ಬೈಲಾ ಉಲ್ಲಂಘನೆ ಮಾಡಿರುವುದು ಶ್ರೀ ಗುರುಲಿಂಗಯ್ಯ, ಪ್ರಧಾನ ಕಾರ್ಯದರ್ಶಿ, ಶ್ರೀ. ಆರ್. ಕುಮಾರ್ ಖಜಾಂಚಿ ಮತ್ತು ಬೆಸ್ಕಾಂ ಉಪಾಧ್ಯಕ್ಷ ರಾಜಕುಮಾರ್ ರವರಾಗಿರುತ್ತಾರೆ. ಆದರೆ ಶ್ರೀ. ಕೆ. ದಾಸ್ ಪ್ರಕಾಶ್ ಮಾಜಿ ಅಧ್ಯಕ್ಷರ ಪಾತ್ರ ಇದರಲ್ಲಿ ಇರುವುದಿಲ್ಲ.

 

ಬೈಲಾ ಉಲ್ಲಂಘನೆ ಮಾಡಿರುವುದು ಶ್ರೀ ಗುರುಲಿಂಗಯ್ಯ, ಪ್ರಧಾನ ಕಾರ್ಯದರ್ಶಿ, ಶ್ರೀ. ಆರ್. ಕುಮಾರ್ ಖಜಾಂಚಿ ಮತ್ತು ಬೆಸ್ಕಾಂ ಉಪಾಧ್ಯಕ್ಷ ರಾಜಕುಮಾರ್ ರವರಾಗಿರುತ್ತಾರೆ. ಆದರೆ ಶ್ರೀ. ಕೆ. ದಾಸ್ ಪ್ರಕಾಶ್ ಮಾಜಿ ಅಧ್ಯಕ್ಷರ ಪಾತ್ರ ಇದರಲ್ಲಿ ಇರುವುದಿಲ್ಲ.

ಶ್ರೀ. ಕೆ. ದಾಸ್‌ ಪ್ರಕಾಶ್, ಮಾಜಿ ಅಧ್ಯಕ್ಷರು, ಕೆ.ವಿ.ಮಂ. ಪರಿಷ್ಟ ಜಾತಿ 

 ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ (ರಿ: 466), ಬೆಂಗಳೂರು ಆದ ನಾನು 2021-26 ರ ಐದು ವರ್ಷದ ಅವಧಿಗೆ ಚುನಾವಣೆಯಲ್ಲಿ ಆಯ್ಕೆಗೊಂಡು ಸದರಿ ಆಡಳಿತ ಮಂಡಳಿಯಲ್ಲಿ ಕೆ. ದಾಸ್‌ ಪ್ರಕಾಶ್ ಆದ ನಾನು ಅಧ್ಯಕ್ಷನಾಗಿ ದಿನಾಂಕ: 30/04/2023 ರವರಿಗೆ ಪ್ರಾಮಾಣಿಕನಾಗಿ ಮತ್ತು ಸಂಸ್ಥೆಯ ಸೇವಾಭಿವೃದ್ಧಿಗಾಗಿ ಕಾರ್ಯನಿರ್ವಹಿಸಿರುತ್ತೇನೆ.

ನನ್ನ ತೇಜೋವಧೆಗಾಗಿ ನನ್ನ ನಿವೃತ್ತಿ ನಂತರ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನ ವಿರುದ್ಧ ವೃಥಾ ಆರೋಪಗಳು ಮಾಡಿರುತ್ತಾರೆ. ದಿನಾಂಕ: ಜನವರಿ-31-2025 ಮತ್ತು ಫೆಬ್ರವರಿ-15-2025 ರಲ್ಲಿ ಇಲ್ಲ-ಸಲ್ಲದ ಆರೋಪಗಳು ಮಾಡಿ ಪತ್ರಿಕಾಗೋಷ್ಠಿ ನಡೆಸಿ ವೃಥಾ ಆರೋಪಗಳನ್ನು ಮಾಡಿರುತ್ತಾರೆ. ಶ್ರೀ. ಮುನಿರಾಜು, ಸಹಾಯಕ ಕಾರ್ಯದರ್ಶಿ (ನಿವೃತ್ತ) ಮತ್ತು ವಿ.ಪೈ ಕಟ್ಟಿಮನಿ ಉಪಕಾರ್ಯದರ್ಶಿ (ನಿವೃತ್ತ) ಇವರುಗಳು ಪತ್ರಿಕಾಗೋಷ್ಠಿ ಮಾಡಿ ವಿವರಗಳನ್ನು ನೀಡಿರುತ್ತಾರೆ. ಮೇಲ್ಕಂಡ ಸದಸ್ಯರು ನಮ್ಮ ಸಂಸ್ಥೆಯಲ್ಲಿ ನನ್ನೊಡನೆ ಆಡಳಿತ ಸಂಸ್ಥೆಯಲ್ಲಿ ಪದಾಧಿಕಾರಿಗಳಾಗಿದ್ದು, ನನ್ನ ನಿವೃತ್ತಿ ನಂತರ ಅವರು ನಿವೃತ್ತಿ ಆದ ಮೇಲೆ ವೃಥಾ ಸುಳ್ಳು ಆರೋಪಗಳು ಮಾಡಿರುವುದು ನನಗೆ ತುಂಬಾ ನೋವಿನ ಸಂಗತಿಯಾಗಿರುತ್ತದೆ.


ಸಹಕಾರ ಇಲಾಖೆಯ ಆಡಳಿತಾಧಿಕಾರಿಯಾದ ಶ್ರೀ. ಸುರೇಶ್ ಗೌಡ ರ ವತಿಯಿಂದ 2013-16 ರ ಅವಧಿಯಲ್ಲಿ ಆಯ್ಕೆಯಾದ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ಶ್ರೀ. ವಿ.ವೈ. ಗಸ್ತಿ, ಹಿರಿಯ ಉಪಾಧ್ಯಕ್ಷರಾಗಿ ಹೆಚ್.ಆರ್. ರಾಜ್‌ ಕುಮಾರ್, ಕೆ. ದಾಸ್‌ ಪ್ರಕಾಶ್ ಆದ ನಾನು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಶ್ರೀ. ಓ. ಕರಿಯಣ್ಣ ರವರು ಖಜಾಂಚಿಯಾಗಿ, ಶ್ರೀ. ನಂಜುಂಡಸ್ವಾಮಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಸಂಸ್ಥೆಯ ವತಿಯಿಂದ ರಾಜಾಜಿನಗರದಲ್ಲಿ ಡಾ. ಬೀಮ್‌ ರಾವ್ ಪ್ಯಾಲೇಸ್ ಭವನವನ್ನು ನಿರ್ಮಾಣ ಮಾಡಿರುತ್ತೇವೆ. ಇದರ ಕಟ್ಟಡದ ಅಂತಿಮದ ಒಟ್ಟು ಮೊತ್ತ: 12.41 ಕೋಟಿ ರೂ.ಗಳು ಮಾತ್ರ ವೆಚ್ಚವಾಗಿರುತ್ತದೆ.

ಸಂಸ್ಥೆಯ ಬೈಲಾ ನಿಯಮಾವಳಿ ಪ್ರಕಾರ ಹಣಕಾಸಿನ ವ್ಯವಸ್ಥೆ ವ್ಯವಹರಿಸಲು ಬ್ಯಾಂಕಿನ ಚೆಕ್‌ಗಳಿಗೆ ಜಂಟಿಯಾಗಿ ಆಡಳಿತ ಮಂಡಳಿಯವರಿಂದ ಅನುಮೋದನೆ ಪಡೆದ ನಂತರ ಮಾತ್ರ ಸಹಿ ಮಾಡಿ ವ್ಯವಹರಿಸಲು ಅವಕಾಶವಿರುತ್ತದೆ. ಖಜಾಂಚಿ ಮತ್ತು ಪ್ರಧಾನ ಕಾರ್ಯದರ್ಶಿ ಮಾತ್ರ ಅಧ್ಯಕ್ಷರ ಅನುಮೋದನೆ ಮೇರೆಗೆ ಚೆಕ್ ಸಹಿ ಮಾಡುವ ಅಧಿಕಾರ ಇರುತ್ತದೆ. ಆದರೆ ಕೇವಲ ಈ ಅವಧಿಯಲ್ಲಿ ಪ್ರಧಾನ ಕಾರ್ಯದರ್ಶಿ ಮೇಲೆ ವೃಥಾ ಆರೋಪ ಮಾಡುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿರುತ್ತದೆ. ಮೇಲ್ಕಂಡ ಕಟ್ಟಡದಲ್ಲಿ ರಾಜ್ಯಾದಂತ ಅನೇಕ ಸಮುದಾಯದ ನೌಕರರು ಅದರ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ನೌಕರರ ಮತ್ತು ಸಾರ್ವಜನಿಕರ ಮದುವೆ ಮತ್ತು ಸಭೆ-ಸಮಾರಂಭಗಳು ನಡೆಯುತ್ತಿದ್ದು ಸಂಸ್ಥೆಗೆ ಇಲ್ಲಿಯವರೆಗೆ ಕೋಟ್ಯಾಂತರ ರೂ.ಗಳು ಆದಾಯ ಬಂದಿರುತ್ತದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿರುವುದಿಲ್ಲ. ಈ ಭವನದ ಕಟ್ಟಡದ ಒಟ್ಟು ಮೊತ್ತ: 12,77 ಕೋಟಿಯಾಗಿದ್ದು ಕೇವಲರು ಪತ್ರಿಕಾ ಪ್ರಕಟಣೆಯ ವೇಳೆ ದಾಸ್ ಪ್ರಕಾಶ್ ದಶಕೋಟಿ ಲೂಟಿ ಮಾಡಿದ್ದಾರೆ ಎಂಬುದು ಸುಳ್ಳು. ಆರೋಪವಾಗಿರುತ್ತದೆ ಹಾಗೂ ಇದು ಸತ್ಯಕ್ಕೆ ದೂರವಾದ ಆರೋಪವಾಗಿರುತ್ತದೆ ಮತ್ತು ಮನಸ್ಸಿಗೆ ಬಹಳ ನೋವಿನ ಸಂಗತಿ ಉಂಟು ಮಾಡಿರುತ್ತಾರೆ.


ಮೈಸೂರಿನ ಹೊಟಗಳ್ಳಿಯಲ್ಲಿ ಕೆ.ಪಿ.ಟಿ.ಸಿ.ಎಲ್ ವತಿಯಿಂದ ಆಡಳಿತ ಮಂಡಳಿಯಲ್ಲಿ ಸುದೀರ್ಘವಾಗಿ ಚರ್ಚಿಸಿ ಸರ್ವಾನುಮತದಿಂದ ಅನುಮೋದನೆ ಪಡೆದು ನಿವೇಶನ ಹಂಚಿಕೆ ಮಾಡಿಸಿಕೊಂಡಿರುತ್ತೇವೆ. ತದನಂತರ ನಿಯಮಾನುಸಾರ ಕೆ.ಪಿ.ಟಿ.ಸಿ.ಎಲ್ ಆದೇಶದಂತೆ ಕಲ್ಯಾಣ ಸಂಸ್ಥೆಯ ಹೆಸರಿಗೆ ಮೈಸೂರಿನ ಸಬ್‌ರಿಜಿಸ್ಟ್ರಾರ್ ಕಛೇರಿಯಲ್ಲಿ ಲೀಸ್ ಅಗ್ರಿಮೆಂಟ್ ರಿಜಿಸ್ಟರ್ ಮಾಡಿಕೊಂಡಿರುತ್ತೇವೆ. ಮೈಸೂರಿನ ಹೂಟಗಳ್ಳಿಯಲ್ಲಿ ಅಂಬೇಡ್ಕರ ಸಮುದಾಯ ಭವನ ನಿರ್ಮಾಣ ಮಾಡಲು ಆಡಳಿತ ಮಂಡಳಿಯಿಂದ ಅನುಮೋದನೆ ಪಡೆದು ಟೆಂಡರ್ ಕರೆದು ಪಾರದರ್ಶಕ ನಿಯಮದಂತೆ ಗುತ್ತಿಗೆ ನೀಡಲಾಗಿರುತ್ತದೆ. ಗುತ್ತಿಗೆದಾರನಿಗೆ ನಿಯಮಾನುಸಾರ MOU ಗೆ ಸಂಸ್ಥೆಯ ಪರವಾಗಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಯವರು ಒಪ್ಪಿ ಸಹಿ ಮಾಡಿರುತ್ತೇವೆ. ಗುತ್ತಿಗೆದಾರರಾದ ಶ್ರೀ ರಮೇಶ್ ರವರು ಸಹ ಸಹಿ ಮಾಡಿರುತ್ತಾರೆ. ತದನಂತರ ಕಟ್ಟಡದ ಕೆಲಸ ಪ್ರಾರಂಭಿಸಲು ಸಂಸ್ಥೆಯ ವತಿಯಿಂದ ಅನುಮತಿಯನ್ನು ನೀಡಲಾಗಿರುತ್ತದೆ. MOU ಪ್ರಕಾರ ಗುತ್ತಿಗೆದಾರರು ಕೆಲಸ ಪ್ರಾರಂಭಿಸಿ ಹಂತ ಹಂತವಾಗಿ ಬಿಲ್‌ಗಳನ್ನು ನೀಡಿದಾಗ ಸಂಸ್ಥೆಯ ವತಿಯಿಂದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸಹಿಯುಳ್ಳ ಚೆಕ್‌ನ್ನು ಆಡಳಿತ ಮಂಡಳಿಯ ಅನುಮೋದನೆ ಪಡೆದ ನಂತರ ಮಾತ್ರ ವಿತರಿಸಲು ಅವಕಾಶವಿರುತ್ತದೆ.


ದಿನಾಂಕ: 30/04/2023 ರಂದು ನಾನು ಸೇವೆಯಿಂದ ವಯೋನಿವೃತ್ತಿ ಹೊಂದಿದ್ದು, ಆ ಸಮಯದಲ್ಲಿ ಸಂಸ್ಥೆಯ ಬೈಲಾ ನಿಯಮದ ಪ್ರಕಾರ ಹಿರಿಯ ಉಪಾಧ್ಯಕ್ಷರಾದ ಶ್ರೀ ಮೋಹನ್‌ ಕುಮಾರ್ ಇವರಿಗೆ ಅಧಿಕಾರ ಹಸ್ತಾಂತರ ಮಾಡಿರುತ್ತೇನೆ. ದಿನಾಂಕ: 01/05/2023 ರಿಂದ ಶ್ರೀ ಮೋಹನ್‌ ಕುಮಾರ್ ಸ್ವಯಂ ಘೋಷಿತ ಅಧ್ಯಕ್ಷರೆಂದು ಕೆಲವು ಕಿಡಿಗೇಡಿಗಳು ಆರೋಪ ಮಾಡುತ್ತಿರುವುದು ಸುಳ್ಳು ಆರೋಪವಾಗಿರುತ್ತದೆ. ಅಂದಿನಿಂದ ಇಲ್ಲಿಯವರೆಗೂ ಹಾಲಿ ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನನ್ನ ನಿವೃತ್ತಿ ನಂತಹಾಲಿ ಪ್ರಧಾನ ಕಾರ್ಯದರ್ಶಿ ಗುರುಲಿಂಗಯ್ಯ ಮತ್ತು ಆರ್. ಕುಮಾರ್ ಖಜಾಂಚಿಯವರು ವಯೋನಿವೃತ್ತಿ ಹೊಂದಿದಾಗ ಸಂಸ್ಥೆಯ ಬೈಲಾ ನಿಯಮಾವಳಿ ಪ್ರಕಾರ ಅಧ್ಯಕ್ಷರ ಅಪ್ಪಣೆ ಮೇಲೆಗೆ ಸಹ ಖಜಾಂಚಿರವರಿಗೆ ಅಧಿಕಾರ ಹಸ್ತಾಂತರ ಮಾಡಬೇಕಾಗಿತ್ತು ಸದರಿಯವರು ಸಹ-ಖಜಾಂಚಿಗೆ ಅಧಿಕಾರ ಹಸ್ತಾಂತರ ಮಾಡದೆ ಬೈಲಾ ನಿಯಮ ಉಲ್ಲಂಘಿಸಿರಿರುತ್ತಾರೆ.


ವಯೋನಿವೃತ್ತಿ ಹೊಂದಿದ್ದು ಬೈಲಾ ಪ್ರಕಾರ ಅಧ್ಯಕ್ಷರ ಅಪ್ಪಣೆ ಮೇರೆಗೆ ಜಂಟಿ ಕಾರ್ಯದರ್ಶಿ ಯವರಿಗೆ ಅಧಿಕಾರ ಹಸ್ತಾಂತರ ಮಾಡಬೇಕಿತ್ತು. ಆದರೆ ಬೈಲಾ ನಿಯಮ ಉಲ್ಲಂಘಿಸಿ ಬೆಸ್ಕಾಂ ಉಪಾಧ್ಯಕ್ಷರಾದ ರಾಜಕುಮಾರ್ ರವರಿಗೆ ಅಧಿಕಾರ ಹಸ್ತಾಂತರ ಮಾಡಿರುತ್ತಾರೆ.

 01/05/2023 Doc 31/05/2024 ರವರೆಗೆ ಪ್ರಧಾನ ಕಾರ್ಯದರ್ಶಿ ಗುರುಲಿಂಗಯ್ಯನವರು ಪ್ರಭಾರ ಅಧ್ಯಕ್ಷರಾದ ಶ್ರೀ. ಮೋಹನ್ ಕುಮಾರ್ ರವರ ಅನುಮೋದನೆ ಪಡೆಯದೆ ಅಥವಾ ಆಡಳಿತ ಮಂಡಳಿ ಅನುಮತಿ ಪಡೆಯದೆ ರಾಜ್ಯಾದಾದ್ಯಂತ ಸುಮಾರು 50 ರಿಂದ 60 ಜನರನ್ನು CEC / ವಿವಿಧ ಪದಾಧಿಕಾರಿಗಳನ್ನು ಮಾಡಿ ಆದೇಶ ಮಾಡಿರುವುದು ಸಹ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿರುತ್ತದೆ. ಸಂಸ್ಥೆಯ ನಿಯಮ ಬೈಲಾ ಉಲ್ಲಂಘಿಸಿ ಸಂಘದ ಘನತೆ ಗೌರವಕ್ಕೆ ಧಕ್ಕೆ ತಂದಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ ಹಾಗೂ ನಿಯಮಬಾಹಿರವಾಗಿರುತ್ತದೆ.


ಬೈಲಾ ಉಲ್ಲಂಘನೆ ಮಾಡಿರುವುದು ಶ್ರೀ ಗುರುಲಿಂಗಯ್ಯ, ಪ್ರಧಾನ ಕಾರ್ಯದರ್ಶಿ, ಶ್ರೀ. ಆರ್. ಕುಮಾರ್ ಖಜಾಂಚಿ ಮತ್ತು ಬೆಸ್ಕಾಂ ಉಪಾಧ್ಯಕ್ಷ ರಾಜಕುಮಾರ್ ರವರಾಗಿರುತ್ತಾರೆ. ಆದರೆ ಶ್ರೀ. ಕೆ. ದಾಸ್ ಪ್ರಕಾಶ್ ಮಾಜಿ ಅಧ್ಯಕ್ಷರ ಪಾತ್ರ ಇದರಲ್ಲಿ ಇರುವುದಿಲ್ಲ.


ಜಿ. ಸುರೇಶ ಲೈನ್‌ ಮನ್, ಹುಣಸೂರು ಉಪವಿಭಾಗ ಮೈಸೂರು ವೃತ್ತ, ಚಾಮುಂಡಿ ವಿದ್ಯುತ್ ಸರಬರಾಜು ಕಂಪನಿ ಮೈಸೂರು ಇವರು ಸಂಘ ವಿರೋಧಿ ಚಟುವಟಿಕೆ ಆಧಾರದ ಮೇರೆಗೆ ಪ್ರಾಥಮಿಕ ಸದಸ್ಯತ್ವದಿಂದ 00 ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿ ಶ್ರೀ ಗುರುಲಿಂಗಯ್ಯ ಯವರು ಸಂಸ್ಥೆಯಲ್ಲಿ ರಚಿಸಿದ ಗೃಹ ಸಮಿತಿಯ ಅಧ್ಯಕ್ಷರ ಶಿಫಾರಸ್ಸಿನ ಮೇರೆಗೆ ಮತ್ತು ಅಧ್ಯಕ್ಷರ ಅನುಮೋದನೆ ಮೇರೆಗೆ ಸಹಿ ಮಾಡಿ ಅಮಾನತ್ತುಗೊಳಿಸಲಾಗಿದೆ.


