ಹೊರಗುತ್ತಿಗೆ ನೌಕರರ ಕಡ್ಡಾಯ ಸೇವಾ ಭದ್ರತೆಗೆ ಕಾನೂನು ಹೋರಾಟ ; ಹೊರ ಗುತ್ತಿಗೆ ನೌಕರರ ಎಚ್ಚರಿಕೆ.
ಹೊರಗುತ್ತಿಗೆ ನೌಕರರ ಕಡ್ಡಾಯ ಸೇವಾ ಭದ್ರತೆಗೆ ಕಾನೂನು ಹೋರಾಟ ; ಹೊರ ಗುತ್ತಿಗೆ ನೌಕರರ ಎಚ್ಚರಿಕೆ.
ಬೆಂಗಳೂರು ಫೆಬ್ರವರಿ 15; ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಹೊರಗುತ್ತಿಗೆ ನೌಕರರಿಗೆ ಕಡ್ಡಾಯವಾಗಿ ಸೇವಾ ಭದ್ರತೆ ಒದಗಿಸಬೇಕು ಇಲ್ಲವಾದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘ ಒತ್ತಾಯಿಸಿದೆ.
ಪ್ರೆಸ್ ಕ್ಲಬ್ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಸುಧಾಕರ್ ಈಗಾಗಲೇ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಅದೇ ಹುದ್ದೆ ಹಾಗೂ ಅದೇ ಇಲಾಖೆಯ ಕಚೇರಿಯಲ್ಲಿ ಮುಂದುವರೆಸುವ ಕುರಿತು ಕ್ರಮ ಕೈಗೊಳ್ಳ ಬೇಕು ಎಂದು ಹೇಳಿದರು.
ಹೊರಗುತ್ತಿಗೆ ನೌಕರರ ನಿಯೋಜನೆ ಅವಧಿಯನ್ನು 6ತಿಂಗಳ ಬದಲಾಗಿ ಕನಿಷ್ಠ ಒಂದು ವರ್ಷ ನಿಗದಿಪಡಿಸಬೇಕು, ಸರ್ಕಾರದ ಅನುದಾನದ ನೆಪ ಹೇಳದೆ ಕಡ್ಡಾಯವಾಗಿ ಪ್ರತಿ ತಿಂಗಳ ವೇತನ ಮತ್ತು ಇಪಿಎಫ್ ಹಾಗೂ ಇಎಸ್ ಐ ಪಾವತಿಸಬೇಕು ,ಕಾರ್ಮಿಕ ಇಲಾಖೆ ಸುತ್ತೋಲೆಯಂತೆ ಕನಿಷ್ಠ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಕಡ್ಡಾಯವಾಗಿ ನೀಡಬೇಕು, ಮಹಿಳಾ ನೌಕರರಿಗೆ ವಿಶೇಷ ರಜೆ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು
ಹೊರಗುತ್ತಿಗೆ ನೌಕರರ ಹಿತ ಕಾಯಲು ಸರ್ಕಾರ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಸೇವೆಗಳ ವಿವಿದ್ದೋದ್ದೇಶ ಸಂಘ ರಚನೆ ಮಾಡಿರುವುದು ಸ್ವಾಗತಾರ್ಹ ಎಂದರು.

Comments
Post a Comment