ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮೊಹಮ್ಮದ್ ರಫೀಕ್ ನೇಮಕ

 ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮೊಹಮ್ಮದ್ ರಫೀಕ್ ನೇಮಕ

ಬೆಂಗಳೂರು, ಮಾರ್ಚ್ XX, 2025: ಬೆಂಗಳೂರಿನ ಹಲಸೂರಿನಲ್ಲಿರುವ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ತನ್ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಮೊಹಮ್ಮದ್ ರಫೀಕ್ ಅವರನ್ನು ನೇಮಕ ಮಾಡಿದೆ. ಭಾರತೀಯ ಫುಟ್ಬಾಲ್ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದುಕೊಂಡಿರುವ ರಫೀಕ್ SUFCಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆಯನ್ನ ಸಲ್ಲಿಸಲಿದ್ದಾರೆ.


14 ವರ್ಷಕ್ಕಿಂತ ಹೆಚ್ಚು ಕಾಲ ಭಾರತೀಯ ಫುಟ್ಬಾಲ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಮೊಹಮ್ಮದ್ ರಫೀಕ್ ಹಿರಿಯ ವೃತ್ತಿಪರ ತಂಡಗಳಲ್ಲಿ ಉನ್ನತ ಸ್ಥಾನಗಳನ್ನು ಹೊಂದುವವರೆಗೂ ಎಲ್ಲಾ ಹಂತದ ಫುಟ್ ಬಾಲ್ ನಿರ್ವಹಣೆಯಲ್ಲಿ ಕೆಲಸ ಮಾಡಿದ್ದಾರೆ. FIFA AIFF ಮತ್ತು ಸರ್ಕಾರದ ಸಂಸ್ಥೆಗಳ ಸಹಯೋಗದಲ್ಲಿ ಭಾರತೀಯ ಫುಟ್ಬಾಲ್ ನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿದ್ದಾರೆ.


ಇಂಡಿಯನ್ ಸೂಪರ್ ಲೀಗ್ (ಐಎಸ್ ಎಲ್) ತಂಡದ ಪುಟ್ ಬಾಲ್ ನಿರ್ದೇಶಕ, ಕೇರಳ ಬ್ಲಾಸ್ಟರ್ಸ್ ಎಫ್ ಸಿ ಮತ್ತು ಬೆಂಗಳೂರಿನ ಓಜೋನ್ ಎಫ್ ಸಿಯ ಸಿಇಒ ಸೇರಿ ಪ್ರಮುಖ ನಾಯಕತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಕೇರಳ ಬ್ಲಾಸ್ಟರ್ಸ್ ತಂಡದ ಯಶಸ್ಸಿನಲ್ಲಿ ರಫೀಕ್ ಪ್ರಮುಖ ಪಾತ್ರ ವಹಿಸಿದ್ದು ವಿಶೇಷವಾಗಿ ISL ಮತ್ತು ರಿಲಯನ್ಸ್ ಫುಟ್ಬಾಲ್ ಡೆವಲಪ್ಟೆಂಟ್ ಲೀಗ್ (RFDL) ಫೈನಲ್ಸ್ ಗೆ ತಂಡವನ್ನು ಮುನ್ನಡೆಸುವಲ್ಲಿ ರಫೀಕ್ ಪ್ರಮುಖ ಪಾತ್ರವಹಿಸಿದ್ದರು. ರಫೀಜ್ ನೇತೃತ್ವದಲ್ಲಿ ಓನ್ FC ಬೆಂಗಳೂರು ತಂಡವು BDFA ಸೂಪರ್ ಡಿವಿಷನ್ ಎರಡು ಸೀಸನ್ ಗಳಲ್ಲಿ (2015-16 ಮತ್ತು 2017-18) ಜಯಸಾಧಿಸಿತ್ತು.


ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನ ನೂತನ ಸಿಇಒ ಆಗಿ ನೇಮಕವಾಗಿರುವುದರ ಬಗ್ಗೆ ಸಂತಸ ವ್ಯಕ್ತ ಪಡಿಸಿದ ರಫೀಕ್ ನಾನು ಈ ಜವಾಬ್ದಾರಿ ನಿಭಾಹಿಸುವುದಕ್ಕೆ ತುಂಬಾ ಉತ್ಸುಹಕನಾಗಿದ್ದೇನೆ.ಈ ಯೋಜನೆಯ ಯಶಸ್ಸಿಗೆ ಮತ್ತಷ್ಟು ಸೇವೆ ಸಲ್ಲಿಸುವ ನನ್ನ ಗುರಿಗೆ ಇದು ಅತ್ಯುತ್ತಮ ವೇದಿಕೆಯಾಗಿದೆ. ನನ್ನ ಅನುಭವ ಮತ್ತು ಸಂಪರ್ಕಗಳನ್ನು ಬಳಸಿಕೊಂಡು ಯುವ ಆಟಗಾರರು ಪ್ರಗತಿ ಸಾಧಿಸಲು ಮತ್ತು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಮಾರ್ಗವನ್ನು ನಿರ್ಮಿಸಲು ನಾನು ಉತ್ಸುಕರಾಗಿದ್ದೇನೆ ಎಂದಿದ್ದಾರೆ.


