ಮಾದಿಗ ಸಮುದಾಯದ ಒಳಮೀಸಲಾತಿಗೆ ಒತ್ತಾಯ32 ವರ್ಷಗಳ ಹೋರಾಟಕ್ಕೆ ಹೊಸ ಚೈತನ್ಯ: ಫ್ರೀಡಂ ಪಾರ್ಕ್‌ನಲ್ಲಿ ಮೇ 24ರಂದು ಬೃಹತ್ “ಸಂವಿಧಾನ ಜಾಗೃತಿ ಸಮಾವೇಶ”

 

ಮಾದಿಗ ಸಮುದಾಯದ ಒಳಮೀಸಲಾತಿಗೆ ಒತ್ತಾಯ32 ವರ್ಷಗಳ ಹೋರಾಟಕ್ಕೆ ಹೊಸ ಚೈತನ್ಯ: ಫ್ರೀಡಂ ಪಾರ್ಕ್‌ನಲ್ಲಿ ಮೇ 24ರಂದು ಬೃಹತ್ “ಸಂವಿಧಾನ ಜಾಗೃತಿ ಸಮಾವೇಶ”

ಬೆಂಗಳೂರು, ಏಪ್ರಿಲ್ 28:
ರಾಜ್ಯದಲ್ಲಿ ಮಾದಿಗ ಸಮುದಾಯದ ಒಳಮೀಸಲಾತಿ ಜಾರಿಗಾಗಿ ಮತ್ತು ಇತರ ಬೇಡಿಕೆಗಳ ಅನುಷ್ಠಾನಕ್ಕೆ ಒತ್ತಾಯಿಸಿ, ಮೇ 24ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದ ಫ್ರೀಡಂ ಪಾರ್ಕ್‌ನಲ್ಲಿ “ಸಂವಿಧಾನ ಜಾಗೃತಿ ಸಮಾವೇಶ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಆದಿಜಾಂಬವ/ಮಾದಿಗ ಪೌರಕಾರ್ಮಿಕ ಸಂಘಟನೆಗಳ ಒಕ್ಕೂಟ ಪ್ರಕಟಿಸಿದೆ.

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪಾಲನಹಳ್ಳಿ ಮಠದ ಸಿದ್ಧರಾಜು ಸ್ವಾಮೀಜಿ, ಆದಿಜಾಂಬವ ಸಮುದಾಯದ ಅಧ್ಯಕ್ಷ ಸಿದ್ಧರಾಜು,ಸಂತೋಷ ಸವಣೂರ ರಾಜ್ಯ ಅಧ್ಯಕ್ಷರು ಅಖೀಲ ಕರ್ನಾಟಕ ಢೋಹರ ಕಕ್ಕಯ್ಯಾ ಸಮಾಜ, ಪ್ರಧಾನ ಕಾರ್ಯದರ್ಶಿ ರಮೇಶ್ ಮೊದಲಾದವರು ಭಾಗವಹಿಸಿದ್ದರು.
ಒಕ್ಕೂಟವು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಆದಿಜಾಂಬವ ಸಂಘ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಮಾದಿಗ ದಂಡೋರ, ಜಗಜೀವನರಾಮ್ ಸಂಘ, ಮಾತಂಗ ಪರಿವಾರ, ಮಾದಿಗ ಮಹಾಸಭಾ, ಹರಳಯ್ಯ ಸಮಾಜ, ಪೌರಕಾರ್ಮಿಕರ ಸಂಘ ಹಾಗೂ ಅನೇಕ ಸಂಘಟನೆಗಳನ್ನು ಒಳಗೊಂಡಿದೆ.

ಮೇಲು ತಿಳಿಸಿದ ಪ್ರಮುಖ ಅಂಶಗಳು:

1992ರಿಂದ ಮಾದಿಗ ಸಮುದಾಯವು ಪರಿಶಿಷ್ಟ ಜಾತಿಗಳ ಶೇ.15ರ ಮೀಸಲಾತಿಯಲ್ಲಿ ಪ್ರತ್ಯೇಕ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದೆ.

ಎಸ್.ಎಂ. ಕೃಷ್ಣ ಸರ್ಕಾರದ ಕಾಲದಲ್ಲಿ (2005) ರಚಿಸಲಾದ ಏಕಸದಸ್ಯ ಆಯೋಗ 2012ರಲ್ಲಿ ವರದಿ ಸಲ್ಲಿಸಿದ್ದು, ಅದರ ಆಧಾರದ ಮೇಲೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಸಮೀಕ್ಷಾ ವರದಿಯೂ ಸಿದ್ಧವಾಗಿದೆ.

ಇದೀಗ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗವನ್ನು ರಚಿಸಿ, ಮೇ 5ರಿಂದ 17ರವರೆಗೆ ಮನೆಮನೆ ಸಮೀಕ್ಷೆ ಮತ್ತು ಮೇ 19ರಿಂದ 21ರವರೆಗೆ ಬೂತ್ ಮಟ್ಟದ ಸಮೀಕ್ಷೆ ನಡೆಸುತ್ತಿದೆ. ಮೇ 19ರಿಂದ 23ರವರೆಗೆ ಆನ್‌ಲೈನ್ ದಾಖಲೆ ಅವಕಾಶ ನೀಡಲಾಗಿದೆ.

ಸಮುದಾಯದವರು ಸಮೀಕ್ಷೆಯಲ್ಲಿ ತಮ್ಮನ್ನು “ಮಾದಿಗ” ಎಂದು ಸ್ಪಷ್ಟವಾಗಿ ನೊಂದಾಯಿಸಲು ಒಕ್ಕೂಟದಿಂದ ಜಾಗೃತಿ ಮೂಡಿಸಲಾಗುತ್ತಿದೆ.


ಹೋರಾಟದ ಉದ್ದೇಶ:

ಮಾದಿಗ ಸಮುದಾಯಕ್ಕೆ ಆಧುನಿಕ ಭಾರತದ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಹಕ್ಕುಗಳ ಅವಕಾಶ ಒದಗಿಸಲು ಒತ್ತಾಯ.

ಸಮಾಜದ ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕ ಮಟ್ಟದಲ್ಲಿ ಸಮುದಾಯದ ಸ್ವಾಭಿಮಾನವನ್ನು ಪ್ರತಿಷ್ಠಾಪಿಸುವ ಗುರಿ.

52ಕ್ಕೂ ಹೆಚ್ಚು ಉಪನಾಮಗಳಲ್ಲಿ ಪಡಿದು ಬಾಳುತ್ತಿರುವ ಸಮುದಾಯದವರು ಒಂದಾಗಿ ಒಟ್ಟುಗೂಡಲು ಪ್ರೇರಣೆ.


ಒಕ್ಕೂಟದ ಆಶಯ:
“ಸ್ವಾಭಿಮಾನದಿಂದ ಬಾಳೋಣ, ಹಕ್ಕಿಗಾಗಿ ಹೋರಿಸೋಣ” ಎಂಬ ಧ್ಯೇಯದೊಂದಿಗೆ, ರಾಜ್ಯದ ಮಾದಿಗ ಸಮುದಾಯಕ್ಕೆ ನ್ಯಾಯಯುತ ಸ್ಥಾನಮಾನ ಒದಗಿಸಲು ಸರ್ಕಾರವನ್ನು ಒತ್ತಾಯಿಸುವುದು.

ಮಾಹಿತಿ ಪ್ರಕಾರ, ಮೇ 24ರಂದು ನಡೆಯಲಿರುವ ಸಮಾವೇಶದಲ್ಲಿ ರಾಜ್ಯದಾದ್ಯಂತ ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಒಕ್ಕೂಟದ ಮುಖಂಡರು, ಸಮುದಾಯದ ಸದಸ್ಯರು ಮತ್ತು ಹೋರಾಟಗಾರರು ಸೇರಿ ಆ ದಿನ ಸರ್ಕಾರದ ಗಮನ ಸೆಳೆಯಲು ಬೃಹತ್ ಸಮಾವೇಶದ ಮೂಲಕ ತಮ್ಮ ಹಕ್ಕುಬದ್ಧ ಬೇಡಿಕೆಗಳನ್ನು ಪ್ರಸ್ತಾಪಿಸಲಿದ್ದಾರೆ ಎಂದು ಹೇಳಿದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims