ಕಾಶ್ಮೀರದ ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ .
ಕಾಶ್ಮೀರದ ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರ ವತಿಯಿಂದ ಕಾಶ್ಮೀರದ ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮಲ್ಲೇಶ್ವರಂ ಜಿಲ್ಲಾ ಸಂಚಾಲಕ್ ಕೋಟಪ್ಪ ಮರಡಿ ಜಮ್ಮು ಮತ್ತು ಕಾಶ್ಮೀರ ಭಾರತಮಾತೆಯ ಸಿಂಧೂರ ಎನ್ನುವುದನ್ನು ವಿದ್ಯಾರ್ಥಿ ಪರಿಷತ್ ಈ ಹಿಂದಿನಿಂದಲೂ ಪ್ರತಿಪಾದಿಸುತ್ತಾ article 370ರ ರದ್ದತಿಗಾಗಿ ಹೋರಾಟವನ್ನು ನಡೆಸುತ್ತಾ ಬಂದಿತ್ತು, ಇತ್ತೀಚಿಗೆ ಕೇಂದ್ರ ಸರ್ಕಾರದ ನೀತಿಗಳಿಂದ ಜಮ್ಮು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಹತೋಟಿಗೆ ಬಂದಿತ್ತು ಆದರೆ ನೆನ್ನೆ ಜಮ್ಮು ಕಾಶ್ಮೀರದ ಪಹಲ್ಗಾಮ್ ಪ್ರವಾಸಿಗರ ಮೇಲೆ ನಡೆದಿರುವ ದಾಳಿ ಉಗ್ರರ ಹೇಡಿತನದ ದಾಳಿ ಎಂದು ಉಗ್ರರ ದಾಳಿಯನ್ನು ಖಂಡಿಸಿದರು. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಇದು ಸಾರ್ವಕಾಲಿಕ ಸತ್ಯ ಅಲ್ಲಿನ ಪ್ರತ್ಯೇಕವಾದಿ ಮನಸ್ಥಿತಿಯನ್ನು ಬದಲಾಯಿಸಬೇಕೆಂದು ಆಗ್ರಹಿಸಿದರು. ಮತ್ತು ಈ ಅಮಾನವೀಯ ಕೃತ್ಯದಲ್ಲಿ ಮಡಿದವರಿಗೆ ಸಂತಾಪವನ್ನು ಸೂಚಿಸಲಾಯಿತು.
ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಪರಿಷತ್ತಿನ ಪ್ರಾಂತ ಮಾಧ್ಯಮ ಸಂಚಾಲಕರಾದ ಪ್ರೀತಿ ಆರಾಧ್ಯ ಹಾಗೂ ಪ್ರಮುಖರಾದ ದಿವಿಜ್ ಗೌಡ, ಧ್ಯಾನ್, ಭಾಗ್ಯವಂತ, ರಾಮ ಸ್ವರೂಪ್ ಹಾಗೂ ಶಿವ ಉಪಸ್ಥಿತರಿದ್ದರು.


Comments
Post a Comment