ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಕೀಲರ ಸಂಘವು
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಕೀಲರ ಸಂಘವು
ಬೆಂಗಳೂರು ವಕೀಲರ ಸಂಘ ಇಡೀ ಏಷ್ಯಾ ಖಂಡದಲ್ಲಿ ಅತೀ ದೊಡ್ಡ ಪ್ರತಿಷ್ಟಿತ ಸಂಘವಾಗಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ವಕೀಲರ ಸದಸ್ಯರನ್ನು ಒಳಗೊಂಡಿರುತ್ತದೆ.
ಬೆಂಗಳೂರು ವಕೀಲರ ಸಂಘವು ಘನ ಸರ್ಕಾರದಿಂದ ಅನೇಕ ರೀತಿಯ ಹಣಕಾಸಿನ ಅನುದಾನ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾ ಬಂದಿರುತ್ತದೆ. ಇಂತಹ ಈ ಪ್ರತಿಷ್ಟಿತ ಸಂಘದ 2025-28ನೇ ಸಾಲಿನ ಚುನಾವಣೆಯ ದಿನಾಂಕ: 16-02-2025 ರಂದು ನಡೆಯುವಂತೆ ಪ್ರಕ್ರಿಯೆಗಳು ಈಗಾಗಲೇ ಪ್ರಾರಂಭಗೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ ಮಹಿಳಾ ಸದಸ್ಯ ವಕೀಲರುಗಳು ಮಾನ್ಯ ಭಾರತದ ಸರ್ವೋಚ್ಚ ನ್ಯಾಯಾಲಯ, ಎಸ್.ಎಲ್.ಪಿ(ಸಿ)1404/2025 ರ ಪ್ರಕಾರ ಘನ ಸರ್ವೋಚ್ಚ ನ್ಯಾಯಾಲಯವು ಸದರಿ 2.2.2 ಬೆಂಗಳೂರು ವಕೀಲರ ಸಂಘದಲ್ಲಿ ಸದಸ್ಯರಾಗಿರುವ ಮಹಿಳಾ ವಕೀಲರುಗಳಿಗೆ ಶೇಕಡಾ 30% ರಂತೆ ಮೀಸಲಾತಿ ಕಲ್ಪಿಸಿ ಸಂಘದ ಕೆಲ ಪದಾಧಿಕಾರಿಗಳ ಸ್ಥಾನವನ್ನು ನೀಡುವಂತೆ ಬೆಂಗಳೂರು ವಕೀಲರ ಸಂಘಕ್ಕೆ ನಿರ್ದೇಶಿಸಿರುತ್ತದೆ. ಹಾಗೂ ಪ್ರಕರಣವನ್ನು ಇತ್ಯರ್ಥಗೊಳಿಸಿರುತ್ತದೆ.
ಅಲ್ಲದೇ ಭಾರತದ ಸಂವಿಧಾನದ ಪ್ರಕಾರ ರಾಷ್ಟ್ರದ ಮೂಲ ನಿವಾಸಿಗಳಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇಕಡಾ 18 % ರಂತೆಮೀಸಲಾತಿ ಕಲ್ಪಿಸಿರುವುದು ಐತಿಹಾಸಿಕವಾಗಿದೆ ಹಾಗೂ ಇದನ್ನು ಎಲ್ಲಾ ಸಂಘ ಸಂಸ್ಥೆಗಳು ಸರ್ಕಾರದ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗಿದೆ.
ಹಾಗೂ ಬೆಂಗಳೂರು ವಕೀಲರ ಸಂಘದಲ್ಲಿ 25,000/- ಕ್ಕೂ ಹೆಚ್ಚು ವಕೀಲರ ಸದಸ್ಯರಿರುವ ಸಂಘದಲ್ಲಿ ಸುಮಾರು 7000-8000 ಸಾವಿರ ಎಸ್.ಸಿ/ಎಸ್.ಟಿ ವೃತ್ತಿ ಪರ ವಕೀಲರಿದ್ದು, ಬೆಂಗಳೂರು ವಕೀಲರ ಸಂಘವು ಯಾವುದೇ ಮೀಸಲಾತಿ ಕಲ್ಪಿಸದೇ ಇರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ ವಕೀಲರ ಸಂಘವು ಮಾನ್ಯ ಘನ ಉಚ್ಚ ನ್ಯಾಯಾಲಯದ ಡಬ್ಲ್ಯೂಪಿ ನಂ. 3071/2025 ದಾಖಲಿಸಿದ್ದು,
ಅದರ ಅನ್ವಯ ಘನ ನ್ಯಾಯಾಲಯವು ಎಸ್.ಸಿ./ಎಸ್.ಟಿ ಸದಸ್ಯ ವಕೀಲರಿಗೆ ಸಂಘದಲ್ಲಿ ಮೀಸಲಾತಿ ಕಲ್ಪಿಸುವಂತೆ ಸೂಚಿಸಿರುತ್ತದೆ. ಆದುದ್ದರಿಂದ ಬೆಂಗಳೂರು ವಕೀಲರ ಸಂಘದ (ಎ.ಎ.ಬಿ) ರವರು ಪ್ರಸ್ತುತ ಸದರಿ 2025-2028 ನೇ ಸಾಲಿನ ಚುನಾವಣೆಯಲ್ಲಿ ಎಸ್.ಸಿ./ಎಸ್.ಟಿ ವಕೀಲರ ಸದಸ್ಯರಿಗೆ ಮೀಸಲಾತಿಯನ್ನು ಕಲ್ಪಿಸಿಕೊಡಲು ಅಗ್ರಹಿಸಿರುತ್ತೇವೆ. ದಯಮಾಡಿ

Comments
Post a Comment