವಿಶ್ವಮಟ್ಟದ ಸ್ಪರ್ಧೆಗಳಲ್ಲಿ ಭಾರತೀಯರು ಪಾಲ್ಗೊಳ್ಳುವುದು, ದೇಶದ ರಾಲಿ-ರೇಡ್ ಸ್ಪರ್ಧೆಯ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡಯ್ಯುತ್ತದೆ.

Comments
Post a Comment