ಬೆನಕ ಗೋಲ್ಡ್ ಕಂಪನಿಯ ನೂತನ ರಾಯಭಾರಿಯಾಗಿ ರೀಷ್ಮಾ ನಾಣಯ್ಯ.
"ಬೆನಕ ಗೋಲ್ಡ್ ಕಂಪನಿಯ ನೂತನ ರಾಯಭಾರಿಯಾಗಿ ರೀಷ್ಮಾ ನಾಣಯ್ಯ.
ಬೆಂಗಳೂರು ಏಪ್ರಿಲ್ 21; ಬೆನಕ ಗೋಲ್ಡ್ ಕಂಪನಿಯ ನೂತನ ರಾಯಭಾರಿಯಾಗಿ ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟಿ ರೀಷ್ಮಾ ನಾಣಯ್ಯ ಅವರನ್ನು ಪರಿಚಯಿಸಿದೆ.
ಬೆನಕ ಗೋಲ್ಡ್ ಸಂಸ್ಥೆಯ ಜಾಹಿರಾತು ಚಟುವಟಿಕೆಯನ್ನು ಬಲಪಡಿಸಿ, ಜನರ ಹೃದಯದಲ್ಲಿ ಹತ್ತಿರವಾಗುವ ನಿಟ್ಟಿನಲ್ಲಿ ಹೊಸ ಜಾಹಿರಾತು ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
"ಬೆನಕ ಗೋಲ್ಡ್ ಅಭಿಯಾನ್ ಮುಖಾಂತರ ಸೆಲ್ ಅಂಡ್ ಸೇವ್' ಯೋಜನೆ ಪರಿಚಯ"
ಭಾರತೀಯರಿಗೆ ಚಿನ್ನದ ಆಭರಣವು ಕೇವಲ ಅಲಂಕಾಕರಣಿಣಿ ಅಲ್ಲದೆ, ಗ್ರಾಹಕರಿಗೂ ಹಾಗೂ ಅವರ ಚಿನ್ನಾಭರಣಗಳಿಗೂ ಭಾವನಾತ್ಮಕ ಸಂಬಂಧ ಹೊಂದಿದ್ದಾಗಿದ್ದು ಈ ಭಾವನೆಯನ್ನು ಕಂಪನಿಯು ಕೂಡ ಗುರುತಿಸಿ, ಗೌರವಿಸುವ ಉದ್ದೇಶದಿಂದ "ಸೆಲ್ ಅಂಡ್ ಸೇವ್" ಯೋಜನೆಯನ್ನು ಪರಿಚಯಿಸುತ್ತಿದೆ, ಈ ಯೋಜನೆಯ ಅಡಿಯಲ್ಲಿ ಗ್ರಾಹಕರು ತಮ್ಮ ಚಿನ್ನಾಭರಣವನ್ನು ಮಾರಾಟ ಮಾಡಿದ ನಂತರವೂ ಕೂಡ 21 ದಿನಗಳಲ್ಲಿ ಅಥವಾ ಕಂತುಗಳ ಮೂಲಕ ಹಣ ಪಾವತಿಸಿ ಯೋಜನೆಗಳ ಮೂಲಕ ತಮ್ಮ ಚಿನ್ನಾಭರಣಗಳನ್ನು ಹಿಂಪಡೆಯುವ ವಿನೂತನವಾದ "ಸೆಲ್ ಅಂಡ್ ಸೇವ್" ಯೋಜನೆಯನ್ನು ಅನಾವರಣಗೊಳಿಸಲಾಗುತ್ತಿದೆ ಎಂದು ಕಂಪನಿಯ ಸಂಸ್ಥಾಪಕರಾದ ಎಸ್.ಭರತ್ ಕುಮಾರ್ ತಿಳಿಸಿದರು.
ಮುಂದಿನ ದಿನಗಳಲ್ಲಿ ನೂತನ ಆಲೋಚನೆ ಹಾಗೂ ನೂತನ ಆವಿಷ್ಕಾರಗಳೊಂದಿಗೆ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಮತ್ತು ಒಳ್ಳೆಯ ಯೋಜನೆಯನ್ನು ಅನಾವರಣಗೊಳಿಸಲು ಬೆನಕ ಗೋಲ್ಡ್ ಕಂಪನಿಯು ಸದಾ ಸಿದ್ಧವಾಗಿರುತ್ತದೆ ಎಂದು ಹೇಳಿದರು.

Comments
Post a Comment