ಪ್ಯಾನ್-ಇಂಡಿಯಾ ಟ್ಯಾಲೆಂಟ್ ಸೌಟಿಂಗ್ ಮಾದರಿಯನ್ನು ಅಭಿವೃದ್ಧಿಪಡಿಸುವಲ್ಲಿ ರಫೀಕ್ ಪ್ರಮುಖ ಪಾತ್ರ ವಹಿಸಿದ್ದಾರೆ. ಗೋಲ್ FIFA ಪ್ರಾಜೆಕ್ಟ್ ಟ್ಯಾಲೆಂಟ್ ಸೈಟಿಂಗ್ ನೊಂದಿಗೆ ಅಖಿಲ ಭಾರತ ಫುಟ್ ಬಾಲ್ ಫೆಡರೇಶನ್ (AIFF) ಗೆ ಸಹಾಯ ಮಾಡಿದ್ದಾರೆ. AIFF ಮತ್ತು ISL ಜೊತೆ ಯುವ ಮತ್ತು ತಳಮಟ್ಟದ ಫುಟ್ಬಾಲ್ ಸಂಬಂಧಿತ ನೀತಿಗಳನ್ನು ರೂಪಿಸುವ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಕಳೆದ 5 ವರ್ಷಗಳಲ್ಲಿ ವಿವಿಧ ಕ್ಲಬ್ ಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.


ರೂತ್ ಯುನೈಟೆಡ್ ಫುಟ್ಬಾಲ್ ಕ್ಲಬ್


ನಾರೋಮ್ ಮಹೇಶ್ ಸಿಂಗ್, ಕೆ.ಪಿ. ರಾಹುಲ್, ಮತ್ತು ವಿಭಿನ್ ಮೊಹನನ್ ಎಂಬ ಆಟಗಾರರ ಪ್ರಗತಿಯನ್ನು ಸಮೀಕ್ಷಿಸಿ, ISL ನಲ್ಲಿ ಅವರ ಮೊಟ್ಟ ಮೊದಲ ಪಂದ್ಯದಿಂದ ಹಿಡಿದು ಭಾರತೀಯ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಮಟ್ಟಕ್ಕೆ ತಲುಪಲು ರಫೀಕ್ ಸಹಾಯ ಮಾಡಿದ್ದಾರೆ.


ಕೆಎನ್ ವಿಬಿ (ಡಚ್ ಫುಟ್ ಬಾಲ್ ಅಸೋಸಿಯೇಷನ್) ಜೊತೆ ಕೂಡ ಸಂಪರ್ಕ ಹೊಂದಿದ್ದು, ಯುರೋಪಿನ ಹಲವು ರಾಷ್ಟ್ರೀಯ ಫುಟ್ ಬಾಲ್ ಕ್ಲಬ್ ಸೇರಿದಂತೆ ಅನೇಕ ಪ್ರಮುಖ ಫುಟ್ ಬಾಲ್ ಕ್ಲಬ್ ಗಳೊಂದಿಗೆ ರಫೀಕ್ ಒಡನಾಟ ಹೊಂದಿದ್ದಾರೆ.


ಭಾರತೀಯ ಫುಟ್ ಬಾಲ್ ಕ್ಷೇತ್ರದಲ್ಲಿ ರಫಿಕ್ ನೀಡಿದ ಕೊಡುಗೆಗೆ ಅಂದಿನ ಕೇಂದ್ರ ಮಂತ್ರಿಗಳಾದ ಬಂಡಾರು ದತ್ತಾತ್ರೇಯ ಮತ್ತು ರಾಜೀವ್ ಪ್ರತಾಪ್ ಅವರಿಂದ CSR ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.


ರಫಿಕ್ ನ ಪಾತ್ರವು ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಗೆ ಮತ್ತಷ್ಟು ಅವಕಾಶಗಳನ್ನು ತರಲಿದೆ.


ಜಾಗತಿಕ ಫುಟ್ ಬಾಲ್ ನಲ್ಲಿ ರಫೀಕ್ ಅವರಿಗಿರುವ ಸಂಪರ್ಕವು SUFCಗೆ ಅನುಕೂಲಕರವಾಗಲಿದೆ. ಪ್ರಮುಖ ಪುಟ್ ಬಾಲ್ ಕ್ಲಬ್ ಗಳು ಮತ್ತು ಯುರೋಪಿನಾದ್ಯಂತ ರಾಷ್ಟ್ರೀಯ ಫುಟ್ ಬಾಲ್ ಸಂಘಗಳೊಂದಿಗೆ ರಫಿಕ್ ಒಡನಾಟ ಹೊಂದಿದ್ದಾರೆ. ಅವರು ಕತಾರ್ ನಲ್ಲಿ ನಡೆದ 2022 ರ FIFA ವಿಶ್ವಕಪ್ ನ ಭಾಗವಾಗಿದ್ದರು. ಹಾಗು ಮಾರ್ಕ್ಯೂ ಟೂರ್ನಮೆಂಟ್ ಗಾಗಿ ಕ್ರೀಡಾಂಗಣ ಮೂಲಸೌಕರ್ಯ ನಿರ್ವಹಣೆ ಮತ್ತು ಆತಿಥ್ಯದಲ್ಲಿ ರಫೀಕ್ ಸೇವೆಯನ್ನ ಸಲ್ಲಿಸಿದ್ದಾರೆ.


ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ರಫಿಕ್ ಅವರ ನಾಯಕತ್ವದಲ್ಲಿ ಮುನ್ನಡೆಯಲು ಮತ್ತಷ್ಟು ಉತ್ಸುಕವಾಗಿದೆ. ಜೊತೆಗೆ ರಫೀಕ್ ನೇತೃತ್ವದಲ್ಲಿ ಸೌತ್ ಯುನೈಟೆಡ್ ಫುಟ್ಬಾಲ್ ಮತ್ತು ಅಕಾಡೆಮಿ ಯೋಜನೆಯನ್ನು ಮುಂದುವರೆಸಲು ಬದ್ಧವಾಗಿದೆ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims