ಪದ್ಮ ಶ್ರೀ ಮಂದಕೃಷ್ಣ ಮಾದಿಗ ರವರ ಆದೇಶದ ಮೇರೆಗೆ, ಮಾದಿಗ ದಂಡೋರ ರಾಜ್ಯಾಧ್ಯಕ್ಷರಾದ ನರಸಪ್ಪ ದಂಡೋರ ಒಳ ಮೀಸಲಾತಿ ಜಾರಿ ಮಾಡಲೇಬೇಕೆಂದು ಪತ್ರಿಕಾ ಪ್ರಕಟಣೆ ಮಾಡಿದರು


ಪದ್ಮ ಶ್ರೀ ಮಂದಕೃಷ್ಣ ಮಾದಿಗ ರವರ ಆದೇಶದ ಮೇರೆಗೆ, ಮಾದಿಗ ದಂಡೋರ ರಾಜ್ಯಾಧ್ಯಕ್ಷರಾದ ನರಸಪ್ಪ ದಂಡೋರ  ಒಳ ಮೀಸಲಾತಿ ಜಾರಿ ಮಾಡಲೇಬೇಕೆಂದು ಪತ್ರಿಕಾ  ಪ್ರಕಟಣೆ ಮಾಡಿದರು

 ಪದ್ಮ ಶ್ರೀ ಮಂದಕೃಷ್ಣ ಮಾದಿಗ ರವರ ಆದೇಶದ ಮೇರೆಗೆ, ಮಾದಿಗ ದಂಡೋರ(MRPS) ನಾಯಕತ್ವದಲ್ಲಿ ಸತತ 8ನೇ ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಹೋರಾಟಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅನಾರೋಗ್ಯದ ಮಧ್ಯೆಯೂ ಮೊನ್ನೆ ದಿನಾಂಕ: 10/03/2025 ರಂದು ಮಾದಿಗ ದಂಡೋರ(MRPS) ರಾಜ್ಯಾಧ್ಯಕ್ಷರು ಬಿ.ನರಸಪ್ಪ ದಂಡೋರರವರು ಹಾಗೂ ರಾಜ್ಯ ಸಮಿತಿ ಪದಾಧಿಕಾರಿಗಳ ನಿಯೋಗವನ್ನು ಭೇಟಿ ಮಾಡಲು ತಮ್ಮ ಗೃಹ ಕಛೇರಿಗೆ ಆಹ್ವಾನಿಸಿದ್ದರು. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಮಾದಿಗ ದಂಡೋರ MRPS ರಾಜ್ಯ ಸಮಿತಿಯನ್ನು ತಮ್ಮ ಬೇಡಿಕೆಗಳ ಕುರಿತು ಚರ್ಚಿಸಿ ಮನವಿ ಪತ್ರವನ್ನು ಸಲ್ಲಿಸಿದರು.

ಪ್ರಮುಖ ಬೇಡಿಕೆಗಳು: ೧) ಸಾಮಾಜಿಕ ನ್ಯಾಯಕ್ಕಾಗಿ ಮುವ್ವತ್ತು ವರ್ಷಗಳ ಒಳಮೀಸಲಾತಿ ಹೋರಾಟಕ್ಕೆ ಮತ್ತು ಸುಪ್ರೀಂ ಕೋರ್ಟ್

ತೀರ್ಪಿಗೆ ಮನ್ನಣೆ ನೀಡಿ ನ್ಯಾ.ನಾಗಮೋಹನ್ ದಾಸ್ ಏಕಸದಸ್ಯ ಆಯೋಗದಿಂದ ಮಧ್ಯಂತರ ವರದಿ ತರಿಸಿಕೊಂಡು ಮಾದಿಗ ಮತ್ತು ಮಾದಿಗ ಸಂಬಂಧಿತ ಉಪಜಾತಿಗಳಿಗೆ 6% ಒಳಮೀಸಲಾತಿಯನ್ನು ತಕ್ಷಣ ಜಾರಿ ಮಾಡಬೇಕು. 9) ಒಳಮೀಸಲಾತಿ ಜಾರಿಯಾಗುವ ವರೆಗೆ ಯಾವುದೇ ಕಾರಣಕ್ಕೂ ಎಸ್ಪಿ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬಾರದು ಮತ್ತು ಈ ಹಿಂದೆ ಬಿ.ಕೆ ಪವಿತ್ರ ಪ್ರಕರಣ ಮತ್ತು ಹೈದರಾಬಾದ್ ಕರ್ನಾಟಕದವರಿಗೆ ಮೀಸಲಾತಿ ನೀಡುವ ಸಮಯದಲ್ಲಿ ಮಾಡಿದ ಹಾಗೆ ಎಲ್ಲ ಮುಂಬಡ್ತಿ ಆದೇಶಗಳನ್ನು ಒಳಮೀಸಲಾತಿ ಜಾರಿಯಾಗುವವರೆಗೆ ತಡೆ ಹಿಡಿಯಬೇಕು. ೩) ಭಾರತೀಯ ಯೋಜನಾ ಆಯೋಗದ(Planning Commission Of India) ನಿಯಮಗಳ ಅನುಸಾರವೇ SCSP/TSP ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು, ಯಾವುದೇ ಕಾರಣಕ್ಕೂ SCSP/TSP ನಿಧಿಯನ್ನು ಗ್ಯಾರಂಟಿ ಯೋಜನೆ ಅಥವಾ ಬೇರೆ ಯಾವುದೇ ಉದ್ದೇಶಗಳಿಗಾಗಿ ಬಳಸಬಾರದು.

ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಬ್ಯಾಕ್ ಲಾಗ್ ಉದ್ಯೋಗಗಳನ್ನು ಭರ್ತಿ ಕುರಿತು ಸಮಾಜ ಕಲ್ಯಾಣ ಇಲಾಖೆ ಸಚಿವರು ಡಾ|| ಹೆಚ್.ಸಿ.ಮಹದೇವಪ್ಪ ಅವರನ್ನು ಕರೆದು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕೆಂದು ಹೇಳುತ್ತೇನೆ ಮತ್ತು ಒಳ ಮೀಸಲಾತಿಯನ್ನು ನಾನೇ ಜಾರಿ ಮಾಡುತ್ತೇನೆಂದು ಮಾತು ಕೊಟ್ಟಿದ್ದೇನೆ ಖಂಡಿತ ಜಾರಿ ಮಾಡಿ ನನ್ನ ಬದ್ಧತೆಯನ್ನು ತೋರಿಸುತ್ತೇನೆ ಎಂದು MRPS ರಾಜ್ಯಾಧ್ಯಕ್ಷರು ಶ್ರೀ ಬಿ.ನರಸಪ್ಪ ದಂಡೋರ ಹಾಗೂ ರಾಜ್ಯ ಸಮಿತಿ ಇತರ ಪದಾಧಿಕಾರಿಗಳಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಯತೀಂದ್ರ ಸಿದ್ದರಾಮಯ್ಯ ಮತ್ತು ಶ್ರೀ ರವಿ ಬೋಸ್ ರಾಜ್ಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

MRPS ನಿಯೋಗದಲ್ಲಿ ಶ್ರೀ ಜೆ. ಎಮ್.ದೇವರಾಜ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳು, ಶ್ರೀ ಫರ್ನಾಂಡಿಸ್ ಹಿಪ್ಪಳಗಾವ್ ರಾಜ್ಯ ಕಾರ್ಯಾಧ್ಯಕ್ಷರು, ಡಾ|| ಎಸ್. ರಾಮಕೃಷ್ಣ ರಾಜ್ಯ ಉಪಾಧ್ಯಕ್ಷರು. ಶ್ರೀ ಕತ್ತಿ ವೆಂಕಟೇಶ್ ರಾಜ್ಯ ವಕ್ತಾರರು. ಶ್ರೀ ಟಿ.ಆರ್ ವಿಜಯಕುಮಾ ಹಾಸನ ರಾಜ್ಯ ಪ್ರಧಾನ ಕಾರ್ಯದರ್ಶಿ, ಶ್ರೀ ಮಂಜುನಾಥ ಕೊಂಡದಲ್ಲಿ ಉತ್ತರ ಕರ್ನಾಟಕ ವಿಭಾಗೀಯ ಅಧ್ಯಕ್ಷರು ಹಾಗೂ ರಾಜ್ಯ

 ವಕ್ತಾರರು, ಶ್ರೀ ಶಾಮ್ ರಾಜ್ ಕಲಾಮಂಡಳಿ ಅಧ್ಯಕ್ಷರು, ಶ್ರೀ ತ್ರಿಲೋಕ ಚಂದರ್ ಬೆಂಗಳೂರು ಜಿಲ್ಲಾಧ್ಯಕ್ಷರು, ಶ್ರೀ ಪ್ರಮೋದ್ ರಾಜ್ಯ ವಿದ್ಯಾರ್ಥಿ ಘಟಕದ ಅಧ್ಯಕ್ಷರು, ಶ್ರೀ ವಿಜಯಕುಮಾರ್ ಹಿಪ್ಪಳಗಾವ್ ಬೀದರ್ ಜಿಲ್ಲಾಧ್ಯಕ್ಷರು, ಶ್ರೀ ಕಾಶಪ್ಪ ಹೆಗ್ಗಣೆರ ಯಾದಗಿರಿ ಜಿಲ್ಲಾಧ್ಯಕ್ಷರು, ಶ್ರೀ ಮಂಜುನಾಥ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರು, ಶ್ರೀ ರಂಜಿತ್ ದಂಡೋರ ಜಿಲ್ಲಾ ಯುವ ಸೇನೆ ಅಧ್ಯಕ್ಷರು ರಾಯಚೂರು ಹಾಗೂ ಇನ್ನಿತರ ರಾಜ್ಯ ಪದಾಧಿಕಾರಿಗಳು ಭಾಗವಹಿಸಿದ್ದರು.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation