ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜದ ನಾಮದೇವ ಭವನ ಲೋಕಾರ್ಪಣೆ*
ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜದ ನಾಮದೇವ ಭವನ ಲೋಕಾರ್ಪಣೆ
.ಬೆಂಗಳೂರು : ಹಿಂದುಳಿದ ಸಮುದಾಯಕ್ಕೆ ಸೇರಿದ ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜದ ನೂತನ ನಾಮದೇವ ಭವನವನ್ನು ಲೋಕಾರ್ಪಣೆ ಮಾಡಲಾಯಿತು.
ಬೆಂಗಳೂರಿನ ವಿಲ್ಸನ್ ಗಾರ್ಡನ್ ನ ಹೊಂಬೇಗೌಡ ನಗರದಲ್ಲಿ ನಿರ್ಮಿಸಿದ ನಾಮದೇವ ಭವನವನ್ನು ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಮಾಜಿ ಸಚಿವ ಹಾಗೂ ನರಗುಂದ ಕ್ಷೇತ್ರದ ಶಾಸಕ ಸಿ.ಸಿ.ಪಾಟೀಲ್ ಅವರು ಲೋಕಾರ್ಪಣೆ ಮಾಡಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಸಿಂಪಿ ಸಮಾಜ ಅತಿ ಚಿಕ್ಕ ಸಮಾಜವಾಗಿದ್ದು ಆರ್ಥಿಕ, ಸಮಾಜಿಕ ಶೈಕ್ಷಣಿಕವಾಗಿ ಹಿಂದುಳಿದಿದೆ. ಹಿಂದುಳಿದ ವರ್ಗದಲ್ಲಿ ಸೇರಿದ ಈ ಸಮಾಜ ಪ್ರಗತಿ ಸಾಧಿಸಬೇಕಾದರೆ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು. ನಾನು ಆರಂಭದಿಂದಲೂ ಸಿಂಪಿ ಸಮಾಜದವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದು ಈ ಸಮಾಜ ಮಕ್ಕಳ ಶಿಕ್ಷಣಕ್ಕೆ ನನ್ನ ಟ್ರಸ್ಟ್ ನಿಂದ ಅಗತ್ಯ ನೆರವು ನೀಡುವುದಾಗಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಹಾಗೂ ಹಿಂದುಳಿದ ವರ್ಗಗಳ ನಾಯಕ ನಾಗರಾಜ್ ಯಾದವ ಮಾತನಾಡಿ ಸಿಂಪಿ ಸಮಾಜಕ್ಕೆ ಒಂದು ಕೋಟಿ ರೂಪಾಯಿ ನೆರವು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಅದೇ ಪ್ರಕಾರ ತಮ್ಮ ಶಾಸಕರ ನಿಧಿಯಿಂದ ಹತ್ತು ಲಕ್ಷ ರೂಪಾಯಿ ನೀಡುವುದಾಗಿ ಪ್ರಕಟಿಸಿದರು.
ಹಿಂದುಳಿದ ಸಮುದಾಯಕ್ಕೆ ಸೇರಿದ ಸಿಂಪಿ ಸಮಾಜದವರು ಮೀಸಲಾತಿ ಸಹಿತ ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಂಘಟಿತರಾಗಿ ಹೋರಾಟ ನಡೆಸಬೇಕು ಅದಕ್ಕೆ ತಾವು ಬೆಂಬಲ ನೀಡುವುದಾಗಿ ಹೇಳಿದರು.
ಮಾಜಿ ಸಚಿವ ಹಾಗೂ ಶಾಸಕ ಸಿ.ಸಿ.ಪಾಟೀಲ್ ಮಾತನಾಡಿ ಹಲವಾರು ಸಮಾಜಗಳಲ್ಲಿ ಅಪರಾಧ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತದೆ, ಆದರೆ ನಾಮದೇವ ಸಿಂಪಿ ಸಮಾಜದ ಸದಸ್ಯರು ಯಾವುದೇ ಅಪರಾಧ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾದ ಉದಾಹರಣೆ ಇಲ್ಲ ಇದರಿಂದ ಇದು ಚಿಕ್ಕ ಸಮಾಜವಾದರೂ ಎಷ್ಟು ಸುಸಂಸ್ಕೃತ ಸಮಾಜ ಎಂಬುದು ತಿಳಿಯುತ್ತದೆ ಎಂದರು ಗುಣಗಾನ ಮಾಡಿದರು.
ಈ ಸಮಾಜದ ಅಭಿವೃದ್ಧಿಗೆ ಎಲ್ಲಾ ನೆರವು ಇರುವುದಾಗಿ ಸಿ.ಸಿ.ಪಾಟೀಲ್ ಹೇಳಿದರು.
ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ ನಾನು ಬಾಲ್ಯದಿಂದ ಸಿಂಪಿ ಸಮಾಜದ ಗೆಳೆಯರ ಜೊತೆಗೆ ಬೆಳೆದು ಬಂದಿದ್ದೇವೆ. ನಾಮದೇವ ಸಿಂಪಿ ಸಮಾಜ ಸಣ್ಣ ಸಮಾಜವಾದರೂ ಸುಸಂಸ್ಕೃತ ಸಮಾಜ ಸಂತ ನಾಮದೇವ ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತದೆ. ಸಣ್ಣ ಸಮಾಜ ಒಗ್ಗಟ್ಟಾಗಿದ್ದರೆ ಮಾತ್ರ ಬೆಳೆಯಲು ಸಾಧ್ಯ ಎಂದರು.
ಜ್ಞಾನೇಶ್ವರ ತುಳಸಿದಾಸ್ ನಾಮದಾಸ್ ಮಹಾರಾಜ್ ಪಂಢರಪುರ, ಕರ್ನಾಟಕ ರಾಜ್ಯ ನಾಮದೇವ ಸಮಾಜದ ಅಧ್ಯಕ್ಷ ನಾರಾಯಣ.ವಿ.ಕೋರ್ಪಡೆ, ಮಾಜಿ ಅಧ್ಯಕ್ಷ ಎನ್.ಎಮ್ ಸುರೇಶ್, ಉಪಾಧ್ಯಕ್ಷರಾದ ರಾಮಪ್ರಕಾಶ್ ಕಠಾರೆ, ಶಂಕರ್ ಖಟಾವಕರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

Comments
Post a Comment