ಏಷ್ಯಾ ಪೆಸಿಫಿಕ್ ಾಲಿ ಚಾಂಪಿಯನ್ ಶಿಪ್ ನಲೀಡರ್ ಬೋರ್ಡ್ ನಲ್ಲಿ ಅಗ್ರಸ್ಥಾನಪಡೆದ ಬೆಂಗಳೂರಿನಕರ್ಣ ಕಡೂರ್!
ಏಷ್ಯಾ ಪೆಸಿಫಿಕ್ ಾಲಿ ಚಾಂಪಿಯನ್ ಶಿಪ್ ನಲೀಡರ್ ಬೋರ್ಡ್ ನಲ್ಲಿ ಅಗ್ರಸ್ಥಾನಪಡೆದ ಬೆಂಗಳೂರಿನಕರ್ಣ ಕಡೂರ್
ಚೆನ್ನೈ, 2025 ಏಪ್ರಿಲ್ 26: ಮದ್ರಾಸ್ ನಲ್ಲಿ ಇಂದು ನಡೆದ ಎಫ್‌ಐಎ ಏಷ್ಯಾ ಪೆಸಿಫಿಕ್ ಚಾಂಪಿಯನ್ ಶಿಫ್ ಇಂಡಿಯಾದಲ್ಲಿ (APRC) ಕರ್ಣ ಕಡೂರ್, ಮೂಸಾ ಶರೀಫ್ ಮೊದಲ ಸ್ಥಾನಗಳಿಸಿದ್ದಾರೆ. ಇಂದು ನಡೆದ ಐದು ವಿಶೇಷ ಹಂತಗಳ ಪೈಕಿ ನಾಲ್ಕರಲ್ಲಿ ರಾಷ್ಟ್ರೀಯ ಚಾಂಪಿಯನ್ ಕರ್ಣ ಕಡೂರ್ ಮತ್ತು ಮೂಸಾ ಶೆರಿಫ್ ಅವರು ಅಗ್ರಸ್ಥಾನ ಪಡೆದಿದ್ದಾರೆ.
ಅರ್ಕಾಮೋಟಾರ್ ಸ್ಪೋರ್ಟ್ಸ್ ಅನ್ನು ಪ್ರತಿನಿಧಿಸುವ ಕಡೂರ್ ಮತ್ತು ಶರೀಫ್, ಹಾಲಿ ಎಪಿಆರ್ ಸಿ ವಿಜೇತರುಮತ್ತು ತಂಡದ ಆಟಗಾರರಾದ ಹರ್ ಕ್ರಿಶನ್ ಾಡಿಯಾ ಮತ್ತು ಕುನಾಲ್ ಕಶ್ಯಪ್ ಅವರ ಮೇಲೆ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡರು. ಇಂದು ಮೊದಲ ಹಂತವಾದ 4.9ಕಿಮೀನಲ್ಲಿ ಮೊದಲಸ್ಥಾನ ಪಡೆದು ಮತ್ತು ನಂತರ 19.2ಕಿಮೀ ದೂರದ ಎಸ್ ಎಸ್ 2 ರಲ್ಲಿಯೂ ಅತ್ಯುತ್ತಮ ಸಮಯದಾಖಲಿಸಿದರು. ಕರ್ಣಕಡೂರ್ ಕೊನೆಯ ಎರಡು ಹಂತಗಳಲ್ಲಿ ಭಾರಿ ಮುನ್ನಡೆ ಸಾಧಿಸಿ ಸ್ಪರ್ಧೆಯ ಕೊನೆಯ ದಿನದಂದು ಟೈಮ್ ಶೀಟ್ ಗಳಲ್ಲಿ ಅಗ್ರಸ್ಥಾನ ಪಡೆದರು.
ಹರ್ ಕೃಷ್ಣನ್ ವಾಡಿಯಾ ಮತ್ತು ಕುನಲ್ ಕಶ್ಯಪ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದರು. ರಡುಬಾರಿ ರಾಷ್ಟ್ರೀಯ ಚಾಂಪಿಯನ್ ಅಮಿತ್ರಜಿತ್ ಘೋಷ್ ಮತ್ತು ಸಹಚಾಲಕ ಅಶ್ವಿನ್ ನಾಯಕ್ (ಅರ್ಕಾ ಮೋಟಾರ್ ಸ್ಪೋರ್ಟ್ಸ್) ಮೂರನೇ ಸ್ಥಾನಪಡೆದರು. ಲೀಡರ್ ಬೋರ್ಡ್ ನಮೊದಲನಾಲ್ಕು ಸ್ಥಾನಗಳನ್ನೂ ಅರ್ಕಾ ಮೋಟಾರ್ ಸ್ಪೋರ್ಟ್ ನಚಾಲಕರು ಪಡೆದುಕೊಂಡಿದ್ದಾರೆ.
APRCನಾಳೆ ಐದು ವಿಶೇಷ ಹಂತಗಳೊಂದಿಗೆ ಮುಕ್ತಾಯಗೊಳ್ಳಲಿದೆ.
ಇಂದಿನಫಲಿತಾಂಶಗಳು:
2.ಹರ್ ಕೃಷ್ಣವಾಡಿಯಾ/ಕುನಾಲ್ ಕಾಶ್ಯಪ್ (ಆರ್ಕಾಮೋಟಾರ್ ಸ್ಪೋರ್ಟ್ಸ್)- (01:06:34.2s)
3. ಅಮಿತ್ರಜಿತ್ ಘೋಷ್/ಅಶ್ವಿನ್ ನಾಯಕ್ (ಅರ್ಕಾಮೋಟಾರ್ ಸ್ಪೋರ್ಟ್ಸ್) - (01:06:39.8s)
4. ಫಿಲಿಪ್ಪೋಸ್ ಮತ್ತಾಯಿ/ಹರಿಶ್ ಕೆಎನ್ (ಅರ್ಕಾಮೋಟಾರ್ ಸ್ಪೋರ್ಟ್ಸ್) - (01:06:51.3s)

Comments
Post a Comment