ನಮ್ಮ ಅಭಯ ಹಸ್ತ ಸಂಸ್ಥೆಯು 06/04/2025 ರಂದು ಆಯೋಜಿಸುತ್ತಿರುವ 250 ನೇ ರಕ್ತದಾನ ಶಿಬಿರ
ನಮ್ಮ ಅಭಯ ಹಸ್ತ ಸಂಸ್ಥೆಯು 06/04/2025 ರಂದು ಆಯೋಜಿಸುತ್ತಿರುವ 250 ನೇ ರಕ್ತದಾನ ಶಿಬಿರ
2020ರಲ್ಲಿ ಕೊರೊನ ವಿಷಮ ಪರಿಸ್ಥಿತಿಯಲ್ಲಿ ಸಮಾಜಮುಖಿ ಮನೋಭಾವದಿಂದ ಪ್ರಾರಂಭವಾದ ಸಂಸ್ಥೆ ಅಭಯಹಸ್ತ, ನಮ್ಮ ಸಂಸ್ಥೆಯು ತನ್ನ ಮೊದಲ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು 9 ಮೇ 2020 ರಂದು. ನಂತರದಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ ನಾಮಧೇಯದೊಂದಿಗೆ ಅಂದಿನಿಂದ ಇಲ್ಲಿಯ ತನಕ ಕೇವಲ ವರ್ಷದ ಅವಧಿಯಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು. ಬೆಂಗಳೂರು ಹಾಗೂ ವಿದೇಶದಲ್ಲಿ ( ದುಬೈ) ಸೇರಿ ವಿವಿಧೆಡೆಯಲ್ಲಿ ನಿರಂತರವಾಗಿ ರಕ್ತದಾನ ಶಿಬಿರ ಆಯೋಜಿಸುತ್ತಾ ಬಂದಿದೆ.
ಇದುವರೆಗೆ ಒಟ್ಟು 32,000 ಯೂನಿಟ್ ರಕ್ತವನ್ನು ಕೇವಲ 5 ವರ್ಷದಲ್ಲಿ ಸಂಗ್ರಹಿಸಿ ಸಾವಿರಾರು ಜೀವಗಳಿಗೆ ನೆರವಾದ ಧನ್ಯತೆ ನಮ್ಮದು. 2021ನೇ ಸಾಲಿನಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಇದರ ಸಾಧನೆಯನ್ನು ಗುರುತಿಸಿ ರಾಜ್ಯದಲ್ಲಿ ಒಂದು ವರ್ಷದ ಅವಧಿಯಲ್ಲಿ ಅಭೂತಪೂರ್ವವೆಂಬಂತೆ 8000 ಯೂನಿಟ್ ರಕ್ತವನ್ನು ಸಂಗ್ರಹಿಸಿದ ಸಂಸ್ಥೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ಬೆಂಗಳೂರಿನಲ್ಲಿ ಗುರುತಿಸಿ ಸಂಸ್ಥೆಯನ್ನು ಸನ್ಮಾನಿಸಿದೆ. ಮೇಲ್ಪಂಕ್ತಿಯ ಸೇವೆಯನ್ನು ಗುರುತಿಸಿ 2023ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಅಭಯಹಸ್ತದ ಮುಡಿಗೇರಿದೆ.
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ತನ್ನ 250ನೇ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಹೊಸ್ತಿಲಿನಲ್ಲಿದೆ. ಈ ಮೈಲಿಗಲ್ಲಿನ ರಕ್ತದಾನ ಶಿಬಿರವನ್ನು "ಹೆಗ್ಗುರುತು- 250" ಎನ್ನುವ ಶೀರ್ಷಿಕೆಯೊಂದಿಗೆ ದಿನಾಂಕ 06/04/2025 ರಂದು ಭಾನುವಾರ ಬೆಂಗಳೂರಿನ ರಾಜಾಜಿನಗರದ ಡಾ. ರಾಜಕುಮಾರ್ ರಸ್ತೆಯಲ್ಲಿರುವ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗುತ್ತಿದೆ.
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ರಕ್ತದಾನ ಶಿಬಿರವನ್ನು ಉದ್ಘಾಟಿಸಲಿದ್ದು ವಿವಿಧ ಗಣ್ಯರ ಉಪಸ್ಥಿತಿ ಇರಲಿದೆ. ಟೀಮ್ ಶಕ್ತಿ ನೋನಿಯು ನಮ್ಮ ರಕ್ತದಾನ ಶಿಬಿರಕ್ಕೆ ಸಹಕಾರ ನೀಡುತ್ತಿದ್ದು ರೆಡ್ ಕ್ರಾಸ್ ಮತ್ತು ಜಯದೇವ ಆಸ್ಪತ್ರೆಯ ಸಹಯೋಗ ಇರಲಿದೆ. ಸುಮಾರು 500 ಯೂನಿಟ್ ರಕ್ತ ಸಂಗ್ರಹವಾಗುವ ನಿರೀಕ್ಷೆ ಇದೆ.
ದಿನಾಂಕ 06/04/2025 ರಂದು ಆಯೋಜಿಸುತ್ತಿರುವ 250 ನೇ ರಕ್ತದಾನ ಶಿಬಿರವಾದ ಕುರಿತಾಗಿ ತಮ್ಮ ಮಾಧ್ಯಮದಲ್ಲಿ ಪ್ರಚಾರ ನೀಡುವಂತೆ ಕೋರುತ್ತಾ, ಕಾರ್ಯಕ್ರಮದಂದು ತಮ್ಮ ವರದಿಗಾರರು ಮತ್ತು ಛಾಯಾಗ್ರಾಹಕರನ್ನು ಕಳುಹಿಸಬೇಕಾಗಿ ವಿನಂತಿಸುತ್ತೇವೆ.
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
(ರಾಘವೇಂದ್ರ ಕಾಂಚನ್ ಮರವಂತೆ)
ಸಂಚಾಲಕರು (ಬೆಂಗಳೂರು ವಿಭಾಗ) ಅಭಯಹಸ್ತ ಚಾರಿಟೇಬಲ್ ಟ್ರಸ್ಟ್(ರಿ) 9900445134
ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯಿಂದ ಸನ್ಮಾನಿತ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ


Comments
Post a Comment