ಪ್ರೆಸ್ ಕ್ಲಬ್ ನಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಹೋರಾಟಗಾರ ಸಮಿತಿ (ರಿ) ವತಿಯಿಂದ ಅಧ್ಯಕ್ಷರಾದ ಗಾಯತ್ರಿ ಚಂದ್ರಶೇಖರ್ ಉಪಾಧ್ಯಕ್ಷರಾದ ಶ್ರೀ ಮಂಜುನಾಥ ಮುಂತಾದವರು ಪತ್ರಿಕಾ ಗೋಷ್ಠಿ ನಡೆಸಿರುತ್ತಾರೆ.
ಪ್ರೆಸ್ ಕ್ಲಬ್ ನಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಹೋರಾಟಗಾರ ಸಮಿತಿ (ರಿ) ವತಿಯಿಂದ ಅಧ್ಯಕ್ಷರಾದ ಗಾಯತ್ರಿ ಚಂದ್ರಶೇಖರ್ ಉಪಾಧ್ಯಕ್ಷರಾದ ಶ್ರೀ ಮಂಜುನಾಥ ಮುಂತಾದವರು ಪತ್ರಿಕಾ ಗೋಷ್ಠಿ ನಡೆಸಿರುತ್ತಾರೆ.
ಅಕ್ಕಸಾಲಿಗ ಸಮುದಾಯದ ಬಗ್ಗೆ ಆರ್ ಆರ್ ಗೋಲ್ಡ್ ಪ್ಯಾಲೆಸ್ ನ ಮಾಲೀಕರಾದ ರಮೇಶ್ ರವರು ಜಾಹಿರಾತಿನ ಮೂಲಕ ದಾರಿತಪ್ಪಿಸುವ ಮತ್ತು ಮಾನನಷ್ಟ ಹೇಳಿಕೆಯನ್ನು ನೀಡಿರುವುದರ ವಿರುದ್ಧ ಪತ್ರಿಕಾ ಗೋಷ್ಠಿ ಏರ್ಪಡಿಸಿರುತ್ತಾರೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರಂ ಆರ್ ಆರ್ ಗೋಲ್ಡ್ ಪ್ಯಾಲೇಸ್ ನ ಮಾಲೀಕರಾದ ರಮೇಶ್ ರವರು ತಾವು ನೀಡಿದ ಜಾಹಿರಾತಿನಲ್ಲಿ ಎಲ್ಲಾ ಅಕ್ಕಸಾಲಿಗರು ಪ್ರತಿ 10 ಗ್ರಾಂ ಗೆ ಒಂದು ಗ್ರಾಂ ಚಿನ್ನವನ್ನು ವಂಚಿಸುತ್ತಾರೆ ಎಂದೂ, ಅಕ್ಕಸಾಲಿಗ ಸಮುದಾಯದ ಬಗ್ಗೆ ದಾರಿ ತಪ್ಪಿಸುವ ಮತ್ತು ಮಾನ ನಷ್ಟಕರ ಹೇಳಿಕೆಯನ್ನು ನೀಡಿರುತ್ತಾರೆ. ನಾವು ಈ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇವೆ. ಈ ಹೇಳಿಕೆ ಆಧಾರ ರಹಿತ ಮಾತ್ರವಲ್ಲದೆ ತಲೆಮಾರುಗಳಿಂದ ಸಾಂಪ್ರದಾಯಿಕ ಅಕ್ಕಸಾಲಿಗ ಕೆಲಸ ಮಾಡಿಕೊಂಡು ಮೌಲ್ಯಗಳನ್ನು ಎತ್ತಿ ಹಿಡಿಯುವ ವಿಶ್ವಕರ್ಮ ಸಮುದಾಯದ ಸಮಗ್ರತೆ, ನೈತಿಕತೆ ಮತ್ತು ಕರಕುಶಲತೆಗೆ ಮಾಡಿದ ಅವಮಾನವಾಗಿದೆ. ಆದುದರಿಂದ ಈ ಕೂಡಲೆ ಆರ್ ಆರ್ ಗೋಲ್ಡ್ ಪ್ಯಾಲೆಸ್ ನ ಮಾಲೀಕರು ನಮ್ಮೆದುರಿಗೆ ಮಾದ್ಯಮದ ಮೂಲಕ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿರುತ್ತಾರೆ.
ಒಂದು ವೇಳೆ ಇವರು ಕ್ಷಮೆಯಾಚಿಸಿಲ್ಲ ಎಂದಾದರೆ ರಾಜ್ಯಾದ್ಯಂತ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿರುತ್ತಾರೆ.
ಇಂದು ಈ ವಿಚಾರವಾಗಿ ದೂರು ನೀಡಲು ಕಾರ್ಮಿಕ ಸಚಿವರು ಮತ್ತು ಗೃಹ ಸಚಿವರ ಮನೆಗೆ ತೆರಳುವುದಾಗಿ ಮಾಹಿತಿ ತಿಳಿಸಿರುತ್ತಾರೆ.
Comments
Post a Comment