ಬಿರ್ಲಾ ಓಪಸ್‌ ನಿಂದ ವಿನೂತನ ಪ್ರಯತ್ನ; ‘ಪ್ರೈಮ್ ಎಕ್ಸ್‌ಪ್ರೆಸ್’ ನಲ್ಲಿ 125 ದಿನ ಪ್ರವಾಸ!

 ಬಿರ್ಲಾ ಓಪಸ್‌ ನಿಂದ ವಿನೂತನ ಪ್ರಯತ್ನ; ‘ಪ್ರೈಮ್ ಎಕ್ಸ್‌ಪ್ರೆಸ್’ ನಲ್ಲಿ 125 ದಿನ ಪ್ರವಾಸ!

ಬಿರ್ಲಾ ಓಪಸ್‌ ನಿಂದ ‘ಪ್ರೈಮ್ ಎಕ್ಸ್‌ಪ್ರೆಸ್’ ಎಂಬ ಎರಡು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಬಸ್‌ಗಳು 125 ದಿನಗಳಲ್ಲಿ 44 ನಗರಗಳನ್ನು ಪ್ರವಾಸ ಮಾಡಲಿದೆ. ಬಿರ್ಲಾ ಓಪಸ್ ಪೇಂಟ್ಸ್‌ನ ಸಾಂಸ್ಥಿಕ ವಿಭಾಗವಾದ ಬಿರ್ಲಾ ಓಪಸ್ ಪ್ರೈಮ್, ಇಂದು ಪ್ರೈಮ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದು ಗ್ರಾಹಕರು ಬಣ್ಣ ಪರಿಹಾರಗಳೊಂದಿಗೆ ಹೇಗೆ ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಆನ್-ರೋಡ್ ಅನುಭವ ಕೇಂದ್ರವಾಗಿದೆ. ಈ ಅಭಿಯಾನವನ್ನು ಬಿರ್ಲಾ ಓಪಸ್‌ನ ಮುಂಬೈ ಪ್ರಧಾನ ಕಚೇರಿ ಮತ್ತು ದೆಹಲಿ ವಲಯ ಕಚೇರಿಯಿಂದ ಅಧಿಕೃತವಾಗಿ ಪ್ರಾರಂಭಿಸಲಾಗಿದೆ . 


ಮುಂದಿನ 125 ದಿನಗಳಲ್ಲಿ, ಈ ಎರಡು ಬಸ್‌ಗಳು ದೇಶದಾದ್ಯಾಂತ 44 ನಗರಗಳನ್ನು ಪ್ರವಾಸ ಮಾಡುವುದರ ಜೊತೆಗೆ, ಒಂದು 180-ದಿನಗಳ ಅಭಿಯಾನ ಚಟುವಟಿಕೆಯ ಭಾಗವಾಗಿ ಬಿರ್ಲಾ ಓಪಸ್‌ನ ಮುಂದಿನ ತಲೆಮಾರಿನ ಪೈಂಟ್ ತಂತ್ರಜ್ಞಾನಗಳನ್ನು ಬಿಲ್ಡರ್‌ಗಳು, ಡೆವಲಪರ್‌ಗಳು, ಕಾರ್ಪೊರೇಟ್‌ಗಳು, ಸರ್ಕಾರದ ಏಜೆನ್ಸಿಗಳು ಮತ್ತು ಆರ್ಕಿಟೆಕ್ಟ್ ಸಂಸ್ಥೆಗಳ ಬಾಗಿಲಿಗೆ ನೇರವಾಗಿ ಕರೆದೊಯ್ಯಲಿದ್ದಾರೆ. 


ಪ್ರತಿ ಬಸ್ಸಿನ ಒಳವಲಯವನ್ನು ಪ್ರಸಿದ್ಧ ಕಲಾವಿದೆ ಮತ್ತು ಇಂಟೀರಿಯರ್ ಡಿಸೈನರ್ ಕಣಕ್ ನಂದಾ ಅವರಿಂದ ವಿನ್ಯಾಸಗೊಳಿಸಲಾಗಿದ್ದು, ಗ್ರಾಹಕರಿಗೆ ಪ್ರೀಮಿಯಂ ಅನುಭವವನ್ನು ನೀಡಲಿದೆ. ಇದರಲ್ಲಿ ಎಕ್ಸ್ಟೀರಿಯರ್, ಇಂಟೀರಿಯರ್, ಇನಾಮೆಲ್ಸ್, ವಾಟರ್‌ಪ್ರೂಫಿಂಗ್ ಮತ್ತು ಟೆಕ್ಸ್ಚರ್‌ಗಳ ಮೇಲೆ ಆಧಾರಿತ 30ಕ್ಕಿಂತ ಹೆಚ್ಚು ಪರ್ಫಾರ್ಮೆನ್ಸ್ ಉತ್ಪನ್ನಗಳು, ವಾಟರ್‌ಪ್ರೂಫಿಂಗ್ ಸೊಲ್ಯೂಷನ್‌ಗಳ ನೇರ ಡೆಮೋಗಳು,  ಶಿಕ್ಷಣ, ಆರೋಗ್ಯ ಮತ್ತು ಕಾರ್ಪೊರೇಟ್ ಕಚೇರಿ ಸೆಕ್ಟರ್‌ಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾದ ಕಸ್ಟಮ್ ಕಲರ್ ಫಿಲಾಸಫಿಗಳು ಇರಲಿದೆ. 


ಈ ಬಗ್ಗೆ ಮಾತನಾಡಿದ ಬಿರ್ಲಾ ಓಪಸ್ ಪೈಂಟ್ಸ್‌ನ ಸಿಇಒ ರಕ್ಷಿತ್ ಹಾರ್ಗವೇ '“ಪ್ರೈಮ್ ಎಕ್ಸ್‌ಪ್ರೆಸ್ ಅಭಿಯಾನವು ಇನ್‌ಸ್ಟಿಟ್ಯೂಷನಲ್ ಪೈಂಟ್ ಸೆಗ್ಮೆಂಟ್‌ನಲ್ಲಿ ಗ್ರಾಹಕರ ಎಂಗೇಜ್‌ಮೆಂಟ್‌ಗೆ ಹೊಸ ಚಾಪ್ಟರ್‌ನ್ನು ಆರಂಭಿಸುತ್ತಿದ್ದು, ಈ ಮೂಲಕ, ಬಿರ್ಲಾ ಓಪಸ್ ಪೈಂಟ್ಸ್ ಉತ್ಪನ್ನದಿಂದ ಪ್ರಾಜೆಕ್ಟ್ ಸಪೋರ್ಟ್‌ವರೆಗೆ ಸಮಗ್ರ ಪರಿಹಾರಗಳನ್ನು ನೀಡುವಲ್ಲಿ ತನ್ನ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತಿದೆ. ಇದು ನಮ್ಮ ಬ್ರಾಂಡ್ ಫಿಲಾಸಫಿಯಾದ ‘ದುನಿಯಾ ಕೋ ರಂಗ್ ದೋ’ ನ ನಿಜಾರ್ಥವನ್ನು ಪ್ರತಿಬಿಂಬಿಸುತ್ತಿದೆ ಎಂದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims