ಕಾಫಿನಾಡಲ್ಲಿ' ರ ಾಲಿ ಆಫ್ ಚಿಕ್ಕಮಗಳೂರು' 130ಕ್ಕೂ ಹೆಚ್ಚು ಸ್ಪರ್ಧಿಗಳಿಂದನೋಂದಣಿ

 ಕಾಫಿನಾಡಲ್ಲಿ' ರ ಾಲಿ ಆಫ್ ಚಿಕ್ಕಮಗಳೂರು' 130ಕ್ಕೂ ಹೆಚ್ಚು ಸ್ಪರ್ಧಿಗಳಿಂದನೋಂದಣಿ



ಚಿಕ್ಕಮಗಳೂರು, ಮೇ 30, 2025: ಮೇ 31 ಮತ್ತು ಜೂನ್ 1 ರಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ' ರ ಲಿಆಫ್ ಚಿಕ್ಕಮಗಳೂರು' ರಾರಾಜಿಸಲಿದೆ. ಇದು FMSCIಭಾರತೀಯ ರಾಷ್ಟ್ರೀಯ ಟೈಮ್ ಸ್ಪೀಡ್‌ ಡಿಸ್ಟೆನ್ಸ್‌ರ ಹ್ಯಾಲಿ ಚಾಂಪಿಯನ್ ಶಿಪ್ (4W) 2025ರ ಪ್ರಾರಂಭಿಕಸುತ್ತಾಗಿದ್ದು, ಚಿಕ್ಕಮಗಳೂರುಮೋಟರ್‌ ಸ್ಪೋರ್ಟ್ಸ್ ಕ್ಲಬ್ (MSCC), ಜೆಕೆಟೈರ್‌ಮೋಟಾ‌ರ್ ಸ್ಪೋರ್ಟ್ಸ್ ಮತ್ತು ನಾಮ್ಮಿ ಮೆರ್ಲಾ ಸ್ಪೋರ್ಟ್ಸ್ ಫೌಂಡೇಶನ್‌ ಸಹಯೋಗದಲ್ಲಿ ಈ ರ ಇಲಿಯನ್ನು ಆಯೋಜಿಸಲಾಗಿದೆ.


ಮೇ31 ರಂದು ಸಂಜೆ 4:30ಕ್ಕೆ ಚಿಕ್ಕಮಗಳೂರಿನಕೆ.ಎಂ. ರಸ್ತೆಯಲ್ಲಿರುವಸಿಗ್ರೇಚರ್ಅಪಾರ್ಟ್ ಮೆಂಟ್‌ ಬಳಿ ಮೆರುಗು ಉತ್ಸವ (Ceremonial Start) ನಡೆಯಲಿದ್ದುರ ಇಲಿಯಎರಡನೇ ಹಂತಜೂನ್ 1ರಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನ 2:00ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.


ಈವರ್ಷ ಸ್ಪರ್ಧಿಗಳಿಂದ ದಾಖಲೆಯ 130ಕ್ಕೂ ಹೆಚ್ಚು ಎಂಟ್ರಿಗಳು ಲಭಿಸಿದ್ದು ಈರ ಇಲಿ ಇತಿಹಾಸದಲ್ಲೇ ಅತ್ಯಧಿಕವಾಗಿದೆ. ವಿಜೇತರಿಗೆ ಟ್ರೋಫಿಗಳ ಜೊತೆಗೆ 3.5 ಲಕ್ಷಕ್ಕೂ ಹೆಚ್ಚು ನಗದು ಬಹುಮಾನ ಮತ್ತು 'ಸ್ಟಾರ್ ಆಫ್ ಚಿಕ್ಕಮಗಳೂರು', 'ಸ್ಟಾರ್‌ ಆಫ್ ಕರ್ನಾಟಕ, ಕಾಫಿಟೈಲ್ ಪ್ರೋಸ್ಟಾಕ್/ಓಪನ್ ಮೊದಲಾದ ಗೌರವ ಪ್ರಶಸ್ತಿಗಳು ಲಭಿಸಲಿವೆ.


ದೆಹಲಿಯಿಂದ ಕಾಶ್ಮೀರದವರೆಗೆ ಕೋಲ್ಕತದಿಂದ ಚೆನ್ನೈ, ಕೋಯಂಬತ್ತೂರು, ಮುಂಬೈ ಬೆಂಗಳೂರು, ಜಂಪೆಡ್ಡುರ ಮತ್ತು ಇತರ ನಗರಗಳಿಂದ ರಾಷ್ಟ್ರೀಯಮಟ್ಟದ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ವಿಶೇಷವಾಗಿ ದೀಪಕ್/ಪ್ರಕಾಶ್ ಎಂ, ನಾಗ/ಸಂತೋಷ್.ಕ್ಷಮತಾ/ಅನ್ನೋಲ್, ಶಫಾದ್/ವೇಲುಮುರುಗನ್‌ ಮತ್ತು ಗೀತಿಕಾ ಪಂತ್/ನೀನಾ ಜೈನ್ ಅವರು ಗಮನ ಸೆಳೆಯಲಿದ್ದಾರೆ. ಸ್ಥಳೀಯರ ಪರವಾಗಿ ಅಭಿನಾಶ್/ಸಮೃದ್ ಪೈ,ಮಂಜುಜೈನ್, ಚಿರಂತ್ ಗೌಡ, ಶ್ರೀಕಾಂತ್ ಗೌಡ (ಚಿಕ್ಕಮಗಳೂರುಮತ್ತು ಕಡೂರು) ಭಾಗವಹಿಸುತ್ತಿದ್ದಾರೆ.


ರ ಲಿಯುಎಂಟು ವಿಭಿನ್ನ ವಿಭಾಗಗಳಲ್ಲಿ ನಡೆಯಲಿದ್ದು ಅದರಲ್ಲಿ INTSDRC ಎಕ್ಸೆರ್ಟ್, ಪ್ರೋಸ್ಟಾಕ್, ಕಾರ್ಪೊರೇಟ್, ದಂಪತಿ (Couple), ಮಹಿಳಾ ವಿಭಾಗಗಳಜೊತೆಗೆ ಸೂಪರ್ ಕಾರ್, ಚಿಕ್ಕಮಗಳೂರು ಕ್ಲಾಸ್ ಮತ್ತು ಕರ್ನಾಟಕ ಸೂಪರ್‌ಕಾರ್ ಕ್ಲಾಸ್ ಇವೆ. ಈ ವಿಭಾಗಗಳಲ್ಲಿ ಸ್ಪರ್ಧೆಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ.


FMSCIಅನುಮೋದಿತಈರ ಇಲಿ, NTSDRC2025 ಚಾಂಪಿಯನ್ ಶಿಪ್‌ ಫೈನಲ್ ಗೆ ಮಾರ್ಗದರ್ಶನ ನೀಡುವ ಹಲವಾರು ಅರ್ಹತಾ ಸುತ್ತುಗಳಲ್ಲಿ ಮೊದಲನೆಯದು ಪ್ರತಿ ವಿಭಾಗದ ಮೊದಲ ಮೂವರು ಸ್ಪರ್ಧಿಗಳು, ಕನಿಷ್ಠ ಎರಡು ಅರ್ಹತಾ ಸುತ್ತುಗಳಲ್ಲಿ ಭಾಗವಹಿಸಿದ್ದರೆ ಮಾತ್ರ ಫೈನಲ್ ಗೆ ಆಯ್ಕೆಯಾಗುತ್ತಾರೆ.


Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims