ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್” ಪ್ರಶಸ್ತಿ ಪ್ರದಾನ ಸಮಾರಂಭ ಮೇ 19ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ
ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್” ಪ್ರಶಸ್ತಿ ಪ್ರದಾನ ಸಮಾರಂಭ ಮೇ 19ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ
ಬೆಂಗಳೂರು: ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ (ರಿ) ಅವರಿಂದ ಆಯೋಜಿತ “ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್” ಪ್ರಶಸ್ತಿ ಪ್ರದಾನ ಸಮಾರಂಭವು 2025ರ ಮೇ 19, ಸೋಮವಾರ, ಬೆಂಗಳೂರು ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಲಿದೆ.
ವಿಶ್ವಕರ್ಮ ಸಮುದಾಯದ ಐತಿಹಾಸಿಕ ಪಂಚ ಶಿಲ್ಪ ವೃತ್ತಿಗಳಾದ ಕಾಷ್ಟ ಶಿಲ್ಪ (ಮರ), ಲೋಹ ಶಿಲ್ಪ (ಕಬ್ಬಿಣ), ಶಿಲಾ ಶಿಲ್ಪ (ಕಲ್ಲಿನ ಕೆತ್ತನೆ), ಎರಕ ಶಿಲ್ಪ (ಕಂಚು), ಸ್ವರ್ಣ ಶಿಲ್ಪ (ಚಿನ್ನ–ಬೆಳ್ಳಿ)ಗಳಲ್ಲಿ ವಿಶಿಷ್ಟ ಸಾಧನೆಗೈದ ಐದು ಪುರುಷ ಸಾಧಕರಿಗೆ ಮತ್ತು ಕಲೆ, ಸಾಹಿತ್ಯ, ಶಿಕ್ಷಣ, ಸಂಗೀತ, ಕಾನೂನು, ಕ್ರೀಡೆ, ಚಿತ್ರರಂಗ, ರಂಗಭೂಮಿ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐದು ಮಹಿಳಾ ಸಾಧಕರಿಗೆ “ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಪ್ರತಿ ಪುರಸ್ಕಾರವು ನಗದು ಬಹುಮಾನ, ಸ್ಮರಣಿಕೆ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪುರಸ್ಕೃತರಿಗೆ ‘ವಿಶ್ವಕರ್ಮ ಕಲಾಸಿಂಧು’, ‘ವಿಶ್ವಕರ್ಮ ಶಿಲ್ಪಶ್ರೀ’, ‘ವಿಶ್ವಕರ್ಮ ಕಲಾ ಕೌಸ್ತುಭ’, ‘ವಿಶ್ವಕರ್ಮ ಕಲಾ ಸೌರಭ’, ‘ವಿಶ್ವಕರ್ಮ ಕಲಾಶ್ರೀ’ ಹೀಗೆ ವಿಭಿನ್ನ ಪದಕಗಳು ನೀಡಿ ಗೌರವಿಸಲಾಗುವುದು.

ಈ ಬಗ್ಗೆ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಎಂ. ಸೋಮಶೇಖರ್ ಮತ್ತು ಸರ್ವಾಧ್ಯಕ್ಷರಾದ ಡಾ|| ವಸಂತ ಮುರುಳಿ ಆಚಾರ್ ಅವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರುದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Comments
Post a Comment