ಈ ಕಾರಣದಿಂದ ಮೇಲ್ಕಂಡ ಶ್ರೀ. ಗುರುಲಿಂಗಯ್ಯ, ಕುಮಾರ್ ಮತ್ತು ರಾಜಕುಮಾರ್ ಇವರ ಬೆಂಬಲದಿಂದ ಶ್ರೀ ಸುರೇಶ ಲೈನಮನ್ ಇವರು ಶ್ರೀ ಕೆ. ದಾಸ್ ಪ್ರಕಾಶ್ ಮಾಜಿ ಅಧ್ಯಕ್ಷರು ಆದ ನನ್ನ ವಿರುದ್ಧ ವೃಥಾ ಆರೋಪಗಳನ್ನು ಮಾಡಿ ಅರ್ಜಿಗಳನ್ನು ಮುಖ್ಯಕಾರ್ಯದರ್ಶಿ, ಕರ್ನಾಟಕ ಸರ್ಕಾರ, ಸಹಕಾರ ಇಲಾಖೆಯ ಮುಖ್ಯಸ್ಥರುಗಳಿಗೆ ಮತ್ತು ಮುಡಾ, ಮೈಸೂರಿನ ಲೋಕಾಯುಕ್ತ ಇವರುಗಳಿಗೆ ದೂರು ಸಲ್ಲಿಸಿರುತ್ತಾರೆ. ಇದರಿಂದ ಮೈಸೂರಿನ ಹೂಟಗಳ್ಳಿ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿರುತ್ತದೆ ಹಾಗೂ ಸದರಿಯವರ ವಿನಾಕಾರಣ ಸಾರ್ವಜನಿಕರಲ್ಲಿ ನನ್ನ ಮೇಲೆ ಸಂಸ್ಥೆಯ ಸದಸ್ಯರುಗಳಿಗೆ ತಪ್ಪು ಮಾಹಿತಿಗಳನ್ನು

ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ನೀಡುತ್ತಾ ತೇಜೋವರೆ ಮಾಡಿರುತ್ತಾರೆ. ಶ್ರೀ. ಜಿ. ಸುರೇಶ ಹುಣಸೂರು ಇಲ್ಲಿ ಲೈನಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಎಸ್.ಟಿ. ನಕಲಿ ಜಾತಿ ಪ್ರಮಾಣ ಪತ್ರವನ್ನು ಇಲಾಖೆಗೆ ಸಲ್ಲಿಸಿ ಪದೋನ್ನತಿಗಳನ್ನು ಪಡೆದು ಮುಂದುವರಿದಿರುತ್ತಾರೆ. ಇವರಿಂದ ನಿಜವಾದ ಎಸ್.ಟಿ. ನೌಕರರಿಗೆ ನ್ಯಾಯವಾಗಿ ಸಿಗಬೇಕಾದ ಬಡ್ತಿಯನ್ನು ಕಬಳಿಸಿ ಅನ್ಯಾಯ ಮಾಡಿರುವುದು ಕಂಡು ಬಂದಿರುತ್ತದೆ, ಸದರಿ ಸುರೇಶ ಇವರ ತಂದೆಯೂ ಕೂಡ ಇಲಾಖೆಯಲ್ಲಿ ಲೈನಮನ್ ಸೇವೆ ಸಲ್ಲಿಸಿ ಸದರಿಯವರ ಸೇವಾ ಪುಸ್ತಕದ ಪ್ರಕಾರ ಹಿಂದುಳಿದ ವರ್ಗದ ಜಾತಿಗೆ ಸೇರಿದ್ದು ಎಂದು ನಮೂದಾಗಿರುತ್ತದೆ ಹಾಗೂ ತಂದೆಯವರು ನಿವೃತ್ತಿ ಹೊಂದಿರುತ್ತಾರೆ.


ಪಾಲಿ ಸಂಘದ ವಿರೋಧಿ ಚಟುವಟಿಕೆಯಿಂದ ಅಮಾನತ್ತಿಲ್ಲಿರುವ ಶ್ರೀ ಸುರೇಶ ಲೈನಮನ್ ಇವರು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಇಲಾಖೆಯ ಮೇಲಾಧಿಕಾರಿಗಳ ಅನುಮತಿ ಪಡೆಯದೇ ಮೈಸೂರಿನಲ್ಲಿ ಶ್ರೀ ಕೆ. ದಾಸ್ ಪ್ರಕಾಶ್ ಆದ ನನ್ನ ವಿರುದ್ಧ ಮತ್ತು ಹಾಲಿ ಆಡಳಿತ ಮಂಡಳಿ ಮತ್ತು ಕಂಪನಿಯ ಅಧಿಕಾರಿಗಳ ವಿರುದ್ಧ ಮೈಸೂರಿನಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವುದು ಮತ್ತು ಆರೋಪ ಮಾಡಿರುವುದು ಸರ್ಕಾರದ ಮತ್ತು ಇಲಾಖೆಯ ಸಾಬೀತಾಗಿರುತ್ತದೆ. ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ


ಹಾಲಿ ಪ್ರಭಾರ ಅಧ್ಯಕ್ಷರಾದ ಶ್ರೀ. ಮೋಹನಕುಮಾರ್ ಮತ್ತು ಪ್ರಭಾರ ಪ್ರಧಾನ ಕಾರ್ಯದರ್ಶಿ ರವರಾದ ಶ್ರೀ ಗವಿಕುಮಾರ್ ರವರು ಸಂಸ್ಥೆಯ ಬೈಲಾ ನಿಯಮ ಉಲ್ಲಂಘನೆ ಮಾಡಿರುವ ಶ್ರೀ. ಗುರುಲಿಂಗಯ್ಯ ಪ್ರಧಾನ ಕಾರ್ಯದರ್ಶಿ ಮತ್ತು ಬೆಸ್ಕಾಂ ಉಪಾಧ್ಯಕ್ಷರಾದ ಶ್ರೀ. ರಾಜಕುಮಾರ್ ರವರುಗಳ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ವಿಚಾರಣೆಯು ನ್ಯಾಯಾಲಯದಲ್ಲಿ ಪ್ರಗತಿಯಲ್ಲಿರುತ್ತದೆ.


ಇಷ್ಟೆಲ್ಲಾ ನ್ಯೂನತೆಗಳಿದ್ದರೂ ಕೂಡ ಮೇಲ್ಕಂಡವರಾದ ಶ್ರೀ ಮುನಿರಾಜು ರವರು ಮತ್ತು ಶ್ರೀ. ಕಟ್ಟಿಮನಿ ರವರು ದಿನಾಂಕ: 31/01/2025 ರಂದು ಪತ್ರಿಕಾಗೋಷ್ಠಿ ಮಾಡಿರುವುದು ನಂಬಿಕೆ ದ್ರೋಹಿ ಹಾಗೂ ಸುಳ್ಳು ಆರೋಪಗಳಿಂದ ಕೂಡಿರುತ್ತದೆ ಹಾಗೂ ಮೈಸೂರಿನಲ್ಲಿರುವ ಜಿ. ಸುರೇಶ ರವರು ವೃಥಾ ಆರೋಪಗಳು ಮಾಡಿ ಪತ್ರಿಕಾಗೋಷ್ಠಿ ನಡೆಸಿರುವುದು ಸರ್ಕಾರ ನಿಯಮಗಳನ್ನು ಉಲ್ಲಂಘಿಸಿದಂತಾಗಿರುತ್ತದೆ. ಆದುದ್ದರಿಂದ ಸದರಿಯವರು ಇಲಾಖೆಯವರು ಪರಿಶೀಲಿಸಿ ಇವರ ಮೇಲೆ ಇಲಾಖಾ ನಿಯಮದ ಪ್ರಕಾರ ಶಿಸ್ತುಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ.


ನನ್ನ ಮೇಲೆ ಇಲ್ಲ-ಸಲ್ಲದ ಸುಳ್ಳು ಆರೋಪಗಳನ್ನು ಮಾಡಿರಿರುವವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ತಿಳಿಸಲು ಬಯಸುತ್ತೇನೆ.


ಆಡಳಿತಾಧಿಕಾರಿಯಾದ ಶ್ರೀ ಕಿಶೋರ ಜೋತಿ ಯವರು 2021-26 ನೇ ಸಾಲಿಗೆ ಚುನಾವಣೆ ನಡೆಸಲು 98.00 ಲಕ್ಷ ಖರ್ಚು ಮಾಡಿರುವುದಕ್ಕೂ ನನಗೂ ಯಾವುದೇ ಸಂಬಂಧವಿರುವುದಿಲ್ಲ,

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

Coquo

(ಕೆ. ದಾಸ್ ಪ್ರಕಾರ್)

ಮಾಜಿ ಅಧ್ಯಕ್ಷರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims